भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yackety-yack

ನಾಮವಾಚಕ

= 1yack.

yackety-yack

ಅಕರ್ಮಕ ಕ್ರಿಯಾಪದ

= 2yack.

yaffle

ನಾಮವಾಚಕ

(ಪ್ರಾಂತೀಯ ಪ್ರಯೋಗ) ಪೈಕಸ್‍ ವಿರಿಡಸ್‍ಕುಲದ, ಹಸುರು ಮರಕುಟಿಗ (ಹಕ್ಕಿ).

yager

ನಾಮವಾಚಕ

$^2$jaeger ಪದದ ರೂಪಾಂತರ.

yah

ಭಾವಸೂಚಕ ಅವ್ಯಯ

(ತಿರಸ್ಕಾರಸೂಚಕ) ಥೂ; ಥತ್‍.

yahoo

ನಾಮವಾಚಕ

  • ಪುರುಷಮೃಗ; ಮನುಷ್ಯ(ರೂಪದ) ಮೃಗ; ನರಪಶು.
  • ಮೃಗಪ್ರಾಯ ವ್ಯಕ್ತಿ; ಪಶುವಿನಂತೆ ಒರಟು ಹಾಗೂ ಕಾಮುಕ ಸ್ವಭಾವಗಳನ್ನುಳ್ಳ ವ್ಯಕ್ತಿ.

Yahveh

ನಾಮವಾಚಕ

= Yahweh.

Yahvist

ನಾಮವಾಚಕ

= Yahwist.

Yahweh

ನಾಮವಾಚಕ

Jehovah ಪದದ ರೂಪಾಂತರ.

Yahwist

ನಾಮವಾಚಕ

Jehovist ಪದದ ರೂಪಾಂತರ.

yak

ನಾಮವಾಚಕ

ಚಮರೀಮೃಗ; ಚೌರೀ ಮೃಗ; (ರೇಷ್ಮೆಯಂಥ ಉದ್ದಕೂದಲಿನ, ಹಿಣಿಲುಳ್ಳ, ಗುಟರು ಹಾಕುವ) ಟಿಬೆಟ್ಟಿನ ಕಾಡು ಎತ್ತು.

yakka

ನಾಮವಾಚಕ

(ಆಸ್ಟ್ರೇಲಿಯ) (ಅಶಿಷ್ಟ) ಕೆಲಸ.

Yale lock

ನಾಮವಾಚಕ

Proprietary name ಯೇಲ್‍ಬೀಗ; ಕಚ್ಚುಕಚ್ಚಾದ ಚಪ್ಪಟೆ ಕೀಲಿಕೈಯಿಂದ ತಿರುಗಿಸಲಾಗುವ ಉರುಳೆಯಾಕಾರದ ನಳಿಕೆಯಿರುವ, ಬಾಗಿಲು ಮೊದಲಾದವುಗಳಿಗೆ ಹಾಕುವಂಥ, ಒಂದು ವಿಧದ ಬೀಗ.

yam

ನಾಮವಾಚಕ

  • ಮುಳ್ಳು, ಮುಡಿ – ಗೆಣಸು(ಗೆಡ್ಡೆ):
    1. ಡಯಸ್ಕೋರಿಯ ಕುಲದ, ಉಷ್ಣವಲಯದ ಯಾವುದೇ ಬಳ್ಳಿ.
    2. ಹಿಟ್ಟುಹಿಟ್ಟಾಗಿರುವ, ತಿನ್ನಬಲ್ಲ ಇದರ ಗೆಡ್ಡೆ.
  • (ಅಮೆರಿಕನ್‍ ಪ್ರಯೋಗ) (ಸಿಹಿ) ಗೆಣಸು.

yammer

ನಾಮವಾಚಕ

(ಆಡುಮಾತು ಯಾ ಪ್ರಾಂತೀಯ ಪ್ರಯೋಗ)

  • ಅಳು; ಗೋಳು; ಗೊಣಗಾಟ.
  • ವಿಪರೀತ ಮಾತು.

yammer

ಅಕರ್ಮಕ ಕ್ರಿಯಾಪದ

  • ಅಳು; ಗೋಳಿಡು; ಗೊಣಗುಟ್ಟು.
  • ವಿಪರೀತ ಮಾತನಾಡು; ಗಳಹು.

yammerer

ನಾಮವಾಚಕ

  • ಅಳುಮೋರೆ.
  • ವಿಪರೀತ ಮಾತನಾಡುವವ; ವಾಚಾಳಿ.

yandy

ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ yandies; ಭೂತರೂಪ & ಭೂತಕೃದಂತ yandied). ವಿಶೇಷ ರೀತಿಯಲ್ಲಿ ಕುಲುಕಿ ಅಲ್ಲಾಡಿಸಿ, ಜಲ್ಲಿಸಿ – ಹುಲ್ಲಿನ ಬೀಜಗಳನ್ನು ಕಸದಿಂದ ಬೇರ್ಪಡಿಸು.

yandy

ನಾಮವಾಚಕ

(ಬಹುವಚನ yandies). ವಿಶೇಷ ರೀತಿಯಲ್ಲಿ ಜಲ್ಲಿಸುವ, ಆಳವಿಲ್ಲದ ಬಟ್ಟಲು; ಜರಡಿ ಬೋಗುಣಿ.

yang

ನಾಮವಾಚಕ

(ಚೀಣಿ ತತ್ತ್ವಶಾಸ್ತ್ರ) (ಜಗತ್ತಿನ, ಕಾರ್ಯಶೀಲ) ಪುರುಷತತ್ತ್ವ.

Search Dictionaries

Loading Results

Follow Us :   
  Download Bharatavani App
  Bharatavani Windows App