भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vacuum

ನಾಮವಾಚಕ

  • ಶೂನ್ಯಪ್ರದೇಶ; ಯಾವುದೇ ವಸ್ತುವಿಲ್ಲದ ಪ್ರದೇಶ.
  • ನಿರ್ವಾತ – ಪಾತ್ರೆ, ಪ್ರದೇಶ; ವಾಯುವನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ತೆಗದುಹಾಕಿಬಿಟ್ಟಿರುವ ಪಾತ್ರೆ ಯಾ ಪ್ರದೇಶ: Torricellian vacuum ಟಾರಿಚೆಲಿಯನ್‍ ನಿರ್ವಾತಪ್ರದೇಶ.
  • ವಾಯುವಿರಳತೆ; ವಾಯುವಿನ ಒತ್ತಡ ಯಾ ಸಂಮರ್ದ ಸಾಮಾನ್ಯವಾಗಿ ಇರಬೇಕಾದ ಪ್ರಮಾಣಕ್ಕಿಂತ ಕಡಿಮೆಯಾಗಿರುವುದು.
  • ಅಭಾವ; ರಾಹಿತ್ಯ; ಯಾವುದೇ ಸ್ಥಳ, ಸನ್ನಿವೇಶ, ಮೊದಲಾದವುಗಳಲ್ಲಿ ಇರಬೇಕಾದ ವ್ಯಕ್ತಿ, ವಸ್ತು, ಚಟುವಟಿಕೆ, ಮೊದಲಾದವು ಇಲ್ಲದಿರುವುದು.
  • (ಆಡುಮಾತು) (ಬಹುವಚನ vacuums) = vacuum-cleaner.

vacuum

ಸಕರ್ಮಕ ಕ್ರಿಯಾಪದ

ವ್ಯಾಕ್ಯೂಮ್‍ ಕ್ಲೀನರನ್ನು ಬಳಸು; ನಿರ್ವಾಯು ಮಾರ್ಜಕದಿಂದ ಧೂಳು ಮೊದಲಾದವನ್ನು ಕಳೆ ( ಅಕರ್ಮಕ ಕ್ರಿಯಾಪದ ಸಹ).

vacuum brake

ನಾಮವಾಚಕ

ನಿರ್ವಾಯುರೋಧಕ; (ರೇಚಕದಿಂದ ವಾಯುವನ್ನು ತೊಲಗಿಸಿ ಶೂನ್ಯಪ್ರದೇಶ ವನ್ನುಂಟುಮಾಡುವುದರ ಮೂಲಕ ತಡೆತವನ್ನುಂಟು ಮಾಡುವ) ವ್ಯಾಕ್ಯೂಮ್‍ – ಬಿರಿ, ಬ್ರೇಕು.

vacuum flask

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಥರ್ಮಸ್‍ ಹ್ಲಾಸ್ಕು; (ಎರಡು ಭಿತ್ತಿಗಳ ನಡುವೆ ನಿರ್ವಾಯು ಪ್ರದೇಶ ವನ್ನುಂಟುಮಾಡಿ, ಒಳಗೆ ತುಂಬಿಟ್ಟ ದ್ರವದ ಶಾಖವು ಹೆಚ್ಚು ಕಾಲ ಉಳಿಯುವಂತೆ ನಿರ್ಮಿಸಿರುವ) ನಿರ್ವಾಯು ಪಾತ್ರೆ, ಸೀಸೆ.

vacuum pump

ನಾಮವಾಚಕ

(ನಿರ್ವಾಯು ಪ್ರದೇಶವನ್ನುಂಟುಮಾಡಲು ಬಳಸುವ) ವ್ಯಾಕ್ಯೂಮ್‍ಪಂಪು; ನಿರ್ವಾಯು ಪಂಪು.

vacuum tube

ನಾಮವಾಚಕ

(ವಿದ್ಯುತ್ಪ್ರವಾಹವು ಸರಾಗವಾಗಿ ಹರಿಯುವಂತೆ ಮಾಡಲು, ಒಳಗಿನ ವಾಯುವನ್ನೆಲ್ಲ ಹೆಚ್ಚುಕಡಿಮೆ ಪೂರ್ತಿಯಾಗಿ ಚೋಷಿಸಿ, ಬಳಿಕ ಮೊಹರುಮಾಡಿದ) ನಿರ್ವಾಯು ಕೊಳವೆ; ವ್ಯಾಕ್ಯೂಮ್‍ ಟ್ಯೂಬಉ.

vacuum-clean

ಸಕರ್ಮಕ ಕ್ರಿಯಾಪದ

ನಿರ್ವಾಯು ಮಾರ್ಜಕದಿಂದ ಧೂಳು ಮೊದಲಾದವನ್ನು ಕಳೆ ಹೋಗಲಾಡಿಸು, ಶುಚಿಗೊಳಿಸು.

vacuum-cleaner

ನಾಮವಾಚಕ

ವ್ಯಾಕ್ಯೂಮ್‍ ಕ್ಲೀನರು; ನಿರ್ವಾಯು ಮಾರ್ಜಕ; ರೇಚಕದಿಂದ ವಾಯುವನ್ನೆಲ್ಲ ತೆಗೆದು ಶೂನ್ಯಪ್ರದೇಶವನ್ನುಂಟುಮಾಡುವುದರ ಮೂಲಕ, ಧೂಳು ಮೊದಲಾದವನ್ನು ಕಳೆಯುವ ಸಾಧನ.

vacuum-gauge

ನಾಮವಾಚಕ

(ಯಾವುದೇ ಪಾತ್ರೆಯಿಂದ ವಾಯುವನ್ನು ಖಾಲಿಮಾಡಿದ ಮೇಲೆ ಉಳಿದ ಅಲ್ಪಸ್ವಲ್ಪ ವಾಯುವಿನ ಒತ್ತಡದ ಪ್ರಮಾಣವನ್ನು ಕಂಡುಹಿಡಿಯುವ) ನಿರ್ವಾಯು ಮಾಪಕ.

vacuum-packed

ಗುಣವಾಚಕ

(ಯಾವುದೇ ಪಾತ್ರೆಯ ವಿಷಯದಲ್ಲಿ) ವಾಯುವನ್ನು ಖಾಲಿಮಾಡಿದ ಬಳಿಕ ಭದ್ರವಾಗಿ ಮೊಹರು ಮಾಡಿದ.

VAD

ಸಂಕ್ಷಿಪ್ತ

Voluntary Aid Detachment.

vade-mecum

ನಾಮವಾಚಕ

ಸದಾ ಜೊತೆಯಲ್ಲೇ ಒಯ್ಯುವ ಕೈಪಿಡಿ ಮೊದಲಾದ ಯಾವುದೇ ವಸ್ತು.

vagabond

ಗುಣವಾಚಕ

  • ಅಲೆಮಾರಿಯಾದ; ಗೊತ್ತಾದ ನೆಲೆಯಿಲ್ಲದ; ಸ್ಥಿರವಾದ ಮನೆಮಠವಿಲ್ಲದ; (ಸದಾ) ಅಲೆದಾಡುತ್ತಿರುವ.
  • ಪೋಕರಿ; ಪೋಲಿ(ಯಾಗಿ) ತಿರುಗುತ್ತಿರುವ.

vagabond

ನಾಮವಾಚಕ

  • (ಕೆಲಸ ಕಾರ್ಯವಿಲ್ಲದೆ ಶುದ್ಧ ನಿಷ್ಪ್ರಯೋಜಕನಾಗಿ ಅಂಡಲೆಯುವ) ಅಲೆಮಾರಿ; ತಿರಿದಾಡುವವನು.
  • (ಆಡುಮಾತು) ಅಪಾಪೋಲಿ; ಪೋಕರಿ; ಲಹಂಗ.

vagabond

ಅಕರ್ಮಕ ಕ್ರಿಯಾಪದ

ಅಲೆಮಾರಿಯಂತೆ ಅಲೆಯುತ್ತಿರು; ಗೊತ್ತುಗುರಿಯಿಲ್ಲದೆ ತಿರುಗಾಡುತ್ತಿರು.

vagabondage

ನಾಮವಾಚಕ

  • ಅಲೆಮಾರಿತನ.
  • ಅಲೆಮಾರಿ ತಂಡ, ವರ್ಗ.

vagabondish

ಗುಣವಾಚಕ

  • ಅಲೆಮಾರಿಯಂಥ.
  • ಪೋಕರಿಯಂಥ; ಪೋಲಿಯಾದ.

vagabondism

ನಾಮವಾಚಕ

  • = vagabondage.
  • ಅಪಾಪೋಲಿತನ; ಲಹಂಗತನ.

vagabondize

ಅಕರ್ಮಕ ಕ್ರಿಯಾಪದ

  • ಅಲೆಮಾರಿಯಾಗಿ ತಿರುಗು(ತ್ತಿರು).
  • ಅಪಾಪೋಲಿಯಂತೆ ವರ್ತಿಸು ಯಾ ಸುತ್ತುತ್ತಿರು.

vagal

ಗುಣವಾಚಕ

(ಅಂಗರಚನಾಶಾಸ್ತ್ರ) ವೇಗಸ್‍ (vagus) ನ ಯಾ ಅದಕ್ಕೆ ಸಂಬಂಧಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App