भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

valuable

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಬೆಲೆಬಾಳುವ ವಸ್ತು(ಗಳು); ಅಮೂಲ್ಯ ವಸ್ತು(ಗಳು); ಮುಖ್ಯವಾಗಿ ಒಡವೆ ವಸ್ತು(ಗಳು), ನಗನಾಣ್ಯ(ಗಳು): she sent all her valuables to the bank ಆಕೆ ತನ್ನ ನಗನಾಣ್ಯಗಳನ್ನೆಲ್ಲ ಬ್ಯಾಂಕಿಗೆ ಕಳುಹಿಸಿದಳು.

valuably

ಕ್ರಿಯಾವಿಶೇಷಣ

ಬೆಲೆ ಬಾಳುವಂತೆ.

valuate

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಬೆಲೆಕಟ್ಟು; ಮೌಲ್ಯಮಾಪನ ಮಾಡು; ಬೆಲೆ ನಿರ್ಣಯಿಸು.

valuation

ನಾಮವಾಚಕ

 • (ಮುಖ್ಯವಾಗಿ ಅಧಿಕೃತನಾದ ಮೌಲ್ಯನಿರ್ಣಯಕಾರನಿಂದ ಯಾ ವೃತ್ತಿಯಿಂದ ಬೆಲೆಕಟ್ಟುವ ವ್ಯಕ್ತಿಯಿಂದ) ಬೆಲೆಕಟ್ಟುವಿಕೆ; ಮೌಲ್ಯ ನಿರ್ಣಯ.
 • (ಬೆಲೆ ಕಟ್ಟುವವನು) ಕಟ್ಟಿದ, ನಿರ್ಣಯಿಸಿದ – ಬೆಲೆ.
 • (ವಸ್ತುವಿಗೆ ಇಟ್ಟ, ಹಾಕಿದ) ಬೆಲೆ; ಮೌಲ್ಯ: valuation of land ಜಮೀನಿನ ಮೌಲ್ಯನಿರ್ಣಯ: he disposed of it at a low valuation ಅವನು ಅದನ್ನು ಕಡಿಮೆ ಬೆಲೆಗೆ ಮಾರಿಬಿಟ್ಟ. he sets too high a valuation on his abilities ಅವನು ತನ್ನ ಶಕ್ತಿಸಾಮರ್ಥ್ಯಗಳಿಗೆ ಅತಿಯಾಗಿ ಬೆಲೆ ಕಟ್ಟುತ್ತಾನೆ.

valuator

ನಾಮವಾಚಕ

ಬೆಲೆಕಟ್ಟುವವನು; ಮೌಲ್ಯನಿರ್ಣಯಕಾರ.

value

ನಾಮವಾಚಕ

ಪದಗುಚ್ಛ

value for money = 1value\((7)\).

 • ಬೆಲೆ; ಮೌಲ್ಯ; ಕಿಮ್ಮತ್ತು.
 • ಬೆಲೆ; ಪ್ರಯೋಜನ; ಉಪಯುಕ್ತತೆ: I now learnt the value of regular exercise ಕ್ರಮಬದ್ಧವಾದ ವ್ಯಾಯಾಮದ ಪ್ರಯೋಜನವನ್ನು ನಾನು ಈಗ ಅರಿತುಕೊಂಡೆ.
 • (ವಸ್ತುವಿನ, ವಿಷಯದ) ಬೆಲೆ; ಯೋಗ್ಯತೆ; ಪ್ರಾಮುಖ್ಯ; ಮಹತ್ತ್ವ; ಗುಣ: I now learnt the value of fresh water ಸಿಹಿನೀರಿನ ಬೆಲೆ ಏನೆಂಬಉದು ನನಗೆ ಈಗ ತಿಳಿಯಿತು. I now learnt the value of a friend ಸ್ನೇಹಿತನ ಮಹತ್ತ್ವ ನನಗೆ ಈಗ ತಿಳಿಯಿತು.
 • ಕಟ್ಟಿದ ಬೆಲೆ; ನಿರ್ಣಯಿಸಿದ ಮೌಲ್ಯ; ಮಹತ್ತ್ವ: he sets a high value on his time ಅವನು ತನ್ನ ಕಾಲಕ್ಕೆ ಭಾರಿ ಮಹತ್ತ್ವ ಕೊಡುತ್ತಾನೆ.
 • ವಿನಿಮಯ ಮೌಲ್ಯ; ಬದಲುಬೆಲೆ; ಸರಕಿಗೆ ಬದಲು ಪಡೆಯಬಹುದಾದ ಸಮಬೆಲೆಯ ಹಣ ಯಾ ಬೇರೆ ಸರಕು.
 • (ಸರಕಿನ ಯಾ ವಸ್ತುವಿನ) (ಸರಿ)ಸಮಬೆಲೆ; ಪ್ರತಿಮೌಲ್ಯ: government paid him the value of the acquired land ಸರ್ಕಾರವು ವಶಪಡಿಸಿಕೊಂಡ ಜಮೀನಿನ ಯಾ ನೆಲದ ಪ್ರತಿಮೌಲ್ಯವನ್ನು ಅವನಿಗೆ ಪಾವತಿ ಮಾಡಿತು.
 • ಸೂಕ್ತಫಲ; ವೆಚ್ಚ ಮಾಡಿದ ಹಣಕ್ಕೆ ಸಿಕ್ಕುವ ತಕ್ಕ ಪ್ರತಿಫಲ.
 • ಮೌಲ್ಯ; ಬೆಲೆ; ಒಂದು ಉದ್ದೇಶವನ್ನು ಕೈಗೂಡಿಸುವ ಯಾ ಒಂದು ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯ: news value ವಾರ್ತಾಮೌಲ್ಯ; ಸುದ್ದಿಬೆಲೆ.
 • (ಬಹುವಚನದಲ್ಲಿ) (ವ್ಯಕ್ತಿಯ) ಮೌಲ್ಯಗಳು; ತತ್ತ್ವಗಳು; ಆದರ್ಶಗಳು; ಜೀವನದ ಪರಮೋದ್ದೇಶವೆಂದು ಯಾ ಜೀವನದಲ್ಲಿ ಅತ್ಯಂತ ಮಹತ್ತ ಪೂರ್ಣವಾದದ್ದೆಂದು ಒಬ್ಬನು ಭಾವಿಸುವ ಧ್ಯೇಯ, ಲಕ್ಷ್ಯ.
 • (ಪದ ಮೊದಲಾದವುಗಳ) ಅರ್ಥ.
 • (ಆಡುಮಾತಿನಲ್ಲಿ) (ಸ್ವರ ಯಾ ವ್ಯಂಜನದ) ಧ್ವನಿ; ಉಚ್ಚಾರಣೆ.
 • (ಸಂಗೀತ) ಸ್ವರದ ಅವಧಿ; ಯಾವುದೇ ಸ್ವರವನ್ನು ಗಾನ ಯಾ ವಾದನ ಮಾಡಲು ಹಿಡಿಯುವ ಕಾಲ.
 • (ಆಟದ ನಿಯಮಗಳ ಪ್ರಕಾರ ಇಸ್ಪೀಟು ಎಲೆ, ಚದುರಂಗದ ಕಾಯಿ, ಮೊದಲಾದವುಗಳ) ಬೆಲೆ; ಪ್ರಾಮುಖ್ಯ; ದರ್ಜೆ.
 • (ವರ್ಣಚಿತ್ರಣ) ವರ್ಣಛಾಯೆ; ವರ್ಣಸಾಮಂಜಸ್ಯ; ಬಣ್ಣಗಳ ಹೊಂದಿಕೆ; ಛಾಯಾಸಾಮರಸ್ಯ; ನೆಳಲುಬೆಳಕುಗಳಿಗೆ ಸಂಬಂಧಪಟ್ಟಂತೆ ಚಿತ್ರದ ಒಂದು ಭಾಗಕ್ಕೂ ಇನ್ನೊಂದಕ್ಕೂ ಇರುವ ಪರಸ್ಪರ ಸಂಬಂಧ.
 • (ಗಣಿತ) ಬೆಲೆ; ಮೂಲ್ಯ; ಬೀಜಗಣಿತೀಯ ಪದ ಯಾ ಉಕ್ತಿಯು ಪ್ರತಿನಿಧಿಸುವ ಪರಿಮಾಣ.
 • (ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ) ಪರಿಮಾಣ ಸಂಖ್ಯೆ; ಅಂಕಿಗಳಲ್ಲಿ ಹೇಳುವ, ಯಾವುದೇ ಪರಿಮಾಣದ ಅಳತೆ: the value of gravity at the equator ವಿಷುವದ್ರೇಖೆಯ ಬಳಿ ಗುರುತ್ವದ ಮೌಲ್ಯ.

value

ಸಕರ್ಮಕ ಕ್ರಿಯಾಪದ

 • (ಮುಖ್ಯವಾಗಿ ಮೌಲ್ಯನಿರ್ಣಯಕಾರನಂತೆ ವಸ್ತುಗಳಿಗೆ) ಬೆಲೆಕಟ್ಟು; ಬೆಲೆ ಅಂದಾಜು ಮಾಡು; ಮೌಲ್ಯ ನಿರ್ಣಯಿಸು: I value the whole at Rs. 2000 ಇಷ್ಟಕ್ಕೂ ನಾನು 2000 ರೂ. ಬೆಲೆ ಕಟ್ಟುತ್ತೇನೆ.
 • ಬೆಲೆಕೊಡು; ಮಾನ್ಯಮಾಡು; ಮನ್ನಣೆ, ಮಾನ್ಯತೆ, ಮಹತ್ತ – ಕೊಡು: I value simplicity beyond all things ಸರಳತೆಗೆ ನಾನು ಎಲ್ಲಕ್ಕಿಂತಲೂ ಮೀರಿ ಬೆಲೆ ಕೊಡುತ್ತೇನೆ, ಮಹತ್ತ್ವ ಕೊಡುತ್ತೇನೆ. a valued friend ಸನ್ಮಾನ್ಯ ಮಿತ್ರ.
 • ಉದಾತ್ತ ಭಾವನೆ ಹೊಂದಿರು; ಮೆಚ್ಚಿಕೆ ಹೊಂದಿರು; ಹೆಮ್ಮೆಪಡು: he values himself highly on his conversational powers ತನ್ನ ಸಂಭಾಷಣ ಸಾಮರ್ಥ್ಯಕ್ಕಾಗಿ ಅವನು ತನ್ನನ್ನೇ ಬಹಳವಾಗಿ ಮೆಚ್ಚಿಕೊಳ್ಳುತ್ತಾನೆ, ತುಂಬ ಹೆಮ್ಮೆ ಪಡುತ್ತಾನೆ.

value added tax

ನಾಮವಾಚಕ

ಬೆಲೆ ಕೂಡಿಸಿದ ತೆರಿಗೆ; ಮೌಲ್ಯ ವರ್ಧಿತ, ಮೌಲ್ಯಸಂಕಲಿತ – ಕರ; ಉತ್ಪಾದನೆಯ ಪ್ರತಿ ಹಂತದಲ್ಲೂ ಸರಕಿನ ಬೆಲೆ ಎಷ್ಟು ಹೆಚ್ಚುತ್ತದೆಯೋ ಆ ಮೊಬಲಗಿನ ಮೇಲೆ ವಿಧಿಸಿದ ತೆರಿಗೆ.

value judgement

ನಾಮವಾಚಕ

ವೈಯಕ್ತಿಕ ತೀರ್ಮಾನ; ವ್ಯಕ್ತಿನಿಷ್ಠ ನಿರ್ಣಯ; ಯಾವುದಕ್ಕೇ ಆಗಲಿ ಸ್ವಂತ ಒಲವಿನ ಆಧಾರದ ಮೇಲೆ ಕೊಡುವ ಬೆಲೆ, ಮಾಡುವ ತೀರ್ಮಾನ.

value received

ನಾಮವಾಚಕ

ಸಮಮೌಲ್ಯ; ಹುಂಡಿ ಮೊದಲಾದವಕ್ಕೆ ಬದಲು ಪಡೆದ ಹಣ ಯಾ ಅದಕ್ಕೆ ಸರಿಸಮನಾದ ಮೊತ್ತ.

valueless

ಗುಣವಾಚಕ

 • ಬೆಲೆಯಿಲ್ಲದ.
 • ಕೆಲಸಕ್ಕೆ ಬಾರದ; ಉಪಯೋಗವಿಲ್ಲದ; ನಿಷ್ಪ್ರಯೋಜಕ.

valuelessness

ನಾಮವಾಚಕ

ಉಪಯೋಗವಿಲ್ಲದಿರುವಿಕೆ; ನಿಷ್ಪ್ರಯೋಜಕತೆ; ನಿರುಪಯುಕ್ತತೆ; ಕೆಲಸಕ್ಕೆ ಬಾರದಿರುವಿಕೆ.

valuer

ನಾಮವಾಚಕ

 • (ವಸ್ತುಗಳಿಗೆ) ಬೆಲೆ ಕಟ್ಟುವವ; ಬೆಲೆ ಅಂದಾಜುಗಾರ; ಮೌಲ್ಯ ನಿರ್ಣಾಯಕ.
 • ಮೌಲ್ಯಮಾಪಕ; ಸಾಧನೆ, ಗುಣಮಟ್ಟ, ಮೊದಲಾದವನ್ನು ಅಳೆಯುವವನು.

valuta

ನಾಮವಾಚಕ

 • (ಯಾವುದೇ ನಾಣ್ಯವ್ಯವಸ್ಥೆಯ) ತೌಲನಿಕ – ಬೆಲೆ, ಮೌಲ್ಯ.
 • (ಒಂದು ನಾಣ್ಯವ್ಯವಸ್ಥೆಯನ್ನು ಇನ್ನೊಂದರೊಡನೆ) ಸಮೀಕರಿಸಿದ ಬೆಲೆ; ಸಮೀಕೃತ ಮೌಲ್ಯ.

valve

ನಾಮವಾಚಕ

 • ಕವಾಟ:
  1. ಯಾವುದೇ ನಾಳದ ಮುಖಾಂತರ ಹರಿಯುವ ದ್ರವವನ್ನು ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವಂತೆ ಮಾಡುವ ಸಾಧನ.
  2. (ಅಂಗರಚನಾಶಾಸ್ತ್ರ ಮತ್ತು ಪ್ರಾಣಿವಿಜ್ಞಾನ) ರಕ್ತ ಮುಂತಾದ ದ್ರವಗಳು ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವಂತೆ ನೋಡಿಕೊಳ್ಳುವ ಪೊರೆಯಂಥ ಅಂಗಭಾಗ.
  3. (ಸಂಗೀತ) ಹಿತ್ತಾಳೆಯ ಗಾಳಿವಾದ್ಯದಲ್ಲಿ ಕೊಳವೆಯ ಉದ್ದವನ್ನು ಹೆಚ್ಚಿಸಲು ಮತ್ತು ತಗ್ಗಿಸಲು ಮಾಡಿರುವ ಅವಕಾಶ.
 • (ಬ್ರಿಟಿಷ್‍ ಪ್ರಯೋಗ) = thermionic valve.
 • ಕೀಲುಕದ; ಮಡಿಚು ಕದದ ಒಂದು ಹಲಗೆ.
 • (ಸಸ್ಯವಿಜ್ಞಾನ) (ಒಣಗಿ ಬಾಯಿಬಿಟ್ಟ) ಬೀಜಕೋಶದ, ಪರಾಗಕೋಶದ – ಅರ್ಧಭಾಗ, ಹೋಳು.
 • (ಶಂಖಶಾಸ್ತ್ರ) ಕೀಲುಚಿಪ್ಪಿನ ಒಂದರ್ಧ; ಕಪ್ಪೆಚಿಪು , ಮುತ್ತಿನಚಿಪ್ಪು.

valved

ಗುಣವಾಚಕ

ಕವಾ(ಗಳು) ಉಳ್ಳ; ಕವಾಟಯುಕ್ತ (ಸಂಯುಕ್ತಪದಗಳಲ್ಲಿ ಸಹ ಬಳಕೆ).

valveless

ಗುಣವಾಚಕ

ಕವಾ(ಗಳು) ಇಲ್ಲದ; ಕವಾಟರಹಿತ; ಕವಾಟಶೂನ್ಯ.

valvular

ಗುಣವಾಚಕ

 • = valved.
 • ಕವಾಟರೂಪದ.
 • ಕವಾಟದ ಕೆಲಸವನ್ನು ಮಾಡುವ; ಕವಾಟದಂತೆ ವರ್ತಿಸುವ.

valvule

ನಾಮವಾಚಕ

ಕಿರುಕವಾಟ.

valvulitis

ನಾಮವಾಚಕ

ಕವಾಟೋದ್ರೇಕ; ಮುಖ್ಯವಾಗಿ ಹೃದಯದ ಕವಾಟದ ಯಾ ಕವಾಟಗಳ ಉರಿಯೂತ.

Search Dictionaries

Loading Results

Follow Us :   
  Download Bharatavani App
  Bharatavani Windows App