भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wrongful

ಗುಣವಾಚಕ

  • ನ್ಯಾಯಬಾಹಿರ; ಕಾನೂನಿಗೆ ವಿರುದ್ಧವಾದ.
  • ಅನ್ಯಾಯವಾದ; ಅನುಚಿತ; ಅಯುಕ್ತ.
  • ಯೋಗ್ಯನಲ್ಲದ; ಅರ್ಹನಲ್ಲದ.

wrongfully

ಕ್ರಿಯಾವಿಶೇಷಣ

  • ನ್ಯಾಯಬಾಹಿರವಾಗಿ; ಕಾನೂನಿಗೆ ವಿರುದ್ಧವಾಗಿ.
  • ಅನ್ಯಾಯ ವಾಗಿ; ಅನುಚಿತವಾಗಿ.

wrongfulness

ನಾಮವಾಚಕ

  • ನ್ಯಾಯಬಾಹಿರತೆ; ಕಾನೂನುಬಾಹಿರತೆ.
  • ಅನ್ಯಾಯದ ಸ್ಥಿತಿ; ಅನುಚಿತವಾಗಿರುವ ಸ್ಥಿತಿ.

wrongly

ಕ್ರಿಯಾವಿಶೇಷಣ

ತಪ್ಪಾಗಿ; ಅನ್ಯಾಯವಾಗಿ; ಅನುಚಿತವಾಗಿ; ತಕ್ಕುದಲ್ಲದ ರೀತಿಯಲ್ಲಿ; ತಪ್ಪು ಕಲ್ಪನೆಯಿಂದ.

wrongness

ನಾಮವಾಚಕ

ತಪ್ಪಾಗಿರುವುದು; ಅನ್ಯಾಯವಾಗಿರುವುದು; ಅನೌಚಿತ್ಯ.

wrote

ಕ್ರಿಯಾಪದ

write ಧಾತುವಿನ ಭೂತರೂಪ.

wroth

ಗುಣವಾಚಕ

(ರೂಪಕವಾಗಿಕಾವ್ಯಪ್ರಯೋಗ, ಹಾಸ್ಯ ಪ್ರಯೋಗ) (ಪ್ರಾಚೀನ ಪ್ರಯೋಗ) ಕೋಪಗೊಂಡ; ಕುಪಿತ; ಸಿಟ್ಟಿಗೆದ್ದ.

wrought

ಕ್ರಿಯಾಪದ

(ಪ್ರಾಚೀನ ಪ್ರಯೋಗ) work ಕ್ರಿಯಾಪದದ ಭೂತರೂಪ ಮತ್ತು ಭೂತಕೃದಂತ ರೂಪ.

wrought

ಗುಣವಾಚಕ

(ಲೋಹಗಳ ವಿಷಯದಲ್ಲಿ) ಸುತ್ತಿಗೆಯಿಂದ ತಟ್ಟಿದ ಯಾ ಆಕಾರ ಕೊಟ್ಟ.

wrought iron

ನಾಮವಾಚಕ

ಮೆತು ಕಬ್ಬಿಣ; ಕಾಯಿಸಿ ಬಡಿದು ಆಕಾರ ಕೊಡಬಹುದಾದ ಯಾ ಲಟ್ಟಿಸಿ ಸಪಾಟು ಮಾಡಬಹುದಾದ, ಆದರೆ ಎರಕ ಹೊಯ್ಯಲಾಗದ, ಗಡುಸಾದ, ತಗಡಾಗಿ ಬಡಿಯಬಹುದಾದ, ಕಬ್ಬಿಣದ ಒಂದು ರೂಪ.

wrung

ಕ್ರಿಯಾಪದ

wring ಕ್ರಿಯಾಪದದ ಭೂತಕೃದಂತ.

WRVS

ಸಂಕ್ಷಿಪ್ತ

( ಬ್ರಿಟಿಷ್‍ ಪ್ರಯೋಗ ) Women’s Royal Voluntary Service.

wry

ಗುಣವಾಚಕ

ಪದಗುಚ್ಛ

wry face (ಅಸಹ್ಯಸೂಚಕ) ಹುಳಿ ಮೋರೆ ಯಾ ವಕ್ರ ಮುಸುಡಿ.

  • ತಿರುಚಿದ; ವಕ್ರ; ಸೊಟ್ಟ; ಒಂದು ಕಡೆಗೆ ತಿರುಗಿಕೊಂಡ.
  • (ಮುಖ, ನಗು, ಮೊದಲಾದವುಗಳ ವಿಷಯದಲ್ಲಿ) (ಜುಗುಪ್ಸೆ, ನಿರಾಶೆ ಯಾ ಅಣಕದಿಂದ) ಸೊಟ್ಟಾದ; ವಕ್ರ; ತಿರುಚಿದ.
  • (ಹಾಸ್ಯದ ವಿಷಯದಲ್ಲಿ) ನಿರ್ಭಾವುಕವಾಗಿ ಸೂಕ್ಷ ವಾದ.

wrybill

ನಾಮವಾಚಕ

ನ್ಯೂಸಿಲೆಂಡಿನ ಒಂದು ಜಾತಿಯ ಹಕ್ಕಿ.

wryly

ಕ್ರಿಯಾವಿಶೇಷಣ

  • ಸೊಟ್ಟನಾಗಿ; ವಕ್ರವಾಗಿ.
  • ನಿರ್ಭಾವುಕವಾಗಿ.

wryneck

ನಾಮವಾಚಕ

  • = torticollis.
  • ಭುಜಗಳ ಮೇಲೆ ಕತ್ತು ತಿರುಗಿಸಬಲ್ಲ, ಮರಕುಟಕ ಜಾತಿಯ, ಜಂಕ್ಸ್‍ ಕುಲದ ಹಕ್ಕಿ.

wryness

ನಾಮವಾಚಕ

ನಿರ್ಭಾವುಕತೆ; ವಕ್ರತನ.

WSW.

ಸಂಕ್ಷಿಪ್ತ

west-south-west.

wt.

ಸಂಕ್ಷಿಪ್ತ

weight.

Wu

ನಾಮವಾಚಕ

ಕಿಯಾಂಗ್ಸು ಮತ್ತು ಚೆಕಿಯಾಂಗ್‍ ಪ್ರಾಂತಗಳ ಚೀಣೀ ಭಾಷೆ.

Search Dictionaries

Loading Results

Follow Us :   
  Download Bharatavani App
  Bharatavani Windows App