भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vagarious

ಗುಣವಾಚಕ

ಚಪಲಚಿತ್ತದ; ತೋರಿದಂತೆ, ಮನಬಂದಂತೆ ನಡೆಯುವ.

vagary

ನಾಮವಾಚಕ

  • ವಿಚಿತ್ರ – ನಡವಳಿಕೆ, ವರ್ತನೆ.
  • ಕಲ್ಪನೆ, ಭಾವನೆ, ಮೊದಲಾದವುಗಳ ಯದ್ವಾತದ್ವಾ ವರ್ತನೆ, ತಿಕ್ಕಲು; ಹುಚ್ಚಾಟ: the vagaries of fortune ಅದೃಷ್ಟದ ಹುಚ್ಚಾಟಗಳು.

vagina

ನಾಮವಾಚಕ

  • ಯೋನಿ(ನಾಳ); ಮಾನವರಲ್ಲಿ ಮತ್ತು ಇತರ ಸಸ್ತನಿಗಳಲ್ಲಿ ಹೆಣ್ಣಿನ ಗರ್ಭಕೋಶ ಮತ್ತು ಜನನಾಂಗದ ಹೊರದ್ವಾರಗಳ ನಡುವೆ ಇರುವ ನಾಳ.
  • (ಸಸ್ಯವಿಜ್ಞಾನ) ವೃಂತಕವಚ; ಎಲೆಯ ಬಉಡದಲ್ಲಿ ಕಾಂಡದ ಸುತ್ತ ಇರುವ ಕವಚ, ಕೋಶ, ಹೊದಿಕೆ.

vaginal

ಗುಣವಾಚಕ

  • ಯೋನಿಯ; ಯೋನಿನಾಳದ.
  • (ಸಸ್ಯವಿಜ್ಞಾನ) ಎಲೆಯ ವೃಂತಕವಚದ, ವೃಂತಕೋಶದ.

vaginismus

ನಾಮವಾಚಕ

(ವೈದ್ಯಶಾಸ್ತ್ರ) (ಇದ್ದಕ್ಕಿದ್ದಂತೆ ತುಡಿಯುತ್ತ ತುಂಬ ನೋಯುವ) ಯೋನಿ ಸಂಕೋಚನ; ಯೋನಿತುಡಿತ.

vaginitis

ನಾಮವಾಚಕ

(ವೈದ್ಯಶಾಸ್ತ್ರ) ಯೋನಿನಾಳದ ಉರಿಯೂತ.

vagrancy

ನಾಮವಾಚಕ

ಅಲೆಮಾರಿತನ ಯಾ ಅಲೆಮಾರಿ ಜೀವನ.

vagrant

ಗುಣವಾಚಕ

  • (ಗೊತ್ತುಗುರಿ ಇಲ್ಲದೆ) ಅಲೆದಾಡುವ; ಸುತ್ತಾಡುತ್ತಲೇ ಇರುವ; ಅಲೆಮಾರಿಯಾದ: a vagrant tribe ಒಂದು ಅಲೆಮಾರಿ ಬಉಡಕಟ್ಟು.
  • ಸಂಚಾರಿ; ಸದಾ ಸಂಚರಿಸುತ್ತಲೇ ಇರುವ: a vagrant musician ಒಬ್ಬ ಸಂಚಾರೀ ಸಂಗೀತಗಾರ.
  • ದಿಕ್ಕಾಪಾಲಾದ; ಗೊತ್ತುಗುರಿ ಇಲ್ಲದ; ನಿಲವು ನೆಲೆಯಿಲ್ಲದ: vagrant speculations ದಿಕ್ಕಾಪಾಲಾದ ಊಹಾಪೋಹಗಳು.
  • ಅಪಾಪೋಲಿಯಾದ.

vagrant

ನಾಮವಾಚಕ

  • (ಮನೆಮಠವಿಲ್ಲದ, ಕೆಲಸಕಾರ್ಯವಿಲ್ಲದ) ಅಲೆಮಾರಿ; ಕೆಲಸ ಕಾರ್ಯವಿಲ್ಲದೆ ಅಲೆಯುತ್ತಲೇ ಇರುವವನು.
  • ಅಪಾಪೋಲಿ; ಲಹಂಗ.

vagrantly

ಕ್ರಿಯಾವಿಶೇಷಣ

ಅಲೆಮಾರಿಯಾಗಿ; ಅಲೆಮಾರಿತನದಿಂದ.

vague

ಗುಣವಾಚಕ

  • ಅಸ್ಪಷ್ಟ; ಸ್ಪಷ್ಟವಾಗಿ, ನಿರ್ದಿಷ್ಟವಾಗಿ – ಹೇಳಿಲ್ಲದ; ಅಸ್ಫುಟ: he returned only a vague answer ಅವನು ಏನೋ ಒಂದು ಅಸ್ಪಷ್ಟವಾದ ಉತ್ತರ ಕೊಟ್ಟ, ಅಷ್ಟೆ. I have not the vaguest notion of reasons ಅವನ ಕಾರಣಗಳೇನು ಎಂಬ ಬಗ್ಗೆ ನನಗೆ ತೀರ ಅಸ್ಪಷ್ಟವಾದ ಭಾವನೆ ಕೂಡ ಇಲ್ಲ. I heard a vague rumour to that effect ಆ ಅರ್ಥ ಬರುವ ಯಾವುದೋ ಒಂದು ಅಸ್ಪಷ್ಟ ವದಂತಿ ನನ್ನ ಕಿವಿಗೆ ಬಿತ್ತು.
  • (ವ್ಯಕ್ತಿಯ ಯಾ ಮನಸ್ಸಿನ ವಿಷಯದಲ್ಲಿ) ಅನಿಷ್ಕೃಷ್ಟ; ಸಂದಿಗ್ಧ; ಕರಾರುವಾಕ್ಕಲ್ಲದ; ಖಚಿತವಲ್ಲದ.

vaguely

ಕ್ರಿಯಾವಿಶೇಷಣ

  • ಅಸ್ಪಷ್ಟವಾಗಿ; ಅಸ್ಫುಟವಾಗಿ.
  • ಅನಿಷ್ಕೃಷ್ಟವಾಗಿ; ಸಂದಿಗ್ಧವಾಗಿ; ಕರಾರುವಾಕ್ಕಾಗಿಲ್ಲದೆ.

vagueness

ನಾಮವಾಚಕ

  • ಅಸ್ಪಷ್ಟತೆ; ಅಸ್ಫುಟತೆ.
  • ಅನಿಷ್ಕೃಷ್ಟತೆ; ಸಂದಿಗ್ಧತೆ; ಕರಾರುವಾಕ್ಕಾಗಿಲ್ಲದಿರುವಿಕೆ.

vaguish

ಗುಣವಾಚಕ

ಅಸ್ಪಷ್ಟವೆನಿಸುವ; ಅಷ್ಟೇನೂ ಸ್ಪಷ್ಟವಲ್ಲದ.

vagus

ನಾಮವಾಚಕ

(ಅಂಗರಚನಾಶಾಸ್ತ್ರ) ವೇಗಸ್‍; ಹೃದಯ, ಶ್ವಾಸಕೋಶಗಳು, ಮತ್ತಿತರ ಒಳಾಂಗಗಳಿಗೆ ಹೋಗುವ ಶಾಖೆಗಳುಳ್ಳ, ಹತ್ತನೆಯ ಕಪಾಲ ನರ ಜೋಡಿಯಲ್ಲಿ ಒಂದು.

vail

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಅಧೀನತೆಯನ್ನು ಯಾ ಶರಣಾಗತಿಯನ್ನು ಸೂಚಿಸುವ ಸಲುವಾಗಿ) ಟೋಪಿ, ಹ್ಯಾಟು, ಕಿರೀಟ, ತುರಾಯಿ, ಮೊದಲಾದ ಶಿರೋಭೂಷಣವನ್ನು ತೆಗೆ ಯಾ ತಗ್ಗಿಸು. ಮಣಿ; ತಲೆಬಾಗು; ಶಿರೋಭೂಷಣವನ್ನು ತೆಗೆ.

vail

ನಾಮವಾಚಕ

  • ಇನಾಮು; ಬಕ್ಷೀಸು.
  • ಮೇಲುಸಂಪಾದನೆ; ಸಂಬಳಕ್ಕಿಂತ ಹೆಚ್ಚಿಗೆ ಬರುವ ಯಾವುದೇ ಲಾಭ, ಗಳಿಕೆ; (ಕೆಲವೊಮ್ಮೆ) ಲಂಚ, ರುಷುವತ್ತು.

vain

ಗುಣವಾಚಕ

ಪದಗುಚ್ಛ

  • ಪೊಳ್ಳು; ಟೊಳ್ಳು; ಜಳ್ಳು; ಒಣ; ಶುಷ್ಕ; ಹುರುಳಿಲ್ಲದ; ತಿರುಳಿಲ್ಲದ; ಸಾರವಿಲ್ಲದ: vain boasts ಒಬಡಾಯಿಗಳು. vain triumphs ಹುರುಳಿಲ್ಲದ ವಿಜಯಗಳು. vain distinction ಪೊಳ್ಳು ಪ್ರತಿಷ್ಠೆ.
  • ವ್ಯರ್ಥ; ನಿಷ್ಪ್ರಯೋಜಕ; ನಿಷ್ಫಲ; ನಿರರ್ಥಕ: vain hope ವ್ಯರ್ಥವಾದ ಆಶೆ. resistance is vain ಪ್ರತಿಭಟನೆಯು ನಿರರ್ಥಕ. it is vain to resist ಪ್ರತಿಭಟಿಸುವುದು ನಿಷ್ಫಲ.
  • (ಸೌಂದರ್ಯ, ಸಾಮರ್ಥ್ಯ, ಮೊದಲಾದವುಗಳ ವಿಷಯದಲ್ಲಿ) ದುರಭಿಮಾನದ; ಗರ್ವದ; ದುರಹಂಕಾರದ: she is vain of her beauty ಆಕೆಗೆ ತನ್ನ ಸೌಂದರ್ಯದ ಬಗ್ಗೆ ದುರಭಿಮಾನವಿದೆ.

vainglorious

ಗುಣವಾಚಕ

ಒಣಜಂಬದ; ಬಂಡವಾಳವಿಲ್ಲದ ಬಡಾಯಿಯ; ಬಡಿವಾರದ.

vaingloriously

ಕ್ರಿಯಾವಿಶೇಷಣ

ಒಣಜಂಬದಿಂದ; ಬಂಡವಾಳವಿಲ್ಲದ ಬಡಾಯಿಯಿಂದ.

Search Dictionaries

Loading Results

Follow Us :   
  Download Bharatavani App
  Bharatavani Windows App