भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

voodoo

ನಾಮವಾಚಕ

  • (ವೆಸ್ಟ್‍ಇಂಡೀಸ್‍ನ ನೀಗ್ರೋ ಜನರಲ್ಲಿ ಪ್ರಚಲಿತವಾಗಿರುವ) ಮಾಟ, ಯಂತ್ರಮಂತ್ರಗಳಲ್ಲಿ ನಂಬಿಕೆ.
  • ಅಭಿಚಾರ; ಮಾಟ; ಶೂನ್ಯ; ಮಾಟದ ಪ್ರಯೋಗ.
  • ಮಾಟಗಾರ; ಮಂತ್ರವಾದಿ.
  • ಮಾಟದ ಮಂತ್ರ; ಮಾಟದಲ್ಲಿ ಬಳಸುವ ಮಂತ್ರ.

voodoo

ಸಕರ್ಮಕ ಕ್ರಿಯಾಪದ

ಮಾಟ ಮಾಡು; ಮಾಟದಿಂದ ವಶಪಡಿಸಿಕೊ.

voodooism

ನಾಮವಾಚಕ

ಅಭಿಚಾರ; ಮಾ(ಗಾರಿಕೆ); ಮಾಟದ ಪ್ರಯೋಗ.

voodooist

ನಾಮವಾಚಕ

ಮಾಟಗಾರ; ಮಂತ್ರವಾದಿ.

voracious

ಗುಣವಾಚಕ

  • ಹೊಟ್ಟೆಬಾಕತನದ; ಕೂಳುಬಾಕತನದ; ಬಕಾಸುರನಂಥ: voracious eater ಬಕಾಸುರನಂತೆ ತಿನ್ನುವವನು.
  • ಓದುವುದರಲ್ಲಿ ಅಪಾರ ಆಸಕ್ತಿಯಿರುವ; ಸರ್ವಗ್ರಾಹಿಯಾದ: a voracious reader ಓದುವುದರಲ್ಲಿ ಅಪಾರ ಆಸಕ್ತ.

voraciously

ಕ್ರಿಯಾವಿಶೇಷಣ

ಸರ್ವಗ್ರಾಹಿಯಾಗಿ:

  • (ತಿನ್ನುವುದರಲ್ಲಿ) ಹೊಟ್ಟೆಬಾಕನಂತೆ; ಬಕಾಸುರನಂತೆ.
  • (ಓದುವುದರಲ್ಲಿ) ಅಪಾರ ಆಸಕ್ತಿಯಿಂದ.

voraciousness

ನಾಮವಾಚಕ

  • ಹೊಟ್ಟೆಬಾಕತನ; ಕೂಳುಬಾಕತನ; ತಿನ್ನುವುದರಲ್ಲಿ ಅತಿ ದುರಾಶೆಯಿರುವಿಕೆ.
  • ಓದುವುದರಲ್ಲಿ ಅಪಾರ ಆಸಕ್ತಿ.

voracity

ನಾಮವಾಚಕ

= voraciousness.

vortex

ನಾಮವಾಚಕ

  • ಆವರ್ತ; ಸುಳಿ; ಗರ್ತ; ಸುತ್ತುತ್ತಿರುವ ದ್ರವ ಯಾ ಅನಿಲ, ಮುಖ್ಯವಾಗಿ ನೀರುಸುಳಿ ಯಾ ಗಾಳಿಸುಳಿ.
  • (ಭೌತವಿಜ್ಞಾನ) ಘೂರ್ಣಭಾಗ; ಆವರ್ತಚಲನದ ಕಣಗಳುಳ್ಳ ದ್ರವದ ಯಾ ಅನಿಲದ ಭಾಗ. (ರೂಪಕವಾಗಿ) ಸುಳಿ; ಗರ್ತ; ಹತ್ತಿರ ಬಂದವರನ್ನು, ತನ್ನ ಪ್ರಭಾವಕ್ಕೆ ಸಿಕ್ಕಿದವರನ್ನು ಸುಳಿಯಂತೆ ನುಂಗಿಬಿಡುವ ವ್ಯವಸ್ಥೆ, ವೃತ್ತಿ, ಉದ್ಯಮ, ಮೊದಲಾದವು: the vortex of society ಸಮಾಜದ ಸುಳಿ.

vortex-ring

ನಾಮವಾಚಕ

ಉಂಗುರಸುಳಿ; ಭ್ರಮಣಾಕ್ಷವು ಒಂದು ಸಂವೃತ ವಕ್ರರೇಖೆಯಾಗಿರುವ ಸುಳಿ, ಉದಾಹರಣೆಗೆ (ಚುಂಗಾಣಿಯಿಂದ ಯಾ ತಂಬಾಕು ಸೇದುತ್ತಿರುವವನ ಬಾಯಿಂದ ಹೊರಡುವ) ಹೊಗೆ ಸುರುಳಿ.

vortical

ಗುಣವಾಚಕ

ಸುಳಿಯಂಥ; ಆವರ್ತದಂಥ; ಸುಳಿ ಸುತ್ತುವ.

vorticella

ನಾಮವಾಚಕ

ಘಂಟಾಣುಪ್ರಾಣಿ; (ತಂಗುನೀರು ಮೊದಲಾದವುಗಳಲ್ಲಿ ಕಂಡುಬರುವ, ವಾರ್ಟಿಸೆಲಿಡೀ ವಂಶದ, ಸುತ್ತಲೂ ಕೂದಲುಳ್ಳ, ಗಂಟೆಯಾಕಾರದ ತೂತಿರುವ, ಕೊಳವೆಯಂಥ ದಂಡವುಳ್ಳ) ಘಂಟಾಣುಜೀವಿ ವರ್ಗದಲ್ಲೊಂದು.

vorticism

ನಾಮವಾಚಕ

(ಕಲೆ) (ಆಧುನಿಕ ನಾಗರಿಕತೆಯ ಆವರ್ತಗಳನ್ನು ತಳಹದಿಯಾಗಿಟ್ಟುಕೊಂಡು, ಸುರುಳಿ ಯಾ ಸುಳಿವಿನ್ಯಾಸದ ಕಲಾಕೃತಿಗಳನ್ನು ನಿರ್ಮಿಸುವ) ಆವರ್ತಪಂಥ; ಸುರುಳಿಪಂಥ.

vorticist

ನಾಮವಾಚಕ

ಆವರ್ತವಾದಿ:

  • (ತತ್ತ್ವಶಾಸ್ತ್ರ) [ದೇಕಾರ್ತ(Descartes) ನಂತೆ] ವಿಶ್ವವು ಭೌತದ್ರವ್ಯದ ಆವರ್ತನರೂಪ ಎಂದು ಪ್ರತಿಪಾದಿಸುವ ದಾರ್ಶನಿಕ.
  • (ಕಲೆ) (ಆಧುನಿಕ ನಾಗರಿಕತೆಯ ಆವರ್ತಗಳನ್ನು ತಳಹದಿಯಾಗಿಟ್ಟು ಕೊಂಡು, ಸುರುಳಿಗಳನ್ನು ಯಾ ಸುಳಿಗಳನ್ನು ಬಳಸಿ ಕಲಾಕೃತಿಗಳನ್ನು ನಿರ್ಮಿಸುವ ಚಿತ್ರಕಾರ, ಲೇಖಕ, ಮೊದಲಾದ) ಆವರ್ತಪಂಥದ, ಸುರಳಿಪಂಥದ ಕಲಾವಿದ.

vorticity

ನಾಮವಾಚಕ

ಆವರ್ತತೆ; ಸುಳಿತನ; ಸುಳಿ ಸುತ್ತುತ್ತಿರುವಿಕೆ.

vorticose

ಗುಣವಾಚಕ

= vorticular.

vorticular

ಗುಣವಾಚಕ

ಸುಳಿಯಂಥ; ಆವರ್ತವಾಗಿರುವ; ಸುಳಿ ಸುತ್ತುವ.

vortiginous

ಗುಣವಾಚಕ

(ಪ್ರಾಚೀನ ಪ್ರಯೋಗ) ಸುಳಿಸುತ್ತುವ; ಆವರ್ತ ರಚಿಸುವ.

votable

ಗುಣವಾಚಕ

(ವಿರಳ ಪ್ರಯೋಗ) (ಅಭಿ)ಮತ ನೀಡಬಲ್ಲ; ಮತದಾನದ ಹಕ್ಕುಳ್ಳ; ವೋಟಿನ ಹಕ್ಕುಳ್ಳ.

votaress

ನಾಮವಾಚಕ

(ಸ್ತ್ರೀಲಿಂಗ) (ವ್ಯಕ್ತಿ, ವೃತ್ತಿ, ವ್ಯವಸ್ಥೆ, ಪಂಥ, ಮೊದಲಾದವುಗಳ) ಅನುಯಾಯಿನಿ; ಭಕ್ತೆ.

Search Dictionaries

Loading Results

Follow Us :   
  Download Bharatavani App
  Bharatavani Windows App