भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vacationer

ನಾಮವಾಚಕ

= vacationist.

vacationist

ನಾಮವಾಚಕ

(ಅಮೆರಿಕನ್‍ ಪ್ರಯೋಗ) ರಜಾಕಾಲದ ವಿಹಾರಿ.

vaccinal

ಗುಣವಾಚಕ

ವ್ಯಾಕ್ಸೀನಿನ ಯಾ ಅದಕ್ಕೆ ಸಂಬಂಧಿಸಿದ.

vaccinate

ಸಕರ್ಮಕ ಕ್ರಿಯಾಪದ

ಸಿಡುಬಉ, ದೇವಿ, ದಾಪು – ಹಾಕು; ಯಾವುದೇ ರೋಗಕ್ಕೆ ವಿನಾಯಿತಿ ಉಂಟು ಮಾಡಲು ಸಂಬಂಧಪಟ್ಟ ವ್ಯಾಕ್ಸೀನನ್ನು ಚುಚ್ಚಿ ಒಳಸೇರಿಸು; ಚುಚ್ಚುಮದ್ದು ಹಾಕು.

vaccination

ನಾಮವಾಚಕ

ವ್ಯಾಕ್ಸೀನ್‍, ಸಿಡುಬಉ, ದೇವಿ – ಚುಚ್ಚಿಕೆ; ಚುಚ್ಚುಮದ್ದು ಹಾಕುವುದು.

vaccinator

ನಾಮವಾಚಕ

ದೇವಿ, ಸಿಡುಬಉ – ಹಾಕುವವ; ಚುಚ್ಚುಮದ್ದುಗಾರ.

vaccine

ಗುಣವಾಚಕ

ದನಸಿಡುಬಿಗೆ ಯಾ ಚುಚ್ಚುಮದ್ದಿಗೆ, ವ್ಯಾಕ್ಸೀನಿಗೆ ಸಂಬಂಧಿಸಿದ.

vaccine

ನಾಮವಾಚಕ

ವ್ಯಾಕ್ಸೀನು; ಲಸಿಕೆ:

  • ರಕ್ತದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಲು ಪ್ರಚೋದನೆ ನೀಡಬಲ್ಲ ಪದಾರ್ಥ, ಸಾಮಾನ್ಯವಾಗಿ ಶಕ್ತಿಗುಂದಿಸಿದ ರೋಗಕಾರಕ ಸೂಕ್ಷ ಜೀವಿ.
  • (ಚರಿತ್ರೆ) ಸಿಡುಬಿಗೆ ವಿನಾಯಿತಿ ಉಂಟುಮಾಡಲು ವ್ಯಾಕ್ಸೀನ್‍ ಆಗಿ ಬಳಸುತ್ತಿದ್ದ, ದನಸಿಡುಬಉ ವೈರಸ್‍.

vaccinia

ನಾಮವಾಚಕ

(ವೈದ್ಯಶಾಸ್ತ್ರ) ಸಿಡುಬಿಗೆ ಪರಿಹಾರವಾಗಿ ಬಳಸುವ ಸಿಡುಬಉ ವೈರಸ್‍.

vacillate

ಅಕರ್ಮಕ ಕ್ರಿಯಾಪದ

  • (ಅತ್ತಲಿಂದಿತ್ತ ಯಾ ಪಕ್ಕದಿಂದ ಪಕ್ಕಕ್ಕೆ, ಆ ಕಡೆಯಿಂದ ಈ ಕಡೆಗೆ) ಓಲಾಡು; ಊಗಲಾಡು; ತೊನೆದಾಡು; ಹೊಯ್ದಾಡು.
  • (ಅಭಿಪ್ರಾಯ, ಸಂಕಲ್ಪ, ಮೊದಲಾದವುಗಳಲ್ಲಿ) ಹೊಯ್ದಾಡುತ್ತಿರು; ತೂಗಾಡುತ್ತಿರು; ಉಯ್ಯಾಲೆಯಾಡುತ್ತಿರು; ಡೋಲಾಯಮಾನವಾಗಿರು; ಅನಿಶ್ಚಿತವಾಗಿರು.

vacillation

ನಾಮವಾಚಕ

(ಅಭಿಪ್ರಾಯ, ಸಂಕಲ್ಪ, ಮೊದಲಾದವುಗಳ ವಿಷಯದಲ್ಲಿ) ಹೊಯ್ದಾಟ; ಡೋಲಾಯಮಾನ ಸ್ಥಿತಿ; ಹಿಂದುಮುಂದು ನೋಡುತ್ತಿರುವಿಕೆ; ಅಸ್ಥಿರತೆ; ಚಂಚಲಮನಸ್ಕತೆ; ಅನಿಶ್ಚಿತತೆ.

vacillator

ನಾಮವಾಚಕ

(ನಿರ್ಧಾರ, ಸಂಕಲ್ಪ, ಮೊದಲಾದವನ್ನು ತೆಗೆದುಕೊಳ್ಳದೆ) ಹಿಂದು ಮುಂದು ನೋಡುವವ; ಡೋಲಾಯಮಾನ ಮನಸ್ಕ.

vacua

ನಾಮವಾಚಕ

vacuum ಪದದ ಬಹುವಚನ.

vacuity

ನಾಮವಾಚಕ

  • ಶೂನ್ಯ ಸ್ಥಿತಿ; ಶೂನ್ಯತೆ; ಖಾಲಿಯಾಗಿರುವಿಕೆ; ಯಾವ ವಸ್ತುವೂ ಇಲ್ಲದೆ ಬರಿದಾಗಿರುವ ಸ್ಥಿತಿ.
  • ಬಉದ್ಧಿಶೂನ್ಯತೆ; ಭಾವಶೂನ್ಯತೆ; ವಿಚಾರಹೀನತೆ.
  • ಶೂನ್ಯಪ್ರದೇಶ; ಖಾಲಿಜಾಗ.

vacuolar

ಗುಣವಾಚಕ

ಕುಹರದ ಯಾ ಅದಕ್ಕೆ ಸಂಬಂಧಿಸಿದ.

vacuolation

ನಾಮವಾಚಕ

ಕುಹರೀಕರಣ; ಕುಹರಗಳುಂಟಾಗುವಿಕೆ.

vacuole

ನಾಮವಾಚಕ

(ಜೀವವಿಜ್ಞಾನ) ಕುಹರ; ಜೀವಕೋಶದ ಕೋಶದ್ರವದಲ್ಲಿ ವಾಯು, ದ್ರವ ಯಾ ಆಹಾರಕಣ, ಮೊದಲಾದವುಗಳಿರುವ ಅತಿ ಚಿಕ್ಕ ಗುಳ್ಳೆ, ಪೊಟರೆ.

vacuous

ಗುಣವಾಚಕ

  • (ಘನ, ದ್ರವ, ಅನಿಲ – ದ್ರವ್ಯವಿಲ್ಲದೆ) ಬರಿದಾದ; ಖಾಲಿಯಾದ; ಶೂನ್ಯವಾದ.
  • (ಒಳಗಣ ದ್ರವ್ಯವನ್ನೆಲ್ಲ ತೆಗೆದುಹಾಕಿ) ಬರಿದುಮಾಡಿದ; ಶೂನ್ಯಗೊಳಿಸಿದ; ಖಾಲಿಮಾಡಿದ; ತೆರಪುಗೊಳಿಸಿದ.
  • ಬಉದ್ಧಿಶೂನ್ಯ ಯಾ ಭಾವಶೂನ್ಯ: a vacuous remark ಬಉದ್ಧಿಶೂನ್ಯವಾದ ಯಾ ಅರ್ಥಹೀನವಾದ – ಮಾತು, ಟೀಕೆ. a vacuous stare ಶೂನ್ಯದೃಷ್ಟಿ.

vacuously

ಕ್ರಿಯಾವಿಶೇಷಣ

ಶೂನ್ಯದೃಷ್ಟಿಯಿಂದ; ಬಉದ್ಧಿ ಯಾ ಭಾವ ಶೂನ್ಯವಾದ ನೋಟದಿಂದ: he stared at me vacuously ಅವನು ನನ್ನ ಕಡೆ ಶೂನ್ಯದೃಷ್ಟಿಯಿಂದ ನೋಡುತ್ತಿದ್ದ.

vacuousness

ನಾಮವಾಚಕ

= vacuity \((1 & 2)\).

Search Dictionaries

Loading Results

Follow Us :   
  Download Bharatavani App
  Bharatavani Windows App