भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

votarist

ನಾಮವಾಚಕ

= votary\((2)\).

votary

ನಾಮವಾಚಕ

  • (ಭಗವಂತ ಮೊದಲಾದವರ) ಉಪಾಸಕ; ಭಕ್ತ.
  • (ವ್ಯಕ್ತಿ, ವೃತ್ತಿ, ವ್ಯವಸ್ಥೆ, ಪಂಥ, ಮೊದಲಾದವುಗಳ) ಶ್ರದ್ಧಾನ್ವಿತ ಅನುಯಾಯಿ; ಅವಿಚ್ಫಿನ್ನ ಭಕ್ತ; ಕಟ್ಟಾ ಸಮರ್ಥಕ.

vote

ನಾಮವಾಚಕ

ಪದಗುಚ್ಛ

  • ವೋಟು; (ಅಭಿ)ಮತ; ಅಭ್ಯರ್ಥಿಯನ್ನು ಆಯ್ಕೆ ಮಾಡುವುದು, ಕಾನೂನನ್ನು ಮಂಜೂರು ಮಾಡುವುದು, ಠರಾವನ್ನು ಒಪು ವುದು, ಮೊದಲಾದ ಸಂದರ್ಭಗಳಲ್ಲಿ ಮತದಾನ ಪತ್ರದ ಮೇಲೆ ಗುರುತಿಸುವುದು, ಕೈಎತ್ತುವುದು, ಕೂಗುವುದು ಯಾ ಬೇರಾವುದೇ ರೀತಿಯಲ್ಲಿ ನೀಡುವ ಅಭಿಪ್ರಾಯ: I shall give my vote to (or for) the Labour candidate ನಾನು ಕಾರ್ಮಿಕ ಪಕ್ಷದ ಅಭ್ಯರ್ಥಿಗೆ ಯಾ ಅಭ್ಯರ್ಥಿಯ ಪರವಾಗಿ ನನ್ನ ಮತ ನೀಡುತ್ತೇನೆ. the resolution was put to the vote and passed without a dissent vote ಆ ಠರಾವನ್ನು ವೋಟಿಗೆ ಹಾಕಲಾಗಿ ಭಿನ್ನಮತವಿಲ್ಲದೆ ಒಪ್ಪಲಾಯಿತು.
  • (ಬ್ರಿಟಿಷ್‍ ಪ್ರಯೋಗ)
    1. (ಸರ್ಕಾರವು ಕೋರಿದ ಹಣದ ವಿಷಯದಲ್ಲಿ) (ಪಾರ್ಲಿಮೆಂಟಿನ) ಬಹುಮತದ ಅನುಮೋದನೆ.
    2. ಬಹುಮತಾಭಿಪ್ರಾಯ; ಬಹುಮತದಿಂದ ವ್ಯಕ್ತವಾದ ಅಭಿಪ್ರಾಯ.
  • ವೋಟುಗಳ, ಮತಗಳ – ಮೊತ್ತ; (ಒಂದು ಪಕ್ಷ ಮೊದಲಾದವು ಯಾ ಒಂದು ಪಕ್ಷ ಮೊದಲಾದವಕ್ಕೆ ಕೊಟ್ಟ ಯಾ ಕೊಡಬಹುದಾದ ಒಟ್ಟು ವೋಟುಗಳು): he will lose the Labour vote ಅವನು ಕಾರ್ಮಿಕ ಪಕ್ಷದ ಮತಗಳನ್ನು ಕಳೆದುಕೊಳ್ಳುವನು.
  • (ಮುಖ್ಯವಾಗಿ ರಾಜ್ಯದ ಚುನಾವಣೆಯಲ್ಲಿ) ಮತಾಧಿಕಾರ; ಮತದಾನದ, ವೋಟು ಮಾಡುವ – ಹಕ್ಕು: Swiss women now have the vote ಸ್ವಿರ್ಲಂಡಿನ ಹೆಂಗುಸರಿಗೆ ಈಗ ವೋಟಿನ, ವೋಟುಮಾಡುವ ಹಕ್ಕಿದೆ.
  • ವೋಟು ಚೀಟಿ; ವೋಟನ್ನು ಗುರುತಿಸಲು ಬಳಸುವ ಕಾಗದ ಮೊದಲಾದವು.

vote

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

ಮತ – ಹಾಕು, ಚಲಾಯಿಸು; ವೋಟು ಮಾಡು.

  • ವೋಟುಮಾಡು; ಮತಹಾಕು; ಬಹುಮತದಿಂದ
    1. ಕಾನೂನು ಮಾಡು.
    2. ಠರಾವನ್ನು ಅನುಮೋದಿಸು.
    3. ಹಣ ಮಂಜೂರು ಮಾಡು.
    4. ವ್ಯಕ್ತಿಯನ್ನು ಸಮಿತಿ ಮೊದಲಾದವುಗಳ ಸದಸ್ಯನನ್ನಾಗಿ ಚುನಾಯಿಸು ಯಾ ಸಮಿತಿ ಮೊದಲಾದವುಗಳ ಸದಸ್ಯತ್ವದಿಂದ ವಜಾಮಾಡು: was voted off (or voted out of) the committee ಬಹುಮತ ಹಾಕಿ ಅವನನ್ನು ಸಮಿತಿಯಿಂದ ವಜಾ ಮಾಡಲಾಯಿತು.
  • (ಆಡುಮಾತು) ಸರ್ವಸಮ್ಮತಿಯಿಂದ, ಸರ್ವಾನುಮತದಿಂದ – ಸಾರು, ಘೋಷಿಸು; ಸಾಮಾನ್ಯಾಭಿಪ್ರಾಯವಾಗಿ ಹೇಳು: the scheme was voted a failure ಆ ಯೋಜನೆ ವಿಫಲವಾಯಿತೆಂದು (ಸರ್ವಸಮ್ಮತಿಯಿಂದ) ಸಾರಲಾಯಿತು.
  • (ಆಡುಮಾತು) ತನ್ನ ಸೂಚನೆಯನ್ನು ಹೊರಗೆಡಹು; ಸಲಹೆ ಪ್ರಕಟಪಡಿಸು: I vote that we should go out on a picnic ನಾವು ಒಂದು ವಿಹಾರಕ್ಕಾಗಿ ಊರಿಂದಾಚೆ ಹೋಗಬೇಕೆಂದು ನಾನು ಸೂಚಿಸುತ್ತೇನೆ, ಸಲಹೆ ಮಾಡುತ್ತೇನೆ.

voteless

ಗುಣವಾಚಕ

ವೋಟಿಲ್ಲದ; ಮತಾಧಿಕಾರವಿಲ್ಲದ; ವೋಟಿನ ಹಕ್ಕಿಲ್ಲದ.

voter

ನಾಮವಾಚಕ

ಮತದಾರ(ಳು):

  • ಅಭಿಮತ ಕೊಡುವ, ಮತದಾನದ – ಹಕ್ಕುಳ್ಳವನು(ಳು).
  • ಮತ ಚಲಾಯಿಸುವ ವ್ಯಕ್ತಿ.

voting

ನಾಮವಾಚಕ

  • ಮತದಾನ; ಬಹುಮತದಿಂದ
    1. ಅಭ್ಯರ್ಥಿಯನ್ನು ಆಯ್ಕೆ ಮಾಡುವುದು.
    2. ಕಾನೂನು ಮಾಡುವುದು.
    3. ಅನುಮೋದಿಸುವುದು.
    4. ಹಣ ಮಂಜೂರು ಮಾಡುವುದು, ಸಮಿತಿ ಮೊದಲಾದವಕ್ಕೆ ಚುನಾಯಿಸುವುದು ಯಾ ಸಮಿತಿ ಮೊದಲಾದವುಗಳಿಂದ ವಜಾ ಮಾಡುವುದು.
  • (ಆಡುಮಾತು) ಸರ್ವಾನುಮತದಿಂದ – ಸಾರುವುದು, ಘೋಷಿಸುವುದು.

voting stock

ನಾಮವಾಚಕ

(ಬಂಡವಾಳ ಪತ್ರದ ಮಾಲೀಕನಿಗೆ) ಮತದಾನದ ಹಕ್ಕನ್ನು, ಅರ್ಹತೆಯನ್ನು, ಕೊಡುವ ಕನಿಷ್ಠ ಪ್ರಮಾಣದ ಬಂಡವಾಳ ಪತ್ರದ ಮೊತ್ತ.

voting-machine

ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗದಲ್ಲಿ) (ಮತಗಳನ್ನು ಗುರುತಿಸಿಕೊಳ್ಳುವ ಸ್ವಯಂಚಾಲಿತ) ಮತದಾನಯಂತ್ರ.

voting-paper

ನಾಮವಾಚಕ

ಮತದಾನದ ಚೀಟಿ; ವೋಟು ಚೀಟಿ; ಮತ(ದಾನ)ಪತ್ರ.

votive

ಗುಣವಾಚಕ

ಹರಕೆ ಕಟ್ಟಿಕೊಂಡ ಯಾ ಸಲ್ಲಿಸಿದ; ಹರಕೆಯ; ಮುಡುಪಿನ: votive offering ಹರಕೆಯ ಸಲ್ಲಿಕೆ ಯಾ ಸಮರ್ಪಣ. votive tablet ಹರಕೆಯ ಫಲಕ, ಶಾಸನ.

votive mass

ನಾಮವಾಚಕ

(ಚರ್ಚು) ಹರಕೆ ಸಲ್ಲಿಕೆಗಾಗಿ ನಡೆಸುವ ವಿಶೇಷ ಪೂಜೆ, ಪ್ರಾರ್ಥನೆ.

vouch

ಅಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಹೊಣೆಯಾಗು; ಜವಾಬ್ದಾರನಾಗು: I will vouch for the truth of this ಇದರ ಸತ್ಯತೆಗೆ ನಾನು ಹೊಣೆಗಾರನಾಗುವೆನು. I will vouch for his honesty ಅವನ ಪ್ರಾಮಾಣಿಕತೆಗೆ ನಾನು ಜವಾಬ್ದಾರನಾಗುವೆನು.

  • (ಪ್ರಾಚೀನ ಪ್ರಯೋಗ) (ಹೇಳಿಕೆಯನ್ನು ಸಾಕ್ಷ್ಯ ಮೊದಲಾದವುಗಳ ಆಧಾರದಿಂದ) ರುಜುವಾತು ಮಾಡಿಕೊಡು; ದೃಢೀಕರಿಸು; ಸ್ಥಿರಪಡಿಸು; ಖಾತ್ರಿಪಡಿಸು; ಸ್ಥಾಪಿಸು.
  • (ಪ್ರಾಚೀನ ಪ್ರಯೋಗ) ಆಧಾರವಾಗಿ, ಪ್ರಮಾಣವಾಗಿ – ಕೊಡು, ಉಲ್ಲೇಖಿಸು.

voucher

ನಾಮವಾಚಕ

  • (ವ್ಯಕ್ತಿ, ಹೇಳಿಕೆ, ಮೊದಲಾದವುಗಳ ಪರವಾಗಿ) ದೃಢೀಕರಣಕಾರ; ಖಾತ್ರಿಗಾರ.
  • ಹೊಣೆಗಾರ; ಜವಾಬ್ದಾರ.
  • ಹಣ ಸಂದಾಯದ ರಶೀತಿ; ಸಲ್ಲಿಕೆಚೀಟಿ; (ಲೆಕ್ಕಾಚಾರ ಸರಿಯಾಗಿದೆ ಎಂಬ) ಪ್ರಮಾಣಪತ್ರ.
  • ವೋಚರು; ಹಣ ಸಂದಿದೆ ಎಂಬಉದರ ಗುರುತಾಗಿ, ವಸ್ತುಗಳಿಗೋ ಸೇವೆಗಳಿಗೋ ಬದಲಾಗಿ ವಿನಿಮಯ ಮಾಡಬಹುದಾದ ಪ್ರಮಾಣ ಪತ್ರ, ಚೀಟಿ, ಹುಂಡಿ.

vouchsafe

ಸಕರ್ಮಕ ಕ್ರಿಯಾಪದ

  • (ಕೊಡುವ, ನೀಡುವ) ಕೃಪೆಮಾಡು; ದಯಪಾಲಿಸು; ಅನುಗ್ರಹಿಸು: he vouchsafed me a visit ಆತ ನನಗೆ ಭೇಟಿ ನೀಡುವ ಕೃಪೆ ಮಾಡಿದ.
  • (ಯಾವುದನ್ನೇ ಮಾಡುವ) ಕೃಪೆಮಾಡು.

voussoir

ನಾಮವಾಚಕ

ಕಮಾನು ಬೆಣೆಕಲ್ಲು; ಕಮಾನು ಕಟ್ಟಡದ, ಬೆಣೆಯಾಕಾರದ ಕಲ್ಲುಗಳಲ್ಲೊಂದು.

vow

ನಾಮವಾಚಕ

ಪದಗುಚ್ಛ

  • (ಭಗವಂತನಿಗೆ, ಯಾವುದೇ ದೇವತೆಗೆ, ಸಂತನಿಗೆ, ಸಂತಳಿಗೆ)
    1. (ಪ್ರಮಾಣ ಮಾಡಿಕೊಟ್ಟ) ವಚನ; ಶಪಥ; ಪ್ರತಿಜ್ಞೆ; ಆಣೆ; ಭಾಷೆ.
    2. (ಕಟ್ಟಿಕೊಂಡ) ಹರಕೆ; (ಕಟ್ಟಿಟ್ಟ) ಮುಡುಪು.
    3. ಕೈಗೊಂಡ ವ್ರತ, ನೋಂಪಿ.
  • ಜ್ಞಾನಸ್ನಾನದ – ಪ್ರತಿಜ್ಞೆಗಳು, ಪ್ರಮಾಣಗಳು; ಜ್ಞಾನಸ್ನಾನದ ಕಾಲದಲ್ಲಿ ಆ ಸಂಸ್ಕಾರ ಪಡೆದವನಾಗಲಿ, ಆತನ ಧರ್ಮೀಯ ಪಿತನೇ ಮೊದಲಾದ ಬಂಧುಗಳಾಗಲಿ, ಕೈಗೊಳ್ಳುವ ಪ್ರತಿಜ್ಞೆ.
  • (ಬಹುವಚನದಲ್ಲಿ) ಪ್ರಣಯಿಗಳ ಯಾ ಸತಿಪತಿಯರ ಪರಸ್ಪರ ನಿಷ್ಠಾಪ್ರತಿಜ್ಞೆಗಳು; ಅವರು ಒಬ್ಬರಿಗೊಬ್ಬರು ಪರಪುರುಷ, ಪರಸ್ತ್ರೀಯರನ್ನು ಕಾಮಿಸದೆ, ಪರಸ್ಪರ ದ್ರೋಹ ಎಸಗದೆ, ಇರುವೆವೆಂದು ಮಾಡುವ ಪ್ರಮಾಣಗಳು.
  • (ಬಹುವಚನದಲ್ಲಿ) (ಸಂನ್ಯಾಸಿ ಯಾ ಸಂನ್ಯಾಸಿನಿಯು ವೈರಾಗ್ಯ, ಬ್ರಹ್ಮಚರ್ಯ ಯಾ ಸಾಧ್ವೀತ್ವ ಮತ್ತು ಸಂಯಮಗಳಿಗೆ ಆಜೀವ ಬದ್ಧರಾಗಿರುವುದಾಗಿ ದೀಕ್ಷಾಕಾಲದಲ್ಲಿ ಪ್ರಮಾಣ ಮಾಡುವ) ಸಂನ್ಯಾಸ ಪ್ರತಿಜ್ಞೆಗಳು ಯಾ ದೀಕ್ಷಾಪ್ರತಿಜ್ಞೆಗಳು.

vow

ಸಕರ್ಮಕ ಕ್ರಿಯಾಪದ

  • (ವಿಧ್ಯುಕ್ತವಾಗಿ) ಹರಕೆ ಕಟ್ಟಿಕೊ; ಹರಸಿಕೊ; ಭಗವಂತನಿಗೆ ಯಾ ದೇವತೆಗೆ ಯಾ ಸಂತನಿ(ಳಿ)ಗೆ ಮುಡಿಪು ಸಲ್ಲಿಸುವುದಾಗಿ ಶಾಸ್ತ್ರೋಕ್ತ ರೀತಿಯಲ್ಲಿ ಪ್ರಮಾಣ ಮಾಡು: he vowed a temple to Ganesha ಅವನು ಗಣೇಶನಿಗೆ ಒಂದು ದೇವಸ್ಥಾನ ಕಟ್ಟಿಸುವುದಾಗಿ ಹರಕೆ ಕಟ್ಟಿಕೊಂಡ, ಹರಸಿಕೊಂಡ.
  • ವ್ರತ ತೊಡು, ಹಿಡಿ; ನೋಂಪಿಯನ್ನು ಮಾಡುವುದಾಗಿ ಪ್ರಮಾಣಮಾಡಿ, ನಿಷ್ಠೆಯಿಂದ ಅದನ್ನು ಅನುಷ್ಠಾನ ಮಾಡು.
  • ಶಪಥ, ಪ್ರತಿಜ್ಞೆ – ಮಾಡು, ತೊಡು: he vowed vengeance against the aggressor ಅವನು ಆಕ್ರಮಣಕಾರನ ಮೇಲೆ ಹಗೆ ತೀರಿಸಿಕೊಳ್ಳುವ, ಪ್ರತೀಕಾರ ಎಸಗುವ, ಶಪಥ ಮಾಡಿದ.
  • (ಪ್ರಾಚೀನ ಪ್ರಯೋಗ) ಪ್ರಮಾಣಪೂರ್ವಕ – ಸಾರು, ಘೋಷಿಸು.

vowel

ನಾಮವಾಚಕ

ಪದಗುಚ್ಛ

indeterminate (or neutral or obscure) vowel ಮಧ್ಯಸ್ಥ ಸ್ವರ; ಅಸ್ಪಷ್ಟ ಯಾ ಅನಿಷ್ಕೃಷ್ಟ ಉಚ್ಚಾರಣೆಯ ಸ್ವರ, ಉದಾ. cousin, reason, haddock, ಮೊದಲಾದ ಪದಗಳಲ್ಲಿಯ ಎರಡನೆಯ ಉಚ್ಚಾರಣಾಂಶದ i, o, o ಎಂಬ ಲಘುವಾಗಿ ಉಚ್ಚಾರಣೆಯಾಗುವ ಸ್ವರ (= schwa).

  • ಸ್ವರ; ವ್ಯಂಜನಕ್ಕಿಂತ ಹೆಚ್ಚಾಗಿ ಬಾಯಿ ತೆರೆದಿರುವ ಮತ್ತು ಉಚ್ಚಾರಾಂಶವನ್ನು ರೂಪಿಸಬಲ್ಲ, ಧ್ವನಿತಂತುಗಳ ಕಂಪನದಿಂದ ಉಂಟಾಗುವ, ಕೇಳಿಸುವಂಥ ಘರ್ಷಣೆಯಿಲ್ಲದ ಭಾಷಾಧ್ವನಿ.
  • ಸ್ವರಾಕ್ಷರ, ಉದಾಹರಣೆಗೆ ಇಂಗ್ಲಿಷಿನಲ್ಲಿ a, e, i, o, u.

vowel gradation

ನಾಮವಾಚಕ

= ablaut.

Search Dictionaries

Loading Results

Follow Us :   
  Download Bharatavani App
  Bharatavani Windows App