भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

ululant

ಗುಣವಾಚಕ

  • ಊಳುವ, ಆಕ್ರಂದನದ; (ಅಳುವಂತೆ) ಬೊಗಳುವ.
  • ಸಂತೋಷದಿಂದ ದೀರ್ಘವಾಗಿ ಕೂಗುವ.
  • ಘೂತ್ಕರಿಸುವ.

ululate

ಅಕರ್ಮಕ ಕ್ರಿಯಾಪದ

  • ಊಳು.
  • (ಅಳುವಂತೆ) ಬೊಗಳು.
  • (ಸಂತೋಷದಿಂದ) ದೀರ್ಘವಾಗಿ ಕೂಗು
  • (ಗೂಬೆ) ಘೂತ್ಕಾರ ಮಾಡು; ಗುಗುಕ್‍ ಅನ್ನು.

ululation

ನಾಮವಾಚಕ

  • (ನಾಯಿ, ಗೂಬೆ, ಮೊದಲಾದವುಗಳ ವಿಷಯದಲ್ಲಿ) ಊಳು; ಊಳುವಿಕೆ.
  • (ನಾಯಿಯ) ದೀರ್ಘ ಬೊಗಳುವಿಕೆ.
  • (ಗೂಬೆಯ) ಘೂತ್ಕಾರ.
  • ಸಂತೋಷದಿಂದ ದೀರ್ಘವಾಗಿ ಕೂಗುವುದು.

um

ಭಾವಸೂಚಕ ಅವ್ಯಯ

ಅಮ್‍; ಉಂ; ಹಿಂಜರಿಕೆಯನ್ನು ಸೂಚಿಸುವ ಯಾ ಮಾತನಾಡುವಾಗ ಯಾ ಭಾಷಣದಲ್ಲಿ ತೆಗೆದುಕೊಳ್ಳುವ ವಿರಾಮವನ್ನು ಸೂಚಿಸುವ ಶಬ್ದ.

umbel

ನಾಮವಾಚಕ

(ಸಸ್ಯವಿಜ್ಞಾನ) ಪುಷ್ಪಛತ್ರ; ಛತ್ರಿ ಹೂಗೊಂಚಲು; ಹೂಕೊಡೆ; ಕೇಂದ್ರವೊಂದರಿಂದ ಹೊರಟ ಒಂದೇ ಉದ್ದದ ಹಲವಾರು ಕಾಂಡಗಳ ತುದಿಯಲ್ಲಿರುವ ಪುಷ್ಪಗಳು ಸೇರಿಕೊಂಡು ಚಪ್ಪಟೆ ಯಾ ಗೋಳದ ಮೇಲ್ಮೈ ಆಕಾರವನ್ನು ರೂಪಿಸುವ ಪುಷ್ಪಗುಚ್ಫ, ಹೂಗೊಂಚಲು, ಹೂಗೊಂಡೆ.

umbellar

ಗುಣವಾಚಕ

= umbellate.

umbellate

ಗುಣವಾಚಕ

  • ಪುಷ್ಪಛತ್ರಗಳನ್ನು ಯಾ ಛತ್ರಿಹೂಗೊಂಚಲುಗಳನ್ನು ಬಿಡುವ ಯಾ ಅವುಗಳನ್ನುಳ್ಳ ಯಾ ಅವುಗಳಂತೆ ವ್ಯವಸ್ಥೆಗೊಳಿಸಿದ.
  • (ರಚನೆಯಲ್ಲಿ) ಪುಷ್ಪಛತ್ರ ಯಾ ಹೂಗೊಂಚಲು ಛತ್ರಿಯನ್ನು ಹೋಲುವ.

umbellifer

ಗುಣವಾಚಕ

ಕೊಡೆಹೂಗಿಡ; ಪುಷ್ಪಛತ್ರ ಸಸ್ಯ; ಪಾರ್ಸ್‍ಲಿ ಯಾ ಅಚುಮೋದ ಮತ್ತು ಪಾರ್ಸ್‍ನಿಪ್‍ ಯಾ ಮೂಲಂಗಿಯಂಥ ಸಸ್ಯಗಳನ್ನು ಒಳಗೊಂಡ, ಪುಷ್ಪಛತ್ರಗಳನ್ನು ಬಿಡುವ, ಅಂಬಲಿಹರೀ ವಂಶಕ್ಕೆ ಸೇರಿದ ಗಿಡ.

umbelliferous

ಗುಣವಾಚಕ

  • ಹೂಕೊಡೆಗಳನ್ನು, ಪುಷ್ಪಛತ್ರಗಳನ್ನು ಬಿಡುವ.
  • ಕೊಡೆಹೂ ವಂಶದ ಯಾ ಅದಕ್ಕೆ ಸಂಬಂಧಿಸಿದ.

umbellule

ಗುಣವಾಚಕ

ಸಂಯುಕ್ತ ಪುಷ್ಪಛತ್ರ ಮಂಜರಿಯಲ್ಲಿ ಎರಡನೆಯ ಯಾ ಗೌಣ ಪುಷ್ಪಛತ್ರವುಳ್ಳ.

umber

ಗುಣವಾಚಕ

  • ಕಂದುಕಾವಿ ಬಣ್ಣದ.
  • ಕಪ್ಪುಕಂದಿನ; ಹೊಗೆ ಬಣ್ಣದ.

umber

ನಾಮವಾಚಕ

  • ಅಂಬರ್‍ ರಂಗು; ಕಂದುಕಾವಿ ರಂಗು; ಕಾವಿಯಂಥ ಆದರೆ ಅದಕ್ಕಿಂತ ಹೆಚ್ಚು ಕಪ್ಪುಕಂದಿನ, ಒಂದು ನೈಸರ್ಗಿಕ ವರ್ಣದ್ರವ್ಯ.
  • ಅಂಬರ್‍ ಯಾ ಕಂದುಕಾವಿ ಬಣ್ಣ.

umber

ಸಕರ್ಮಕ ಕ್ರಿಯಾಪದ

ಕಂದುಕಾವಿ ಬಣ್ಣ ಹಾಕು; ಅಂಬರ್‍ನಂಥ ಬಣ್ಣ ಲೇಪಿಸು.

umbilical

ಗುಣವಾಚಕ

  • ಹೊಕ್ಕುಳಿನ; ನಾಭಿಯ; ಹೊಕ್ಕುಳಿನ ಹತ್ತಿರವಿರುವ ಯಾ ಹೊಕ್ಕುಳಿಗೆ ಸಂಬಂಧಿಸಿದ.
  • ಕೇಂದ್ರಸ್ಥ; ಮಧ್ಯದಲ್ಲಿ, ಕೇಂದ್ರದಲ್ಲಿ ಇರುವ.

umbilical cord

ನಾಮವಾಚಕ

  • ಹೊಕ್ಕುಳಬಳ್ಳಿ; ನಾಭಿರಜ್ಜು; ಭ್ರೂಣವನ್ನು ಮಾಸಿಗೆ ಸೇರಿಸುವ, ಮೆತುವಾಗಿ ಬಾಗಿಸಬಹುದಾದ, ಹಗ್ಗದಂಥ ರಚನೆ.
  • (ವಾಯುಯಾನ) ನಾಭಿರಜ್ಜು; ಕ್ಷಿಪಣಿಯನ್ನೂ ಅದನ್ನು ಉಡಾಯಿಸುವ ಸಾಧನವನ್ನೂ ಯಾ ಆಕಾಶನೌಕೆಯನ್ನೂ ಆಕಾಶದಲ್ಲಿರುವ ಗಗನ ಯಾತ್ರಿಯನ್ನೂ ಕೂಡಿಸುವ, ಮೆತುವಾದ ಹೊರಜಿ ಯಾ ಹಗ್ಗ.

umbilicate

ಗುಣವಾಚಕ

  • ಹೊಕ್ಕುಳಿನಾಕಾರದ.
  • ಹೊಕ್ಕುಳುಳ್ಳ.

umbilicus

ನಾಮವಾಚಕ

  • (ಅಂಗರಚನಾಶಾಸ್ತ್ರ) ನಾಭಿ; ಹೊಕ್ಕುಳು.
  • (ಜೀವವಿಜ್ಞಾನ) ಸಸ್ಯ ಯಾ ಪ್ರಾಣಿಗಳಲ್ಲಿ ನಾಭಿಯಂಥ ರಚನೆ.
  • (ಜ್ಯಾಮಿತಿ) (ವಕ್ರರೇಖೆಯ) ನಾಭಿ; ತಲ ಒಂದರ ಮೇಲಿರುವ ಮತ್ತು ಅದರ ಮೂಲಕ ಹಾದು ಹೋಗುವ ಎಲ್ಲ ಅಡ್ಡಕೊಯ್ತಗಳಿಗೂ ಸಮವಕ್ರತೆ ಇರುವಂಥ ಬಿಂದು.

umbles

ನಾಮವಾಚಕ

(ಜಿಂಕೆ ಮೊದಲಾದವುಗಳ) (ತಿನ್ನಲು ಬರುವ ಜಠರ, ಕರುಳು ಮೊದಲಾದವುಗಳ) ಮಾಂಸಭಾಗಗಳು.

umbo

ನಾಮವಾಚಕ

  • ಗುರಾಣಿಯ (ಮುಖ್ಯವಾಗಿ ಮಧ್ಯದಲ್ಲಿರುವ) ಉಬಉ, ಗುಬಟು.
  • (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಉಬಉ; ಗಂತಿ; ಗುಬಟು; ಮುಂಚಾಚು.

umbonal

ಗುಣವಾಚಕ

  • (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಗುಬಟಿನ ಹಾಗಿರುವ; ಉಬ್ಬಿದಂಥ; ಗ್ರಂಥಿಯ ಹಾಗಿರುವ: an umbonal structure ಗುಬಟಿ ನಂಥ ರಚನೆ.
  • (ಗುರಾಣಿಯ ಮಧ್ಯಭಾಗದ, ಯಾ ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ ಸಹ) ಗುಬಟಿನ ಬಳಿಯ; ಗುಬಟು ಪ್ರದೇಶದ; ಗಂತಿಗೆ ಸೇರಿದ: the umbonal region ಗುಬಟಿನ ಪ್ರದೇಶ.

Search Dictionaries

Loading Results

Follow Us :   
  Download Bharatavani App
  Bharatavani Windows App