भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vaingloriousness

ನಾಮವಾಚಕ

ಒಣಜಂಬ; ಬಡಾಯಿ.

vainglory

ನಾಮವಾಚಕ

ಒಣಜಂಬ; ಬಂಡವಾಳವಿಲ್ಲದ ಬಡಾಯಿ; ಬಡಿವಾರ.

vainly

ಕ್ರಿಯಾವಿಶೇಷಣ

  • ವ್ಯರ್ಥವಾಗಿ; ನಿರರ್ಥಕವಾಗಿ; ನಿಷ್ಫಲವಾಗಿ; ನಿಷ್ಪ್ರಯೋಜಕವಾಗಿ.
  • ಗರ್ವದಿಂದ; ದುರಭಿಮಾನದಿಂದ; ದುರಹಂಕಾರದಿಂದ; ಸ್ವಪ್ರತಿಷ್ಠೆಯಿಂದ.

vainness

ನಾಮವಾಚಕ

  • ವ್ಯರ್ಥತೆ; ನಿರರ್ಥಕತೆ; ನಿಷ್ಫಲತೆ; ನಿಷ್ಪ್ರಯೋಜಕತೆ.
  • ಗರ್ವ; ದುರಭಿಮಾನ; ದುರಹಂಕಾರ; ಸ್ವಪ್ರತಿಷ್ಠೆ.

vair

ನಾಮವಾಚಕ

  • (ಪ್ರಾಚೀನ ಪ್ರಯೋಗ ಯಾ ಚರಿತ್ರೆ) (ಮಧ್ಯ ಯುಗದಲ್ಲಿ ಅಂಗಿ, ನಿಲುವಂಗಿ, ಮೊದಲಾದವಕ್ಕೆ ಅಸ್ತರಿಯಾಗಿಯೋ, ಕುತ್ತಿಗೆ, ಮುಂಗೈ, ಮೊದಲಾದವುಗಳ ಅಲಂಕರಣಕ್ಕಾಗಿಯೋ ಬಳಸುತ್ತಿದ್ದ) ಅಳಿಲಿನ ತುಪ್ಪುಳು.
  • (ವಂಶಲಾಂಛನ ವಿದ್ಯೆ) ತುಪು ಳಿನ ಅಲಂಕರಣವನ್ನು ಸೂಚಿಸಲು, ಆಕಾಶನೀಲಿ ಇಲ್ಲವೆ ಬೆಳ್ಳಿಯ ಬಣ್ಣಗಳು ಒಂದಾದ ಮೇಲೊಂದು ಬರುವಂತೆ, ಸಣ್ಣ ಗುರಾಣಿಯ ಅಥವಾ ಗಂಟೆಯ ಆಕಾರದ ಚಿತ್ರಣ.

Vaishnava

ನಾಮವಾಚಕ

(ಹಿಂದೂಧರ್ಮ) ವೈಷ್ಣವ; ವಿಷ್ಣು(ವಿನ) ಭಕ್ತ.

Vaisya

ನಾಮವಾಚಕ

  • (ಹಿಂದೂಧರ್ಮದ) (ನಾಲ್ಕು ವರ್ಣಗಳಲ್ಲಿ ಮೂರನೆಯದಾದ) ವೈಶ್ಯ (ವರ್ಣ, ಜಾತಿ).
  • ವೈಶ್ಯ(ವರ್ಣದವನು).

valance

ನಾಮವಾಚಕ

(ಮಂಚದ ಚಪ್ಪರದ ಯಾ ಚೌಕಟ್ಟಿನ ಸುತ್ತ, ಕಿಟಕಿಯ ಮೇಲ್ಭಾಗದಲ್ಲಿ ಇಲ್ಲವೆ ಕಪಾಟಿನ ಕೆಳಭಾಗದಲ್ಲಿ ಹಾಕುವ) ಮೋಟು ಪರದೆ; ತುಂಡು ಪರದೆ.

valanced

ಗುಣವಾಚಕ

ಮೋಟು ಪರದೆ ಹಾಕಿದ.

vale

ನಾಮವಾಚಕ

(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) (ಸ್ಥಳನಾಮಗಳನ್ನು ಹೊರತುಪಡಿಸಿ) ಕಣಿವೆ: over field and vale ಮೈದಾನ ಮತ್ತು ಕಣಿವೆಯ ಮೇಲೆ. Vale of Kashmir ಕಾಶ್ಮೀರದ ಕಣಿವೆ. ನುಡಿಗಟ್ಟು

  • the vale of years ಮುಪ್ಪು; ವೃದ್ಧಾಪ್ಯ; ವಾರ್ಧಕ್ಯ.
  • this (or the) vale of tears (ಸಾಹಿತ್ಯಕ) ದುಃಖದ ಈ ಕಣಿವೆ; ದುಃಖಮಯವಾದ ಈ ಲೋಕ, ಈ ಬಾಳು, ಈ ಬದುಕು.

vale

ಭಾವಸೂಚಕ ಅವ್ಯಯ

(ಬೀಳ್ಕೊಡುಗೆಯಲ್ಲಿ) ದೇವರು ಒಳ್ಳೆಯದನ್ನು ಮಾಡಲಿ!

vale

ನಾಮವಾಚಕ

(ಬೀಳ್ಕೊಡುಗೆಯಲ್ಲಿ ಹೇಳುವ) ‘ದೇವರು ಒಳ್ಳೆಯದನ್ನು ಮಾಡಲಿ’ ಎಂಬ ಶುಭಾಶಯ.

valediction

ನಾಮವಾಚಕ

  • ಬೀಳ್ಕೊಡುಗೆ; ಬೀಳ್ಕೊಳ್ಳುವುದು.
  • ಬೀಳ್ಕೊಡುವಲ್ಲಿ ಹೇಳುವ ಮಾತು.

valedictorian

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಸಮಾರೋಪ ಭಾಷಣಕಾರ; ಶಾಲಾಕಾಲೇಜುಗಳ ಅತ್ಯುನ್ನತ ತರಗತಿಯ, ಅತ್ಯುನ್ನತ ಸ್ಥಾನ ಗಳಿಸಿದ್ದರಿಂದ ಸಮಾರೋಪದ ಯಾ ಬೀಳ್ಕೊಡುಗೆಯ ಭಾಷಣ ಮಾಡಲು ಆಯ್ಕೆಗೊಂಡ ಹಿರಿಯ ವಿದ್ಯಾರ್ಥಿ.

valedictory

ಗುಣವಾಚಕ

ಬೀಳ್ಕೊಡುಗೆಯ; ವಿದಾಯ(ದ).

valedictory

ನಾಮವಾಚಕ

ಬೀಳ್ಕೊಡುಗೆಯ ಯಾ ಸಮಾರೋಪದ ಭಾಷಣ.

valence

ನಾಮವಾಚಕ

valance ಪದದ ರೂಪಾಂತರ.

valence

ನಾಮವಾಚಕ

(ರಸಾಯನವಿಜ್ಞಾನ) (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) = valency.

valence electron

ನಾಮವಾಚಕ

(ರಸಾಯನವಿಜ್ಞಾನ) ವೇಲೆನ್ಸ್‍ ಇಲೆಕ್ಟ್ರಾನ್‍; ರಾಸಾಯನಿಕ ಬಂಧಗಳನ್ನು ರಚಿಸುವುದರಲ್ಲಿ ಭಾಗವಹಿಸುವ, ಪರಮಾಣುವಿನ ಅತ್ಯಂತ ಹೊರಕವಚದಲ್ಲಿನ ಇಲೆಕ್ಟ್ರಾನ್‍ಗಳಲ್ಲಿ ಒಂದು.

Valenciennes

ನಾಮವಾಚಕ

ಒಂದು ಬಗೆಯ ಉತ್ಕೃಷ್ಟ ಜರತಾರಿ.

Search Dictionaries

Loading Results

Follow Us :   
  Download Bharatavani App
  Bharatavani Windows App