भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yard-master

ನಾಮವಾಚಕ

ರೈಲ್ವೆ ಅಂಗಳದ ಮೇಲ್ವಿಚಾರಕ.

yardage

ನಾಮವಾಚಕ

  • ಒಟ್ಟು ಗಜಗಳ ಮೊತ್ತ, ಸಂಖ್ಯೆ.
  • ಅಂಗಳದ ಬಾಡಿಗೆ.
  • ಅಂಗಳದ ಉಪಯೋಗ, ಬಳಕೆ.

yardstick

ನಾಮವಾಚಕ

  • ಗಜಕಡ್ಡಿ; ಸಾಮಾನ್ಯವಾಗಿ ಅಂಗುಲ ಮೊದಲಾದವುಗಳಾಗಿ ವಿಭಾಗಿಸಿದ, ಒಂದು ಗಜ ಉದ್ದದ ಅಳತೆಕಡ್ಡಿ.
  • ಅಳತೆಗೋಲು; ಹೋಲಿಕೆಗಾಗಿ ಬಳಸುವ ಮಾನದಂಡ.

yarmulka

ನಾಮವಾಚಕ

ಯೆಹೂದಿ ಗಂಡಸರ ಗುತ್ತನೆಯ ಟೋಪಿ, ಟೊಪ್ಪಿಗೆ.

yarmulke

ನಾಮವಾಚಕ

yarmulka ಪದದ ರೂಪಾಂತರ.

yarn

ನಾಮವಾಚಕ

ಪದಗುಚ್ಛ

spin a yarn ಕಥೆ – ಕಟ್ಟಿ ಹೇಳು, ಹೊಸೆ.

  • (ನೆಯ್ಗೆ, ಹೆಣಿಗೆ, ಹಗ್ಗ, ಮೊದಲಾದವುಗಳಿಗಾಗಿ ನೂತ) ನೂಲುಹುರಿ.
  • (ಆಡುಮಾತು) ಕಟ್ಟುಕಥೆ; ದಂತಕಥೆ; ಕಟ್ಟೆಪುರಾಣ; ಗೊತ್ತುಗುರಿಯಿಲ್ಲದೆ ಸಾಗುವ ದೀರ್ಘ ಮಾತು, ಹರಟೆ, ಕಥೆ ಯಾ ನಿರೂಪಣೆ.

yarn

ಅಕರ್ಮಕ ಕ್ರಿಯಾಪದ

(ಆಡುಮಾತು) ಕಥೆ ಹೆಣೆ; ಕಟ್ಟೆಪುರಾಣ ಹೊಡೆ.

yarran

ನಾಮವಾಚಕ

ಯ್ಯಾರನ್‍ ಮರ; ಆಸ್ಟ್ರೇಲಿಯದ ಹಲವಾರು ಅಕೇಷಿಯ ಮರಗಳಲ್ಲಿ, ಮುಖ್ಯವಾಗಿ ಅಕೇಷಿಯ ಹೋಮಲಾಫಿಲ ಕುಲದ, ಸುವಾಸನೆ ಬೀರುವ ದಾರುವುಳ್ಳ, ಬೇಲಿ ನೆಡಲು, ಸೌದೆ ಮೊದಲಾದವುಗಳಿಗೆ ಬಳಸುವ, ಜಾಲಿಮರದಂಥ ಒಂದು ಚಿಕ್ಕ ಮರ.

yarrow

ನಾಮವಾಚಕ

ಅಕಿಲಿಯ ಕುಲದ, ಕಟುವಾಸನೆಯ ಮತ್ತು ಒಗರಾದ, ಬಹುವಾರ್ಷಿಕ ಸಸ್ಯಮೂಲಿಕೆ, ಮುಖ್ಯವಾಗಿ ರೋಜಮಾರಿ ಸಸ್ಯ.

yashmak

ನಾಮವಾಚಕ

(ಮುಸ್ಲಿಂ ಹೆಂಗಸರು ತೊಡುವ) ಬಉರುಕಿ; ಮುಖಪರದೆ.

yataghan

ನಾಮವಾಚಕ

(ಕಾಪು ಯಾ ಹಿಡಿಕೆಯ ಅಡ್ಡಪಟ್ಟಿಯಿಲ್ಲದ, ಮುಸ್ಲಿಂ ದೇಶಗಳಲ್ಲಿ ಬಳಸುವ) ಇಬ್ಬಾಗುಕತ್ತಿ; ಹಿಡಿಯ ಕಡೆ ಒಳಗಡೆಗೆ ಬಾಗಿದ, ಇನ್ನೊಂದು ಕಡೆ ಹೊರಬಾಗಿದ ಅಲಗುಳ್ಳ ಕತ್ತಿ.

yaw

ಅಕರ್ಮಕ ಕ್ರಿಯಾಪದ

(ಹಡಗು, ವಿಮಾನ, ಅಂತರಿಕ್ಷ ನೌಕೆ, ಮೊದಲಾದವುಗಳ ವಿಷಯದಲ್ಲಿ) ನೇರವಾಗಿ, ದೃಢವಾಗಿ – ಹೋಗದಿರು; (ಮುಖ್ಯವಾಗಿ) ಪಕ್ಕದಿಂದ ಪಕ್ಕಕ್ಕೆ ಓಲಾಡುತ್ತಾ – ಹೋಗು, ಚಲಿಸು.

yaw

ನಾಮವಾಚಕ

(ಹಡಗು ಮೊದಲಾದವುಗಳ ವಿಷಯದಲ್ಲಿ) ಅಡ್ಡಚಲನೆ; ಓಲಾಡುತ್ತಾ ಹೋಗುವುದು.

yawl

ನಾಮವಾಚಕ

  • (ಚರಿತ್ರೆ) (ಮುಖ್ಯವಾಗಿ ನಾಲ್ಕು ಯಾ ಆರು ಹುಟ್ಟುಗಳಿರುವ) ಸಣ್ಣ ವಿಹಾರದೋಣಿ.
  • ಎರಡು ಕೂವೆಯ ದೋಣಿ.
  • ಸಣ್ಣ ಮೀನು(ಗಾರಿಕೆ) ದೋಣಿ. Figure: Yawl

yawn

ಅಕರ್ಮಕ ಕ್ರಿಯಾಪದ

  • (ಬಿರುಕು ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ ಬಿಟ್ಟುಕೊಂಡಿರು; ಬಾಯಿಬಿಟ್ಟುಕೊಂಡಿರು; ಬಾಯಿ ತೆರೆದಿರು: a yawning gulf ಅಗಲವಾಗಿ ತೆರೆದ ಕಂದಕ, ಅಗಳು, ಕೊಲ್ಲಿ.
  • (ಮನುಷ್ಯನ ಯಾ ಪ್ರಾಣಿಯ ವಿಷಯದಲ್ಲಿ) ಆಕಳಿಸು.
  • ಆಕಳಿಸುತ್ತ ಹೇಳು.

yawn

ನಾಮವಾಚಕ

  • ಆಕಳಿಕೆ; ಜೃಂಭಣ.
  • (ಆಡುಮಾತು) ಬೇಸರ ಹುಟ್ಟಿಸುವಂಥದು; ಆಕಳಿಕೆ ಬರಿಸುವಂಥ ಕೆಲಸ ಮೊದಲಾದವು.
  • ಅಗಲವಾದ – ಕಂದಕ, ಅಗಳು, ಬಿರುಕು.

yawner

ನಾಮವಾಚಕ

ಆಕಳಿಸುವವ.

yawningly

ಕ್ರಿಯಾವಿಶೇಷಣ

  • (ಕಂದಕ ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ ಬಾಯಿಬಿಟ್ಟು, ತೆರೆದು.
  • (ಬೇಸರ ಯಾ ಆಯಾಸದಿಂದ) ಆಕಳಿಸುತ್ತಾ.

yawp

ನಾಮವಾಚಕ

  • ಕರ್ಕಶ ಯಾ ಗೊಗ್ಗರು ದನಿಯ ಕೂಗು.
  • ಅಸಂಬದ್ಧವಾದ, ಪೆದ್ದು ಮಾತು.

yawp

ಅಕರ್ಮಕ ಕ್ರಿಯಾಪದ

  • ಕರ್ಕಶ ಯಾ ಗೊಗ್ಗರು ದನಿಯಲ್ಲಿ – ಕೂಗು, ಕಿರಿಚು, ಅರಚು.
  • ಅಸಂಬದ್ಧವಾಗಿ ಮಾತನಾಡು.

Search Dictionaries

Loading Results

Follow Us :   
  Download Bharatavani App
  Bharatavani Windows App