English-Kannada Nighantu (University of Mysore)
University of Mysore
V
ಸಂಕ್ಷಿಪ್ತ
(V. ಸಹ) volt(s).
V v
ನಾಮವಾಚಕ
- ಇಂಗ್ಲಿಷ್ ವರ್ಣಮಾಲೆಯ ಇಪ್ಪತ್ತೆರಡನೆಯ ಅಕ್ಷರ.
- ಮರ ಮೊದಲಾದವುಗಳ ಪಟ್ಟಿಗಳ V ಆಕಾರದ ಜೋಡಣೆ.
- V ಆಕಾರದ ವಸ್ತು.
- ರೋಮನ್ ಸಂಖ್ಯಾ ಸಂಕೇತದಲ್ಲಿ ಐದು.
V-2
ನಾಮವಾಚಕ
ವೀಟೂ; (1939-45ರ ಯುದ್ಧದಲ್ಲಿ ಬಳಸಿದ) ರಾಕೆಟ್ಚಾಲಿತ, ಒಂದು ವಿಧದ ಜರ್ಮನ್ ಕ್ಷಿಪಣಿ.
V-neck
ನಾಮವಾಚಕ
(ಕೆಲವೊಮ್ಮೆ ವಿಶೇಷಣವಾಗಿ) ವೀ – ನೆಕ್, ಕತ್ತು:
- ಉಡುಪಿನಲ್ಲಿ V ಆಕಾರದ ಕತ್ತು.
- V ಕತ್ತಿರುವ ಉಡುಪು.
V-sign
ನಾಮವಾಚಕ
- V – ಸನ್ನೆ; ತಿರಸ್ಕಾರ, ಕೀಳು ರೀತಿಯ ಅಪಹಾಸ್ಯ, ಮೊದಲಾದವುಗಳನ್ನು ಸೂಚಿಸಲು ಮೊದಲೆರಡು ಬೆರಳುಗಳನ್ನು ಅಗಲಿಸಿ ಕೈಯ ಹಿಂಭಾಗವನ್ನು ಹೊರತೋರಿಸುವ V ಆಕಾರದ ಸನ್ನೆ.
- V – ಸನ್ನೆ, ಸಂಕೇತ; ವಿಜಯವನ್ನು ಸೂಚಿಸಲು ತೋರುಬೆರಳು ಮತ್ತು ಮಧ್ಯಬೆರಳುಗಳನ್ನು ಅಗಲಿಸಿ, ಉಳಿದ ಬೆರಳುಗಳನ್ನು ಮಡಿಚಿ, ಅಂಗೈಯನ್ನು ಹೊರಕಾಣುವಂತೆ ತೋರಿಸುವ V ಆಕಾರದ ಸಂಕೇತ.
v.
ಸಂಕ್ಷಿಪ್ತ
- verse.
- verso.
- versus.
- very.
- vide.
V.
ಸಂಕೇತ
(ರಸಾಯನವಿಜ್ಞಾನ) vanadium.
V. & A.
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) (ಲಂಡನ್ನಿನ) Victoria matutx Albert Museum.
v.l.
ಸಂಕ್ಷಿಪ್ತ
ಪಾಠಾಂತರ; ಪಾಠಭೇದ (varia lectio ಎಂಬ ಲ್ಯಾಟಿನ್ ಪದದಿಂದ).
VA
ಸಂಕ್ಷಿಪ್ತ
- (ಅಮೆರಿಕನ್ ಪ್ರಯೋಗ) Veterans’ Administration.
- Vicar Apostolic.
- Vice Admiral.
- (ಅಮೆರಿಕನ್ ಪ್ರಯೋಗ) Virginia (ಅಂಚೆ ಬಳಕೆಯಲ್ಲಿ).
- United Kingdomಯಲ್ಲಿ (Order of Victoria and Albert).
Va.
ಸಂಕ್ಷಿಪ್ತ
Virginia.
vac
ನಾಮವಾಚಕ
(ಬ್ರಿಟಿಷ್ ಪ್ರಯೋಗ)(ಆಡುಮಾತು) (ಮುಖ್ಯವಾಗಿ ವಿಶ್ವವಿದ್ಯಾನಿಲಯಗಳ) vacation (ಸಂಕ್ಷಿಪ್ತ).
vacancy
ನಾಮವಾಚಕ
- ಬರಿದಾಗಿರುವಿಕೆ; ಖಾಲಿಯಾಗಿರುವಿಕೆ.
- ಶೂನ್ಯಮನಸ್ಕತೆ; ಜಡಮನಸ್ಕತೆ; ಮನಸ್ಸಿನ ನಿಷ್ಕ್ರಿಯ ಸ್ಥಿತಿ.
- ಖಾಲಿ ಹುದ್ದೆ ಯಾ ಸ್ಥಾನ: he has no vacancy on his staff ಆತನ ಸಿಬ್ಬಂದಿ ವರ್ಗದಲ್ಲಿ ಯಾವ ಖಾಲಿ ಸ್ಥಾನವೂ ಇಲ್ಲ. no vacancies at present in this office ಸದ್ಯದಲ್ಲಿ ಈ ಕಚೇರಿಯಲ್ಲಿ ಯಾವ ಹುದ್ದೆಗಳೂ ಖಾಲಿ ಇಲ್ಲ.
- (ಹೋಟೆಲು ಮೊದಲಾದವುಗಳಲ್ಲಿ) ಲಭ್ಯವಿರುವ ಖಾಲಿ ಕೋಣೆ, ರೂಮು.
vacant
ಗುಣವಾಚಕ
- ಬರಿದಾಗಿರುವ; ಖಾಲಿ(ಯಾಗಿರುವ); ಭರ್ತಿಯಾಗಿಲ್ಲದ: the house is still vacant ಆ ಮನೆ ಇನ್ನೂ ಖಾಲಿ ಇದೆ.
- ಬಿಡುವಾಗಿರುವ; ಯಾವ ಕೆಲಸವೂ ಇಲ್ಲದೆ ವಿರಾಮವಾಗಿರುವ: this will amuse your vacant hours ನಿನ್ನ ಬಿಡುವಾದ, ವಿರಾಮದ, ಹೊತ್ತಿನಲ್ಲಿ ಇದು ನಿನಗೆ ವಿನೋದವನ್ನು ಕೊಡುತ್ತದೆ.
- ತೆರಪಾಗಿರುವ; ಖಾಲಿ ಇರುವ: he applied for a vacant post ಅವನು ತೆರಪಾಗಿದ್ದ, ಖಾಲಿ ಇದ್ದ, ಒಂದು ಹುದ್ದೆಗಾಗಿ ಅರ್ಜಿ ಹಾಕಿಕೊಂಡ.
- ಶೂನ್ಯಮನಸ್ಕನಾದ; ವಿಚಾರ, ಭಾವ – ಶೂನ್ಯ ಆದ; ನಿಷ್ಕ್ರಿಯ, ಜಡ – ಮನಸ್ಕನಾದ: his mind seems completely vacant ಅವನು ಸಂಪೂರ್ಣವಾಗಿ ಶೂನ್ಯಮನಸ್ಕನಂತಿದ್ದಾನೆ. a vacant stare ಶೂನ್ಯದೃಷ್ಟಿ; ಗಮನಕ್ಕೆ ತೆಗೆದುಕೊಳ್ಳದೆ ನೆಟ್ಟ ದೃಷ್ಟಿಯಿಂದ ಎಲ್ಲೋ ನೋಡುತ್ತಿರುವುದು.
vacant position
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಖಾಲಿ ಸ್ವತ್ತು ಸ್ವಾಧೀನ; ಹಿಂದೆ ವಾಸವಾಗಿದ್ದವರು ಬಿಟ್ಟುಹೋಗಿದ್ದರಿಂದ ಖಾಲಿಯಾದ ಮನೆ ಮೊದಲಾದವುಗಳನ್ನು ಆಕ್ರಮಿಸಿಕೊಳ್ಳುವುದು, ಸ್ವಾಧೀನಪಡಿಸಿಕೊಳ್ಳುವುದು.
vacatable
ಗುಣವಾಚಕ
- (ಜಾಗ, ಮನೆ, ಹುದ್ದೆ, ಮೊದಲಾದವನ್ನು) ಖಾಲಿ ಮಾಡಲಾಗುವ; ತೆರಪು ಮಾಡಲಾಗುವ.
- (ಹಿಂದಿನ ತೀರ್ಪು ಮೊದಲಾದವುಗಳ ವಿಷಯದಲ್ಲಿ) ರದ್ದು ಮಾಡಬಹುದಾದ.
vacate
ಸಕರ್ಮಕ ಕ್ರಿಯಾಪದ
- (ಮನೆ, ಕೋಣೆ, ಮೊದಲಾದವನ್ನು) ಖಾಲಿಮಾಡು; ಬಿಟ್ಟುಹೋಗು.
- (ಸ್ಥಾನ, ಹುದ್ದೆ, ಮೊದಲಾದವುಗಳ) ಅಧಿಕಾರವನ್ನು, ಅನುಭೋಗವನ್ನು – ತೊರೆ, ತ್ಯಜಿಸು, ಬಿಡು.
- (ನ್ಯಾಯಶಾಸ್ತ್ರ) (ಹಿಂದಿನ ತೀರ್ಪು, ಒಪ್ಪಂದ, ಮೊದಲಾದವನ್ನು) ರದ್ದುಮಾಡು.
vacation
ನಾಮವಾಚಕ
- (ಮನೆ, ಹುದ್ದೆ, ಮೊದಲಾದವನ್ನು) ತೆರಪು, ಖಾಲಿ – ಮಾಡುವಿಕೆ.
- (ವಿಶ್ವವಿದ್ಯಾನಿಲಯಗಳು, ನ್ಯಾಯಾಲಯಗಳು, ಮೊದಲಾದವಕ್ಕೆ ವರ್ಷೇವರ್ಷೇ ಕೊಡುವ) ದೀರ್ಘಾವಧಿ ಯಾ ವಾರ್ಷಿಕ ರಜ: ಕ್ರಿಸ್ಮಸ್, ಈಸ್ಟರ್, ಮೊದಲಾದ(ದೀರ್ಘಾವಧಿ) ರಜ.
- (ಅಮೆರಿಕನ್ ಪ್ರಯೋಗ) ದೀರ್ಘಾವಧಿ ರಜ ಯಾ ಅಂಥ ರಜಾಕಾಲದ ವಿಹಾರ.
vacation
ಅಕರ್ಮಕ ಕ್ರಿಯಾಪದ
(ಅಮೆರಿಕನ್ ಪ್ರಯೋಗ) ರಜಾಕಾಲದಲ್ಲಿ ವಿಹಾರ ಮಾಡು, ವಿಹರಿಸು.
vacation land
ನಾಮವಾಚಕ
(ಅಮೆರಿಕನ್ ಪ್ರಯೋಗ) (ರಜಾಕಾಲದ ವಿಹಾರಾರ್ಥಿಗಳಿಗಾಗಿಯೇ ಅನುಕೂಲ ಕಲ್ಪಿಸಿರುವ) ವಿಹಾರಪ್ರದೇಶ; ವಿಹಾರದಾಣ.