भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Volkerwanderung

ನಾಮವಾಚಕ

(ಕ್ರಿಸ್ತಶಕ 2ನೇ ಶತಮಾನದಿಂದ 11ನೇ ಶತಮಾನದವರೆಗೆ) ಮುಖ್ಯವಾಗಿ ಜರ್ಮ್ಯಾನಿಕ್‍ ಮತ್ತು ಸ್ಲ್ಯಾವಿಕ್‍ ಜನರು, ಯೂರೋಪಿಗೆ ಮಾಡಿದ ವಲಸೆ.

volley

ನಾಮವಾಚಕ

  • ಒಟ್ಟಾಗಿ, ಒಮ್ಮೆಲೇ, ಏಕಕಾಲದಲ್ಲಿ, ಅನೇಕ ಆಯುಧಗಳನ್ನು ಹಾರಿಸುವುದು, ಬಿಡುವುದು.
  • ಕ್ಷಿಪಣಿಗಳ (ಉದಾಹರಣೆಗೆ ಗುಂಡು ಮೊದಲಾದವುಗಳ) ಸುರಿಮಳೆ, ವೃಷ್ಟಿ, ವರ್ಷ; ಒಮ್ಮೆಲೇ ಹಾರಿಸಿದ ಕ್ಷಿಪಣಿಗಳ ಸಮೂಹ, ಸುರಿತ.
  • (ಆಣೆ, ಪ್ರಶ್ನೆ, ಬೈಗುಳ, ಹಾಸ್ಯ, ಮೊದಲಾದವುಗಳ) ಸುರಿಮಳೆ; ಒಂದರ ಹಿಂದೆ ಒಂದು ಯಾ ಪುಂಖಾನುಪುಂಖವಾದ ಸುರಿಮಳೆ, ವರ್ಷ, ವೃಷ್ಟಿ.
  • (ಲಾನ್‍ ಟೆನಿಸ್‍ ಮೊದಲಾದ) ಚೆಂಡು ನೆಲವನ್ನು ಮುಟ್ಟುವ ಮುನ್ನವೇ ಅದನ್ನು ಹಿಂದಿರುಗಿಸುವುದು.
  • (ಕಾಲ್ಚೆಂಡಾಟ) ಚೆಂಡು ನೆಲಮುಟ್ಟುವ ಮುನ್ನವೇ ಅದನ್ನು ಒದೆಯುವುದು ಯಾ ಇಂಥ ಒದೆತ.
  • (ಕ್ರಿಕೆಟ್‍)
    1. ಚೆಂಡನ್ನು ನೆಲ ತಾಕದೆಯೇ ಬ್ಯಾಟುಗಾರನಲ್ಲಿಗೆ ಯಾ ಸ್ಟಂಪ್ಸ್‍ ಬಳಿಗೆ ಎಸೆಯುವುದು.
    2. ಇಂಥ ಬೋಲಿಂಗ್‍, ಎಸೆತ.

volley

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ volleys; ಭೂತರೂಪ ಮತ್ತು ಭೂತಕೃದಂತ volleyed) (ಬಂದೂಕಗಳು, ಫಿರಂಗಿಗಳು) ಒಟ್ಟಿಗೆ, ಒಮ್ಮೆಲೇ – ಹಾರು ಯಾ ಹಾರಿದ ಸದ್ದುಮಾಡು.

  • ( ಅಕರ್ಮಕ ಕ್ರಿಯಾಪದ ಸಹ).
    1. (ಟೆನಿಸ್‍) ಎದುರಾಳಿಯ ಚೆಂಡು ನೆಲ ತಾಗುವುದಕ್ಕೆ ಮುಂಚೆ ಅದನ್ನು ಹೊಡೆದು ಹಿಂದಿರುಗಿಸು.
    2. (ಕಾಲ್ಚೆಂಡಾಟ) ಚೆಂಡು ನೆಲ ತಾಗುವುದರೊಳಗೆ ಒದೆ.
  • (ಕ್ಷಿಪಣಿಗಳು, ಹಾಸ್ಯೋಕ್ತಿಗಳು, ಬೈಗುಳಗಳು, ಪ್ರಶ್ನೆಗಳು, ಆಣೆಗಳು, ಮೊದಲಾದವನ್ನು) ಸುರಿಮಳೆಗರೆ; ಎಡೆಬಿಡದೆ, ಪುಂಖಾನುಪುಂಖವಾಗಿ ಪ್ರಯೋಗಿಸು.

volleyball

ನಾಮವಾಚಕ

(ದೊಡ್ಡ ಚೆಂಡನ್ನು ಕೈಯಿಂದ ಕೈಗೆ ದೂಡುತ್ತಾ, ಬಲೆಯ ಮೇಲ್ಗಡೆಯಿಂದ ಎದುರು ಅಂಕಣಕ್ಕೆ ಹಾಕುವ, ೬-೬ ಆಟಗಾರರನ್ನು ಒಳಗೊಂಡ ಎರಡು ತಂಡಗಳು ಆಡುವ) ವಾಲಿಬಾಲ್‍ ಆಟ.

volleyer

ನಾಮವಾಚಕ

(ಟೆನಿಸ್‍ ಮೊದಲಾದವಲ್ಲಿ) ಎದುರಾಳಿ ಹೊಡೆದ ಚೆಂಡು ನೆಲತಾಗುವುದರೊಳಗೆ ಅದನ್ನು ಹೊಡೆದು ಹಿಂದಿರುಗಿಸುವವನು.

volplane

ಅಕರ್ಮಕ ಕ್ರಿಯಾಪದ

(ವಿಮಾನದ ವಿಷಯದಲ್ಲಿ) ಜಾರಿಳಿತ; ಎಂಜಿನನ್ನು ನಿಲ್ಲಿಸಿ ನಿಧಾನವಾಗಿ, ಓರೆಯಾಗಿ ಇಳಿಯುವುದು.

volplane

ಅಕರ್ಮಕ ಕ್ರಿಯಾಪದ

(ವಿಮಾನದ ವಿಷಯದಲ್ಲಿ) ಎಂಜಿನನ್ನು ನಿಲ್ಲಿಸಿ, ಓರೆಯಾಗಿ ನಿಧಾನವಾಗಿ ಇಳಿ.

vols.

ಸಂಕ್ಷಿಪ್ತ

volumes.

volt

ಅಕರ್ಮಕ ಕ್ರಿಯಾಪದ

(ಕತ್ತಿವರಿಸೆಯಲ್ಲಿ) ಎದುರಾಳಿಯ ಹೊಡೆತವನ್ನು ತಪ್ಪಿಸಿಕೊಳ್ಳಲು – ತಟಕ್ಕನೆ ಸರಿ, ಚಂಗನೆ ಚಲಿಸು.

volt

ನಾಮವಾಚಕ

(ವಿದ್ಯುದ್ವಿಜ್ಞಾನ) ವೋಲ್ಟು; ವಿದ್ಯುಚ್ಚಾಲಕ ಬಲದ ಮಾನ; ಒಂದು ಓಮ್‍ ರೋಧವನ್ನು ಎದುರಿಸಿ ಒಂದು ಆಂಪಿಯರ್‍ ವಿದ್ಯುತ್‍ ಪ್ರವಾಹವನ್ನುಂಟುಮಾಡುವಷ್ಟು ವಿಭವಾಂತರ.

volt

ನಾಮವಾಚಕ

volte ಪದದ ರೂಪಾಂತರ.

voltage

ನಾಮವಾಚಕ

ವೋಲ್ಟೇಜ್‍; ವೋಲ್ಟ್‍ಗಳಲ್ಲಿ ಅಳತೆ ಮಾಡಿದ ವಿದ್ಯುಚ್ಚಾಲಕ ಬಲದ ಯಾ ವಿಭವಾಂತರದ ಪ್ರಮಾಣ.

voltaic

ಗುಣವಾಚಕ

(ಪ್ರಾಚೀನ ಪ್ರಯೋಗ) ಪ್ರವಾಹ ವಿದ್ಯುತ್ತಿನ; ಪ್ರಾಥಮಿಕ ಬ್ಯಾಟರಿಯೊಂದರಿಂದ ಬರುವ ವಿದ್ಯುತ್ತಿನ: voltaic battery ಪ್ರವಾಹ ವಿದ್ಯುತ್‍ ಕೋಶ.

voltameter

ನಾಮವಾಚಕ

ವೋಲ್ಟಾಮಾಪಕ; ವಿದ್ಯುದಾವೇಶವನ್ನು ವೋಲ್ಟುಗಳಲ್ಲಿ ಅಳೆಯುವ ಉಪಕರಣ.

volte

ನಾಮವಾಚಕ

  • (ಕತ್ತಿವರಿಸೆ) (ಎದುರಾಳಿಯ ಹೊಡೆತವನ್ನು ತಪ್ಪಿಸಿಕೊಳ್ಳಲು ಮಾಡುವ) ತಟಕ್ಕನೆಯ ಸರಿತ.
  • (ಕುದುರೆಯ ವಿಷಯದಲ್ಲಿ) ಪಕ್ಕಪಕ್ಕಕ್ಕೆ ಚಲಿಸುವಿಕೆ ಯಾ ಮಂಡಲಾಕಾರದ, ವೃತ್ತಾಕಾರದ ಚಲನ; ಪಕ್ಕಪಕ್ಕದ ಚಲನ ಯಾ ಸುತ್ತುಸುತ್ತುವಿಕೆ.

volte-face

ನಾಮವಾಚಕ

ತಿರುಗುಮುರುಗು:

  • ಹಿಂದುಮುಂದಾಗಿ ತಿರುಗುವುದು.
  • (ಮುಖ್ಯವಾಗಿ ರೂಪಕವಾಗಿ) (ವಾದ, ರಾಜಕೀಯ, ಮೊದಲಾದವುಗಳಲ್ಲಿ) ಪೂರ್ತಿ ತಿರುಗುಮುರುಗು; ತನ್ನ ತತ್ತ್ವಗಳು, ಅಭಿಪ್ರಾಯಗಳನ್ನು ಬಿಟ್ಟುಕೊಟ್ಟು ಅನ್ಯತತ್ತ್ವಗಳು, ಅಭಿಪ್ರಾಯಗಳನ್ನು ತಳೆಯುವುದು, ಪ್ರತಿಪಾದಿಸುವುದು, ಎತ್ತಿಹಿಡಿಯುವುದು.

voltmeter

ನಾಮವಾಚಕ

ವೋಲ್ಟ್‍ಮಾಪಕ; ವಿಭವಾಂತರ ಯಾ ವಿದ್ಯುಚ್ಚಾಲಕ ಬಲವನ್ನು ಅಳೆಯುವ ಉಪಕರಣ.

volubility

ನಾಮವಾಚಕ

ವಾಚಾಳಿತನ; ವಾಚಾಲತೆ; ವಾಗ್ಝರಿ.

voluble

ಗುಣವಾಚಕ

  • (ಮಾತಿನ ಯಾ ಮಾತುಗಾರನ ವಿಷಯದಲ್ಲಿ) ನಿರರ್ಗಳವಾಗಿ, ತಡೆಯಿಲ್ಲದೆ – ಹರಿಯುವ; ವಾಕ್ಪ್ರವಾಹದ; ವಾಗ್ಝರಿಯ.
  • (ಪ್ರಾಚೀನ ಪ್ರಯೋಗ) ಸುತ್ತು ತಿರುಗುವ; ಗಿರಕಿ ಹೊಡೆಯುವ.
  • (ಸಸ್ಯವಿಜ್ಞಾನ) (ಆಸರೆಯ ಸುತ್ತ) ಸುರುಳಿ ಸುತ್ತಿಕೊಳ್ಳುವ.

volubleness

ನಾಮವಾಚಕ

= volubility.

Search Dictionaries

Loading Results

Follow Us :   
  Download Bharatavani App
  Bharatavani Windows App