English-Kannada Nighantu (University of Mysore)
University of Mysore
Ulster custom
ನಾಮವಾಚಕ
ಅಲ್ಸ್ಟರ್ ಹಿಡುವಳಿ ಪದ್ಧತಿ; ಐರ್ಲೆಂಡಿನ ಅಲ್ಸ್ಟರ್ ಪ್ರದೇಶದಲ್ಲಿ ಬಳಕೆಯಿದ್ದ, ಜಮೀನು ಹಿಡುವಳಿ ಪದ್ಧತಿ.
Ulsterman
ನಾಮವಾಚಕ
ಐರ್ಲಂಡಿನ ಅಲ್ಸ್ಟರ್ನಲ್ಲಿ ಹುಟ್ಟಿದವನು.
Ulsterwoman
ನಾಮವಾಚಕ
ಐರ್ಲಂಡಿನ ಅಲ್ಸ್ಟರ್ನಲ್ಲಿ ಹುಟ್ಟಿದವಳು.
ult.
ಸಂಕ್ಷಿಪ್ತ
ultimo.
ulterior
ಗುಣವಾಚಕ
- ಆಚೆಯ; ದೂರದ.
- ಸದ್ಯದ್ದಲ್ಲದ; ಭವಿಷ್ಯದ; ಕಾಲದಲ್ಲಿ ಮುಂದಿನ, ದೂರದ: ulterior action ಭವಿಷ್ಯದ ಕ್ರಿಯೆ, ಕಾರ್ಯ.
- ಹಿನ್ನೆಲೆಯಲ್ಲಿರುವ; ಕಾಣುವುದಕ್ಕಿಂತ, ಹೇಳುವುದಕ್ಕಿಂತ ಮೀರಿ ಇರುವ; ಗುಪ್ತ; ಅಗೋಚರ; ಅವ್ಯಕ್ತ: ulterior motive ಗುಪ್ತ ಉದ್ದೇಶಗಳು. ulterior plans ಅಗೋಚರ ಹಂಚಿಕೆಗಳು.
ulteriorly
ಕ್ರಿಯಾವಿಶೇಷಣ
ಭವಿಷ್ಯದಲ್ಲಿ; ಮುಂದಿನ ಘಟ್ಟದಲ್ಲಿ; ಮುಂದಿನ ಘಟ್ಟಕ್ಕೆ.
ultima
ನಾಮವಾಚಕ
ಒಂದು ಶಬ್ದದ ಕೊನೆಯ, ಅಂತಿಮ ಉಚ್ಚಾರಾಂಶ.
ultima Thule
ನಾಮವಾಚಕ
- ಅತ್ಯಂತ ದೂರದ, ಅಜ್ಞಾತ ಪ್ರದೇಶ, ಸ್ಥಳ.
- (ರೂಪಕವಾಗಿ) (ಯಾವುದರದೇ) ಗರಿಷ್ಠಮಿತಿ; ತುತ್ತತುದಿ; ಪರಾಕಾಷ್ಠೆ.
ultimate
ಗುಣವಾಚಕ
ಪದಗುಚ್ಛ
- ಕಟ್ಟಕಡೆಯ; ಕೊನೆಯ; ಆತ್ಯಂತಿಕ; ಅಂತಿಮ; ಆಖೈರಿನ; ಅಂತ್ಯದ; ಅದರ ತರುವಾಯ ಏನೂ ಇರದ ಯಾ ಇರಲು ಸಾಧ್ಯವಿಲ್ಲದ. ultimate result ಕಟ್ಟಕಡೆಯ ಫಲಿತಾಂಶ.
- ಮೂಲವಾದ; ಮೂಲಭೂತವಾದ: ultimate principles ಮೂಲತತ್ತ್ವಗಳು. ultimate truth ಮೂಲಭೂತ ಸತ್ಯ.
- ಅತ್ಯಂತ ಹೆಚ್ಚಿನ ಪ್ರಮಾಣದ; ಪರಮಾವಧಿಯ; ಗರಿಷ್ಠ (ಮಿತಿಯ): ultimate tensile strength ಅತ್ಯಂತ ಹೆಚ್ಚು ಬಿಗುವು ಪಡೆಯುವ ಶಕ್ತಿ.
ultimate
ನಾಮವಾಚಕ
- ಸರ್ವೋತ್ಕೃಷ್ಟ; ಪರಮೋತ್ಕೃಷ್ಟ; ಸರ್ವಶ್ರೇಷ್ಠ; ಸಾಧನೆಯಲ್ಲಿ ಯಾ ಕಲ್ಪನೆಯಲ್ಲಿ ಅತ್ಯುಚ್ಚವಾದುದು.
- ಅಂತಿಮ ಯಾ ಮೂಲಭೂತ ಸತ್ಯ ಯಾ ಸಂಗತಿ.
ultimately
ಕ್ರಿಯಾವಿಶೇಷಣ
- ಕಟ್ಟಕಡೆಯದಾಗಿ; ಅಂತಿಮವಾಗಿ.
- ಕೊನೆಯಲ್ಲಿ; ನಿರ್ಣಾಯಕವಾಗಿ: I should ultimately succeed ನಾನು ಕೊನೆಯಲ್ಲಿ ಗೆಲ್ಲಲೇಬೇಕು.
ultimateness
ನಾಮವಾಚಕ
ಅಂತ್ಯ; ಕೊನೆ.
ultimatum
ನಾಮವಾಚಕ
- ಅಂತಿಮ ಬೇಡಿಕೆ; (ಯಾವುದನ್ನು ನಿರಾಕರಿಸಿದ್ದೇ ಆದರೆ ಸಂಬಂಧ ವಿಚ್ಫೇದ, ಯುದ್ಧ ಘೋಷಣೆ, ಮೊದಲಾದವಕ್ಕೆ ಆಸ್ಪದವಾಗುವುದೋ ಆ) ಕಟ್ಟಕಡೆಯ ಕೋರಿಕೆ ಯಾ ಕಟ್ಟಕಡೆಯ ಷರತ್ತುಗಳ ಘೋಷಣೆ.
- ಕೊನೆಯ ನಿರ್ಧಾರ; ಕಡೇ ಮಾತು; ಅಂತಿಮ ತೀರ್ಮಾನ.
ultimo
ಗುಣವಾಚಕ
(ವಾಣಿಜ್ಯ) (ವ್ಯಾವಹಾರಿಕ ಪತ್ರಗಳಲ್ಲಿ) ಹೋದ ತಿಂಗಳಿನ; ಹಿಂದಿನ ತಿಂಗಳಿನ; ಗತಮಾಸದ: the 28th ultimo ಹೋದ ತಿಂಗಳು ೨೮ನೇ ತಾರೀಖಿನ.
ultimogeniture
ನಾಮವಾಚಕ
ಕನಿಷ್ಠ ಪುತ್ರಾಧಿಕಾರ ಪದ್ಧತಿ; ಕೊನೆಯ ಮಗನಿಗೆ ಮಾತ್ರ ಆಸ್ತಿಯ ಹಕ್ಕಿರುವ ಪದ್ಧತಿ.
ultra
ಗುಣವಾಚಕ
(ಮುಖ್ಯವಾಗಿ ಧರ್ಮ, ರಾಜಕೀಯಗಳಲ್ಲಿ) ಉಗ್ರವಾದಿ; ಉಗ್ರಪಂಥವನ್ನು, ಉಗ್ರಾಭಿಪ್ರಾಯಗಳನ್ನು, ಉಗ್ರಕಾರ್ಯಾಚರಣೆಗಳನ್ನು ಬೆಂಬಲಿಸುವ.
ultra
ನಾಮವಾಚಕ
ಉಗ್ರವಾದಿ; ಉಗ್ರ ಪಂಥದವನು.
ultra vires
ಕ್ರಿಯಾವಿಶೇಷಣ
ಒಬ್ಬನ (ನ್ಯಾಯವಾದ, ಕಾನೂನುಬದ್ಧ) ಅಧಿಕಾರಕ್ಕೆ ಮೀರಿ.
ultra vires
ಗುಣವಾಚಕ
ಉತ್ತರ ಒಬ್ಬನ (ನ್ಯಾಯವಾದ) ಅಧಿಕಾರಕ್ಕೆ ಮೀರಿದ.
ultra-
ಸಮಾಸ ಪೂರ್ವಪದ
- (ಯಾವುದೋ ಒಂದರ) ಆಚೆಯ; ಆಚೆಕಡೆಯ.
- ಅತಿ; ವಿಪರೀತ; ಅತಿಯಾಗಿ; ಅತಿಯಾದ: ultra-fashionable ಅತಿ ನಾಜೂಕಿನ. ultra-conservative ಅತಿ ಸಂಪ್ರದಾಯನಿಷ್ಠ.
- ತೀರಾ; ಅತಿ: ultra-modern ತೀರಾ ಆಧುನಿಕ.