English-Kannada Nighantu (University of Mysore)
University of Mysore
waist-high
ಕ್ರಿಯಾವಿಶೇಷಣ
ಸೊಂಟದೆತ್ತರಕ್ಕೆ; ಸೊಂಟದವರೆಗೂ.
waistband
ನಾಮವಾಚಕ
= waist-belt.
waistcoat
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ಸಾಮಾನ್ಯವಾಗಿ ಗುಂಡಿಗಳಿರುವ, ಕಾಲರು ಯಾ ತೋಳಿಲ್ಲದ) ಬಂಡಿ; ನಡುವಂಗಿ; ಸೊಂಟಕವಚ
waistline
ನಾಮವಾಚಕ
(ವ್ಯಕ್ತಿಯ ದಪ್ಪವನ್ನು ಸೂಚಿಸುವ) ಸೊಂಟದ – ಸುತ್ತು, ಸುತ್ತಳತೆ; ಕಟಿಪ್ರಮಾಣ.
wait
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
- ಸಮಯ ಕಾಯುತ್ತಿರು; ಸರಿಯಾದ ಅವಕಾಶಕ್ಕಾಗಿ ಕಾಯುತ್ತಿರು: he is waiting his opportunity ಅವನು ಸರಿಯಾದ ಅವಕಾಶಕ್ಕಾಗಿ, ಸಮಯಕ್ಕಾಗಿ ಕಾಯುತ್ತಿದ್ದಾನೆ. you must wait your turn ನೀನು ನಿನ್ನ ಸರದಿಗಾಗಿ ಕಾಯುತ್ತಿರಬೇಕು. wait my convenience ನನಗೆ ಅನುಕೂಲವಾಗುವವರೆಗೂ ಕಾದಿರು, ತಾಳು.
- (ಊಟ ಮೊದಲಾದವುಗಳಿಗಾಗಿ ಬೇರೊಬ್ಬರ ಆಗಮನವನ್ನು ನಿರೀಕ್ಷಿಸುತ್ತಾ) ಕಾದಿರು.
wait
ನಾಮವಾಚಕ
- (ಬ್ರಿಟಿಷ್ ಪ್ರಯೋಗ) (ಬಹುವಚನದಲ್ಲಿ)
- (ಪ್ರಾಚೀನ ಪ್ರಯೋಗ) ಕ್ರಿಸ್ಮಸ್ ಕೀರ್ತನೆಗಳನ್ನು ಹಾಡುತ್ತಾ ಹೋಗುವ ಬೀದಿಯ ಗಾಯಕರು.
- (ಚರಿತ್ರೆ) ಒಂದು ನಗರ ಯಾ ಪುರವು ನೇಮಕ ಮಾಡಿರುವ ಗಾಯಕ ವೃಂದ.
- ಕಾಯುವಿಕೆ ಯಾ ಕಾದಿರುವ ಹೊತ್ತು, ವೇಳೆ, ಅವಧಿ: we had a long wait for the train ನಾವು ಆ ರೈಲಿಗಾಗಿ ದೀರ್ಘಕಾಲ ಕಾಯಬೇಕಾಯಿತು.
- (ಶತ್ರುವಿಗಾಗಿ) ಹೊಂಚು – ಕಾಯುವುದು, ಹಾಕುವುದು: lie in wait for (ಶತ್ರುವಿಗಾಗಿ) ಹೊಂಚು ಕಾಯು, ಹಾಕು.
wait-a-bit
ನಾಮವಾಚಕ
(ಬಟ್ಟೆಯನ್ನು ಬಿಡದೆ ಕಚ್ಚಿಕೊಳ್ಳುವ, ಹಿಡಿದುಕೊಳ್ಳುವ, ಕೊಕ್ಕೆ ಮುಳ್ಳು ಗಳಿರುವ) ‘ಸ್ವಲ್ಪ ತಾಳು’ ಗಿಡ; ‘ತುಸತಡೆ’ ಗಿಡ.
waiter
ನಾಮವಾಚಕ
- ಕಾಯು(ತ್ತಿರು)ವವನು; ಕಾದಿರುವವನು.
- ಮಾಣಿ; ಪರಿಚಾರಕ; ಹೋಟೆಲುಗಳಲ್ಲಿ ಯಾ ಭೋಜನಗೃಹಗಳಲ್ಲಿ ತಿಂಡಿತೀರ್ಥ ತಂದುಕೊಡುವುದು, ಊಬಡಿಸುವುದು, ಪಾತ್ರೆಗಳನ್ನು ತೆಗೆಯುವುದು, ಮೊದಲಾದ ಕೆಲಸಗಳನ್ನು ಮಾಡುವವನು.
- ತಟ್ಟೆ; ಹರಿವಾಣ.
waiting
ನಾಮವಾಚಕ
- (ನಿರ್ದೇಶಿಸಿದ ಕಾಲದ ಯಾ ಯಾವುದೇ ನಿರೀಕ್ಷಿಸಿದ ಘಟನೆಯವರೆಗೂ) ಕಾಯುವುದು; ಕಾಯುತ್ತಿರುವುದು; ಕಾದಿರುವುದು.
- ಸಮಯ – ಕಾಯುವುದು, ಸಾಧಿಸುವುದು.
- (ಹೋಟೆಲು, ಭೋಜನ ಗೃಹಗಳಲ್ಲಿ) ಮಾಣಿಯ ಕೆಲಸ; ಪರಿಚಾರಕನ ವೃತ್ತಿ ನಡೆಸುವುದು.
- ಮೋಟಾರು ವಾಹನದ ಒಳಗೆ ಕುಳಿತೇ ವಾಹನವನ್ನು ಸ್ವಲ್ಪಕಾಲ ರಸ್ತೆಯ ಪಕ್ಕದಲ್ಲಿ ನಿಲ್ಲಿಸುವುದು: no waiting of motor vehicles here ಇಲ್ಲಿ ಮೋಟಾರು ವಾಹನಗಳನ್ನು ನಿಲ್ಲಿಸಬಾರದು.
- (ರಾಜಾಸ್ಥಾನದಲ್ಲಿ ರಾಜನ, ರಾಣಿಯ) ಪರಿಚರ್ಯೆ; ಪರಿಜನನಾಗಿ ವರ್ತಿಸುವುದು ಯಾ ಹೀಗೆ ವರ್ತಿಸುವ ಅವಧಿ.
waiting game
ನಾಮವಾಚಕ
(ಪಂದ್ಯ ಮೊದಲಾದವುಗಳಲ್ಲಿ ಮುಂದೆ ಚುರುಕಿನಿಂದ ಆಡುವ ಸಲುವಾಗಿ ಆರಂಭದಲ್ಲಿ ತಟಸ್ಥವಾಗಿರುವ) ಕಾಯುವ ಆಟ.
waiting-list
ನಾಮವಾಚಕ
(ಹುದ್ದೆಗಾಗಿ ಯಾ ಮುಂದಿನ ಅವಕಾಶಕ್ಕಾಗಿ) ಕಾಯುತ್ತಿರುವವರ ಪಟ್ಟಿ.
waiting-room
ನಾಮವಾಚಕ
ಕಾಯುವ ಕೊಠಡಿ, ಕೋಣೆ; ವೈದ್ಯರು ಮೊದಲಾದವರ ಚಿಕಿತ್ಸಾಲಯಗಳಲ್ಲಿ, ರೈಲ್ವೆನಿಲ್ದಾಣ, ಬಸ್ ನಿಲ್ದಾಣ, ಮೊದಲಾದವುಗಳಲ್ಲಿ ಕಾಯುವವರಿಗಾಗಿ ನಿರ್ಮಿಸಿರುವ ಕೊಠಡಿ, ಕೋಣೆ.
waitress
ನಾಮವಾಚಕ
ಪರಿಚಾರಿಕೆ; ಹೋಟೆಲುಗಳು, ಭೋಜನಗೃಹಗಳಲ್ಲಿ ತಿಂಡಿ ತೀರ್ಥ ತಂದು ಕೊಡುವುದು ಬಡಿಸುವುದೇ ಮೊದಲಾದ ಕೆಲಸಗಳನ್ನು ಮಾಡುವವಳು.
waive
ಅಕರ್ಮಕ ಕ್ರಿಯಾಪದ
(ಹಕ್ಕು, ಅಧಿಕಾರ, ಅವಕಾಶ, ನ್ಯಾಯಸಮ್ಮತವಾದ ಮನವಿ, ಬೇಡಿಕೆ, ಮೊದಲಾದವನ್ನು) ಚಲಾಯಿಸದಿರು; ಬಿಟ್ಟುಕೊಡು; ಬಳಸದಿರು; ವರ್ಜಿಸು.
waiver
ನಾಮವಾಚಕ
(ನ್ಯಾಯಶಾಸ್ತ್ರ) (ಹಕ್ಕು, ಮನವಿ, ಮೊದಲಾದವುಗಳ) ವರ್ಜನ; ತ್ಯಾಗ; ಬಿಟ್ಟುಕೊಡುವಿಕೆ.
wake
ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
be a wake-up (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್) (ಅನೌಪಚಾರಿಕ) ಕಟ್ಟೆಚ್ಚರವಾಗಿರು; ಪೂರ್ತಿ ಎಚ್ಚರದಿಂದಿರು.
- (ನಿದ್ರೆಯಿಂದ) ಎಬ್ಬಿಸು; ಎಚ್ಚರಿಸು; ಎಚ್ಚರಮಾಡು; ಎಚ್ಚರಗೊಳಿಸು; ಜಾಗೃತಗೊಳಿಸು (ರೂಪಕವಾಗಿ ಸಹ): spring wakes all nature ವಸಂತವು ನಿಸರ್ಗವನ್ನೆಲ್ಲ ಜಾಗೃತಗೊಳಿಸುತ್ತದೆ, ಎಚ್ಚರಗೊಳಿಸುತ್ತದೆ. the shouting woke the echoes ಆ ಕೂಗು ಪ್ರತಿಧ್ವನಿಗಳನ್ನು ಎಬ್ಬಿಸಿತು. he woke up to the fact that he had been swindled ತಾನು ಮೋಸಕ್ಕೆ ತುತ್ತಾಗಿದ್ದೇನೆಂಬ ಸತ್ಯಾಂಶಕ್ಕೆ ಅವನು ಎಚ್ಚರಗೊಂಡ, ಸತ್ಯಾಂಶವನ್ನು ಅವನು ಅರಿತುಕೊಂಡ.
- (ಜಡತೆ, ಮಾಂದ್ಯ, ಮೊದಲಾದವುಗಳಿಂದ)
- ಎಚ್ಚರಗೊಳಿಸು; ಜಾಗೃತಗೊಳಿಸು.
- ಚುರುಕಾಗಿಸು; ಚಟುವಟಿಕೆಯಿಂದಿರುವಂತೆ ಮಾಡು.
- ಅರಿಯುವಂತೆ, ಗಮನಿಸುವಂತೆ ಮಾಡು.
- (ಸತ್ತವನನ್ನು, ಸತ್ತದ್ದನ್ನು) ಪುನರುಜ್ಜೀವನಗೊಳಿಸು; ಎಚ್ಚರಗೊಳಿಸು.
- (ಗದ್ದಲದಿಂದ, ಗದ್ದಲ ಎಬ್ಬಿಸಿ) ಮೌನವನ್ನು, ನಿಶ್ಶಬ್ದತೆಯನ್ನು – ಭಂಗಗೊಳಿಸು; ಪ್ರತಿಧ್ವನಿ ಎಬ್ಬಿಸು.
wake
ನಾಮವಾಚಕ
- (ಚರಿತ್ರೆ) ಜಾಗರಣೋತ್ಸವ; ಚರ್ಚ್ನ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಯಾ ಆ ಸಂಬಂಧದ ಜಾತ್ರೆ.
- (ಸಾಮಾನ್ಯವಾಗಿ ಬಹುವಚನದಲ್ಲಿ) (ಉತ್ತರ ಇಂಗ್ಲೆಂಡಿನ ಕೈಗಾರಿಕಾ ಕೇಂದ್ರಗಳಲ್ಲಿನ) ವಾರ್ಷಿಕೋತ್ಸವ.
- (ಹೆಣ ಹೂಳುವ ಮುನ್ನ ನಂಟರಿಷ್ಟರು ಮಾಡುವ)
- ಜಾಗರಣೆ; ಹೆಣಕಾಯುವಿಕೆ.
- ಹೆಣದ ಮುಂದೆ ಮಾಡುವ ಗೋಳಾಟ, ಹಲುಬಾಟ.
wake
ನಾಮವಾಚಕ
ಪದಗುಚ್ಛ
in the wake of
- (ಚಲಿಸುವ ಹಡಗಿನ) ಜಾಡು; ಚಲಿಸುವ ಹಡಗಿನ ಹಿಂದೆ ನಿಶ್ಚಲವಾಗಿ ಕಾಣುವ ನೀರಿನ ಪಟ್ಟೆ.
- (ಚಲಿಸುವ ವಿಮಾನ ಮೊದಲಾದವುಗಳ ಹಿಂದಿನ) ಬಿರುಗಾಳಿ; ಪ್ರಕ್ಷುಬ್ಧ ವಾಯು.
wake-robin
ನಾಮವಾಚಕ
- (ಬ್ರಿಟಿಷ್ ಪ್ರಯೋಗ) ಏರಂ ಯಾ ಕೆಸವೆ ಗಿಡ, ಮುಖ್ಯವಾಗಿ ಕಾಡು ಕೆಸವೆ ಸಸ್ಯ.
- (ಅಮೆರಿಕನ್ ಪ್ರಯೋಗ) ಟ್ರಿಲಿಯಮ್ ಕುಲದ ಯಾವುದೇ ಗಿಡ.
wakeful
ಗುಣವಾಚಕ
- ನಿದ್ರೆ ಮಾಡಲಾಗದ; ನಿದ್ರಿಸಲಾರದ; ನಿದ್ರೆಬಾರದ.
- (ರಾತ್ರಿಯ ವಿಷಯದಲ್ಲಿ) ನಿದ್ರೆಯಿಲ್ಲದ; ನಿದ್ರೆ ಬರದೆ ಕಳೆದ.
- ಜಾಗರೂಕನಾದ; ಎಚ್ಚತ್ತ.