भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wakefully

ಕ್ರಿಯಾವಿಶೇಷಣ

  • ನಿದ್ರೆ ಇಲ್ಲದೆ; ನಿದ್ರೆ ಬಾರದೆ.
  • ಜಾಗರೂಕನಾಗಿ; ಎಚ್ಚರಿಕೆಯಿಂದ.

wakefulness

ನಾಮವಾಚಕ

  • ಜಾಗರೂಕತೆ.
  • ಎಚ್ಚರ; ನಿದ್ದೆಯಿಲ್ಲದ ಸ್ಥಿತಿ.

waken

ಅಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಎಚ್ಚರಗೊಳಿಸು; ಎಚ್ಚರಮಾಡು; ಎಬ್ಬಿಸು. ಏಳು; ಎಚ್ಚರಗೊಳ್ಳು; ಎಚ್ಚರವಾಗು (ರೂಪಕವಾಗಿ ಸಹ).

Walachian

ಗುಣವಾಚಕ

ವಾಲೇಕಿಯನ್‍; (ಈಗ ರೊಮೇನಿಯಕ್ಕೆ ಸೇರಿದ) ವಾಲೇಕಿಯದ.

Walachian

ನಾಮವಾಚಕ

(ಈಗ ರೊಮೇನಿಯಕ್ಕೆ ಸೇರಿದ) ವಾಲೇಕಿಯನ್‍:

  • ವಾಲೇಕಿಯದವನು.
  • ವಾಲೇಕಿಯದ ಭಾಷೆ.

Waldenses

ನಾಮವಾಚಕ

(ಬಹುವಚನ) (ಸುಮಾರು ಕ್ರಿಸ್ತಶಕ 1170ರಲ್ಲಿ ದಕ್ಷಿಣ ಹ್ರಾನ್ಸ್‍ನಲ್ಲಿ ಸ್ಥಾಪಿತವಾಗಿ, ಅಪಾರ ಚಿತ್ರಹಿಂಸೆಗೆ ಗುರಿಯಾದ, ಈಗ ಪ್ರಧಾನವಾಗಿ ಇಟಲಿ, ಅಮೆರಿಕಗಳಲ್ಲಿ ನೆಲೆಸಿರುವ, ಪ್ಯೂರಿಟನ್‍ ಶಾಖೆಗೆ ಸೇರಿದ) ವ್ಯಾಲ್ಡೆನ್‍ಸೀಸ್‍ ಪಂಥ.

Waldensian

ಗುಣವಾಚಕ

ವ್ಯಾಲ್ಡೆನ್‍ಸೀಸ್‍ ಪಂಥದ.

Waldensian

ನಾಮವಾಚಕ

ವ್ಯಾಲ್ಡೆನ್‍ಸೀಸ್‍ ಪಂಥದವನು.

wale

ನಾಮವಾಚಕ

  • ಬಾಸುಂಡೆ.
  • ನೆಯ್ದ ಬಟ್ಟೆಯ ಮೇಲಿನ, ಉದಾಹರಣೆಗೆ ಕಾರ್ಡ್ಯುರಾಯ್‍ ಮೇಲಿನ, ಉಬಉಗೆರೆ.
  • (ಹೆಣೆದ ಬಉಟ್ಟಿಯ ನಡುಭಾಗದಲ್ಲಿ ಭದ್ರವಾಗಿರಲೆಂದು ವಿಶೇಷವಾಗಿ ಹೆಣೆದ) ಭದ್ರವಾದ ಪಟ್ಟೆ.
  • (ನೌಕಾಯಾನ) ಬಿಗಿಹಲಗೆ; (ಹಡಗಿನ ಪಕ್ಕದ ಸುತ್ತಲೂ ಹದ್ದಿಸಿದ) ಅಗಲವೂ ದಪ್ಪವೂ ಆದ ಹಲಗೆ.

wale

ಸಕರ್ಮಕ ಕ್ರಿಯಾಪದ

  • ಬಾಸುಂಡೆ ಬರಿಸು, ಎಬ್ಬಿಸು.
  • (ನೆಯ್ಗೆಯ ಮೇಲೆ) ಉಬಉಗೆರೆ ನೇಯು.
  • (ಹೆಣೆದ ಬಉಟ್ಟಿಯ ನಡುವೆ) ಬಿಗಿ ಪಟ್ಟೆ ಹೆಣೆ.
  • (ಹಡಗಿನ ಸುತ್ತ) ಬಿಗಿಹಲಗೆ ಹದ್ದಿಸು.

wale-knot

ನಾಮವಾಚಕ

(ತಿರಿಗಳು ಬಿಚ್ಚಿಕೊಳ್ಳದಂತೆ ಹೊರಜಿಯ ತುದಿಯಲ್ಲಿ ಹಾಕುವ) ತುದಿಗಂಟು.

walk

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

  • ಸುತ್ತಾಡು; ತಿರುಗಾಡು; ನೆಲದ ಮೇಲೆ ನಡೆದಾಡು; ಹೆಜ್ಜೆ – ಹಾಕು, ಇಡು.
  • ಒಬ್ಬನೊಡನೆ ನಡೆ(ಯಿ)ಸು; ನಡೆಯುವಂತೆ ಮಾಡು.
  • ಒಬ್ಬನೊಡನೆ – ನಡೆ, ಓಡಾಡು, ಸುತ್ತಾಡು.
  • (ಕುದುರೆ, ನಾಯಿ, ಮೊದಲಾದವನ್ನು ಸವಾರಿ ಮಾಡುತ್ತಾ ಯಾ ಹಿಡಿದುಕೊಂಡು ಹೋಗುತ್ತಾ) ನಡೆ(ಯಿ)ಸು.
  • (ಬೇಟೆನಾಯಿ ಮರಿಯನ್ನು ಅದು ನಡೆಯುವ ಅವಸ್ಥೆಯಲ್ಲಿರುವಾಗಲೇ)ಸಾಕಲು ವಹಿಸಿಕೊ.
  • (ಬೇಸ್‍ಬಾಲ್‍) (ಬ್ಯಾಟುಗಾರನಿಂದ ಆಡಲ್ಪಡದ ನಾಲ್ಕು ಎಸೆತಗಳಿಂದ ಚೆಂಡನ್ನು) ಮೊದಲ ನೆಲೆಗೆ, ಮನೆಗೆ ಮುಟ್ಟಿಸು.

walk

ನಾಮವಾಚಕ

ಪದಗುಚ್ಛ

  • ನಡಗೆ; ನಡಗೆಯ ರೀತಿ ಯಾ ವೇಗ; ನಡೆ: go at a walk ನಡಗೆಯ ವೇಗದಲ್ಲಿ ಹೋಗು never gets beyond a walk ನಡಗೆಯ ವೇಗಕ್ಕಿಂತ ಮೀರಿ ನಡೆಯಲಾರ. I know him by his walk ಅವನ ನಡಗೆಯಿಂದ ಅವನನ್ನು ಗುರುತಿಸುತ್ತೇನೆ.
  • ನಡಗೆಯಲ್ಲಿ, ನಡಗೆಯ ವೇಗದಲ್ಲಿ, (ಸ್ಥಳದಿಂದ ಸ್ಥಳಕ್ಕೆ) ಇರುವ ದೂರ: it is only ten minutes’ walk from here ಅದು ಇಲ್ಲಿಂದ ಕೇವಲ ಹತ್ತು ನಿಮಿಷಗಳ ನಡಗೆಯ ದೂರ(ದಲ್ಲಿದೆ).
  • ಪಾದಯಾತ್ರೆ; ಕಾಲುನಡಗೆಯಲ್ಲಿ ಮಾಡುವ ಪ್ರವಾಸ ಯಾ ಸುತ್ತಾಟ, ತಿರುಗಾಟ; ವ್ಯಾಯಾಮಕ್ಕಾಗಿ ಮಾಡುವ ಅಡ್ಡಾಟ, ವಿಹಾರ; ಗಾಳಿಸಂಚಾರ: go for (or take) a walk ಸುತ್ತಾಟಕ್ಕೆ ಹೋಗು, ಗಾಳಿ ಸಂಚಾರಕ್ಕೆ (ನಡೆದು) ಹೋಗು.
  • (ಧರ್ಮಾರ್ಥವಾಗಿ ಯಾ ಬೇರೆ ಕಾರಣಕ್ಕಾಗಿ ವಾಗ್ದಾನ ಮಾಡಿರುವ ಹಣವನ್ನು ಗಳಿಸಲಿಕ್ಕಾಗಿ) ಪಾದಯಾತ್ರೆ; ಕಾಲುನಡಗೆಯಲ್ಲಿ ಮಾಡಿದ ಪ್ರಯಾಣ.
  • (ವ್ಯಕ್ತಿಗೆ) ಪ್ರಿಯವಾದ ಸುತ್ತಾಟದ ಮಾರ್ಗ.
  • (ತಿರುಗು ವ್ಯಾಪಾರಿ, ಅಂಚೆಯವನು, ಮೊದಲಾದವರ) ಸುತ್ತಾಟದ ದಾರಿ.
  • ಪಥಿಕರ ಓಡಾಟಕ್ಕಾಗಿಯೇ ಮಾಡಿರುವ ದಾರಿ; ಪಾದಚಾರಿ ಪಥ; ಕಾಲುದಾರಿ.
  • ಬೇಟೆನಾಯಿಯ ಮರಿಯನ್ನು ಅದರ ಬಗೆಬಗೆಯ ಪರಿಸರಕ್ಕೆ ಒಗ್ಗಿಸಲೋಸುಗ ಕಳುಹಿಸುವ ಸ್ಥಳ.
  • ಕೋಳಿ ಪಂದ್ಯದ ಹುಂಜವನ್ನು ಇಡುವ ಸ್ಥಳ.
  • ಕಾವಲಿಗನ ಭಾಗ; ಒಬ್ಬ ಕಾವಲುಗಾರನ ಕಾವಲಿಗೆ ಒಳಪಟ್ಟ ಅರಣ್ಯದ ಭಾಗ.

walk-on

ನಾಮವಾಚಕ

walk-out

ನಾಮವಾಚಕ

(ಮುಖ್ಯವಾಗಿ ಪ್ರತಿಭಟನೆ, ಮುಷ್ಕರಗಳಲ್ಲಿ) ನಿರ್ಗಮನ; ನಿಷ್ಕ್ರಮಣ; ಏಕಾಏಕಿ ಕೋಪದಿಂದ ಹೊರನಡೆದುಬಿಡುವಿಕೆ, ಹೊರಟು ಹೋಗುವಿಕೆ.

walk-over

ನಾಮವಾಚಕ

ಸುಲಭ(ವಾದ) ಜಯ; ಸುಲಭ ಸಾಧನೆ.

walk-up

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಮಹಡಿಗಳ ಮೇಲಕ್ಕೇರಲು ಮೆಟ್ಟಿಲು ಸಾಲುಗಳ ಮೇಲೆ ಹತ್ತಿಯೇ ಹೋಗಬೇಕಾಗುವ ಕಟ್ಟಡ.

walk-up

ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಕಟ್ಟಡದ ವಿಷಯದಲ್ಲಿ) ಮೆಟ್ಟಿಲೇರಬೇಕಾದ; ಮೆಟ್ಟಿಲು ಹತ್ತಬೇಕಾದ; ಮಹಡಿಗಳ ಮೇಲಕ್ಕೇರಲು ಮೆಟ್ಟಿಲು ಸಾಲುಗಳ ಮೇಲೆ ಹತ್ತಲೇಬೇಕಾದ.

walkable

ಗುಣವಾಚಕ

ನಡೆಯಲಾಗುವ; ನಡೆಯಲು ಸಾಧ್ಯವಾದ: walkable distance ನಡೆಯ ಬಹುದಾದ(ಷ್ಟು) ದೂರ.

walkabout

ನಾಮವಾಚಕ

  • (ಆಸ್ಟ್ರೇಲಿಯ) ಮೂಲನಿವಾಸಿಯು ಪೊದೆಗಾಡಿನಲ್ಲಿ ಅಲೆದಾಡುವ ಕಾಲಾವಧಿ.
  • ಓಡಾಟ; ಬೇರೆಡೆಯಿಂದ ಬಂದಿರುವ ಪ್ರತಿಷ್ಠಿತ ವ್ಯಕ್ತಿಯು ಜನಸಂದಣಿಯ ಮಧ್ಯೆ ಸರಳವಾಗಿ ಓಡಾಡುವುದು.

Search Dictionaries

Loading Results

Follow Us :   
  Download Bharatavani App
  Bharatavani Windows App