भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

walkathon

ನಾಮವಾಚಕ

ಧನಸಂಗ್ರಹ ಪಾದಯಾತ್ರೆ; ಧನಾರ್ಥಿ ಪಾದಯಾತ್ರೆ; ಧನಸಂಗ್ರಹಣೆ ಮಾಡಲು, ಚಂದಾ ಎತ್ತಲು ವ್ಯವಸ್ಥಿತವಾಗಿ ಮಾಡುವ ನಡಗೆ.

walker

ನಾಮವಾಚಕ

  • ನಡೆಗ; ನಡೆಯುವವನು; ನಡೆದು(ಕೊಂಡು) – ಹೋಗುವವನು, ಸಾಗುವವನು.
  • (ಎರಡು ಕಾಲಿನಲ್ಲಿ) ನಡೆಯುವ ಪ್ರಾಣಿ; ದ್ವಿಪಾದಿ.
    1. ನಡಗೆ ಕುರ್ಚಿ; ನೆರವಿಲ್ಲದೆ ನಡೆದಾಡಲಾರದ ಕೂಸಿಗೆ ನಡಗೆ ಕಲಿಯಲು ಒದಗಿಸುವ ಕಾಲು ಯಾ ಚಕ್ರಗಳುಳ್ಳ ಸಾಧನ.
    2. = walking frame.

walkie-talkie

ನಾಮವಾಚಕ

ವಾಕಿಟಾಕಿ; ರೇಡಿಯೋ ಪ್ರಸಾರ ಹಾಗೂ ರೇಡಿಯೋ ಗ್ರಹಿಕೆ, ಎರಡೂ ಸಾಧ್ಯವಿರುವ, ಸಾಮಾನ್ಯವಾಗಿ ಪೊಲೀಸರು ಬಳಸುವ, ಕೈ ರೇಡಿಯೋ(ಉಪಕರಣ).

walking

ನಾಮವಾಚಕ

  • ನಡೆಯುವುದು; ನಡೆದುಕೊಂಡು – ಹೋಗುವುದು, ಸಾಗುವುದು.
  • ನಡಗೆಯ ರೀತಿ.
  • ಗಾಳಿಸಂಚಾರ; ವ್ಯಾಯಾಮಕ್ಕಾಗಿ ಮಾಡುವ ನಡಗೆ, ಸುತ್ತಾಟ.

walking

ಗುಣವಾಚಕ

  • (ಕಾಲುನಡಗೆಯಲ್ಲಿ) ನಡೆಯುವ; ಓಡಾಡುವ; ಪಾದಚಾರಿಯಾದ.
  • ನಡಗೆಯ; ನಡೆಯುವಾಗ ಬಳಸುವ: walking shoes ನಡಗೆ ಪಾದರಕ್ಷೆ.
  • ನಡಗೆಯಿಂದ ಮಾಡುವ: walking tour ನಡಗೆಯಿಂದ ಮಾಡುವ ಸಂಚಾರ; ಪಾದಯಾತ್ರೆ.
  • ಓಡಾಡುವ; ಜೀವಂತ; ನಡೆದಾಡುವ: walking encyclopaedia ನಡೆದಾಡುವ ಯಾ ಜೀವಂತ ವಿಶ್ವಕೋಶ; ವಿಶ್ವಕೋಶದಂತೆ ಅನೇಕಾನೇಕ ವಿಷಯಗಳ ಬಗ್ಗೆ ವಿವರಣೆ ಕೊಡಬಲ್ಲ ವ್ಯಕ್ತಿ. walking dictionary ನಡೆದಾಡುವ ನಿಘಂಟು; ಶಬ್ದಾರ್ಥಗಳ ಬಗ್ಗೆ ನಿಘಂಟಿನಷ್ಟೇ ತಿಳಿವುಳ್ಳ ವ್ಯಕ್ತಿ.

walking delegate

ನಾಮವಾಚಕ

ಸಂಚಾರಿ ನಿಯೋಗಿ; ಮಾಲಿಕವರ್ಗದ ಮತ್ತು ಕಾರ್ಮಿಕವರ್ಗದ ಸದಸ್ಯರೊಡನೆ ಚರ್ಚೆ ನಡೆಸುವ ಸಲುವಾಗಿ ಉಭಯತ್ರರ ನಡುವೆ ಓಡಾಡುವ ಕಾರ್ಮಿಕ ಸಂಘದ ಅಧಿಕಾರಿ.

walking fern

ನಾಮವಾಚಕ

ನಡೆಯುವ ಜರಿಗಿಡ; ಕ್ಯಾಂಪ್ಟೊಸೊರಸ್‍ ಕುಲದ, ನಿತ್ಯಹರಿದ್ವರ್ಣದ ಒಂದು ಬಗೆಯ ಜರಿಗಿಡ.

walking frame

ನಾಮವಾಚಕ

ನಡಗೆ ಚೌಕಟ್ಟು; ‘ವಾಕರು’; ಅಂಗವಿಕಲರು ಯಾ ವೃದ್ಧರು ನಡೆಯಲು ಬಳಸುವ, ರಬ್ಬರ್‍ ಹಿಡಿಗಳನ್ನು ಜೋಡಿಸಿದ, ಲೋಹದ ಕೊಳವೆಯ ಚೌಕಟ್ಟು.

walking gentleman

ನಾಮವಾಚಕ

(ಮಾತಿಲ್ಲದ) ಬರಿಯ ಓಡಾಟ ಪಾತ್ರದ ನಟ.

walking lady

ನಾಮವಾಚಕ

(ಮಾತಿಲ್ಲದ) ಬರಿಯ ಓಡಾಟ ಪಾತ್ರದ ನಟಿ.

walking leaf

ನಾಮವಾಚಕ

= walking fern.

walking papers

ನಾಮವಾಚಕ

(ಆಡುಮಾತು) ವಜಾ ಆಜ್ಞೆ: gave him his walking papers ಅವನಿಗೆ ವಜಾ ಆಜ್ಞೆ ಕೊಟ್ಟರು.

walking wounded

ಗುಣವಾಚಕ

(ಸೈನಿಕರು ಮೊದಲಾದವರ ವಿಷಯದಲ್ಲಿ) ಗಾಯಗೊಂಡಿದ್ದರೂ ಓಡಾಡಬಲ್ಲ; ಹಾಸಿಗೆ ಹಿಡಿಯದೆ ನಡೆದಾಡಿಕೊಂಡಿರುವ.

walking wounded

ನಾಮವಾಚಕ

  • (ಯುದ್ಧ ಯಾ ಅಪಘಾತದಲ್ಲಿ) ಗಾಯಗೊಂಡಿದ್ದರೂ ಓಡಾಡಬಲ್ಲ, ಓಡಾಡುತ್ತಿರುವ ವ್ಯಕ್ತಿ ಯಾ ವ್ಯಕ್ತಿಗಳು.
  • (ಆಡುಮಾತು) (ಮುಖ್ಯವಾಗಿ) ಮಾನಸಿಕ ಯಾ ಭಾವಾತ್ಮಕ ತೊಂದರೆಗಳಿಗೆ ಒಳಗಾಗಿರುವ ವ್ಯಕ್ತಿ ಯಾ ವ್ಯಕ್ತಿಗಳು; ವ್ಯಾಕುಲಚಿತ್ತರು; ಮಾನಸಿಕ ಅಸ್ವಸ್ಥರು; ಮಾನಸಿಕ ಘಾಸಿಗೊಳಗಾದವರು.

walking-on part

ನಾಮವಾಚಕ

(ರಂಗಸ್ಥಳದಲ್ಲಿ ಮಾತೇ ಆಡದೆ ಸುಮ್ಮನೆ ಕಾಣಿಸಿಕೊಳ್ಳುವ) ಬರಿಯ ಓಡಾಟದ ನಟ ಯಾ ನಟಿಯ ಪಾತ್ರ.

walking-stick

ನಾಮವಾಚಕ

  • (ನಡೆಯುವಾಗ, ಗಾಳಿಸಂಚಾರ ಹೋಗುವಾಗ ಹಿಡಿದುಕೊಂಡು ಹೋಗುವ) ಕೈಕೋಲು.
  • (ಅಮೆರಿಕನ್‍ ಪ್ರಯೋಗ) = stick insect.

walking-tour

ನಾಮವಾಚಕ

ನಡಗೆ – ಪ್ರವಾಸ; ವಿಹಾರ, ವಿನೋದ ಸಂತೋಷಗಳಿಗಾಗಿ ಕಾಲುನಡಗೆಯಲ್ಲಿ ಮಾಡುವ ಹಲವಾರು ದಿನಗಳ ಪ್ರವಾಸ.

Walkman

ನಾಮವಾಚಕ

ವಾಕ್‍ಮನ್‍; ಒಂದು ವಿಧದ ವೈಯಕ್ತಿಕ ಸ್ಟೀರಿಯೋ ಸಲಕರಣೆ.

walkway

ನಾಮವಾಚಕ

ನಡವೆ; ನಡೆದಾರಿ:

  • ಕಟ್ಟಡದ ಒಂದು ಭಾಗದಿಂದ ಇನ್ನೊಂದಕ್ಕೆ ಹೋಗುವ ದಾರಿ.
  • ತೋಟ ಮೊದಲಾದವುಗಳ ಅಗಲವಾದ ನಡೆದಾರಿ.

wall

ನಾಮವಾಚಕ

ಪದಗುಚ್ಛ

  • (ಕಲ್ಲು, ಇಟ್ಟಿಗೆ, ಕಾಂಕ್ರೀಟ್‍, ಮರದ ದಿಮ್ಮಿ ಯಾ ಹಲಗೆ, ಮೊದಲಾದವುಗಳಿಂದ ಕಟ್ಟಿದ, ಊರು, ಮನೆ, ಕೊಠಡಿ, ಗದ್ದೆ, ಹೊಲ, ತೋಟ, ಮೊದಲಾದವನ್ನು ಪ್ರತ್ಯೇಕಿಸುವ)
    1. ಗೋಡೆ; ಭಿತ್ತಿ; ಕುಡ್ಯ.
    2. (ಆವರಣಕ್ಕಾಗಿ ಕಟ್ಟಿದ) ಪೌಳಿ.
    3. (ದೇವಾಲಯ ಮೊದಲಾದವುಗಳ) ಪ್ರಾಕಾರ.
    4. (ರಕ್ಷಣೆಗಾಗಿ ಕಟ್ಟಿದ) ಕೋಟೆ (ಗೋಡೆ).
    5. ಅಡ್ಡಗೋಡೆ; ಮುಂದೆ ಸಾಗಲು ಅಡ್ಡಿಯಾಗುವ – ಗೋಡೆ, ತಡೆ, ಪ್ರತಿಬಂಧಕ: we must break down the walls between community and community ಜಾತಿಜಾತಿಗಳ ನಡುವಣ ಅಡ್ಡಗೋಡೆಗಳನ್ನು, ಅಡ್ಡಿಗಳನ್ನು, ನಾವು ಒಡೆದುಹಾಕಬೇಕು.
  • (ಚಿತ್ರಗಳು ಮೊದಲಾದವನ್ನು ಪ್ರದರ್ಶಿಸುವ ಕೊಠಡಿ, ಮೊದಲಾದವುಗಳ) ಗೋಡೆ.
  • (ನೋಟಕ್ಕೆ ಯಾ ಪರಿಣಾಮದಲ್ಲಿ) ಗೋಡೆಯಂತಿರುವ ವಸ್ತು; ಕುಡ್ಯಪ್ರಾಯವಾದದ್ದು:
    1. ಪರ್ವತದ ಕಡಿದಾದ ಪಾರ್ಶ್ವ.
    2. ರಕ್ಷಣೆ: a wall of steel bayonets ಉಕ್ಕಿನ ಸನೀನುಗಳ ಕಾಪುಗೋಡೆ, ರಕ್ಷಣಾ ಸಾಲು.
    3. ಅಡತಡೆ: a wall of indifference ಉಪೇಕ್ಷೆಯ ತಡೆಗೋಡೆ, ತಡೆಗಟ್ಟು.
  • (ಒಳಗೆ ಟೊಳ್ಳಾಗಿರುವ ಯಾವುದೇ ವಸ್ತುವಿನ ಯಾ ರಚನೆಯ) ಹೊರಮೈ; ಭಿತ್ತಿ.
  • (ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನ) ಅಂಗ, ಜೀವಾಣು, ಮೊದಲಾದವುಗಳ – ಭಿತ್ತಿ, ಕೋಶ, ಪೊರೆ, ಹೊರಪದರ.
  • (ಖನಿಜಶಾಸ್ತ್ರ) (ಲೋಹದ ಎಳೆ ಯಾ ಗೆರೆಯನ್ನು ಒಳಗೊಂಡ) ಆವರಣ ಶಿಲೆ; ಹೊರಶಿಲೆ.
  • (ಪ್ರಾಚೀನ ಪ್ರಯೋಗ) (ರಸ್ತೆಯ ಕಾಲುಹಾದಿಯಲ್ಲಿ) ಗೋಡೆಯ ಪಕ್ಕ (ಚರಂಡಿಯ ಪಕ್ಕವಲ್ಲ).
  • ರಸ್ತೆಯ ಪಕ್ಕ, ಬದಿ (ನಡುರಸ್ತೆಯಲ್ಲ).

Search Dictionaries

Loading Results

Follow Us :   
  Download Bharatavani App
  Bharatavani Windows App