भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wackily

ಕ್ರಿಯಾವಿಶೇಷಣ

ಐಲುಪೈಲಾಗಿ; ತಿಕ್ಕಲುತಿಕ್ಕಲಾಗಿ.

wackiness

ನಾಮವಾಚಕ

ಐಲುಪೈಲು; ತಿಕ್ಕಲು.

wacko

ಗುಣವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ತಿಕ್ಕಲು; ಐಲುಪೈಲಾದ.

wacko

ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) (ಬಹುವಚನ wackos ಯಾ wackoes). ತಿಕ್ಕಲ; ಐಲು ವ್ಯಕ್ತಿ.

wacky

ಗುಣವಾಚಕ

(ಅಶಿಷ್ಟ) ಐಲುಪೈಲಾದ; ತಿಕ್ಕಲು ತಿಕ್ಕಲಾದ.

wacky

ನಾಮವಾಚಕ

(ಅಶಿಷ್ಟ) ಐಲುಪೈಲು ವ್ಯಕ್ತಿ; ತಿಕ್ಕಲ ಯಾ ತಿಕ್ಕಲಿ.

wad

ನಾಮವಾಚಕ

    1. (ವಸ್ತುಗಳನ್ನು ಪ್ರತ್ಯೇಕಿಸಿಡುವುದು ಯಾ ಅವುಗಳ ಸ್ಥಾನದಲ್ಲೇ ಇಡುವುದು, ಕಂಡಿಯನ್ನು ಮುಚ್ಚುವುದು, ಮೊದಲಾದವುಕ್ಕಾಗಿ ಬಳಸುವ ಮೆದು ಪದಾರ್ಥದ) ಅಡಚು; ಗಿಡುಗು; ಸಿಂಬಿ; ಮೆತ್ತೆ.
    2. (ಮುಖ್ಯವಾಗಿ ಫಿರಂಗಿಯಲ್ಲಿ ಮದ್ದನ್ನೋ ಗುಂಡನ್ನೋ ಸರಿಯಾದ ಸ್ಥಾನದಲ್ಲಿಡುವುದಕ್ಕಾಗಿ ಅಡಚುವ ಹೆಲ್ಟ್‍ ಮೊದಲಾದವುಗಳ) ಮೆದು – ಬಿರಡೆ, ಬಿಲ್ಲೆ.
  • ನೋಟುಗಳ – ಸುರುಳಿ, ಕಟ್ಟು, ಕಂತೆ, ಹಣ.
  • (ಏಕವಚನ ಯಾ ಬಹುವಚನದಲ್ಲಿ) (ಮುಖ್ಯವಾಗಿ ಹಣದ) ದೊಡ್ಡ ಮೊತ್ತ; ಭಾರಿಪ್ರಮಾಣ; ರಾಶಿ.
  • (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಬನ್ನು, ಸ್ಯಾಂಡ್ವಿಚ್‍, ಮೊದಲಾದವು.

wad

ಸಕರ್ಮಕ ಕ್ರಿಯಾಪದ

  • (ಹತ್ತಿ ಮೊದಲಾದವನ್ನು) ಮೆತ್ತೆಯಾಗಿ ದಟ್ಟಿಸು; ಮೆತ್ತೆಮಾಡು.
  • (ಉಡುಪು, ಹೊದಿಕೆ, ಮೊದಲಾದವಕ್ಕೆ) ಒಳಮೆತ್ತೆ ಹಾಕು; ಅಸ್ತರಿಹಾಕು.
  • (ಮೈ, ಗೋಡೆಗಳು, ಮೊದಲಾದವನ್ನು ರಕ್ಷಿಸಲು) ಮೆತ್ತೆಯನ್ನು ಅಳವಡಿಸು, ಹಾಕು; ರಕ್ಷಾಕವಚ ಹಾಕು.
  • (ಕಂಡಿ, ಫಿರಂಗಿ ಕೊಳವೆ, ಮೊದಲಾದವನ್ನು ಗಿಡಿಯಿಂದ) ಅಡಚು; ಮುಚ್ಚು.
  • (ಫಿರಂಗಿಯಲ್ಲಿ ಮದ್ದು ಮೊದಲಾದವನ್ನು ಅದರ ಸ್ಥಾನದಲ್ಲಿರುವಂತೆ, ಗಿಡಿಯಿಂದ) ಅಡಚು.

wadable

ಗುಣವಾಚಕ

(ಕಾಲಿಂದ) ಹಾಯಬಹುದಾದ; ಹಾಯಲಾಗುವ; ಹಾಯಲು ಸಾಧ್ಯವಾದ.

wadding

ನಾಮವಾಚಕ

  • (ಉಡುಪಿಗೆ ಅಸ್ತರಿಯಾಗಿ ರಜಾಯಿಗೆ ಗಿಡಿಯಾಗಿ ಯಾ ಸೂಕ್ಷ್ಮವಸ್ತುಗಳನ್ನು ಸುತ್ತಿಡಲು ಬಳಸುವ) ಹತ್ತಿ ಮೊದಲಾದ ಪದಾರ್ಥ.
  • (ಫಿರಂಗಿಯ ಅಡಚನ್ನು ಮಾಡಲು ಬಳಸುವ) ಮೆದುವಸ್ತು; ಫಿರಂಗಿಯ ಮೆದುಗಿಡಿ.

waddle

ಅಕರ್ಮಕ ಕ್ರಿಯಾಪದ

(ಠೊಣಪನಿಗೆ ಸಹಜವಾದಂತೆ, ವರಟೆ, ಬಾತು, ಮೊದಲಾದ ಕಿಸುಗಾಲಿನ ಯಾ ಮೋಟುಗಾಲಿನ ಹಕ್ಕಿಯಂತೆ) ಒಲೆದಾಡುತ್ತ, ತೂಗಾಡುತ್ತ, ಜೂಗಾಡುತ್ತ, ಜಗ್ಗುತ್ತಾ – ನಡೆ.

waddle

ನಾಮವಾಚಕ

ಅಡ್ಡ – ತೂಗಾಟದ, ಜೂಗಾಟದ ನಡಗೆ; ಜೂಗಾಟ.

waddler

ನಾಮವಾಚಕ

ತೂಗಾಡುತ್ತಾ ನಡೆಯುವವ.

waddy

ನಾಮವಾಚಕ

  • (ಬಹುವಚನ waddies). ಆಸ್ಟ್ರೇಲಿಯದ ಮೂಲನಿವಾಸಿಗಳ ಗದೆ; ಯುದ್ಧದ ದೊಣ್ಣೆ.
  • (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಯಾವುದೇ ದೊಣ್ಣೆ, ದಡಿ.

wade

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

(ಹೊಳೆಯನ್ನು) ಹಾಯು; ಕಾಲುನಡಗೆಯಿಂದ ದಾಟು.

  • (ಓಡಾಟಕ್ಕೆ ಅಡ್ಡಿಮಾಡುವ ನೀರು, ಹಿಮ, ಕೆಸರು, ಮರಳಿನ ರಾಶಿ, ಮೊದಲಾದವುಗಳ ಮೂಲಕ) ಹಾಯು; ಹಾದು ಹೋಗು.
  • (ಪ್ರಯಾಸದಿಂದ) ದಾರಿಮಾಡಿಕೊಂಡು – ನಡೆ, ದಾಟು, ಹಾದುಹೋಗು (ರೂಪಕವಾಗಿ ಸಹ): he waded through all difficulties ಅವನು ಎಲ್ಲ ಕಷ್ಟಗಳನ್ನೂ ಪ್ರಯಾಸದಿಂದ ದಾಟಿದ.

wade

ನಾಮವಾಚಕ

(ನೀರು ಮೊದಲಾದವನ್ನು ಕಾಲುನಡಗೆಯಿಂದ) ಹಾಯುವಿಕೆ.

wadeable

ಗುಣವಾಚಕ

= wadable.

wader

ನಾಮವಾಚಕ

  • (ನೀರು, ಹಿಮ, ಕೆಸರು, ಮರಳಿನ ರಾಶಿ, ಮೊದಲಾದವನ್ನು) ಪ್ರಯಾಸದಿಂದ ಹಾಯುವವನು.
  • (ರೂಪಕವಾಗಿ) (ಕಷ್ಟಗಳು, ರಕ್ತಪ್ರವಾಹ, ಮೊದಲಾದವನ್ನು) ಹಾಯುವವನು.
  • ಹೊಳೆ ಹಾಯುವವನು.
  • (ಕಾಲುನಡಗೆಯಿಂದ ನೀರು ಹಾಯುವ) ನೀರಹಕ್ಕಿ.
  • (ಬಹುವಚನದಲ್ಲಿ) (ಮೀನು ಹಿಡಿಯುವುದೇ ಮೊದಲಾದ ಸಂದರ್ಭದಲ್ಲಿ ಹಾಕಿಕೊಳ್ಳುವ) ನೀರಿಳಿಯದ ಎತ್ತರವಾದ ಮೋಜಾ ಯಾ (ಮೈ, ಕಾಲುಗಳನ್ನು ಮುಚ್ಚುವ) ನೀರಿಳಿಯದ ಉಡುಪು.

wadi

ನಾಮವಾಚಕ

(wady ಸಹ). (ಮಳೆಗಾಲದಲ್ಲಿ ಮಾತ್ರ ನೀರು ಹರಿಯುವ) ಕಲ್ಲಿನ ನಾಲೆ, ಪಾತ್ರ.

wading bird

ನಾಮವಾಚಕ

(ಜಾಲಪಾದದ ವರಟೆ, ಬಾತು, ಹಂಸ, ಮೊದಲಾದ ಈಜುಹಕ್ಕಿಗಳಿಗೆ ಭಿನ್ನವಾದ) ಕಾಲುನಡಗೆಯ ನೀರಹಕ್ಕಿ; ನಡಗೆ ನೀರ್ವಕ್ಕಿ.

Search Dictionaries

Loading Results

Follow Us :   
  Download Bharatavani App
  Bharatavani Windows App