भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Yorkist

ಗುಣವಾಚಕ

ಯಾರ್ಕ್‍ ಮನೆತನದ ಯಾ ಅದಕ್ಕೆ ಸಂಬಂಧಿಸಿದ.

Yorks.

ಸಂಕ್ಷಿಪ್ತ

Yorkshire.

Yorkshire fog

ನಾಮವಾಚಕ

ಹಾಲ್ಕಸ್‍ ಲನಟಸ್‍ ಕುಲದ, ಮೇವಾಗಿ ಬಳಸುವ ಹುಲ್ಲು.

Yorkshire pudding

ನಾಮವಾಚಕ

ಹುರಿದ ದನದ ಮಾಂಸ ಮೊದಲಾದವನ್ನು ತಿನ್ನುವ ಮೊದಲು ಸೇವಿಸುವ, (ಹಾಲು, ಹಿಟ್ಟು, ಮೊಟ್ಟೆಲೋಳೆ ಮಿಶ್ರಿತ) ಪಾಯಸದಂಥ ಭಕ್ಷ್ಯ.

Yorkshire terrier

ನಾಮವಾಚಕ

(ಮುದ್ದಿಗಾಗಿ ಸಾಕುವ) ಪೊದೆಗೂದಲಿನ, ಸಣ್ಣ ಟೆರಿಯರ್‍ ನಾಯಿ.

Yorkshireman

ನಾಮವಾಚಕ

(ಬಹುವಚನ Yorkshiremen). ಉತ್ತರ ಇಂಗ್ಲೆಂಡಿನ ಯಾರ್ಕ್‍ಷೈರಿನಲ್ಲಿ ಹುಟ್ಟಿದವನು ಯಾ ಅಲ್ಲಿಯ ನಿವಾಸಿ.

Yorkshirewoman

ನಾಮವಾಚಕ

(ಬಹುವಚನ Yorkshirewomen). ಉತ್ತರ ಇಂಗ್ಲೆಂಡಿನ ಯಾರ್ಕ್‍ಷೈರಿನಲ್ಲಿ ಹುಟ್ಟಿದವಳು ಯಾ ಅಲ್ಲಿಯ ನಿವಾಸಿ.

Yoruba

ನಾಮವಾಚಕ

  • (ಪಶ್ಚಿಮ ಆಫ್ರಿಕದ ಕರಾವಳಿಯ) ಯಾರುಬ (ಭಾಷೆ); (ಮುಖ್ಯವಾಗಿ ನೈಜೀರಿಯಾದಲ್ಲಿನ ಕರಿಯ ಜನರ ಭಾಷೆ).
  • ಯಾರುಬ ಜನಾಂಗದವನು.

you

ಸರ್ವನಾಮ

ಪದಗುಚ್ಛ

(ದ್ವಿತೀಯಾ ವಿಭಕ್ತಿ you; ಷಷ್ಠೀವಿಭಕ್ತಿ your, yours).

  • (ಏಕವಚನ) ನೀನು; ನೀವು; ಸಂಬೋಧಿಸುವ ವ್ಯಕ್ತಿ(ಗಳು) ಯಾ ವಸ್ತು(ಗಳು).
  • ನಾಮಪದದೊಡನೆ ಆಶ್ಚರ್ಯಸೂಚಕವಾಗಿ: you fool(s)!, you darling! ಎಲಾ ದಡ್ಡರೇ! ಎಲಾ ಮುದ್ದೇ!
  • (ಸಾಮಾನ್ಯ ಹೇಳಿಕೆಗಳಲ್ಲಿ) ಯಾರೋ ಒಬ್ಬರು; ಯಾರಾದರೂ ಒಬ್ಬರು; ಸಂಬಂಧಪಟ್ಟವರು ಎಲ್ಲರೂ; ಪ್ರತಿಯೊಬ್ಬರೂ: you never can tell ಯಾರೂ ನಿರ್ದಿಷ್ಟವಾಗಿ ಹೇಳಲಾರರು. what are you to do with a child like this? ಇಂಥ ಮಗುವನ್ನು (ಕಟ್ಟಿಕೊಂಡು) ಯಾರೇನು ಮಾಡಲು ಸಾಧ್ಯ?

you’d

ಹ್ರಸ್ವರೂಪ

  • you had.
  • you would.

you’ll

ಹ್ರಸ್ವರೂಪ you will; you shall.

you’re

ಹ್ರಸ್ವರೂಪ you are.

you’ve

ಹ್ರಸ್ವರೂಪ: you have.

you-all

ಸರ್ವನಾಮ

(ಅಮೆರಿಕನ್‍ ಪ್ರಯೋಗ) (ಆಡುಮಾತು) (ಸಾಮಾನ್ಯವಾಗಿ ಒಬ್ಬರಿಗಿಂತ ಹೆಚ್ಚಾಗಿರುವಾಗ) ನೀವು; ನೀವೆಲ್ಲ(ರೂ).

young

ಗುಣವಾಚಕ

ಪದಗುಚ್ಛ

( ತರರೂಪ younger ಉಚ್ಚಾರಣೆ ಯಂಗರ್‍, ತಮರೂಪ youngest ಉಚ್ಚಾರಣೆ ಯಂಗಿಸ್ಟ್‍).

  • ಎಳೆಯ; ಚಿಕ್ಕ; ಕಿರಿಯ; ಬೆಳೆದಿರದ; ವಯಸ್ಸಾಗಿರದ: a young child ಚಿಕ್ಕ ಮಗು.
  • ಯುವಕನಾದ; ತರುಣನಾದ.
  • ಅಪರಿಣತ; ಅನುಭವವಿಲ್ಲದ.
  • ಇತ್ತೀಚಿನ; ನವ; ಹೊಸ: a young institution ಇತ್ತೀಚಿನ ಸಂಸ್ಥೆ.
  • (ರಾತ್ರಿ, ವರ್ಷ, ಶತಮಾನ, ಮೊದಲಾದವು) ಇನ್ನೂ ಆರಂಭ ದಶೆಯಲ್ಲಿರುವ.
  • (ಕುಟುಂಬದ ಹೆಸರು ಮೊದಲಾದವುಗಳ ಜೊತೆಯಲ್ಲಿ) (ಅದೇ ಹೆಸರಿನ ತಂದೆಮಕ್ಕಳನ್ನು ಯಾ ಇಬ್ಬರು ವ್ಯಕ್ತಿಗಳನ್ನು ಪ್ರತ್ಯೇಕಿಸಿ ಹೇಳುವಾಗ): young Jones ಮಗ ಜೋನ್ಸ್‍. the younger Pitt ಕಿರಿಯ ಪಿಟ್‍.
  • (ಸ್ಕಾಟ್ಲೆಂಡ್‍) (ಜಮೀನುದಾರನ) ಉತ್ತರಾಧಿಕಾರಿ: younger of Mackintosh ಚಿಕ್ಕ (ಮ್ಯಾಕಿಂಟಾಷ್‍) ಯಜಮಾನರು.
  • ಹರೆಯದ; ಯುವ; ಚಿಕ್ಕ ವಯಸ್ಸಿಗೆ ಸಹಜವಾದ; ಹರೆಯದಲ್ಲಿ ಅನುಭವಿಸುವ: young love ಹರೆಯದ ಪ್ರೀತಿ.
  • ಯುವ; ತರುಣ; ಯುವಕರನ್ನು ಪ್ರತಿನಿಧಿಸುವ: young Congressites ಯುವ ಕಾಂಗ್ರೆಸ್ಸಿಗರು; ಕಾಂಗ್ರೆಸ್ಸನ್ನು ಪ್ರತಿನಿಧಿಸುವ ತರುಣರು.

young

ನಾಮವಾಚಕ

ಪದಗುಚ್ಛ

(ಸಾಮಾನ್ಯವಾಗಿ ಪ್ರಾಣಿಯ) ಮರಿ; ಕರು; ಪಿಳ್ಳೆ; ಹುಟ್ಟುವ ಮುಂಚಿನ ಯಾ ಹುಟ್ಟಿದ ಮೇಲಿನ ಮರಿ. with young ಗಬ್ಬವಾಗಿ; ಬಸಿರಾಗಿ.

young blood

ನಾಮವಾಚಕ

  • ಕಿರಿಯ(ರು); ಒಂದು ಗುಂಪಿನ, ಚಿಕ್ಕ ವಯಸ್ಸಿನ ಸದಸ್ಯ ಯಾ ಸದಸ್ಯರು.
  • ಷೋಕಿಲಾಲ; ಠಾಕುಠೀಕು ವ್ಯಕ್ತಿ.

young fustic

ನಾಮವಾಚಕ

= Venetian sumac.

Young Turk

ನಾಮವಾಚಕ

  • 1908ರಲ್ಲಿ ತುರ್ಕಿಯ ಕ್ರಾಂತಿಕಾರಿ ಪಕ್ಷದ ತರುಣ ಸದಸ್ಯ.
  • ಯಾವುದೇ ಸ್ಥಾಪಿತ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯನ್ನು ತರಲು ಉತ್ಸುಕನಾದವ; ಮೂಲಭೂತ ಪರಿವರ್ತನಕಾರ.

young turk

ನಾಮವಾಚಕ

(ಹೀನಾರ್ಥಕ ಪ್ರಯೋಗ)

  • ಸಿಡುಕು ಮಗು.
  • ತಂಟೆಕೋರ ಹುಡುಗ.

Search Dictionaries

Loading Results

Follow Us :   
  Download Bharatavani App
  Bharatavani Windows App