भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

validly

ಕ್ರಿಯಾವಿಶೇಷಣ

  • (ಕಾರಣ, ಆಕ್ಷೇಪ, ವಾದ, ಮೊದಲಾದವುಗಳ ವಿಷಯದಲ್ಲಿ) ಸಮಂಜಸವಾಗಿ; ಸಕಾರಣವಾಗಿ.
  • ನ್ಯಾಯಸಮ್ಮತವಾಗಿ; ಕಾನೂನುಬದ್ಧವಾಗಿ.
  • ನ್ಯಾಯೋಕ್ತವಾದ ರೀತಿಯಲ್ಲಿ; ಕ್ರಮಬದ್ಧವಾಗಿ.
  • ನ್ಯಾಯಾನುಗುಣವಾಗಿ; ನ್ಯಾಯಾನುಸಾರವಾಗಿ.

valine

ನಾಮವಾಚಕ

(ಜೀವರಸಾಯನ ವಿಜ್ಞಾನ) ವೇಲಿನ್‍; ಕಶೇರುಕಗಳಿಗೆ ಮುಖ್ಯ ಪೋಷಕಾಂಶವಾದ ಮತ್ತು ಪ್ರೋಟೀನುಗಳ ಸಾಮಾನ್ಯ ಘಟಕವಾದ ಅಮೈನೋ ಆಮ್ಲ.

valise

ನಾಮವಾಚಕ

  • ಪ್ರಯಾಣದ ಕೈ – ಚೀಲ, ಪೆಟ್ಟಿಗೆ.
  • (ಅಮೆರಿಕನ್‍ ಪ್ರಯೋಗ) ಸಣ್ಣ ತೊಗಲುಪೆಟ್ಟಿಗೆ; ಹಸುಬೆ ಪೆಟ್ಟಿಗೆ.

Valium

ನಾಮವಾಚಕ

ವ್ಯಾಲಿಯಮ್‍; ಶಾಮಕವಾಗಿ ಬಳಸುವ ಡಯಾಸೆಪಾಮ್‍ ಮದ್ದು.

Valkyrie

ನಾಮವಾಚಕ

(ನಾರ್ವೆಯ ಪುರಾಣ) ವ್ಯಾಲ್ಕಿರಿ; ಯುದ್ಧದಲ್ಲಿ ಕಾದು ವೀರಸ್ವರ್ಗ ಪಡೆಯಬೇಕೆಂಬ ವಿಧಿಸಂಕಲ್ಪಕ್ಕೆ ಒಳಪಟ್ಟವರನ್ನು ಆಯ್ಕೆ ಮಾಡಲು ನಿಯುಕ್ತರಾದ, ಪ್ರಧಾನ ದೇವನಾದ ಓಡಿನ್ನನ 12 ಮಂದಿ ಪರಿಚಾರಿಕೆಯರಲ್ಲಿ ಒಬ್ಬಳು.

vallecula

ನಾಮವಾಚಕ

(ಅಂಗರಚನಾಶಾಸ್ತ್ರ ಮತ್ತು ಸಸ್ಯವಿಜ್ಞಾನ) ವಲೆಕ್ಯುಲ; ತೋಡು ಯಾ ಗಾಡಿ.

vallecular

ಗುಣವಾಚಕ

ವಲೆಕ್ಯುಲದ, ಅದಕ್ಕೆ ಸಂಬಂಧಿಸಿದ.

valleculate

ಗುಣವಾಚಕ

ವಲೆಕ್ಯುಲ ಉಳ್ಳ.

valley

ನಾಮವಾಚಕ

ಪದಗುಚ್ಛ

valley of the shadow of death

  • (ಬೆಟ್ಟಗುಡ್ಡಗಳ ನಡುವೆ, ಸಾಮಾನ್ಯವಾಗಿ ತೊರೆ, ನದಿ ಹರಿಯುವ) ಕಣಿವೆ; ಕಂದರ.
  • (ಕಣಿವೆಯಂತಹ ಯಾವುದೇ) ತಗ್ಗಾದ ಪ್ರದೇಶ.
  • (ವಾಸ್ತುಶಿಲ್ಪ) ಛಾವಣಿಯ ಹೊರಮೈಗಳು ಪರಸ್ಪರ ಸಂಧಿಸುವಲ್ಲಿ ಏರ್ಪಡುವ ಒಳಕೋನ.

vallum

ನಾಮವಾಚಕ

(ರೋಮನ್‍ ಪ್ರಾಚೀನ ಚರಿತ್ರೆ) (ರಕ್ಷಣಾ ವ್ಯವಸ್ಥೆಯಲ್ಲಿ ನಿರ್ಮಿಸುತ್ತಿದ್ದ) ಕೋಟೆಕೊತ್ತಲ; ಆಳುವೇರಿ.

valonia

ನಾಮವಾಚಕ

ವಲೋನಿಯ; ತೊಗಲು ಹದಮಾಡುವುದು, ರಂಗು ಹಾಕುವುದು, ಶಾಯಿ ಮಾಡುವುದು, ಮೊದಲಾದವುಗಳಲ್ಲಿ ಬಳಸುವ, ನಿತ್ಯಹರಿದ್ವರ್ಣದ ಓಕ್‍ ಮರದ ಹೂವುಗಳ ಪುಷ್ಪಪುಟ.

valor

ನಾಮವಾಚಕ

= valour.

valorise

ಸಕರ್ಮಕ ಕ್ರಿಯಾಪದ

= valorize.

valorization

ನಾಮವಾಚಕ

(ಮುಖ್ಯವಾಗಿ ಸರ್ಕಾರದ ನೀತಿ ನಿರ್ವಹಣ ಮೊದಲಾದ ಕೃತಕ ವಿಧಾನದಿಂದ ಸರಕುಗಳ) ಬೆಲೆಯನ್ನು ಏರಿಸುವಿಕೆ ಯಾ ಸ್ಥಿರೀಕರಿಸುವಿಕೆ; ಮೌಲ್ಯ – ವರ್ಧನ ಯಾ ಸ್ಥಿರೀಕರಣ.

valorize

ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಸರ್ಕಾರದ ನೀತಿ ನಿರ್ವಹಣ ಮೊದಲಾದ ಕೃತಕ ವಿಧಾನದಿಂದ ಸರಕುಗಳ) ಬೆಲೆಯನ್ನು ಏರಿಸು ಯಾ ಸ್ಥಿರೀಕರಿಸು.

valorous

ಗುಣವಾಚಕ

ಶೌರ್ಯದ; ಪರಾಕ್ರಮದ.

valorously

ಕ್ರಿಯಾವಿಶೇಷಣ

ಶೌರ್ಯದಿಂದ; ಪರಾಕ್ರಮದಿಂದ.

valour

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಕಾವ್ಯಪ್ರಯೋಗ ಯಾ ಹಾಸ್ಯ ಪ್ರಯೋಗ ಯಾ ಔಪಚಾರಿಕ) (ಮುಖ್ಯವಾಗಿ ರರ್ಣಅಂಗದಲ್ಲಿ ಪ್ರದರ್ಶಿಸುವ) ಶೌರ್ಯ; ಪರಾಕ್ರಮ.

valse

ನಾಮವಾಚಕ

= waltz.

valuable

ಗುಣವಾಚಕ

ಭಾರಿ ಬೆಲೆಯ; ಬಹಳ ಬೆಲೆಯುಳ್ಳ; ಅಪಾರ ಬೆಲೆಬಾಳುವ; ಅಮೂಲ್ಯ(ವಾದ): valuable property ಬೆಲೆ ಬಾಳುವ ಆಸ್ತಿ. valuable information, help, etc. ಅಮೂಲ್ಯ ಸಮಾಚಾರ, ಸಹಾಯ, ಮೊದಲಾದವು.

Search Dictionaries

Loading Results

Follow Us :   
  Download Bharatavani App
  Bharatavani Windows App