भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vulnerary

ನಾಮವಾಚಕ

ಗಾಯವನ್ನು ಮಾಯಿಸುವ ಮೂಲಿಕೆ ಯಾ ಔಷಧ.

vulnerary

ಗುಣವಾಚಕ

ಗಾಯವನ್ನು – ಮಾಯಿಸುವ, ವಾಸಿ ಮಾಡುವ.

vulpine

ಗುಣವಾಚಕ

  • ನರಿಯ; ನರಿಯಂಥ; ನರಿಯ ಸ್ವಭಾವದ.
  • ಕುತಂತ್ರದ; ಕುಯುಕ್ತಿಯ.

vulture

ನಾಮವಾಚಕ

  • ರಣಹದ್ದು; ಗೃಧ್ರ; ಹೆಣ ಬೀಳುವುದಕ್ಕಿಂತ ಮುಂಚೆಯೇ ಒಟ್ಟುಗೂಡುವುವೆನ್ನಲಾದ, ತಲೆಯೂ ಕತ್ತೂ ತುಪ್ಪುಳಿಲ್ಲದೆ ಬೋಳಾಗಿರುವ, ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುವ, ಕತಾರ್ಟಿಡೀ ಯಾ ಆಕ್ಸಿಪಿಟ್ರಿಡೀ ವಂಶಕ್ಕೆ ಸೇರಿದ, ಒಂದು ದೊಡ್ಡ ಮಾಂಸಾಹಾರಿ ಹಿಂಸ್ರ ಪಕ್ಷಿ. Figure: vulture
  • (ರೂಪಕವಾಗಿ) ರಣಹದ್ದು; ಕ್ರೂರಿಯೂ ಹಿಂಸಕನೂ ಆದ ವ್ಯಕ್ತಿ.

vulturine

ಗುಣವಾಚಕ

  • ರಣಹದ್ದಿನ.
  • ರಣಹದ್ದಿನ ಸ್ವಭಾವದ; ಕ್ರೂರಿಯೂ ಹಿಂಸಕನೂ ಆದ.

vulturish

ಗುಣವಾಚಕ

= vulturine\((2)\).

vulturous

ಗುಣವಾಚಕ

= vulturish.

vulva

ನಾಮವಾಚಕ

(ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ) ತುಲ್ಲು(ಮುಖ್ಯವಾಗಿ ತುಲ್ಲಿನ ಬಾಯಿ); ಯೋನಿ(ದ್ವಾರ); ಉಪಸ್ಥೆ.

vulvar

ಗುಣವಾಚಕ

ತುಲ್ಲಿನ; ಯೋನಿಯ; ಉಪಸ್ಥೆಯ.

vulvitis

ನಾಮವಾಚಕ

ತುಲ್ಲಿನ, ಉಪಸ್ಥೆಯ – ಉರಿಯೂತ.

vv.

ಸಂಕ್ಷಿಪ್ತ

  • verses.
  • volumes.

vying

ಕ್ರಿಯಾಪದ

vie ಪದದ ವರ್ತಮಾನ ಕೃದಂತರೂಪ.

Search Dictionaries

Loading Results

Follow Us :   
  Download Bharatavani App
  Bharatavani Windows App