भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yobbishly

ಕ್ರಿಯಾವಿಶೇಷಣ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಒಡ್ಡನಾಗಿ ಯಾ ಪುಂಡನಂತೆ.

yobbishness

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಒಡ್ಡತನ ಯಾ ಪುಂಡತನ.

yobbo

ನಾಮವಾಚಕ

(ಬಹುವಚನ yobbos). (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) = yob.

yod

ನಾಮವಾಚಕ

  • ಹೀಬ್ರೂ ವರ್ಣಮಾಲೆಯಲ್ಲಿ ಹತ್ತನೆಯ ಮತ್ತು ಅತ್ಯಂತ ಚಿಕ್ಕದಾದ ಅಕ್ಷರ.
  • ಅದರ ಅರೆಸ್ವರದ ಧ್ವನಿ.

yodel

ಸಕರ್ಮಕ ಕ್ರಿಯಾಪದ

[ಭೂತರೂಪ & ಭೂತಕೃದಂತ yodelled (ಅಮೆರಿಕನ್‍ ಪ್ರಯೋಗ yodeled); ವರ್ತಮಾನ ಕೃದಂತ yodelling, (ಅಮೆರಿಕನ್‍ ಪ್ರಯೋಗ yodeling)]. (ಸ್ವಿಟ’ರ್ಲೆಂಡಿನ ಪರ್ವತವಾಸಿಗಳಂತೆ) ಸ್ವಾಭಾವಿಕ ದನಿಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ಆಗಾಗ ಕೀರಲು ದನಿಗೆ ಬದಲಾಯಿಸಿ ಕೊಂಡು ಹಾಡಿ ಪುನಃ ಸ್ವಾಭಾವಿಕ ದನಿಗೆ ಬದಲಾಯಿಸಿಕೊಂಡು ಹಾಡು ( ಅಕರ್ಮಕ ಕ್ರಿಯಾಪದ ಸಹ).

yodel

ನಾಮವಾಚಕ

ಸ್ವಾಭಾವಿಕ ದನಿ ಮತ್ತು ಕೀರಲು ದನಿಗಳನ್ನು ಪರ್ಯಾಯವಾಗಿ ಹಾಡುವುದು ಯಾ ಕೂಗುವುದು.

yodeller

ನಾಮವಾಚಕ

ಸ್ವಾಭಾವಿಕ ಧ್ವನಿ ಮತ್ತು ಕೀರಲುಧ್ವನಿಗಳನ್ನು ಪರ್ಯಾಯವಾಗಿ ಹಾಡುವವನು.

yoga

ನಾಮವಾಚಕ

  • ಯೋಗ; ತಪಸ್ಸು – ಧ್ಯಾನಗಳ ಮೂಲಕ ದೈವಚಿಂತನೆಯಲ್ಲಿ ಮನಸ್ಸನ್ನು ಲೀನವಾಗಿಸುವ, ಹಿಂದೂದರ್ಶನ.
  • = hatha yoga.

yogh

ನಾಮವಾಚಕ

ಮಧ್ಯಕಾಲೀನ ಇಂಗ್ಲಿಷ್‍ನಲ್ಲಿ g ಮತ್ತು y ಅಕ್ಷರಗಳ ಬದಲು ಬಳಸುತ್ತಿದ್ದ ಅಕ್ಷರ, (ȝ), ಉದಾಹರಣೆಗೆ zung = young.

yoghurt

ನಾಮವಾಚಕ

ಮೊಸರು; ದಧಿ.

yogi

ನಾಮವಾಚಕ

ಯೋಗಿ; ಯೋಗಾಭ್ಯಾಸ ಮಾಡುವವನು; ಯೋಗಶಾಸ್ತ್ರ ಬಲ್ಲವನು.

yogic

ಗುಣವಾಚಕ

ಯೋಗಿಯ; ಯೋಗಕ್ಕೆ ಸಂಬಂಧಿಸಿದ.

yogism

ನಾಮವಾಚಕ

ಯೋಗತತ್ತ್ವ; ಯೋಗದರ್ಶನ.

yogurt

ನಾಮವಾಚಕ

= yoghurt.

yoicks

ಭಾವಸೂಚಕ ಅವ್ಯಯ

ನರಿ ಬೇಟೆಯಾಡುವವರು ನಾಯಿಗಳನ್ನು ಪ್ರಚೋದಿಸಲು ಬಳಸುವ ‘ಯಾಯಿಕ್ಸ್‍’ ಎಂಬ ಕರೆ, ಕೂಗು.

yoke

ನಾಮವಾಚಕ

ಪದಗುಚ್ಛ

yoke fellow (or mate).

  • ನೊಗ; ಹಲ.
  • (ರೋಮನ್‍ ಚರಿತ್ರೆ) ಸೋತ ಶತ್ರು ಅದರ ಕೆಳಗೆ ಹಾಯ್ದುಹೋಗುವಂತೆ ಎತ್ತಿ ಹಿಡಿಯುತ್ತಿದ್ದ ನೊಗ ಯಾ ಅದರ ಸಂಕೇತವಾದ ಮೂರು ಭರ್ಜಿಗಳ ಕಮಾನು: army passed under the yoke ಸೈನ್ಯ ನೊಗದ ಕೆಳಗೆ ಹಾದುಹೋಯಿತು, ಸೋಲೊಪ್ಪಿಕೊಂಡಿತು.
  • (ರೂಪಕವಾಗಿ)
    1. ಪ್ರಭುತ್ವ; ಆಳ್ವಿಕೆ: submitted to his yoke ಅವನ ಪ್ರಭುತ್ವಕ್ಕೆ ಶರಣಾದರು.
    2. ಅಡಿಯಾಳುತನ; ದಾಸ್ಯ; ಗುಲಾಮಗಿರಿ.
  • (ರೂಪಕವಾಗಿ) (ಮುಖ್ಯವಾಗಿ) ಮದುವೆ; ವಿವಾಹ; ಮದುವೆಯ – ಗಂಟು, ಬಂಧನ, ಕಟ್ಟು.
  • (ಬಹುವಚನ ಅದೇ ಯಾ yokes). ಎತ್ತು ಮೊದಲಾದವುಗಳ ಜೊತೆ; ಜೋಡಿ; ಆರು.
  • (ಪ್ರಾಚೀನ ಪ್ರಯೋಗ) ಒಂದು ಆರಿನ ಜಮೀನು; ಒಂದು ಆರು ಒಂದು ದಿನದಲ್ಲಿ ಉಳಬಹುದಾದಷ್ಟು ಜಮೀನು.
  • (ಬಕೀಟು ಮೊದಲಾದ ಹೊರೆ ಹೊರಲು ಹೆಗಲ ಮೇಲೆ ಇಟ್ಟುಕೊಳ್ಳುವ) ಅಡ್ಡೆ.
  • (ಷರ್ಟು, ಅಂಗಿ, ರವಿಕೆ, ಮೊದಲಾದವುಗಳ) ಹೆಗಲಪಟ್ಟಿ; ಭುಜಪಟ್ಟಿ.
  • (ಲಿಂಗ ಮೊದಲಾದವುಗಳ) ನಡುಪಟ್ಟಿ; ಸೊಂಟಪಟ್ಟಿ.
  • ನೊಗದ ಆಕಾರದ (ಯಾವುದೇ) ವಸ್ತು.
  • (ಗಂಟೆ ತೂಗಹಾಕಿರುವ) ಅಡ್ಡ – ಪಟ್ಟಿ, ಸಲಾಕೆ.
  • (ತುದಿಗಳಿಗೆ ಹಗ್ಗಗಳನ್ನು ಬಿಗಿದಿರುವ ಚುಕ್ಕಾಣಿಯ) ಅಡ್ಡಗಂಬಿ.
  • (ವಿದ್ಯುದ್ಕಾಂತದ ಎರಡು ಧ್ರುವಗಳ ನಡುವಣ) ಮೃದು ಕಬ್ಬಿಣದ ಕಂಬಿ, ಸಲಾಕಿ.

yoke

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಕೆಲಸ ಮೊದಲಾದವಕ್ಕೆ) ಜೊತೆಯಾಗು; ಒಂದಾಗು; ಹೊಂದಿಕೊಂಡು ಮಾಡು.

  • ನೊಗ – ಇಡು, ಹೇರು, ಹೊರಿಸು, ಹೂಡು.
  • (ಮುಖ್ಯವಾಗಿ ಮದುವೆಯ ಮೂಲಕ) ಜೋಡಿ ಕೂಡಿಸು; ಜೊತೆ ಮಾಡು; ಲಗ್ನ ಮಾಡು.
  • (ಕೆಲಸ ಮೊದಲಾದವಕ್ಕೆ) ಜೊತೆಗೂಡಿಸು, ಒಂದಾಗಿಸು.

yoke-bone

ನಾಮವಾಚಕ

ನೊಗದೆಲುಬಉ; ಕಪೋಲಯುಗ್ಮಾಸ್ಥಿ; ತಲೆಯ ಮತ್ತು ಮುಖದ ಎಲುಬಉಗಳನ್ನು ಕೂಡಿಸುವ ಕೆನ್ನೆಯೆಲುಬಉ.

yokel

ನಾಮವಾಚಕ

ಹಳ್ಳಿಗಮಾರ; ಗಾಂಪ; ಗುಗ್ಗು.

yolk

ನಾಮವಾಚಕ

  • ಮೊಟ್ಟೆಯ – ಹಳದಿ ಲೋಳೆ, ಬಂಡಾರ.
  • (ಜೀವವಿಜ್ಞಾನ) (ಬೇರೆ ಯಾವುದೇ ಪ್ರಾಣಿಯ ಮೊಟ್ಟೆಯ) ಹಳದಿ ಲೋಳೆ.

Search Dictionaries

Loading Results

Follow Us :   
  Download Bharatavani App
  Bharatavani Windows App