भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wady

ನಾಮವಾಚಕ

= wadi.

WAF

ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Women in the Air Force.

wafer

ನಾಮವಾಚಕ

  • ವೇಹರ್‍ (ಬಿಸ್ಕತ್ತು); ತುಂಬ ತೆಳುವೂ, ಗರುಗೂ, ಆದ (ಈಗ ಸಾಮಾನ್ಯವಾಗಿ ಐಸ್‍ಕ್ರೀಮ್‍ ಜೊತೆ ತಿನ್ನುವ) ಸಿಹಿಬಿಸ್ಕತ್ತು: thin as a wafer ವೇಹರ್‍ ಬಿಸ್ಕತ್ತಿನಂತೆ ತೆಳುವಾದ.
  • (ಪ್ರಭುಭೋಜನ ಸಂಸ್ಕಾರದಲ್ಲಿ ಬಳಸುವ, ಹುದುಗು ಹಾಕಿದ) ಬ್ರೆಡ್ಡಿನ – ಬಿಲ್ಲೆ, ಹಲ್ಲೆ.
  • (ಚರಿತ್ರೆ) (ಕಾಗದಪತ್ರಗಳು, ಕಾಗದದ ಹಾಳೆಗಳು, ಮೊದಲಾದವನ್ನು ಅಂಟಿಸಲು ಹಿಂದೆ ಬಳಸುತ್ತಿದ್ದ) ಒಣಸರಿಯ ಬಿಲ್ಲೆ; ಅಂಟುಬಿಲ್ಲೆ.
  • ನ್ಯಾಯ ಪತ್ರದ ಕೆಂಬಿಲ್ಲೆ; ನ್ಯಾಯಸ್ಥಾನದ ಕಾಗದ ಪತ್ರಗಳ ಮೇಲೆ ಮೊಹರಿಗೆ ಬದಲಾಗಿ ಅಂಟಿಸುವ ಕೆಂಪು ಕಾಗದದ ಬಿಲ್ಲೆ.
  • (ಇಲೆಕ್ಟ್ರಾನಿಕ್ಸ್‍) ‘ಸಾಲಿಡ್‍ ಸ್ಟೇಟ್‍’ ಸರ್ಕೀಟುಗಳಲ್ಲಿ ಬಳಸುವ, ತುಂಬ ತೆಳುವಾದ ಅರೆವಾಹಕ ಸ್ಫಟಿಕ.

wafer

ಸಕರ್ಮಕ ಕ್ರಿಯಾಪದ

ಸರಿಬಿಲ್ಲೆಯಿಂದ ಅಂಟಿಸು ಯಾ ಕೆಂಬಿಲ್ಲೆಯಿಂದ ಮೊಹರು ಮಾಡು.

wafer-thin

ಗುಣವಾಚಕ

ತುಂಬ ತೆಳುವಾದ.

wafery

ಗುಣವಾಚಕ

ತೀರ ತೆಳುವಾದ.

waffle

ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ದೋಸೆಕಾವಲಿಯಲ್ಲಿ ಹೊಯ್ದು ಮಾಡಿದ, ತೆಳುವೂ ಗರುಗೂ ಆದ ದೋಸೆ.

waffle

ಅಕರ್ಮಕ ಕ್ರಿಯಾಪದ

ಪೊಳ್ಳುಹರಟೆ ಹೊಡೆ; ಜಳ್ಳುಬರಹ ಬರೆ; ಪೊಳ್ಳುಮಾತುಗಳೇ ತುಂಬಿದಂತೆ ಮಾತಾಡು, ಬರೆ.

waffle

ನಾಮವಾಚಕ

ಪೊಳ್ಳುಹರಟೆ; ಜಳ್ಳುಬರಹ.

waffle-iron

ನಾಮವಾಚಕ

ದೋಸೆ ಕಾವಲಿ; ಸಾಮಾನ್ಯವಾಗಿ ತೆಟ್ಟೆಯಾದ ಎರಡು ಬಾಣಲೆಗಳನ್ನು ಬೆಸುಗೆಹಾಕಿ ಮಾಡಿದ ಕಾವಲಿ.

waft

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಹಗುರವಾಗಿ ತೇಲಿಕೊಂಡು – ಹೋಗು, ಸಾಗು.

  • ಗಾಳಿಯ ಯಾ ನೀರಿನ ಮೇಲೆ (ಹೇಗೋ ಹಾಗೆ) – ಸಾಗಿಸು, ಒಯ್ಯು, ತೇಲಿಸಿಕೊಂಡು ಹೋಗು
  • ಹಗುರವಾಗಿ ತೇಲಿಸಿಕೊಂಡು, ತೂರಿಸಿಕೊಂಡು ಹೋಗು.

waft

ನಾಮವಾಚಕ

  • ಪರಿಮಳದ – ಸುಳಿವು, ಹರಿವು, ಬೀಸು, ಉರುವು.
  • (ಶಾಂತಿ, ಆನಂದ, ಮೊದಲಾದವುಗಳ) ಸುಳಿವು; ಕ್ಷಣಿಕ ತೋರ್ಕೆ.
  • (ನೌಕಾಯಾನ) ಆಪತ್ಸಂಕೇತ; ವಿಪತ್ತಿನ ಸಂಕೇತ, ಉದಾಹರಣೆಗೆ ಸುತ್ತಿದ, ಗಂಟುಹಾಕಿದ ಬಾವುಟ ಯಾ ಹೊರಜಿಗೆ ಕಟ್ಟಿದ ಬಟ್ಟೆಬರೆ.

wag

ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

ಸಕರ್ಮಕ ಕ್ರಿಯಾಪದ (ಒಂದು ಕಡೆಯಿಂದ ಇನ್ನೊಂದಕ್ಕೆ) ಅಲ್ಲಾಡಿಸು.

  • ಅಲ್ಲಾಡು.
  • (ಪ್ರಾಚೀನ ಪ್ರಯೋಗ) (ಪ್ರಪಂಚ, ಕಾಲ, ಮೊದಲಾದವುಗಳ ವಿಷಯದಲ್ಲಿ) ಹಾಗೂ ಹೀಗೂ ನಡೆಯುತ್ತಿರು: how wags the world? ಹೇಗೆ ನಡೆಯುತ್ತಿದೆ ಪ್ರಪಂಚ? ಸ್ಥಿತಿಗತಿಗಳು, ವಿದ್ಯಮಾನಗಳು, ಹೇಗಿವೆ?

wag

ನಾಮವಾಚಕ

  • ತಮಾಷೆ ಮನುಷ್ಯ; ಕುಚೋದ್ಯಗಾರ; ವಿನೋದಪ್ರಿಯ; ಹಾಸ್ಯಶೀಲ; ತಮಾಷೆಯನ್ನು, ಮುಖ್ಯವಾಗಿ ಕುಚೇಷ್ಟೆಯನ್ನು, ಕುಚೋದ್ಯವನ್ನು ಮಾಡುವ ಸ್ವಭಾವದವನು.
  • (ಅಶಿಷ್ಟ) (ಬ್ರಿಟಿಷ್‍ ಪ್ರಯೋಗ)(ಶಾಲೆ ಮೊದಲಾದವಕ್ಕೆ ವಿನಾಕಾರಣ) ತಪ್ಪಿಸಿಕೊಳ್ಳುವವನು(ಳು); ಚಕ್ಕರ್‍ ಹೊಡೆಯುವವನು(ಳು): play the wag (ಶಾಲೆ ಮೊದಲಾದವಕ್ಕೆ) ತಪ್ಪಿಸಿಕೊ; ಚಕ್ಕರ್‍ ಹೊಡೆ.

wage

ನಾಮವಾಚಕ

ಪದಗುಚ್ಛ

living wage (ಸಂಪಾದಿಸುವವನೂ ಅವನ ಕುಟುಂಬವೂ ಸಾಲದ ಭಯವಿಲ್ಲದೆ ಬದುಕಲು ಹೊಟ್ಟೆಬಟ್ಟೆಗೆ ಸಾಕಾಗುವಷ್ಟು) ಬದುಕು ಕಂಬಳ; ಜೀವನಾಧಾರ ವೇತನ.

  • (ಏಕವಚನ ಯಾ ಬಹುವಚನದಲ್ಲಿ) (ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಯಾ ನೌಕರನಿಗೆ ಬಟವಾಡೆ ಮಾಡುವ) ವೇತನ:
    1. (ಕಾರ್ಮಿಕನ ವಿಷಯದಲ್ಲಿ) (ದಿನ)ಕೂಲಿ; ಕಂಬಳ.
    2. (ನೌಕರನ ವಿಷಯದಲ್ಲಿ) ಸಂಬಳ: he gets good wages ಅವನಿಗೆ ಒಳ್ಳೆಯ ವೇತನ ದೊರೆಯುತ್ತದೆ. at a wage of Rs.40 a week ವಾರಕ್ಕೊಮ್ಮೆ 40 ರೂ. ಮೇರೆಗೆ.
  • (ರೂಪಕವಾಗಿ) (ಏಕವಚನ ಯಾ ಬಹುವಚನದಲ್ಲಿ) ಪ್ರತಿಫಲ: the wages of sin is death ಪಾಪಕ್ಕೆ ಪ್ರತಿಫಲ ಮೃತ್ಯುವೇ, ಮರಣವೇ.
  • (ಅರ್ಥಶಾಸ್ತ್ರ) (ಬಹುವಚನದಲ್ಲಿ) ಕಾರ್ಮಿಕ ವೇತನ; ಒಟ್ಟು ಉತ್ಪಾದನೆಯಲ್ಲಿ ಬಂಡವಾಳಗಾರರಿಗೆ ಸಲ್ಲುವ ಪ್ರತಿಫಲವನ್ನು ಬಿಟ್ಟು, ಕಾರ್ಮಿಕರಿಗೆ ಪ್ರತಿಫಲ ನೀಡುವ ಸಲುವಾಗಿಯೇ ಪ್ರತ್ಯೇಕಿಸಿ ಮೀಸಲಿಟ್ಟ ಭಾಗ.

wage

ಸಕರ್ಮಕ ಕ್ರಿಯಾಪದ

ಕಾಳಗ, ಯುದ್ಧ, ಸ್ಪರ್ಧೆ – ಮಾಡು, ನಡಸು.

wage slave

ನಾಮವಾಚಕ

(ಗುಲಾಮಗಿರಿಯಂಥ ಪರಿಸ್ಥಿತಿಗಳಲ್ಲಿ ದುಡಿಮೆಯಿಂದ ಬರುವ ವರಮಾನದಿಂದಲೇ ಬದುಕುವ) ಕೂಲಿ ಗುಲಾಮ.

wage-claim

ನಾಮವಾಚಕ

= pay-claim.

wage-earner

ನಾಮವಾಚಕ

ಕಂಬಳಗಾರ; ಕೂಲಿಗಾರ; ಕೂಲಿಗಾಗಿ ದುಡಿಯುವವನು.

wager

ಸಕರ್ಮಕ ಕ್ರಿಯಾಪದ

(ಪಂಥದಲ್ಲಿ) ಪಣವೊಡ್ಡು; ಬಾಜಿ ಕಟ್ಟು ( ಅಕರ್ಮಕ ಕ್ರಿಯಾಪದ ಸಹ).

Search Dictionaries

Loading Results

Follow Us :   
  Download Bharatavani App
  Bharatavani Windows App