भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

valency

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ರಸಾಯನವಿಜ್ಞಾನ) ವೇಲೆನ್ಸಿ; (ಧಾತುವಿಗೆ ಸಂಬಂಧಿಸಿದಂತೆ) ಅದರ ಪರಮಾಣು ಎಷ್ಟು ಬಾರಿ ಇತರ ಪರಮಾಣುಗಳೊಂದಿಗೆ ಸಂಯೋಗಗೊಳ್ಳಬಲ್ಲದೆಂಬಉದನ್ನು ಸೂಚಿಸುವ ಸಂಖ್ಯೆ.

valentine

ನಾಮವಾಚಕ

ವ್ಯಾಲಂಟೈನ್‍:

  • ಸಂತ ವ್ಯಾಲಂಟೈನನ ದಿನ; ಹೆಬ್ರವರಿ 14ರಂದು ರೋಮನ್‍ ಕ್ಯಾಥೊಲಿಕರು ಆಚರಿಸುವ, ಗಂಡು ಹೆಣ್ಣು ಹಕ್ಕಿಗಳು ಜೋಡಿಗೊಳ್ಳುತ್ತವೆಯೆಂದು ಭಾವಿಸಲಾದ, ಸಂತ ವ್ಯಾಲಂಟೈನ್‍ ಹಬ್ಬ.
  • ಸಂತ ವ್ಯಾಲಂಟೈನ್‍ ಹಬ್ಬದಂದು ವರಿಸಿದ ನಲ್ಲ ಯಾ ನಲ್ಲೆ.
  • ಸಂತ ವ್ಯಾಲಂಟೈನ್‍ ಹಬ್ಬದಂದು ಪುರುಷನಿಗೆ ಸ್ತ್ರೀ, ಸ್ತ್ರೀಗೆ ಪುರುಷ, ಕಳುಹಿಸುವ ಅನಾಮಿಕ ಯಾ ಪ್ರಣಯ ಯಾ ಪ್ರಣಯ ವಿಡಂಬನ ಪತ್ರ, ಚಿತ್ರ ಯಾ ಕೊಡುಗೆ.

valerian

ನಾಮವಾಚಕ

ಪದಗುಚ್ಛ

common valerian = valerian\((1)\).

  • ಕಾಡು ಜಟಾಮಾಂಸಿ; ಮಾಸಲುಗೆಂಪಿನ ಯಾ ಬಿಳಿಯ ಹೂ ಬಿಡುವ, ಕಟುಗಂಪಿನ, ಬೆಕ್ಕುಗಳಿಗೆ ಪ್ರಿಯವಾದ, ಒಂದು ಗಿಡ.
  • (ಶಾಮಕ ಔಷಧವಾಗಿ ಬಳಸುವ) ಕಾಡು ಜಟಾಮಾಂಸಿಯ ಬೇರು.

valeric acid

ನಾಮವಾಚಕ

(ರಸಾಯನವಿಜ್ಞಾನ) ವಲೆರಿಕ್‍ ಆಮ್ಲ; ಐದು ಕಾರ್ಬನ್‍ ಪರಮಾಣುಗಳಿರುವ ಪರ್ಯಾಪ್ತ ಕಾರ್ಬಾಕ್ಸಿಲಿಕ್‍ ಆಮ್ಲ, ಸೂತ್ರ ${\rm C}_4{\rm H}_9{\rm COOH}$ (= pentanoic acid).

valet

ನಾಮವಾಚಕ

  • (ವರಿಷ್ಠ ವರ್ಗದವನ) ಕೈಯಾಳು; ಅಂಗಸೇವಕ; ತೈನಾತಿ; ಒಡೆಯನ ಉಡಿಗೆತೊಡಿಗೆಗಳನ್ನು ತಂದಿಡುವುದೇ ಮುಂತಾದ ಹೇಳಿದ ಕೆಲಸಗಳನ್ನೆಲ್ಲ ಮಾಡಲು ಅವನೊಡನೆಯೇ ಇರುವ ಪರಿಚಾರಕ.
  • (ಹೋಟೆಲು ಮೊದಲಾದವುಗಳಲ್ಲಿ ಇದೇ ಬಗೆಯ ಕೆಲಸಗಳಿಗಾಗಿ ನೇಮಕವಾಗಿರುವ) ಪರಿಚಾರಕ; ಮಾಣಿ.

valet

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಕೈಯಾಳಾಗಿ, ಅಂಗಸೇವಕನಾಗಿ – ಒಡೆಯನನ್ನು) ಸೇವಿಸು. (ಒಡೆಯನ) ಕೈಯಾಳಾಗಿರು; ಅಂಗಸೇವಕನಾಗಿ ವರ್ತಿಸು.

valeta

ನಾಮವಾಚಕ

veleta ಪದದ ರೂಪಾಂತರ.

valetudinarian

ಗುಣವಾಚಕ

  • ದೃಢಾರೋಗ್ಯವಿಲ್ಲದ; ರೋಗಿಷ್ಠ; ಕಾಯಿಲೆಯ; ನಿತ್ಯರೋಗಿಯಾದ.
  • ಆರೋಗ್ಯಹೊಂದಲು ಬಯಸುತ್ತಿರುವ; ಆರೋಗ್ಯಾಕಾಂಕ್ಷಿಯಾದ.
  • ತನ್ನ ಆರೋಗ್ಯದ ವಿಷಯದಲ್ಲಿ ಸದಾ ಕಳವಳಪಡುತ್ತಿರುವ; ತನಗೆ ಒಂದಲ್ಲ ಒಂದು ರೋಗವಿದೆಯೆಂದು ಆತಂಕಪಡುತ್ತಲೇ ಇರುವ; ಇಲ್ಲಸಲ್ಲದ ರೋಗವಿದೆಯೆಂದು ಶಂಕಿಸುತ್ತಲೇ ಇರುವ.

valetudinarian

ನಾಮವಾಚಕ

  • ರೋಗಿಷ್ಠ; ನಿತ್ಯರೋಗಿ.
  • ಆರೋಗ್ಯಾಕಾಂಕ್ಷಿ; ಆರೋಗ್ಯಾಭಿಲಾಷಿ.
  • ತನ್ನ ಆರೋಗ್ಯದ ಬಗ್ಗೆ ಅತಿ ಶಂಕೆಯುಳ್ಳವನು; ಒಂದಲ್ಲ ಒಂದು ರೋಗವಿದೆಯೆಂದು ಕಳವಳಪಡುತ್ತಲೇ ಇರುವವನು.

valetudinarianism

ನಾಮವಾಚಕ

  • ರೋಗಿಷ್ಠತೆ; ನಿತ್ಯರೋಗಿತ್ವ.
  • ರೋಗ – ಶಂಕೆ, ಭೀತಿ; ತನಗೆ ಒಂದಲ್ಲ ಒಂದು ರೋಗವಿದೆಯೆಂದು ಅತಿಯಾಗಿ ಶಂಕಿಸುವ, ಕಳವಳಪಡುವ ಪ್ರವೃತ್ತಿ ಇರುವುದು.

valetudinary

ಗುಣವಾಚಕ

= 1valetudinarian.

valetudinary

ನಾಮವಾಚಕ

= 2valetudinarian.

valgus

ನಾಮವಾಚಕ

ಹೊರತಿರುಚು; ಕೈ ಯಾ ಪಾದವು ಹೊರಗಡೆಗೆ ತಿರುಚಿಕೊಂಡಿರುವ ವಿರೂಪ.

Valhalla

ನಾಮವಾಚಕ

  • (ನಾರ್ವೆಯ ಪುರಾಣ) ವ್ಯಾಲ್ಹಾಲ; ವೀರಸ್ವರ್ಗ; ಯುದ್ಧದಲ್ಲಿ ಕಾದಾಡಿ ಮಡಿದವರ ಭೋಗಕ್ಕಾಗಿಯೇ ಸೃಷ್ಟಿಯಾದದ್ದೆಂದು ಭಾವಿಸಿದ್ದ ವಿಶಿಷ್ಟ ಸ್ವರ್ಗ.
  • ಕೀರ್ತಿಶೇಷ – ಭವನ, ಮಂದಿರ; ದಿವಂಗತರಾದ ವಿಖ್ಯಾತ ಪುರುಷರ ಸ್ಮಾರಕ ಸದನ.

valiant

ಗುಣವಾಚಕ

(ವ್ಯಕ್ತಿಯ ಯಾ ವರ್ತನೆಯ ವಿಷಯದಲ್ಲಿ) ಧೀರ; ಶೂರ; ವೀರ; ಕಲಿತನದ; ಗಂಡುಗಲಿಯಾದ.

valiantly

ಕ್ರಿಯಾವಿಶೇಷಣ

ಕಲಿತನದಿಂದ; ಗಂಡುಗಲಿಯಾಗಿ; ಶೌರ್ಯದಿಂದ.

valid

ಗುಣವಾಚಕ

  • (ಕಾರಣ, ಆಕ್ಷೇಪ, ವಾದ, ಮೊದಲಾದವುಗಳ ವಿಷಯದಲ್ಲಿ) ಸರಿಯಾದ; ಸಮಂಜಸವಾದ; ಸಕಾರಣವಾದ; ಸಪ್ರಮಾಣವಾದ; ತರ್ಕಬದ್ಧವಾದ; ನ್ಯಾಯಸಮ್ಮತವಾದ.
  • (ನ್ಯಾಯಶಾಸ್ತ್ರ) (ಒಪ್ಪಂದ, ಒಡಂಬಡಿಕೆ, ಮೊದಲಾದವುಗಳ ವಿಷಯದಲ್ಲಿ) ನ್ಯಾಯಸಮ್ಮತವಾದ; ಕಾನೂನುಬದ್ಧವಾದ; ನ್ಯಾಯೋಕ್ತ ರೀತಿಯಲ್ಲಿ ಯಾ ಕ್ರಮಬದ್ಧ ವಿಧಾನದಲ್ಲಿ – ಮಾಡಿಕೊಂಡ:
    1. a valid contract ಕ್ರಮಬದ್ಧ ಕರಾರು.
    2. ನ್ಯಾಯಾನುಗುಣವಾದ; ನ್ಯಾಯಾನುಸಾರವಾದ; ಕಾನೂನಿನ ದೃಷ್ಟಿಯಲ್ಲಿ ಅಂಗೀಕಾರಾರ್ಹವಾದ: a valid passport ಅಂಗೀಕಾರಾರ್ಹ ಪಾಸ್‍ಪೋರ್ಟ್‍.
    3. ವಾಯಿದೆ ತೀರಿಲ್ಲದ; ಮುಕ್ತಾಯದ ಯಾ ಕೊನೆಯ ದಿನ ತಲುಪಿರದ.

validate

ಸಕರ್ಮಕ ಕ್ರಿಯಾಪದ

  • ನ್ಯಾಯಸಮ್ಮತಗೊಳಿಸು; ಊರ್ಜಿತಗೊಳಿಸು.
  • (ಕ್ರಮಲೋಪವಿದ್ದದ್ದನ್ನು) ಕ್ರಮಬದ್ಧಗೊಳಿಸು; ವಿಧಿಬದ್ಧರೂಪಕ್ಕೆ ತರು.
  • ಕಾಯಂಗೊಳಿಸು; ಸ್ಥಿರೀಕರಿಸು.

validation

ನಾಮವಾಚಕ

  • ನ್ಯಾಯಸಮ್ಮತ ಗೊಳಿಸುವಿಕೆ; ಊರ್ಜಿತಗೊಳಿಸುವಿಕೆ.
  • ಕ್ರಮಬದ್ಧ ಗೊಳಿಸುವಿಕೆ.
  • ಕಾಯಂಗೊಳಿಸುವಿಕೆ; ಸ್ಥಿರೀಕರಿಸುವಿಕೆ.

validity

ನಾಮವಾಚಕ

  • ನ್ಯಾಯಸಮ್ಮತತೆ; ನ್ಯಾಯಾನುಗುಣವಾಗಿರುವಿಕೆ.
  • ಕಾನೂನಿನ ವಿಧಾನಕ್ಕೆ ಅನುಸಾರವಾಗಿರುವಿಕೆ; ವಿಧಿಬದ್ಧವಾಗಿರುವಿಕೆ.
  • ತರ್ಕಸಮ್ಮತವಾಗಿರುವಿಕೆ.
  • ಅಂಗೀಕಾರಾರ್ಹತೆ.

Search Dictionaries

Loading Results

Follow Us :   
  Download Bharatavani App
  Bharatavani Windows App