भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

vambrace

ನಾಮವಾಚಕ

(ಚರಿತ್ರೆ) (ಮಧ್ಯಯುಗದಲ್ಲಿ ಯೋಧರು ಆತ್ಮರಕ್ಷಣೆಗಾಗಿ ತೊಡುತ್ತಿದ್ದ) ಮುಂದೋಳಿನ ಉಕ್ಕಿನ ಕಾಪು; ಪ್ರಕೋಷ್ಠ ಕವಚ.

vamoose

ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಭಾವಸೂಚಕ ಅವ್ಯಯವಾಗಿ) (ಅಶಿಷ್ಟ) ಬಿರಬಿರನೆ ತೊಲಗಿಹೋಗು.

vamp

ನಾಮವಾಚಕ

 • (ಬಊಟಿನ ಯಾ ಷೂನ) ಮೇಲ್ಭಾಗದ ಮುಂತುದಿ.
 • ತೇಪೆಹಾಕಿದ (ಯಾವುದೇ) ವಸ್ತು.
 • (ಸಂಗೀತ) ತತ್ಕಾಲಕ್ಕೆ ಒದಗಿಸಿದ ಯಾ ಹೊಂದಿಸಿದ ಪಕ್ಕವಾದ್ಯ.

vamp

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ತಾತ್ಕಾಲಿಕ ಪಕ್ಕವಾದ್ಯವನ್ನು – ಏರ್ಪಾಡು ಮಾಡು, ಒದಗಿಸು ( ಸಕರ್ಮಕ ಕ್ರಿಯಾಪದ ಸಹ).

 • (ಬಊಟಿಗೆ ಯಾ ಷೂಗೆ) ಮೇಲ್ಚರ್ಮದ ಮುಂತುದಿಯನ್ನು ಹೊಲಿ.
 • (ಯಾವುದನ್ನೇ ಆಗಲಿ) ತೇಪೆ ಹಾಕಿ ರಿಪೇರಿ ಮಾಡು.
 • ಅಗತ್ಯವಾದ ವಸ್ತುವನ್ನು (ಚೂರುಪಾರು ಸೇರಿಸಿ ಯಾ ತೇಪೆ ಹಾಕಿ) ತಯಾರಿಸಿಕೊ.

vamp

ನಾಮವಾಚಕ

 • ಮಾಯಗಾತಿ; ಮಾಯಾವಿನಿ; ಪುರುಷರನ್ನು ಮರುಳುಗೊಳಿಸಿ ಬದುಕುವವಳು.
 • ಯಾವುದಕ್ಕೂ ಹೇಸದ, ಲಜ್ಜೆಗೆಟ್ಟ ಹುಡುಗಿ, ಬಜಾರಿ.

vamp

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಹೆಂಗುಸಿನ ವಿಷಯದಲ್ಲಿ) ವ್ಯಾಮೋಹಗೊಳಿಸು; ಮಾಯೆ ಬೀರು; ಮರುಳುಗೊಳಿಸು; ಕಾಮಚೇಷ್ಟೆಗಳಿಂದ ಪುರುಷನನ್ನು ವಶಪಡಿಸಿಕೊ. ಮಾಯಗಾತಿಯಾಗಿ, ಮಾಯಾವಿನಿಯಾಗಿ – ವರ್ತಿಸು.

vampire

ನಾಮವಾಚಕ

 • ರಕ್ತಪಿಶಾಚಿ:
  1. ಮಾಟಗಾರ, ಪಾಷಂಡ, ಅಪರಾಧಿ, ಮೊದಲಾದವರ, ಸಮಾಧಿಯಿಂದ ರಾತ್ರಿಯ ವೇಳೆಯಲ್ಲಿ ಹೊರಬಂದು ನಿದ್ರಿಸುತ್ತಿರುವವರ ರಕ್ತವನ್ನು ಹೀರುತ್ತದೆಯೆಂದು ನಂಬಲಾದ ಪಿಶಾಚಿ.
  2. (ದಯಾದಾಕ್ಷಿಣ್ಯವಿಲ್ಲದೆ ಪರಾವಲಂಬಿಯಾಗಿ ಆಶ್ರಯದಾತರ ರಕ್ತವನ್ನೇ ಹೀರುವ) ಪರತಂತ್ರ ಜೀವಿ.
 • = vampire bat.
 • (ರಂಗಭೂಮಿ) (ಪಾತ್ರಗಳು ಏಕಾಏಕಿ ಅದೃಶ್ಯವಾಗಲು ಕಲ್ಪಿಸಿರುವ, ಸ್ಪ್ರಿಂಗನ್ನು ಒತ್ತುವುದರಿಂದ ತೆರೆದು ಮುಚ್ಚಿಕೊಳ್ಳುವ) ಕಳ್ಳ – ಕದ, ಬಾಗಿಲು.

vampire bat

ನಾಮವಾಚಕ

(ದನಕರುಗಳು, ಕುದುರೆಗಳು, ನಿದ್ರಿಸುತ್ತಿರುವ ಮನುಷ್ಯರು, ಇವರನ್ನು ಕಚ್ಚಿ ರಕ್ತ ಹೀರುವ ಯಾ ಹೀರುವುದೆನ್ನಲಾದ, ದಕ್ಷಿಣ ಅಮೆರಿಕ ಮೊದಲಾದ ದೇಶಗಳ) ರಕ್ತಹೀರುವ ಬಾವಲಿ.

vampiric

ಗುಣವಾಚಕ

ರಕ್ತಪಿಶಾಚಿಯಂತೆ ವರ್ತಿಸುವ; ರಕ್ತ ಹೀರುವ.

vampirism

ನಾಮವಾಚಕ

 • ರಕ್ತಪಿಶಾಚಿಗಳನ್ನು ಕುರಿತ ನಂಬಿಕೆ.
 • ರಕ್ತಪಿಶಾಚಿತನ; ರಕ್ತಹೀರುವ ಸ್ವಭಾವ, ವರ್ತನೆ.

vamplate

ನಾಮವಾಚಕ

(ಚರಿತ್ರೆ) ಕೈಕಾಪು; ಕರಕವಚ; ಮಧ್ಯಯುಗದ ಯೋಧರು ಭರ್ಜಿ ಈಟಿಗಳ ತಿವಿತ ತಪ್ಪಿಸಿಕೊಳ್ಳಲು ಬಳಸುತ್ತಿದ್ದ, ಉಕ್ಕಿನ ಕೈಮುಸುಕು.

van

ನಾಮವಾಚಕ

 • ಅದುರು ಪರೀಕ್ಷೆ; ಪಿಕಾಸಿಯ ಎಲೆಯ ಮೇಲೆ ಯಾ ಯಂತ್ರದ ನೆರವಿನಿಂದ ಅದುರನ್ನು ತೊಳೆದು, ಅದರ ಗುಣಮಟ್ಟವನ್ನು ಪರೀಕ್ಷಿಸುವುದು.
 • (ಪ್ರಾಚೀನ ಪ್ರಯೋಗ) (ಧಾನ್ಯವನ್ನು, ಕಾಳನ್ನು) ತೂರುವ ಮೊರ.
 • (ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ರೆಕ್ಕೆ.

van

ನಾಮವಾಚಕ

 • = vanguard.
 • ಮುಂಭಾಗ; ಅಗ್ರ; ಮುಂಚೂಣಿ: in the van of progress ಪ್ರಗತಿಯ ಮುಂಚೂಣಿಯಲ್ಲಿ.

van

ನಾಮವಾಚಕ

 • (ಪೀಠೋಪಕರಣಗಳು ಯಾ ಬೇರೆ ಸಾಮಾನುಗಳು, ಕುದುರೆಗಳು ಮೊದಲಾದ ಪ್ರಾಣಿಗಳು, ಕೈದಿಗಳು, ಮೊದಲಾದವರನ್ನು ಸಾಗಿಸುವ) ಮುಚ್ಚುಬಂಡಿ; ವ್ಯಾನು.
 • (ಬ್ರಿಟಿಷ್‍ ಪ್ರಯೋಗ)(ಪ್ರಯಾಣಿಕರ ಸರಕು, ಸಾಮಾನುಗಳನ್ನು ಸಾಗಿಸುವ) ರೈಲು – ಗಾಡಿ, ಬಂಡಿ, ಡಬ್ಬಿ; ಲಗೇಜ್‍ ವ್ಯಾನು.
 • (ಬ್ರಿಟಿಷ್‍ ಪ್ರಯೋಗ) ರೈಲ್ವೆ ಗಾರ್ಡಿನ ಗಾಡಿ, ಬಂಡಿ, ಡಬ್ಬಿ.
 • ಜಿಪ್ಸಿಗಳ ಸಂಚಾರಿ ಗಾಡಿ ಮೊದಲಾದವು; ಯೂರೋಪಿನ ದೇಶಗಳಲ್ಲಿ ವಾಸಿಸುತ್ತಿದ್ದ, ಜಿಪ್ಸಿಗಳೆಂಬ ಹೆಸರಿನ ಅಲೆಮಾರಿಗಳು ಸ್ಥಳದಿಂದ ಸ್ಥಳಕ್ಕೆ ಸಂಚರಿಸಿ, ಒಂದೆಡೆ ತಂಗಲು ಬಳಸುತ್ತಿದ್ದ ಸಾಲುಗಾಡಿಗಳಲ್ಲೊಂದು.

van

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಟೆನಿಸ್‍ ಆಡುಮಾತು) = $^1$advantage(3)(ಸಂಕ್ಷಿಪ್ತ).

Van Allen belt

ನಾಮವಾಚಕ

ವ್ಯಾನ್‍ ಅಲೆನ್‍ – ಪಟ್ಟಿ, ವಲಯ; ಭೂಮಿಯಿಂದ ಮೇಲ್ಗಡೆ ಹಲವು ಸಾವಿರ ಕಿಲೋಮೀಟರ್‍ ಎತ್ತರದಲ್ಲಿರುವ, ಭೂಮಿಯನ್ನು ಭಾಗಶಃ ಸುತ್ತುವರೆದಿರುವ, ತೀಕ್ಷ್ಣ ವಿಕಿರಣಗಳಿಂದ ಕೂಡಿದ, ಎರಡು ವಲಯಗಳ ಪೈಕಿ ಒಂದು.

Van Allen layer

ನಾಮವಾಚಕ

= Van Allen belt.

van de Graaff generator

ನಾಮವಾಚಕ

(ವಿದ್ಯುದ್ವಿಜ್ಞಾನ) ವ್ಯಾನ್‍ ಡ ಗ್ರಾಹ್‍ ಉತ್ಪಾದಕ; ಅಧಿಕ ವೋಲ್ಟತೆಯಲ್ಲಿ ವಿದ್ಯುದ್ವಿಸರ್ಜನೆಯನ್ನು ಉತ್ಪಾದಿಸುವುದಕ್ಕಾಗಿ, ತುದಿಯಿಲ್ಲದ ಶೃಂಗೀಯಪಟ್ಟಿಯೊಂದರ ನೆರವಿನಿಂದ ವಿದ್ಯುದಾವೇಶವನ್ನು ನಿರೋಧಿತ (insulated) ಲೋಹಗುಮ್ಮಟ ಒಂದಕ್ಕೆ ವರ್ಗಾಯಿಸುವ ಯಂತ್ರ.

van der Waals forces

ನಾಮವಾಚಕ

ವ್ಯಾನ್‍ ಡರ್‍ ವಾಲ್ಸ್‍ನ ಬಲಗಳು; ಅನಾವಿಷ್ಟ ಪರಮಾಣುಗಳ ಯಾ ಅಣುಗಳ ನಡುವೆ ಕಾಬರುವ, ದ್ವಿಧ್ರುವ ಮಹತ್ತ್ವ (moment) ಗಳ ಅಂತರಕ್ರಿಯೆಯ ಪರಿಣಾಮವಾಗಿ ಉದ್ಭವಿಸುವ ದುರ್ಬಲವಾದ ಆಕರ್ಷಣ ಬಲಗಳು.

vanadate

ನಾಮವಾಚಕ

(ರಸಾಯನವಿಜ್ಞಾನ) ವೆನಡೇಟ್‍; ವೆನೇಡಿಕ್‍ ಆಮ್ಲದ ಲವಣ.

Search Dictionaries

Loading Results

Follow Us :   
  Download Bharatavani App
  Bharatavani Windows App