भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

xenogamy

ನಾಮವಾಚಕ

(ಜೀವವಿಜ್ಞಾನ) ಸಂಕರ, ಮಿಶ್ರ ಗರ್ಭಧಾರಣ; ಬೆರಕೆ ಬಸಿರು; ಅಡ್ಡಬಸಿರು; ಒಂದು ಜಾತಿ ಜೀವಿಯ ಹೆಣ್ಣು ಇನ್ನೊಂದು ಜಾತಿ ಜೀವಿಯ ಗಂಡಿನೊಡನೆ ಕಲೆತು ಸಂತಾನೋತ್ಪತ್ತಿಯಲ್ಲಿ ತೊಡಗುವುದು.

xenolith

ನಾಮವಾಚಕ

(ಭೂವಿಜ್ಞಾನ) ಅನ್ಯಶಿಲೆ; ಸಾಮಾನ್ಯವಾಗಿ ಪಕ್ಕದ ಶಿಲಾರಾಶಿಯೊಂದರಿಂದ ಬಂದು ಸೇರಿಕೊಂಡಿರುವ, ಭಿನ್ನ ಬಗೆಯ ಶಿಲೆಯ ತುಂಡು.

xenon

ನಾಮವಾಚಕ

(ರಸಾಯನವಿಜ್ಞಾನ) ಸಿನಾನ್‍; ಭೂಮಿಯ ವಾತಾವರಣದಲ್ಲಿರುವ ಜಡಾನಿಲಗಳಲ್ಲಿ ಅಥವಾ ವಿರಳಾನಿಲಗಳಲ್ಲಿ ಒಂದಾದ, ಹ್ಲೂರಸೆಂಟ್‍ ದೀಪಗಳಲ್ಲಿ ಬಳಸುವ, 54 ಪರಮಾಣು ಸಂಖ್ಯೆಯ, 131 ಪರಮಾಣು ತೂಕದ, ವರ್ಣ, ವಾಸನೆಗಳಿಲ್ಲದ, ಭಾರವಾದ ಅನಿಲಧಾತು.

Xenophobe

ನಾಮವಾಚಕ

ಪರಕೀಯ, ವಿದೇಶೀ – ದ್ವೇಷಿ; ಹೊರಗಿನಿಂದ ಬಂದವರನ್ನು ಕಂಡರೆ ಆಗದ ವ್ಯಕ್ತಿ.

xenophobia

ನಾಮವಾಚಕ

ಅನ್ಯದ್ವೇಷ; ಪರಕೀಯರ, ವಿದೇಶೀಯರ ಬಗ್ಗೆ ದ್ವೇಷ.

xenophobic

ಗುಣವಾಚಕ

ಅನ್ಯದ್ವೇಷದ; ಪರಕೀಯರನ್ನು ದ್ವೇಷಿಸುವ.

xeranthemum

ನಾಮವಾಚಕ

(ಸಸ್ಯವಿಜ್ಞಾನ) ಸಿರಾಂಥಿಮಮ್‍; ಒಣಗಿದ, ಬಹುಕಾಲವಿರುವ ಸಂಯುಕ್ತಪುಷ್ಪಗಳನ್ನು ಬಿಡುವ, ಸಸ್ಯಗಳ ಕುಲ ಅಥವಾ ಆ ಕುಲದ ಗಿಡ.

xeric

ಗುಣವಾಚಕ

(ಪರಿಸರವಿಜ್ಞಾನ) ಶುಷ್ಕ; ತೇವವಿಲ್ಲದ; ನಿರಾರ್ದ್ರ; ಒಣ ಪರಿಸ್ಥಿತಿಯ ಅಥವಾ ಅದಕ್ಕೆ ಸಂಬಂಧಿಸಿದ.

xero-

ಸಮಾಸ ಪೂರ್ವಪದ

ಒಣಗಿದ; ಶುಷ್ಕ; ನಿರಾರ್ದ್ರ, ಉದಾಹರಣೆಗೆ xerography.

xeroderma

ನಾಮವಾಚಕ

ಚರ್ಮ ಅತಿಯಾಗಿ ಒಣಗುವ ಹಲವಾರು ಚರ್ಮರೋಗಗಳಲ್ಲಿ ಒಂದು, ಮುಖ್ಯವಾಗಿ ichthyosis.

xerograph

ನಾಮವಾಚಕ

ಶುಷ್ಕಲೇಖ; ಶುಷ್ಕಲೇಖನ ವಿಧಾನದಿಂದ ಪಡೆದ ಪ್ರತಿ.

xerographic

ಗುಣವಾಚಕ

ಶುಷ್ಕಲೇಖನದ.

xerographically

ಕ್ರಿಯಾವಿಶೇಷಣ

ಶುಷ್ಕಲೇಖನದಂತೆ; ಶುಷ್ಕಲೇಖನ–ರೀತಿಯಲ್ಲಿ, ವಿಧಾನದಿಂದ.

xerography

ನಾಮವಾಚಕ

ನಕಲು ತೆಗೆಯಬೇಕಾದ ಪತ್ರದ ಅಥವಾ ದಾಖಲೆಯ ಬಿಂಬದಿಂದ ಬರುವ ಬೆಳಕಿಗೆ ಒಡ್ಡಿದ ಮೈಮೇಲೆ ವಿದ್ಯುದಾವೇಶವಿರುವ ಕಡೆಯಲ್ಲೆಲ್ಲ ಕಪ್ಪು ಅಥವಾ ಬಣ್ಣದ ಪುಡಿ ಅಂಟಿಕೊಳ್ಳುವ ಏರ್ಪಾಟಿರುವ, ಒಣನಕಲು ಅಥವಾ ಪ್ರತಿ ತಯಾರಿಕಾ ವಿಧಾನ.

xerophile

ನಾಮವಾಚಕ

ಮರುಸಸ್ಯ; ಶುಷ್ಕಸಸ್ಯ; ಅತ್ಯಂತ ಶುಷ್ಕ ವಾತಾವರಣದಲ್ಲಿ, ಮುಖ್ಯವಾಗಿ ಮರುಭೂಮಿಯಲ್ಲಿ, ಬೆಳೆಯಬಲ್ಲ ಸಸ್ಯ.

xerophilous

ಗುಣವಾಚಕ

(ಸಸ್ಯದ ವಿಷಯದಲ್ಲಿ) ಶುಷ್ಕಪ್ರಿಯ; ಅತ್ಯಂತ ಒಣ ಪರಿಸರಕ್ಕೆ ಒಗ್ಗಿರುವ ಅಥವಾ ಪರಿಸರದಲ್ಲಿ ಬೆಳೆಯುವ.

xerophyte

ನಾಮವಾಚಕ

= xerophile.

Xerox

ನಾಮವಾಚಕ

Proprietary name

  • (ಒಂದು ರೀತಿಯ) ಶುಷ್ಕರೇಖನ ರೀತಿಯಲ್ಲಿ ಪ್ರತಿ ತೆಗೆಯುವುದು; ಜೆರಾಕ್ಸ್‍ ಪ್ರತಿ ತೆಗೆಯುವುದು.
  • ಜೆರಾಕ್ಸ್‍ ಪ್ರತಿ; ಶುಷ್ಕ ರೇಖನ ಪ್ರತಿ.
  • ಸೆರಾಕ್ಸ್‍ ಅಥವಾ ಶುಷ್ಕಲೇಖನ ಯಂತ್ರ.

xerox

ಸಕರ್ಮಕ ಕ್ರಿಯಾಪದ

ಸೆರಾಕ್ಸ್‍ ಪ್ರತಿ, ನಕಲು ತೆಗೆ; ಶುಷ್ಕರೇಖನ ಪ್ರತಿ ಮಾಡು.

Xhosa

ನಾಮವಾಚಕ

(ಬಹುವಚನ ಅದೇ ಅಥವಾ Xhosas).

  • ಕೌಸಾ ಭಾಷೆ; ದಕ್ಷಿಣ ಆಹ್ರಿಕದ ಕೇಪ್‍ ಪ್ರಾಂತದ ಬಂಟು ಜನರ ಭಾಷೆ.
  • ಕೌಸಾ (ಜನಾಂಗದವನು).

Search Dictionaries

Loading Results

Follow Us :   
  Download Bharatavani App
  Bharatavani Windows App