भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vowel mutation

ನಾಮವಾಚಕ

= umlaut(2).

vowel point

ನಾಮವಾಚಕ

ಸ್ವರಬಿಂದು; ಹೀಬಊ ಮೊದಲಾದ ಭಾಷೆಗಳಲ್ಲಿಯ ಸ್ವರಗಳನ್ನು ಸೂಚಿಸುವ ಚಿಹ್ನೆಗಳಲ್ಲಿ ಒಂದು.

vowelise

ಸಕರ್ಮಕ ಕ್ರಿಯಾಪದ

= vowelize.

vowelize

ಸಕರ್ಮಕ ಕ್ರಿಯಾಪದ

(ಹೀಬಊ ಮೊದಲಾದ ಭಾಷೆಗಳ ಸಂಕ್ಷಿಪ್ತ ಲಿಪಿಯಲ್ಲಿ) ಸ್ವರಚಿಹ್ನೆ – ಹಾಕು, ಸೇರಿಸು.

vowelled

ಗುಣವಾಚಕ

ಸ್ವರಯುಕ್ತ; ಸ್ವರವುಳ್ಳ (ಸಂಯುಕ್ತಪದ ವಾಗಿ ಸಹ ಬಳಕೆ).

vowelless

ಗುಣವಾಚಕ

ಸ್ವರರಹಿತ; ಸ್ವರವಿಲ್ಲದ.

vowelly

ಕ್ರಿಯಾವಿಶೇಷಣ

ಸ್ವರವಾಗಿ; ಸ್ವರರೂಪದಲ್ಲಿ: in ‘umbrella’ ‘u’ is used vowelly. ‘umbrella’ ಎಂಬ ಪದದಲ್ಲಿ ‘u’ ಎಂಬ ಅಕ್ಷರವು ಸ್ವರವಾಗಿ ಬಳಸಲ್ಪಟ್ಟಿದೆ.

vox

ನಾಮವಾಚಕ

ವಾಣಿ; ಮಾತು.

vox angelica

ನಾಮವಾಚಕ

ದೇವವಾಣಿ; ಇಂಪಾದ ಕಂಪನಯುತವಾದ ನಾದವನ್ನು ಹುಟ್ಟಿಸುವ, ಆರ್ಗನ್‍ ವಾದ್ಯದ ಕೀಲು.

vox et praeterea nihil

ನಾಮವಾಚಕ

ಬರಿಯ ಶಬ್ದ, ಮತ್ತೇನೂ ಇಲ್ಲ; ಅರ್ಥವಿಲ್ಲದ ಬರಿಯ ಸೊಲ್ಲು; ಅರ್ಥಹೀನವಾದ ಮಾತು.

vox humana

ನಾಮವಾಚಕ

ಮಾನವ, ಮನುಷ್ಯ – ವಾಣಿ; ಮನುಷ್ಯಧ್ವನಿಯನ್ನು ಹೋಲುವುದೆನ್ನಲಾದ ನಾದವನ್ನು ಹುಟ್ಟಿಸುವ, ಆರ್ಗನ್‍ ವಾದ್ಯದ ಕೀಲು, ಪೀಪಿ.

vox pop

ನಾಮವಾಚಕ

(ರೇಡಿಯೋ ಪ್ರಸಾರ) (ಆಡುಮಾತು) (ಸಾರ್ವಜನಿಕರ ಟೀಕೆಗಳು, ಹೇಳಿಕೆಗಳು ಯಾ ಈ ಬಗೆಯ ಸಂದರ್ಶನಗಳು ಸೂಚಿಸುವ) ಜನಾಭಿಪ್ರಾಯ; ಸಾರ್ವಜನಿಕಾಭಿಪ್ರಾಯ.

vox populi

ನಾಮವಾಚಕ

ಜನತಾವಾಣಿ; ಲೋಕವಾಣಿ; ಜನಾಭಿಪ್ರಾಯ; ಜನಸಾಮಾನ್ಯದ ನಂಬಿಕೆ, ಅಭಿಮತ, ತೀರ್ಪು, ಮೊದಲಾದವು.

voyage

ನಾಮವಾಚಕ

ಪದಗುಚ್ಛ

bon voyage! ಸುಖಪ್ರಯಾಣ (ಆಗಲಿ)!

  • ಯಾನ; ಪ್ರಯಾಣ; ಯಾತ್ರೆ; ಮುಖ್ಯವಾಗಿ ದೀರ್ಘದೂರದ, ಸಮುದ್ರ ಯಾ ಜಲಮಾರ್ಗದ ಯಾ ವಾಯುಮಾರ್ಗದ ಯಾ ಬಾಹ್ಯಾಂತರಿಕ್ಷದ ಯಾತ್ರೆ.
  • ಪ್ರಯಾಣದ, ಯಾತ್ರೆಯ – ಕಥನ, ವರ್ಣನೆ.

voyage

ಸಕರ್ಮಕ ಕ್ರಿಯಾಪದ

ಯಾತ್ರೆಮಾಡು; ಮುಖ್ಯವಾಗಿ ಜಲ ಯಾ ವಾಯು ಮಾರ್ಗವಾಗಿ – ಸಂಚರಿಸು, ಪ್ರಯಾಣಮಾಡು.

voyageable

ಗುಣವಾಚಕ

ಸಂಚಾರಾರ್ಹ; ಸಂಚಾರಯೋಗ್ಯ; ಸಂಚರಿಸಲು, ಪ್ರಯಾಣ ಮಾಡಲು – ಸಾಧ್ಯವಾದ.

voyager

ನಾಮವಾಚಕ

ಪ್ರಯಾಣಿಕ; ಯಾತ್ರಿಕ; ಪಯಣಿಗ.

voyageur

ನಾಮವಾಚಕ

  • (ಮುಖ್ಯವಾಗಿ ಚರಿತ್ರೆ) ಸಾಗಣೆಗಾರ; ಪ್ರಯಾಣಿಕರನ್ನೂ ಸರಕುಗಳನ್ನೂ ಒಂದು ವ್ಯಾಪಾರಕೋಠಿಯಿಂದ ಮತ್ತೊಂದಕ್ಕೆ ಸಾಗಿಸುವವನು.
  • (ಕೆನಡಾ) ಅಂಬಿಗ; ದೋಣಿ ನಡೆಸುವವನು.

voyeur

ನಾಮವಾಚಕ

ಲೈಂಗಿಕದರ್ಶನ ತೃಪ್ತ; ಪರರ ಮೈಥುನದ ಯಾ ಜನನಾಂಗಗಳ ದರ್ಶನದಿಂದ, ಲೈಂಗಿಕ ತೃಪ್ತಿ, ಸುಖ ಅನುಭವಿಸುವ ವ್ಯಕ್ತಿ.

voyeurism

ನಾಮವಾಚಕ

ಲೈಂಗಿಕದರ್ಶನ ತೃಪ್ತಿ; ಪರರ ಮೈಥುನದ ಯಾ ಜನನಾಂಗಗಳ ದರ್ಶನದಿಂದ ಲೈಂಗಿಕ ತೃಪ್ತಿ, ಸುಖ ಪಡೆಯುವಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App