भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wahine

ನಾಮವಾಚಕ

(ನ್ಯೂಸಿಲಂಡ್‍)

  • ಹೆಂಗಸು; ಸ್ತ್ರೀ.
  • ಹೆಂಡತಿ; ಮಡದಿ; ಪತ್ನಿ.

waif

ನಾಮವಾಚಕ

ಬೇವಾರಸಿ:

  • ಒಡೆಯರಿಲ್ಲದ ವಸ್ತು ಯಾ ಪ್ರಾಣಿ.
  • ಕಡಲಲೆಗಳು ಮೇಲಕ್ಕೆಸೆದ ಯಾ ಸಮುದ್ರದಲ್ಲಿ ಕೊಚ್ಚಿಕೊಂಡು ಬಂದ, ತಂದವರು ಯಾರೆಂದು ಯಾ ತಂದದ್ದು ಯಾವುದೆಂದು ತಿಳಿಯದ ವಸ್ತು.
  • ಬೇವಾರಸಿ ಮಗು; ಅನಾಥಶಿಶು; ತಾಯಿತಂದೆಯರು ತೊರೆದುಬಿಟ್ಟ, ತಾಯಿತಂದೆಯರು ಯಾರೆಂದು ತಿಳಿಯದ ಮಗು.
  • ನಿರ್ಗತಿಕ; ದಿಕ್ಕಿಲ್ಲದವನು; ಮನೆಮಠ ಇಲ್ಲದವನು; ಭಿಕಾರಿ.

waifs and strays

ನಾಮವಾಚಕ

  • ಚಿಲ್ಲರೆಪಲ್ಲರೆಗಳು; ಹರಕುಮುರುಕುಗಳು.
  • ತಬ್ಬಲಿ, ಅನಾಥ – ಮಕ್ಕಳು.

wail

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ ಮತ್ತು ಅಲಂಕಾರಶಾಸ್ತ್ರ) (ಒಬ್ಬರಿಗಾಗಿ) ಗೋಳಿಡು; ಹಲುಬಉ; ಮರುಗು.

    1. ಗೊಳೋ ಎಂದು ಅಳು; ಗೋಳಾಡು; ರೋದಿಸು; ಪ್ರಲಾಪಿಸು; ವಿಲಾಪಿಸು.
    2. (ಮಾತಿನಲ್ಲಿ) ಗೋಳುಗರೆ; ಹಲುಬಉ.
  • (ಗಾಳಿಯ ವಿಷಯದಲ್ಲಿ) ಮೊರೆ (ಇಡು); ಸುಯ್ಯು; ಸುಯ್ಲಿಡು; ಅಳುವ ಶಬ್ದ ಮಾಡು.

wail

ನಾಮವಾಚಕ

  • ಗೋಳಾಟ; ರೋದನ; ಪ್ರಲಾಪ; ವಿಲಾಪ; ಹಲುಬಉ; ಮೊರೆ.
  • ಮೊರೆತ; ಗೋಳಾಟದ ಸದ್ದು; ಸುಯ್ಲು.

wailer

ನಾಮವಾಚಕ

ಗೋಳಾಡುವವನು.

wailful

ಗುಣವಾಚಕ

(ಕಾವ್ಯಪ್ರಯೋಗ) ರೋದನಪೂರಿತ; ಪ್ರಲಾಪಮಯ; ಗೋಳಾಟ ತುಂಬಿದ.

Wailing Wall

ನಾಮವಾಚಕ

(ಜೆರೂಸಲಮ್‍ ನಗರದಲ್ಲಿ, ಹೀರಾಡನ ದೇವಾಲಯವಿದ್ದ ನಿವೇಶನದ ಮೇಲೆ ನಿಂತಿದೆಯೆನ್ನಲಾದ, ಯೆಹೂದ್ಯರು ಶುಕ್ರವಾರಗಳಲ್ಲಿ ಮೊರೆಯಿಟ್ಟು ಪ್ರಾರ್ಥನೆ ಮಾಡುವ, ಎತ್ತರದ) ಗೋಳಾಟದ ಗೋಡೆ; ಗೋಳುಗೋಡೆ.

wailingly

ಕ್ರಿಯಾವಿಶೇಷಣ

ಗೋಳಾಡುತ್ತಾ; ಪ್ರಲಾಪಿಸುತ್ತಾ.

wain

ನಾಮವಾಚಕ

ಪದಗುಚ್ಛ

(ಕಾವ್ಯಪ್ರಯೋಗ ಯಾ ಪ್ರಾಂತೀಯ ಪ್ರಯೋಗ) = wagon\((1)\). the wain

  • ಸಪ್ತರ್ಷಿಮಂಡಲ.
  • ಸಪ್ತರ್ಷಿಮಂಡಲದ ಏಳು ನಕ್ಷತ್ರಗಳು.

wainscot

ನಾಮವಾಚಕ

  • (ಕೋಣೆಯ ಗೋಡೆಯ ಕೆಳಭಾಗಕ್ಕೆ ಹದ್ದಿಸಿರುವ) ಹಲಗೆ ಸೇರುವೆ; ತಃಖ್ತಬಂದಿ.
  • (ಚರಿತ್ರೆ) (ಬ್ರಿಟಿಷ್‍ ಪ್ರಯೋಗ) ಉತ್ತಮ ಗುಣಮಟ್ಟದ, ಆಮದು ಮಾಡಿದ ಓಕ್‍ ದಾರು, ಚೌಬೀನೆ.

wainscot

ಸಕರ್ಮಕ ಕ್ರಿಯಾಪದ

(ಕೊಠಡಿಯ ಗೋಡೆಯ ಕೆಳಭಾಗಕ್ಕೆ) ಹಲಗೆ ಹದ್ದಿಸು; ತಃಖ್ತಬಂದಿ ಹಾಕು.

wainscoting

ನಾಮವಾಚಕ

  • (ಕೊಠಡಿಯ ಗೋಡೆಯ ಕೆಳಭಾಗಕ್ಕೆ) ಹಲಗೆ ಸೇರುವೆ, ತಃಖ್ತಬಂದಿ – ಹಾಕುವುದು.
  • (ಕೊಠಡಿಯ ಗೋಡೆಯ ಕೆಳಭಾಗಕ್ಕೆ ಹದ್ದಿಸಿದ) ಹಲಗೆ ಸೇರುವೆ; ತಃಖ್ತಬಂದಿ.

wainwright

ನಾಮವಾಚಕ

ಬಂಡಿ ಕಟ್ಟುವವನು; ಗಾಡಿ ತಯಾರಕ.

waist

ನಾಮವಾಚಕ

  • ನಡು; ಸೊಂಟ; ಟೊಂಕ; ಕಟಿ.
  • ಸೊಂಟದ ಸುತ್ತಳತೆ.
  • (ಸಾಧಾರಣ ಮನುಷ್ಯ ದೇಹದ) ತೆಳುನಡು.
  • ನಡು; ಕಟಿ; ಸೊಂಟ:
    1. (ಉದ್ದವಾದ ವಸ್ತುವಿನ) ನಡುಭಾಗ; ನಡುವಣ ತೆಳುಭಾಗ, ಉದಾಹರಣೆಗೆ ಪಿಟೀಲು, ಕಣಜ, ಮೊದಲಾದವುಗಳ ನಡುಭಾಗ, ಸೊಂಟ.
    2. ಹಡಗಿನ (ಮುನ್ನಟ್ಟಕ್ಕೂ ಹಿನ್ನಟ್ಟಕ್ಕೂ ನಡುವಣ) ನಡುಭಾಗ.
    3. (ಉಡುಪಿನ) ಸೊಂಟದ ಭಾಗ.
    4. ಹೆಂಗಸಿನ ಉಡುಪಿನ ತೆಳುನಡು.
    5. ಉಡುಪಿನ (ಕುತ್ತಿಗೆಗೂ ಸೊಂಟಕ್ಕೂ ಮಧ್ಯದ) ನಡು ಭಾಗ.
  • (ಅಮೆರಿಕನ್‍ ಪ್ರಯೋಗ) ಕುಪು ಸ ಯಾ ಒಳಕುಪು ಸ; ರವಿಕೆ ಯಾ ಒಳರವಿಕೆ.

waist-belt

ನಾಮವಾಚಕ

ನಡುಪಟ್ಟಿ; ಸೊಂ(ದ) ಪಟ್ಟಿ.

waist-cloth

ನಾಮವಾಚಕ

= loincloth.

waist-deep

ಗುಣವಾಚಕ

= 1waist-high.

waist-deep

ಕ್ರಿಯಾವಿಶೇಷಣ

= 2waist-high.

waist-high

ಗುಣವಾಚಕ

ಸೊಂಟದೆತ್ತರದ; ಸೊಂಟದವರೆಗಿನ.

Search Dictionaries

Loading Results

Follow Us :   
  Download Bharatavani App
  Bharatavani Windows App