English-Kannada Nighantu (University of Mysore)
University of Mysore
U
ನಾಮವಾಚಕ
(u ಎಂದೂ ಪ್ರಯೋಗ)
- ಇಂಗ್ಲಿಷ್ ವರ್ಣಮಾಲೆಯ ಇಪ್ಪತ್ತೊಂದನೆಯ ಅಕ್ಷರ.
- U ಆಕಾರದ ವಸ್ತು ಯಾ ವಕ್ರ(ರೇಖೆ) (ಮುಖ್ಯವಾಗಿ ಸಂಯುಕ್ತಪದಗಳಲ್ಲಿ ಬಳಕೆ): U-bolt.
U
ನಾಮವಾಚಕ
(ಬರ್ಮೀಯರಲ್ಲಿ) ಒಬ್ಬನ ಹೆಸರಿನ ಮುಂದೆ ಸೇರಿಸುವ ಗೌರವಸೂಚಕ ಬಿರುದು.
U
ಗುಣವಾಚಕ
(ಮುಖ್ಯವಾಗಿ ಬ್ರಿಟಿಷ್ ಪ್ರಯೋಗ)
- (ಆಡುಮಾತು) ಮೇಲಿನ ವರ್ಗದ; ಮೇಲ್ವರ್ಗಕ್ಕೆ, ಶಿಷ್ಟವರ್ಗಕ್ಕೆ ಸೇರಿದ.
- ಮೇಲುವರ್ಗದ ವಿಶಿಷ್ಟ ಲಕ್ಷಣ ಎಂದು ನಂಬಲಾದ.
U
ಸಂಕ್ಷಿಪ್ತ
- (ಚಲನಚಿತ್ರ ಮೊದಲಾದವುಗಳ ವಿಷಯದಲ್ಲಿ) universal ಸಾರ್ವತ್ರಿಕ; ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ನೋಡಬಹುದಾದ.
- University.
U
ಸಂಕೇತ
uranium ಧಾತು.
u
ಪೂರ್ವಪ್ರತ್ಯಯ
= mu(2)($\mu$).
U-boat
ನಾಮವಾಚಕ
(ಚರಿತ್ರೆ) (ಜರ್ಮನರ) ಜಲಾಂತರ್ನೌಕೆ; ಜಲಾಂತರ್ಗಾಮಿ ಹಡಗು
U-bolt
ನಾಮವಾಚಕ
U (ಅಕ್ಷರದ ಆಕಾರದಲ್ಲಿರುವ) ತಾಪಾಳು; ವಂಕಿ ತಾಪಾಳು ಕೊಂಡಿ.
U-tube
ನಾಮವಾಚಕ
U ಆಕಾರದ ಕೊಳವಿ; ‘ಯೂ’ ಕೊಳವೆ.
U-turn
ನಾಮವಾಚಕ
- ‘ಯೂ’ ತಿರುವು; (ವಾಹನ ಇತ್ಯಾದಿಗಳು) ವಿರುದ್ಧ ದಿಕ್ಕಿಗೆ ತಿರುಗುವಂತೆ ‘U’ ಪಥದಲ್ಲಿ ತಿರುಗುವುದು.
- (ನೀತಿ, ತತ್ತ್ವ, ಮೊದಲಾದವುಗಳ ವಿಷಯದಲ್ಲಿ) ಸಂಪೂರ್ಣ – ಬದಲಾವಣೆ, ತಿರುಗುಮುರುಗು ಯಾ ರದ್ದಿಯಾತಿ.
u.c.
ಸಂಕ್ಷಿಪ್ತ
upper case.
UAE
ಸಂಕ್ಷಿಪ್ತ
United Arab Emirates.
ubiety
ನಾಮವಾಚಕ
ಸ್ಥಾನತ್ವ; ಒಂದು ಗೊತ್ತಾದ ಸ್ಥಳ ಯಾ ಸ್ಥಾನದಲ್ಲಿರುವುದು.
ubiquitarian
ಗುಣವಾಚಕ
(ದೇವತಾಶಾಸ್ತ್ರ) ಯೇಸು ಕ್ರಿಸ್ತನ ಸರ್ವತ್ರ ಅಸ್ತಿತ್ವಕ್ಕೆ ಸಂಬಂಧಿಸಿದ ಯಾ ಅದನ್ನು ನಂಬಉವ.
ubiquitarian
ನಾಮವಾಚಕ
(ದೇವತಾಶಾಸ್ತ್ರ) ಯೇಸು ಕ್ರಿಸ್ತನ ಸರ್ವತ್ರ ಅಸ್ತಿತ್ವದಲ್ಲಿ ಯಾ ಪ್ರತ್ಯಕ್ಷತೆಯಲ್ಲಿ ವಿಶ್ವಾಸಿ.
ubiquitarianism
ನಾಮವಾಚಕ
(ದೇವತಾಶಾಸ್ತ್ರ) ಯೇಸು ಕ್ರಿಸ್ತನ ಸರ್ವತ್ರ ಪ್ರತ್ಯಕ್ಷತೆಯಲ್ಲಿ ಶ್ರದ್ಧೆ, ವಿಶ್ವಾಸ.
ubiquitous
ಗುಣವಾಚಕ
- ಸರ್ವಗ; ಸರ್ವತ್ರ; ಎಲ್ಲೆಡೆ ಯಾ ಒಂದೇ ಕಾಲದಲ್ಲಿ ವಿವಿಧ ಎಡೆಗಳಲ್ಲಿ ಇರುವ: ubiquitous fog ಸರ್ವತ್ರ ಹರಡಿದ ಮಂಜು.
- ಪದೇಪದೇ ಯಾ ಅನೇಕವೇಳೆ – ಸಿಗುವ, ಗೋಚರಿಸುವ, ಸಂಧಿಸಬಹುದಾದ.
ubiquitously
ಕ್ರಿಯಾವಿಶೇಷಣ
- ಸರ್ವತ್ರ ಸಿದ್ಧವಾಗಿ; ಎಲ್ಲೆಡೆ ಯಾ ಒಂದೇ ಕಾಲದಲ್ಲಿ ವಿವಿಧೆಡೆಗಳಲ್ಲಿ ಇರುವಂತೆ.
- ಪದೇಪದೇ ಯಾ ಅನೇಕ ವೇಳೆ ಸಿಗುವಂತೆ, ಗೋಚರವಾಗುವಂತೆ.
ubiquitousness
ನಾಮವಾಚಕ
= ubiquity.
ubiquity
ನಾಮವಾಚಕ
ಪದಗುಚ್ಛ
ubiquity of the king (ಬ್ರಿಟಿಷ್ ಪ್ರಯೋಗ) (ನ್ಯಾಯಶಾಸ್ತ್ರ) ರಾಜನ ಸರ್ವಾಂತರ್ಯಾಮಿತ್ವ; ರಾಜನು ಎಲ್ಲಾ ನ್ಯಾಯಾಲಯಗಳಲ್ಲೂ ನ್ಯಾಯಾಧೀಶರುಗಳಲ್ಲೂ ಮೂರ್ತಿಮತ್ತಾಗಿರುವುದು; ನ್ಯಾಯಾಧೀಶರ ರೂಪದಲ್ಲಿ ಅಧಿಕೃತವಾಗಿ ಇರುವುದು.
- ಸರ್ವತ್ರ ಪ್ರತ್ಯಕ್ಷತೆ; ಸರ್ವತ್ರ ಅಸ್ತಿತ್ವ; ಸರ್ವಗತ್ವ; ಒಂದೇ ಕಾಲದಲ್ಲಿ ಅನೇಕ ಸ್ಥಳಗಳಲ್ಲಿರುವಿಕೆ.
- (ಹಾಸ್ಯ ಪ್ರಯೋಗ) (ವ್ಯಕ್ತಿಯ ವಿಷಯದಲ್ಲಿ) ಪದೇಪದೇ ಸಿಗುವಿಕೆ.