भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

volubly

ಕ್ರಿಯಾವಿಶೇಷಣ

(ಮಾತಿನ ವಿಷಯದಲ್ಲಿ) ನಿರರ್ಗಳವಾಗಿ; ಪ್ರವಾಹರೂಪದಲ್ಲಿ.

volume

ನಾಮವಾಚಕ

  • ಸಂಪುಟ:
    1. ಮುದ್ರಿಸಿದ, ಬೆರಳಚ್ಚು ಮಾಡಿದ ಯಾ ಕೈಬರಹದಲ್ಲಿರುವ, ಗ್ರಂಥದ ರಟ್ಟುಗಟ್ಟಿದ ಹಲವು ಭಾಗಗಳಲ್ಲೊಂದು ಭಾಗ.
    2. ಹಲವು ಕೃತಿಗಳನ್ನೊಳಗೊಂಡ ಗ್ರಂಥದ ಹಲವು ಭಾಗಗಳಲ್ಲೊಂದು ಸಂಪುಟ: issued in 3 volumes ಮೂರು ಸಂಪುಟಗಳಾಗಿ ಹೊರಡಿಸಿದ, ಪ್ರಕಟಿಸಿದ. an old volume of ‘Punch’ ‘ಪಂಚ್‍’ ನಿಯತಕಾಲಿಕದ ಒಂದು ಹಳೆಯ ಸಂಪುಟ.
  • (ಚರಿತ್ರೆ) ಓಲೆ ಪುಸ್ತಕ; ಸಾಮಾನ್ಯವಾಗಿ ಬರೆದ ಚರ್ಮಪತ್ರ, ತಾಳೆಯೋಲೆ, ಮೊದಲಾದವುಗಳ ಪುಸ್ತಕ ಸುರುಳಿ.
  • (ಬಹುವಚನದಲ್ಲಿ) (ಹೊಗೆ ಮೊದಲಾದವುಗಳ) (ನಿಡು)ಸುರುಳಿ.
    1. ಮೊತ್ತ; ರಾಶಿ; ಘನ ಅಳತೆ; ಸಲೆ.
    2. ಗಾತ್ರ; ದ್ರವ, ಅನಿಲ – ವಸ್ತುಗಳು ಆಕ್ರಮಿಸಿಕೊಳ್ಳುವ ಪ್ರದೇಶ.
  • (ವ್ಯಾಪಾರ, ವಾಣಿಜ್ಯ, ಮೊದಲಾದವುಗಳ) ಮೊತ್ತ; ಪ್ರಮಾಣ.
  • (ಸಂಗೀತ)
    1. ನಾದದ – ಪ್ರಮಾಣ ಯಾ ಬಲ.
    2. ಧ್ವನಿಯ ತುಂಬಉ; ಶಾರೀರದ ಯಾ ವಾದ್ಯದ ನಾದದ ತುಂಬಉ.
  • ಹರಿಯುತ್ತಿರುವ ನೀರು ಮೊದಲಾದವುಗಳ ಪ್ರವಾಹದ ಪ್ರಮಾಣ.

volumed

ಗುಣವಾಚಕ

ಸಂಪುಟಗಳ; ಸಂಪುಟಗಳನ್ನೊಳಗೊಂಡ (ಸಂಯುಕ್ತಪದಗಳಲ್ಲೂ ಪ್ರಯೋಗ).

volumetric

ಗುಣವಾಚಕ

ಗಾತ್ರೀಯ; ಗಾತ್ರದ; ಗಾತ್ರಕ್ಕೆ ಸಂಬಂಧಿಸಿದ: volumetric analysis ಗಾತ್ರೀಯ ವಿಶ್ಲೇಷಣೆ.

volumetrically

ಕ್ರಿಯಾವಿಶೇಷಣ

ಗಾತ್ರಾನುಸಾರವಾಗಿ; ಗಾತ್ರದ್ದಾಗಿ; ಗಾತ್ರಕ್ಕೆ ಸಂಬಂಧಿಸಿದಂತೆ; ಗಾತ್ರೀಯವಾಗಿ.

voluminosity

ನಾಮವಾಚಕ

= voluminousness.

voluminous

ಗುಣವಾಚಕ

  • ಹಲವು ಸಂಪುಟಗಳುಳ್ಳ.
  • (ಲೇಖಕನ ವಿಷಯದಲ್ಲಿ) ಹಲವಾರು ಗ್ರಂಥಗಳನ್ನು ರಚಿಸಿರುವ; ವಿಪುಲವಾಗಿ ಬರೆದಿರುವ.
  • ಭಾರಿ ಗಾತ್ರದ; ಬೃಹದ್ಗಾತ್ರದ.
  • (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ದೊಗಲೆಯಾಗಿರುವ; ಸಡಿಲವಾಗಿ, ಅಳ್ಳಕವಾಗಿ ಅಗಲವಾಗಿರುವ.

voluminously

ಕ್ರಿಯಾವಿಶೇಷಣ

ವಿಪುಲವಾಗಿ; ಸಮೃದ್ಧಿಯಾಗಿ; ದೊಡ್ಡಸಂಖ್ಯೆಯಲ್ಲಿ ಯಾ ಭಾರಿ ಪ್ರಮಾಣದಲ್ಲಿ.

voluminousness

ನಾಮವಾಚಕ

  • ಬೃಹದ್ಗಾತ್ರತೆ; ಭಾರಿ – ಪ್ರಮಾಣದ್ದಾಗಿರುವಿಕೆ, ಗಾತ್ರವುಳ್ಳದ್ದಾಗಿರುವಿಕೆ.
  • ವಿಪುಲತೆ; ಭಾರಿ ಸಂಖ್ಯೆಯಲ್ಲಿರುವಿಕೆ.

voluntarily

ಕ್ರಿಯಾವಿಶೇಷಣ

ಸ್ವಂತ – ಇಷ್ಟದಿಂದ, ಇಚ್ಫೆಯಿಂದ; ಸ್ವಸಂತೋಷದಿಂದ; ಸ್ವಯಂಪ್ರೇರಣೆಯಿಂದ.

voluntariness

ನಾಮವಾಚಕ

ಸ್ವ, ಸ್ವಯಂ – ಪ್ರೇರಿತತೆ; ಸ್ವಂತ ಇಚ್ಫೆಯಿಂದ, ಸ್ವಸಂತೋಷದಿಂದ – ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ.

voluntarism

ನಾಮವಾಚಕ

  • (ಚರಿತ್ರೆ) (ಚರ್ಚು ಮೊದಲಾದವುಗಳ ವಿಷಯದಲ್ಲಿ) ಸ್ವತಂತ್ರತಾ ಸಿದ್ಧಾಂತ; ಸ್ವಯಂಸಹಾಯತತ್ತ ; ಚರ್ಚು ಮತ್ತು ಶಾಲೆಗಳು ಸರ್ಕಾರದಿಂದ ಸ್ವತಂತ್ರವಾಗಿ, ಸ್ವಯಂ ಕೊಡುಗೆಗಳು, ಚಂದಾಹಣಗಳಿಂದಲೇ ನಡೆಯಬೇಕೆಂಬ, ಸ್ವತಂತ್ರತೆಯನ್ನು ಎತ್ತಿಹಿಡಿಯುವ ಸಿದ್ಧಾಂತ.
  • (ತತ್ತ್ವಶಾಸ್ತ್ರ) ಸಂಕಲ್ಪ ಸಿದ್ಧಾಂತ; ವ್ಯಕ್ತಿಯಲ್ಲಿ ಯಾ ವಿಶ್ವದಲ್ಲಿ ಸಂಕಲ್ಪಶಕ್ತಿಯೇ ಮೂಲಭೂತ ತತ್ತ ವೆಂದು ಪ್ರತಿಪಾದಿಸುವ ಸಿದ್ಧಾಂತ.
  • (ಒತ್ತಾಯ ಯಾ ಬಲಾತ್ಕಾರಕ್ಕಿಂತ ಸ್ವಯಂ ಪ್ರೇರಿತಕ್ರಿಯೆಯನ್ನೇ ಅವಲಂಬಿಸಬೇಕೆಂದು ಪ್ರತಿಪಾದಿಸುವ) ಸ್ವಯಂಸೇವಾ ಸಿದ್ಧಾಂತ.

voluntarist

ನಾಮವಾಚಕ

  • (ಚರ್ಚ್‍ ಮೊದಲಾದವುಗಳ ವಿಷಯದಲ್ಲಿ) ಸ್ವತಂತ್ರತಾ ಸಿದ್ಧಾಂತಿ; ಸ್ವಸಹಾಯವಾದಿ.
  • (ತತ್ತ್ವಶಾಸ್ತ್ರ) ಸಂಕಲ್ಪವಾದಿ.
  • ಸ್ವಯಂಸೇವಾವಾದಿ.

voluntary

ಗುಣವಾಚಕ

  • ಸ್ವ, ಸ್ವಯಂ – ಪ್ರೇರಿತ; ಸ್ವಂತ ಇಷ್ಟದಿಂದ, ಇಚ್ಫೆಯಿಂದ -ಮಾಡಿದ ಯಾ ಮಾಡುವ ಯಾ ಮಾಡಬಲ್ಲ; ನಿರ್ಬಂಧಿತವಾಗಿ ಯಾ ಕಡ್ಡಾಯವಾಗಿ ಇರದ; ಸ್ವಸಂತೋಷದಿಂದ ಯಾ ಸ್ವತಃ ಮಾಡಿದ: voluntary contribution ಸ್ವಸಂತೋಷದ ಕಾಣಿಕೆ.
  • ಉದ್ದೇಶಪೂರ್ವಕವಾದ; ಇಚ್ಫಾಪೂರ್ವಕವಾದ: voluntary waste (ಹಿಡುವಳಿದಾರ ಯಾ ಬಾಡಿಗೆದಾರ ಮಾಡಿದ) ಉದ್ದೇಶಪೂರ್ವಕವಾದ ನಾಶ, ಹಲಾಕು.
  • ವೇತನರಹಿತ; ಸಂಬಳ ಇಲ್ಲದ ಯಾ ತೆಗೆದುಕೊಳ್ಳದ : voluntary work ವೇತನರಹಿತ ಕೆಲಸ, ಉದ್ಯೋಗ.
  • (ಸಂಸ್ಥೆಯ ವಿಷಯದಲ್ಲಿ) ಸ್ವಯಂಪ್ರೇರಿತ ದಾನ, ವಂತಿಗೆ, ಚಂದಾ ಯಾ ದೇಣಿಗೆಗಳಿಂದ ನಡೆಯುವ ಯಾ ನಡೆಸುವ.
  • (ಬ್ರಿಟಿಷ್‍ ಪ್ರಯೋಗ) (ಶಾಲೆಯ ವಿಷಯದಲ್ಲಿ) ಸ್ವಯಂಸೇವಾ ಸಂಘವೊಂದು ಕಟ್ಟಿದ ಆದರೆ ಸ್ಥಳೀಯ ಶಿಕ್ಷಣ ಪ್ರಾಧಿಕಾರವೊಂದು ನಡೆಸುವ, ನಿರ್ವಹಿಸುವ.
  • ಸ್ವಯಂಸೇವೆಯ; ಸ್ವಯಂಪ್ರೇರಿತವಾಗಿ ಮಾಡಿದ, ಉತ್ಪಾದಿಸಿದ, ಮೊದಲಾದ.
  • (ಚಲನೆ, ಮಾಂಸಖಂಡ ಯಾ ಅಂಗದ ವಿಷಯದಲ್ಲಿ) ಸಂಕಲ್ಪಪೂರ್ವಕವಾದ; ಇಚ್ಫಾನಿಯಂತ್ರಿತವಾದ.
  • (ಅಪರಾಧಿಯ ತಪ್ಪೊಪ್ಪಿಗೆಯ ವಿಷಯದಲ್ಲಿ) (ಬೆದರಿಕೆ, ಪ್ರಲೋಭನ, ಮೊದಲಾದವುಗಳಿಂದ ಆಗಿರದೆ) ಸ್ವಪ್ರೇರಣೆಯಿಂದಾದ; ಖುದ್ದುರಾಜಿಯಿಂದ ಮಾಡಿದ: voluntary confession ಸ್ವಯಂಪ್ರೇರಿತ ತಪ್ಪೊಪ್ಪಿಗೆ. (ನ್ಯಾಯಶಾಸ್ತ್ರ) (ಆಸ್ತಿ ವರ್ಗಾವಣೆ ಯಾ ಇಷ್ಟಪತ್ರದ ಪ್ರಕಾರ ಕೊಡುವುದರ ವಿಷಯದಲ್ಲಿ) ಮುಫತ್ತಾದ; ಪ್ರತಿಫಲವಾಗಿ ಹಣ ಯಾ ಬೇರಾವುದೇ ಪರಿಹಾರ ಬಯಸದೆ ಕೊಟ್ಟ.
  • ಸಹಜ ಪ್ರವೃತ್ತಿಯ; ಅಪ್ರೇರಿತವಾದ.

voluntary

ನಾಮವಾಚಕ

    1. (ಚರ್ಚಿನ ಪ್ರಾರ್ಥನೆಗೆ ಮುಂಚೆ, ಪ್ರಾರ್ಥನೆಯ ಕಾಲದಲ್ಲಿ ಯಾ ಪ್ರಾರ್ಥನೆಯ ಬಳಿಕ ನಡೆಯುವ) ಆರ್ಗನ್‍ ವಾದ್ಯದ ತನಿವಾದನ.
    2. ಇದರ ಸಂಗೀತ.
  • (ಪ್ರಾಚೀನ ಪ್ರಯೋಗ) (ಬೇರೆ ಬಗೆಯ ಸಂಗೀತಕ್ಕೆ ಮುಖ್ಯವಾಗಿ ಪೀಠಿಕಾರೂಪದಲ್ಲಿ ನಡೆಸುವ) ಆಶುಸಂಗೀತ; ಪೂರ್ವಸಿದ್ಧತೆಯಿಲ್ಲದ ಸಂಗೀತ.
  • (ಚರಿತ್ರೆ) ಸ್ವತಂತ್ರತಾ ಸಿದ್ಧಾಂತಿ; ಚರ್ಚು ಯಾ ಶಾಲೆಗಳು ರಾಷ್ಟ್ರದ ಹತೋಟಿಗೆ ಒಳಪಡದೆ ಸ್ವತಂತ್ರವಾಗಿ, ಜನರು ಸ್ವಸಂತೋಷದಿಂದ ನೀಡಿದ ವಂತಿಗೆಯಿಂದ ನಡೆಯಬೇಕೆಂದು ವಾದಿಸುವವನು.
  • (ಸ್ಪರ್ಧೆಗಳಲ್ಲಿ) ಸ್ವಯಂಪ್ರೇರಿತ ಪ್ರದರ್ಶನ; ಪ್ರದರ್ಶನಕಾರನ, ಸ್ಪರ್ಧಿಯ ಆಯ್ಕೆಗೇ ಬಿಟ್ಟ ವಿಶೇಷ ಪ್ರದರ್ಶನ.

Voluntary Aid Detachment

ನಾಮವಾಚಕ

ಸ್ವಯಂಸೇವಾ ಶುಶ್ರೂಷಾ ಸಂಸ್ಥೆ; ಸ್ವಯಂಪ್ರೇರಣೆಯಿಂದ ಸಂಘಟಿಸಿ ನಡೆಸುವ ಪ್ರಥಮ ಚಿಕಿತ್ಸೆಯ ಮತ್ತು ದಾದಿಗಳ ಸಂಸ್ಥೆ.

voluntary conveyance

ನಾಮವಾಚಕ

= voluntary disposition.

voluntary disposition

ನಾಮವಾಚಕ

(ನ್ಯಾಯಶಾಸ್ತ್ರ) (ಆಸ್ತಿಯ ವಿಷಯದಲ್ಲಿ) ಮುಫತ್ತು ವರ್ಗಾವಣೆ; ಪ್ರತಿಫಲ, ಪರಿಹಾರ, ತೆಗೆದುಕೊಳ್ಳದೆ ಆಸ್ತಿಯನ್ನು ವಹಿಸಿಕೊಡುವುದು.

voluntary school

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಸ್ವಸಹಾಯ ಪಾಠಶಾಲೆ; ಸ್ವಸಂತೋಷದಿಂದ ಚಂದಾಹಾಕಿ ಸ್ಥಾಪಿಸಿದ, ಸ್ಥಳೀಯ ವಿದ್ಯಾಧಿಕಾರ ಸಂಸ್ಥೆಯಿಂದ ನಡೆಸಲ್ಪಡುವ ಶಾಲೆ.

voluntaryism

ನಾಮವಾಚಕ

= voluntarism\((1, 3)\).

Search Dictionaries

Loading Results

Follow Us :   
  Download Bharatavani App
  Bharatavani Windows App