भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vulcanize

ಸಕರ್ಮಕ ಕ್ರಿಯಾಪದ

ವಲ್ಕನೀಕರಿಸು; ಗಂಧಕ ಸಂಸ್ಕಾರ ಕೊಡು; ರಬ್ಬರ್‍ ಯಾ ರಬ್ಬರ್‍ನಂಥ ಸಾಮಗ್ರಿಯ ಸ್ಥಿತಿಸ್ಥಾಪಕತ್ವವನ್ನೂ ಬಲವನ್ನೂ ಹೆಚ್ಚಿಸಲು ಮುಖ್ಯವಾಗಿ ಹೆಚ್ಚಿನ ತಾಪದಲ್ಲಿ, ಗಂಧಕ ಮೊದಲಾದವುಗಳಿಂದ ಅದನ್ನು ಸಂಸ್ಕರಿಸು.

vulcanizer

ನಾಮವಾಚಕ

ವಲ್ಕನೀಕಾರಿ; ರಬ್ಬರ್‍ ಮೊದಲಾದ ಸಾಮಗ್ರಿಯನ್ನು ಗಂಧಕ ಮೊದಲಾದವುಗಳಿಂದ ಸಂಸ್ಕರಿಸುವ ವ್ಯಕ್ತಿ ಯಾ ಸಾಧನ.

vulcanological

ಗುಣವಾಚಕ

ಜ್ವಾಲಾಮುಖಿ ವಿಜ್ಞಾನದ.

vulcanologist

ನಾಮವಾಚಕ

ಜ್ವಾಲಾಮುಖಿ ವಿಜ್ಞಾನಿ; ಜ್ವಾಲಾಮುಖಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದವನು.

vulcanology

ನಾಮವಾಚಕ

ಜ್ವಾಲಾಮುಖಿ ವಿಜ್ಞಾನ; ಜ್ವಾಲಾಮುಖಿಯ ವೈಜ್ಞಾನಿಕ ಅಧ್ಯಯನ.

vulgar

ಗುಣವಾಚಕ

ಪದಗುಚ್ಛ

the vulgar tongue (ಹಿಂದೆ ಬಳಕೆಯಲ್ಲಿದ್ದ ಪಂಡಿತಭಾಷೆಯಾದ ಲ್ಯಾಟಿನ್‍ಗೆ ಭಿನ್ನವಾಗಿ) ದೇಸಿ; ದೇಶೀಯ ಭಾಷೆ; ಜನಪದರ, ಜನಸಾಮಾನ್ಯರ ಭಾಷೆ.

  • ಪಾಮರ ಜನತೆಯ; ಜನಸಾಮಾನ್ಯರ.
  • ನಯನಾಜೂಕಿಲ್ಲದ; ಒರಟೊರಟಾದ; ಅಸಂಸ್ಕೃತ; ಗ್ರಾಮ್ಯ; ಅಸಭ್ಯ; ಕೀಳುರೀತಿಯ; ಪ್ರಾಕೃತ: vulgar expressions ಗ್ರಾಮ್ಯ ಪದಗಳು. vulgar mind ಅಸಂಸ್ಕೃತ ಮನಸ್ಸು. vulgar tastes ಕೀಳು, ಹಲ್ಕಾ – ಅಭಿರುಚಿಗಳು. vulgar finery ಒರಟೊರಟಾದ ಅಲಂಕಾರ.
  • ಸಾಮಾನ್ಯ; ಬಳಕೆಯ; ರೂಢಿಯ; ಚಾಲ್ತಿಯಲ್ಲಿರುವ; ಪ್ರಚಲಿತವಾದ: vulgar errors ಸಾಮಾನ್ಯ ದೋಷಗಳು; ರೂಢಿಯ ತಪು ಗಳು.

vulgar fraction

ನಾಮವಾಚಕ

(ಅಂಶ, ಛೇದಗಳನ್ನೊಳಗೊಂಡ, ದಶಮಾಂಶಗಳಿಗೆ ಭಿನ್ನವಾದ) ಸಾಮಾನ್ಯ ಭಿನ್ನರಾಶಿ.

vulgar Latin

ನಾಮವಾಚಕ

= Latin ( ಪದಗುಚ್ಛ 9).

vulgarian

ನಾಮವಾಚಕ

(ಮುಖ್ಯವಾಗಿ ಹಣವಂತನಾದ) ಅಸಂಸ್ಕೃತ ವ್ಯಕ್ತಿ; ಅಸಭ್ಯ; ಪಾಮರ.

vulgarise

ಸಕರ್ಮಕ ಕ್ರಿಯಾಪದ

= vulcanize.

vulgarism

ನಾಮವಾಚಕ

  • ಒರಟುತನ; ಅಸಂಸ್ಕೃತತೆ; ಅಸಭ್ಯತೆ.
  • ಗ್ರಾಮ್ಯ, ಪಾಮರ – ಪದ, ಪ್ರಯೋಗ.

vulgarity

ನಾಮವಾಚಕ

ಕೀಳುತನ; ಹಲ್ಕಾತನ; ಕೀಳು ತರದ ನಡವಳಿಕೆ, ಮಾತು, ಅಲಂಕಾರ, ಮೊದಲಾದವು.

vulgarization

ನಾಮವಾಚಕ

  • ಪಾಮರೀಕರಣ; ಅಸಭ್ಯ, ಅಸಂಸ್ಕೃತ, ಗ್ರಾಮ್ಯ -ಗೊಳಿಸುವಿಕೆ.
  • ಸಾಮಾನ್ಯೀಕರಣ; ಸ್ಥಳ, ಭಾವನೆ, ಮೊದಲಾದವನ್ನು ಜನಸಾಮಾನ್ಯಕ್ಕೆ ಲಭ್ಯವಾಗುವಂತೆ, ಹಿಡಿಸುವಂತೆ ಮಾಡುವಿಕೆ.

vulgarize

ಸಕರ್ಮಕ ಕ್ರಿಯಾಪದ

  • (ವ್ಯಕ್ತಿ, ನಡವಳಿಕೆ, ಮೊದಲಾದವನ್ನು) ಪಾಮರೀಕರಿಸು; ಅಸಭ್ಯ, ಅಸಂಸ್ಕೃತ, ಗ್ರಾಮ್ಯ – ಗೊಳಿಸು.
  • (ಸ್ಥಳ, ಭಾವನೆ, ದೃಶ್ಯ, ಮೊದಲಾದವನ್ನು) ಸಾಮಾನ್ಯೀಕರಿಸು; ಜನಸಾಮಾನ್ಯಕ್ಕೆ ಲಭ್ಯವಾಗುವಂತೆ, ಹಿಡಿಸುವಂತೆ ಮಾಡು.
  • ಕೀಳುಗೊಳಿಸು; ಗುಣ ಮೊದಲಾದವನ್ನು ಕಡಿಮೆ ಮಾಡಿ ಅಗ್ಗವಾಗಿಸು.

vulgarly

ಕ್ರಿಯಾವಿಶೇಷಣ

  • ಗ್ರಾಮ್ಯವಾಗಿ; (ಸುಸಂಸ್ಕೃತ ಪ್ರಯೋಗಕ್ಕೆ ಭಿನ್ನವಾಗಿ) ಅಶುದ್ಧವಾಗಿ.
  • ಕೀಳು, ಹಲ್ಕಾ – ರೀತಿಯಲ್ಲಿ.

Vulgate

ನಾಮವಾಚಕ

  • ವಲ್ಗೇಟ್‍; ಕ್ರಿಸ್ತಶಕ 4ನೆಯ ಶತಮಾನದ ಉತ್ತರಾರ್ಧದಲ್ಲಿ ಮುಖ್ಯವಾಗಿ ಸಂತ ಜೆರೋಮನು ಸಿದ್ಧಗೊಳಿಸಿದ, ಬೈಬಲ್‍ ಗ್ರಂಥದ ಲ್ಯಾಟಿನ್‍ ಪಾಠ.
  • 1592ರಲ್ಲಿ ಪ್ರಕಟಗೊಂಡ, ಬೈಬಲ್‍ನ ಅಧಿಕೃತ ರೋಮನ್‍ ಕ್ಯಾಥೊಲಿಕ್‍ ಲ್ಯಾಟಿನ್‍ ಪಾಠ.
  • (vulgate). (ಯಾವನೇ ಗ್ರಂಥಕರ್ತನ ಗ್ರಂಥದ) ಅಂಗೀಕೃತ ಪಾಠ.
  • (vulgate). ಜನಸಾಮಾನ್ಯರ ಭಾಷೆ; ಆಡುಭಾಷೆ.

vulnerability

ನಾಮವಾಚಕ

    1. ಗಾಯಗೊಳಿಸಲು ಸಾಧ್ಯವಾಗುವಿಕೆ.
    2. (ರೂಪಕವಾಗಿ) ಮನನೋಯಿಸಲು ಸಾಧ್ಯವಾಗುವಿಕೆ.
  • ಶಸ್ತ್ರಭೇದ್ಯತೆ; ಶಸ್ತ್ರಗಳಿಂದ ಘಾಸಿಗೊಳಿಸಲಾಗುವಿಕೆ; ಖಂಡನೀಯತೆ.
  • ಟೀಕೆ, ಖಂಡನೆಗಳಿಂದ ನೋಯಿಸಲಾಗುವಿಕೆ.

vulnerable

ಗುಣವಾಚಕ

    1. ಗಾಯಗೊಳಿಸಬಹುದಾದ.
    2. (ರೂಪಕವಾಗಿ) ಮನನೋಯಿಸಬಹುದಾದ.
  • ಭೇದ್ಯ; ಶಸ್ತ್ರದಿಂದ ಇರಿಯಲಾಗುವ.
  • ಖಂಡನೀಯ; ಟೀಕೆ, ಖಂಡನೆ, ಮೊದಲಾದವಕ್ಕೆ – ಒಳಪಡುವ, ಪಕ್ಕಾಗುವ, ಗುರಿಯಾಗುವ.
  • (ಕಾಂಟ್ರಾಕ್ಟ್‍ ಬ್ರಿಜ್‍ ಆಟ) (ಮೂರರಲ್ಲಿ) ಒಂದು ಆಟ ಮಾತ್ರ ಗೆದ್ದು, ಹೆಚ್ಚಿನ ದಂಡಕ್ಕೆ ಗುರಿಯಾದ.

vulnerableness

ನಾಮವಾಚಕ

= vulnerability.

vulnerably

ಕ್ರಿಯಾವಿಶೇಷಣ

    1. ಗಾಯಗೊಳಿಸಲು ಸಾಧ್ಯವಾಗುವಂತೆ.
    2. ಮನನೋಯಿಸಲಾಗುವಂತೆ.
  • ಶಸ್ತ್ರ, ಟೀಕೆ, ಖಂಡನೆ, ಮೊದಲಾದವಕ್ಕೆ – ಒಳಪಡುವಂತೆ, ಪಕ್ಕಾಗುವಂತೆ, ಈಡಾಗುವಂತೆ.

Search Dictionaries

Loading Results

Follow Us :   
  Download Bharatavani App
  Bharatavani Windows App