भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

youngish

ಗುಣವಾಚಕ

ತುಸು ಎಳಸಾದ; ಸ್ವಲ್ಪ ಚಿಕ್ಕವಯಸ್ಸಿನ.

youngling

ನಾಮವಾಚಕ

(ಪ್ರಾಚೀನ ಪ್ರಯೋಗ) ಮರಿ; ಪಿಳ್ಳೆ; ಎಳೆಯ – ಪ್ರಾಣಿ, ಗಿಡ, ಮನುಷ್ಯ.

youngster

ನಾಮವಾಚಕ

  • (ಚಟುವಟಿಕೆಯ) ಹುಡುಗ; ಮಗು.
  • ಎಳೆಯ; ಸಣ್ಣವನು; ಚಿಕ್ಕ ವಯಸ್ಸಿನವನು.

younker

ನಾಮವಾಚಕ

(ಪ್ರಾಚೀನ ಪ್ರಯೋಗ) = youngster.

your

ಸರ್ವನಾಮ

(ಸ್ವಾಮ್ಯಸೂಚಕ ಷಷ್ಠೀವಿಭಕ್ತಿ ರೂಪ & ಗುಣವಾಚಕ ಆಗಿ ಪ್ರಯೋಗ)

  • ನಿನ್ನ ಯಾ ನಿಮ್ಮ ಯಾ ತಮ್ಮ; ನಿನಗೆ ಯಾ ನಿಮಗೆ ಯಾ ತಮಗೆ – ಸಂಬಂಧಿಸಿದ: your house ನಿನ್ನ ಯಾ ನಿಮ್ಮ ಮನೆ. your own business ನಿನಗೆ ಯಾ ನಿಮಗೆ ಸಂಬಂಧಿಸಿದ ವ್ಯವಹಾರ; ನಿನ್ನ ಯಾ ನಿಮ್ಮ ಸ್ವಂತ ವ್ಯವಹಾರ.
  • (ಆಡುಮಾತು) (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಸುಪರಿಚಿತ; ಸುಪ್ರಸಿದ್ಧ; ಎಲ್ಲರಿಗೂ ತಿಳಿದ: none so fallible as your self-styled expert ನಿಮ್ಮ ತಜ್ಞರು ಎಂದುಕೊಂಡಿರುವವರಷ್ಟು ಯಾ ಎನಿಸಿಕೊಂಡಿರುವವರಷ್ಟು ತಪ್ಪು ಮಾಡುವವರು ಯಾರೂ ಇಲ್ಲ.

yours

ಷಷ್ಠೀವಿಭಕ್ತಿಯ ಸ್ವಾಮ್ಯಸೂಚಕ

ಪದಗುಚ್ಛ

( ಸರ್ವನಾಮ & ಆಖ್ಯಾತಕ ಗುಣವಾಚಕ)

  • ನಿನ್ನದು, ನಿಮ್ಮದು, ನಿನ್ನವು ಯಾ ನಿಮ್ಮವು; ನಿನಗೆ ಯಾ ನಿಮಗೆ ಸೇರಿದ್ದು ಯಾ ಸಂಬಂಧಿಸಿದ್ದು: it is yours ಅದು ನಿನ್ನದು ಯಾ ನಿಮ್ಮದು. it is yours if you will accept ನೀವು ಸ್ವೀಕರಿಸುವುದಾದರೆ ಅದು ನಿಮ್ಮದೇ. yours are over there ನಿನ್ನವು ಯಾ ನಿಮ್ಮವು (ಎಂದರೆ ಸಾಮಾನು ಮೊದಲಾದವು) ಅಲ್ಲಿವೆ. you and yours ನೀನು ಮತ್ತು ನಿನ್ನದು; ನೀನು ಮತ್ತು ನಿನ್ನ ಸಂಸಾರ, ಆಸ್ತಿಪಾಸ್ತಿ, ಮೊದಲಾದವು.
  • ನಿನ್ನ ಕಾಗದ, ಪತ್ರ: yours of the 10th ಹತ್ತನೇ ತಾರೀಖಿನ ನಿನ್ನ ಕಾಗದ.
  • ಕಾಗದ ಯಾ ಪತ್ರವನ್ನು ಮುಗಿಸುವ ಒಕ್ಕಣೆ: yours ever ಎಂದೆಂದಿಗೂ, ಸದಾ ನಿಮ್ಮವ(ನಾದ). yours truly (or faithfully) ನಿಮ್ಮ ವಿಶ್ವಾಸಿ. yours obediently ತಮ್ಮ ವಿಧೇಯ.

yourself

ಸರ್ವನಾಮ

ಪದಗುಚ್ಛ

(ಬಹುವಚನ yourselves ಉಚ್ಚಾರಣೆ ಯೋರ್‍ಸೆಲ್ವ್‍ಸ್‍, ಯುಅರ್‍ಸೆಲ್ವ್‍ಸ್‍).

  • (you ಪದದ ಒತ್ತಿ ಹೇಳುವಾಗಿನ ಯಾ ಆತ್ಮಾರ್ಥಕ ರೂಪ) ನೀನೇ: you yourself ನೀನೇ.
  • (ದೈಹಿಕವಾಗಿ ಯಾ ಮಾನಸಿಕವಾಗಿ) ನಿನ್ನ ಸಹಜ ರೀತಿಯಲ್ಲಿ; ಸಹಜವಾಗಿ: are quite yourself again ಮತ್ತೆ ನಿನ್ನ ಸಹಜ ಸ್ಥಿತಿಗೆ ಬಂದಿದ್ದೀಯೆ.

youth

ನಾಮವಾಚಕ

(ಬಹುವಚನ youths ಉಚ್ಚಾರಣೆ ಯೂದ್ಸ್‍).

  • ತಾರುಣ್ಯ; ಯೌವನ; ಹರೆಯ; ಬಾಲ್ಯಕ್ಕೂ ಪ್ರೌಢದಶೆಗೂ ನಡುವಣ ಅವಧಿ.
  • ತರುಣ; ಯುವಕ: a youth of 16 ಹದಿನಾರು ವರ್ಷದ ತರುಣ.
  • ತಾರುಣ್ಯ; ಯೌವನ; ಹರೆಯದ – ಕಸುವು, ಹೊಸತನ, ಹುರುಪು, ಹುಮ್ಮಸ್ಸು, ಅನನುಭವ, ಮೊದಲಾದ ಗುಣಗಳು: in my hot, raw, vigorous youth ನನ್ನ ಬಿಸಿ, ಹಸಿ, ಹುರುಪಿನ ಹರೆಯದಲ್ಲಿ; ನನ್ನ ಯೌವನದ ಭರದಲ್ಲಿ.
  • (ಬಹುವಚನದಲ್ಲಿ) ಯುವಕ ವೃಂದ; ಯುವಜನ; ತರುಣ ತರುಣಿಯರು: the youth of the country ದೇಶದ ಯುವಜನ(ತೆ).
  • ಬೆಳೆವಣಿಗೆ ಮೊದಲಾದವುಗಳ – ತಾರುಣ್ಯ, ಆರಂಭದ ಹಂತ: the youth of the world ಪ್ರಪಂಚದ – ತಾರುಣ್ಯ, ಆದಿಕಾಲ.

youth centre

ನಾಮವಾಚಕ

ಯುವ – ಕೇಂದ್ರ, ಕ್ಲಬಉ; ಯುವಕರ ವಿರಾಮವೇಳೆಯ ಚಟುವಟಿಕೆಗಳಿಗಾಗಿ ಸ್ಥಾಪಿತವಾದ ಸಂಸ್ಥೆ.

youth club

ನಾಮವಾಚಕ

= youth centre.

youth hostel

ನಾಮವಾಚಕ

ಯುವಜನರ ಪ್ರವಾಸಿ ಮಂದಿರ; ಯುವಕ ಹಾಸ್ಟೆಲು; ಮುಖ್ಯವಾಗಿ ತರುಣ ವಿಹಾರಾರ್ಥಿಗಳು ಅಲ್ಪ ಖರ್ಚಿನಲ್ಲಿ ರಾತ್ರಿಹೊತ್ತು ತಂಗಲು ಕಟ್ಟಿರುವ ಸ್ಥಳ, ಭವನ.

youth hosteller

ನಾಮವಾಚಕ

ತರುಣ ವಿಹಾರಾರ್ಥಿ; ಯುವಕ ಹಾಸ್ಟೆಲುಗಳಲ್ಲಿ ಇಳಿದುಕೊಳ್ಳುವವನು.

youthful

ಗುಣವಾಚಕ

(ಮುಖ್ಯವಾಗಿ ರೂಪಕವಾಗಿ ಯಾ ರೀತಿಯಲ್ಲಿ)

  • ಯೌವನದ; ತಾರುಣ್ಯದ; ಹರೆಯದ: youthful appearance ಯೌವನದ ರೂಪ.
  • ತರುಣಸಹಜವಾದ ಗುಣಲಕ್ಷಣಗಳುಳ್ಳ: youthful impatience ತಾರುಣ್ಯದ ಅಸಹನೆ, ದುಡುಕು.
  • ಯೌವನದ ಹೊಸತನದ ಯಾ ಹುರುಪಿನ : youthful complexion ಯೌವನದ ಕಳೆ, ದೇಹಕಾಂತಿ.

youthfully

ಕ್ರಿಯಾವಿಶೇಷಣ

ತರುಣಸಹಜವಾಗಿ; ಯೌವನಸಹಜ ಹುರುಪು ಮೊದಲಾದವುಗಳಿಂದ.

youthfulness

ನಾಮವಾಚಕ

ಯೌವನಭರಿತತೆ.

yowl

ನಾಮವಾಚಕ

(ನೋವಿನಿಂದ ಬಾಧೆ ಪಡುವ ನಾಯಿ, ಬೆಕ್ಕು, ಮೊದಲಾದವುಗಳ ಕುಯ್ಯೋಮರ್ರೋ ಎಂಬ) ರೋದನ; ಗೋಳು; ಕೂಗು.

yowl

ಅಕರ್ಮಕ ಕ್ರಿಯಾಪದ

(ನೋವಿನಿಂದ ನಾಯಿ, ಬೆಕ್ಕು, ಮೊ.ವುಗಳ ವಿಷಯದಲ್ಲಿ) ರೋದಿಸು; ಕೂಗು; ಕಿರಿಚು; ಕುಯ್ಯೋಮರ್ರೋ ಎನ್ನು.

yr.

ಸಂಕ್ಷಿಪ್ತ

  • year(s).
  • younger.
  • your.

yrs.

ಸಂಕ್ಷಿಪ್ತ

  • years.
  • yours.

ytterbium

ನಾಮವಾಚಕ

(ರಸಾಯನವಿಜ್ಞಾನ) ಯಿಟರ್ಬಿಯಮ್‍; ಲ್ಯಾಂಥನೈಡ್‍ ಶ್ರೇಣಿಯಲ್ಲಿರುವ, ಪರಮಾಣು ಸಂಖ್ಯೆ 70, ಪರಮಾಣು ತೂಕ 173 ಉಳ್ಳ, ವಿವಿಧ ಸಮಸ್ಥಾನಿಗಳ ರೂಪದಲ್ಲಿ ಸ್ವಾಭಾವಿಕವಾಗಿ ದೊರೆಯುವ, ವಿರಳ ಭಸ್ಮಧಾತು, ಸಂಕೇತ Yb.

Search Dictionaries

Loading Results

Follow Us :   
  Download Bharatavani App
  Bharatavani Windows App