भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

voluntaryist

ನಾಮವಾಚಕ

= voluntarist.

volunteer

ನಾಮವಾಚಕ

  • ಸ್ವಯಂ ಸೇವಕ:
    1. ಯಾವುದೇ ಕೆಲಸವನ್ನು ತಾನಾಗಿಯೇ ಕೈಗೊಳ್ಳುವವನು.
    2. ಸೈನಿಕ ಸೇವೆಗೋ ಬೇರಾವುದೇ ಸೇವೆಗೋ ಸ್ವಂತ ಇಚ್ಫೆಯಿಂದ ಸೇರುವವನು; (ಮುಖ್ಯವಾಗಿ ಸೈನಿಕ ಚರಿತ್ರೆ) ಬ್ರಿಟನ್ನಿನಲ್ಲಿ ಹಿಂದೆ ಸಂಘಟಿಸುತ್ತಿದ್ದ ಸ್ವಯಂಸೇವಕ ಸೈನಿಕರನ್ನೊಳಗೊಂಡ, ಆದರೆ ರಾಷ್ಟ್ರವು ಶಿಕ್ಷಕರನ್ನು, ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದ ಸ್ವಯಂ ಸೇವಕ ದಳದವನು.
  • (ಯಾರೂ ನೆಡದೆ) ತಾನೇತಾನಾಗಿ ಹುಟ್ಟುವ ಗಿಡ; ಸ್ವಯಂರುಹ.

volunteer

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ತಾನಾಗಿ ಹೆಗಲು ಕೊಡು; ಸ್ವಂತ ಇಚ್ಫೆಯಿಂದ, ಸ್ವಸಂತೋಷದಿಂದ ಸೇವೆ ಮಾಡಲು ಮುಂದೆ ಬರು; ಸ್ವಯಂಸೇವೆ ಮಾಡು. ಸ್ವಯಂಸೇವಕನಾಗು; ಸೇವೆ ಮಾಡಲು ಮುಂದೆ ಬಾ.

volunteer

ಗುಣವಾಚಕ

(ಸಸ್ಯವರ್ಗದ ವಿಷಯದಲ್ಲಿ) ಸ್ವಯಂರುಹ; ತಾನೇತಾನಾಗಿ ಹುಟ್ಟುವ.

voluptuary

ಗುಣವಾಚಕ

ಭೋಗಲಾಲಸೆಯ; ವಿಷಯಾಸಕ್ತನಾದ; ಇಂದ್ರಿಯಸುಖಕ್ಕಾಗಿ ತಹತಹಿಸುವ; ಲಂಪಟತನದ.

voluptuary

ನಾಮವಾಚಕ

ಭೋಗಲಾಲಸ; ವಿಷಯಾಸಕ್ತ; ವಿಷಯಲಂಪಟ.

voluptuous

ಗುಣವಾಚಕ

  • ಇಂದ್ರಿಯಗಳನ್ನು ತಣಿಸುವ; ಇಂದ್ರಿಯಗಳಿಗೆ – ಹಿತಕರವಾದ, ಆಹ್ಲಾದಕರವಾದ: voluptuous music ಶ್ರವಣಾನಂದಕರವಾದ ಸಂಗೀತ.
  • ಭೋಗಲಾಲಸೆಯ; ವಿಷಯಸುಖಕ್ಕೆ ಸಂಬಂಧಿಸಿದ; ವಿಷಯಸುಖದಲ್ಲಿ ಆಸಕ್ತನಾದ; ವಿಷಯಾಸಕ್ತ(ನಾದ); ಲಂಪಟನಾದ: voluptuous woman ಕಾಮಾಸಕ್ತಿಯುಳ್ಳ ಹೆಂಗಸು.

voluptuously

ಕ್ರಿಯಾವಿಶೇಷಣ

ಭೋಗಲಾಲಸೆಯಿಂದ; ವಿಷಯಾಸಕ್ತನಾ(ಳಾ)ಗಿ.

voluptuousness

ನಾಮವಾಚಕ

ಭೋಗಲಾಲಸೆ; ವಿಷಯಾಸಕ್ತಿ.

volute

ನಾಮವಾಚಕ

  • (ಅಯೋನಿಕ್‍, ಕೊರಿಂಥಿಯನ್‍ ಮತ್ತು ಮಿಶ್ರ, ಶಿಲ್ಪಶೈಲಿಗಳಲ್ಲಿ ಸ್ತಂಭಗಳ ಮೇಲೆ ಮಾಡುವ) ಸುರುಳಿಯಲಂಕರಣ; ಆವರ್ತ; ವಲಯ.
  • ಸುರುಳಿ, ಶಂಖ – ಸಿಂಪಿ; ವಲ್ಯೂಟ ಕುಲದ, ಕಡಲಿನ ಉದರಪಾದಿ, ಸಿಂಪಿ.
  • ಸುರುಳಿ ಶಂಖ; ಸಿಂಪಿಯ ಸುರಳಿ ಚಿಪ್ಪು.

volute

ಗುಣವಾಚಕ

(ಮುಖ್ಯವಾಗಿ ಸಸ್ಯವಿಜ್ಞಾನ) ಸುರುಳಿಸುತ್ತಿದ; ಆವರ್ತಗೊಂಡ; ವಲಯಿತ.

voluted

ಗುಣವಾಚಕ

ಸುರುಳಿಯಲಂಕರಣ ಮಾಡಿದ; ಆವರ್ತಗಳನ್ನು ಕಡೆದ.

volution

ನಾಮವಾಚಕ

  • ಸುರುಳಿ (ಸುತ್ತಿಕೊಂಡಿರುವುದು); ಆವರ್ತ(ನ); ವಲಯನ.
  • ಸುರುಳಿಸುರುಳಿಯಾಗಿರುವುದು; ತಿರಿಚಿಕೊಂಡಿರುವುದು.
  • (ಸುರುಳಿ ಸಿಂಪಿಯ) ಸುರುಳಿ(ಗಳು).
  • (ಅಂಗರಚನಾಶಾಸ್ತ್ರ) ವಲಯನ; ಸುರುಳಿ; ನುಲಿಚು; ತಿರಿಚು.

volva

ನಾಮವಾಚಕ

(ಸಸ್ಯವಿಜ್ಞಾನ) (ಬಲಿತಿಲ್ಲದ ಅಬೆಯ ಮೇಲಣ) ಪೊರೆಯಂಥ ತೆಳು ಮುಸುಕು.

vomer

ನಾಮವಾಚಕ

(ಅಂಗರಚನಾಶಾಸ್ತ್ರ) ಸೀರಿಕಾಸ್ಥಿ; (ಮನುಷ್ಯನಲ್ಲೂ ಹಲವು ಕಶೇರುಕಗಳಲ್ಲೂ) ಮೂಗಿನ ಹೊಳ್ಳೆಗಳನ್ನು ವಿಭಾಗಿಸುವ ತೆಳುಮೂಳೆ.

vomit

ಸಕರ್ಮಕ ಕ್ರಿಯಾಪದ

  • ವಮನ, ವಾಂತಿ – ಮಾಡು; ಕಕ್ಕು; ಕಾರು.
  • (ಜ್ವಾಲಾಮುಖಿ, ಹೊಗೆಕೊಳವೆ, ಮೊದಲಾದವುಗಳ ವಿಷಯದಲ್ಲಿ) (ರಭಸದಿಂದ) ಕಾರು; ಹೊರಗೆಸೆ.

vomit

ನಾಮವಾಚಕ

ಪದಗುಚ್ಛ

black vomit ಕಪು ವಾಂತಿ; ಕಾಮಾಲೆರೋಗದಲ್ಲಿ ವಾಂತಿಯಾಗುವ ಕಪು ಪದಾರ್ಥ.

  • ವಾಂತಿ; ವಾಂತಿಯಾದದ್ದು; ವಮನ.
  • (ಪ್ರಾಚೀನ ಪ್ರಯೋಗ) ವಾಮಕ; ವಮನಕಾರಕ; ವಾಂತಿ ಮಾಡಿಸುವ ಔಷಧ.

vomitorium

ನಾಮವಾಚಕ

= 2vomitory.

vomitory

ಗುಣವಾಚಕ

ವಾಮಕ; ವಮನಕಾರಕ; ವಾಂತಿ ಮಾಡಿಸುವ.

vomitory

ನಾಮವಾಚಕ

(ರೋಮನ್‍ ಪ್ರಾಕ್ತನಶಾಸ್ತ್ರ) (ಪ್ರೇಕ್ಷಕರ ಪ್ರವೇಶ ಮತ್ತು ನಿರ್ಗಮನಗಳಿಗಾಗಿ ಕಟ್ಟಿದ, ನಾಟಕಶಾಲೆಯ ಯಾ ವರ್ತುಲ ನಾಟಕಶಾಲೆಯ) ನಡವೆ(ಗಳಲ್ಲೊಂದು); ಓಣಿ(ಗಳಲ್ಲೊಂದು).

Search Dictionaries

Loading Results

Follow Us :   
  Download Bharatavani App
  Bharatavani Windows App