भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yawper

ನಾಮವಾಚಕ

ಕರ್ಕಶ ಯಾ ಗೊಗ್ಗರು ದನಿಯಲ್ಲಿ ಕೂಗುವವನು.

yaws

ನಾಮವಾಚಕ

(ಬಹುವಚನ) (ಸಾಮಾನ್ಯವಾಗಿ ಏಕವಚನವಾಗಿ ಬಳಕೆ) (ಉಷ್ಣದೇಶಗಳಲ್ಲಿ) ಕೆಂಪು ಗುಳ್ಳೆಗಳೇಳುವ ಒಂದು ರೀತಿಯ ಚರ್ಮದ ಅಂಟುರೋಗ.

Yb

ಸಂಕೇತ

(ರಸಾಯನವಿಜ್ಞಾನ) ytterbium ಧಾತು.

yclept

ಗುಣವಾಚಕ

(ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) (ಎಂದು) ಕರೆಯುವ; (ಎಂಬ) ಹೆಸರುಳ್ಳ.

yd.

ಸಂಕ್ಷಿಪ್ತ

yard (ಅಳತೆ).

yds.

ಸಂಕ್ಷಿಪ್ತ

yards (ಅಳತೆ).

ye

ಸರ್ವನಾಮ

ಪದಗುಚ್ಛ

(ಬಹುವಚನ) (ಕಾವ್ಯಪ್ರಯೋಗ, ಪ್ರಾಚೀನ ಪ್ರಯೋಗ, ಧಾರ್ಮಿಕ, ಪ್ರಾಂತೀಯ ಪ್ರಯೋಗ ಯಾ ಹಾಸ್ಯ ಪ್ರಯೋಗ) (thou ಎಂಬಉದರ ಬಹುವಚನ) ತಾವು; ನೀವು: blessed are ye ನೀವು ಪುಣ್ಯವಂತರು. how d’ye do? ನೀವು ಆರೋಗ್ಯವೇ? ye gods! (ಹಾಸ್ಯ ಪ್ರಯೋಗ) ಅಯ್ಯೋ ದೇವರೇ! (ಆಶ್ಚರ್ಯದ ಉದ್ಗಾರ)

ye

ಗುಣವಾಚಕ

(ಹುಸಿ ಪ್ರಾಚೀನ ಪ್ರಯೋಗ) $^1$the: ye olde tea-shoppe ಆ ಪುರಾತನ ಚಹಾ ಅಂಗಡಿ.

yea

ಕ್ರಿಯಾವಿಶೇಷಣ

ಪದಗುಚ್ಛ

yea, yea, nay, nay (ಪ್ರಮಾಣದ ಮಾತುಗಳನ್ನು ಬೆಳೆಸದೆ) ಹೌದೆನ್ನು ಯಾ ಇಲ್ಲವೆನ್ನು; ಹೌದು, ಹೌದು, ಇಲ್ಲ, ಇಲ್ಲ

  • ಹೌದು: let your communication be yea ನೀನು ಹೇಳಿದ್ದು ಹೌದಾಗಲಿ.
  • ನಿಜವಾಗಿಯೂ: ready, yea eager ನಿಜವಾಗಿಯೂ ಉತ್ಸುಕ.

yea

ನಾಮವಾಚಕ

ಪದಗುಚ್ಛ

‘ಹೌದು’ ಎಂಬ ಶಬ್ದ.

  • yea and nay = $^1$shilly-shally.
  • yeas and nays
    1. ಹೌದು ಇಲ್ಲಗಳು; ಬೇಕು ಬೇಡಗಳು.
    2. ಹೌದೆನ್ನುವ ಮತ್ತು ಇಲ್ಲವೆನ್ನುವ, ಆಗಲಿ ಬೇಡ ಎನ್ನುವ – ಅಭಿಮತಗಳು, ಓಟುಗಳು.

yeah

ಕ್ರಿಯಾವಿಶೇಷಣ

ಪದಗುಚ್ಛ

(ಆಡುಮಾತು) ಹೌದು. oh yeah? ಓಹೋ, ಹೌದೇನು? (‘ಹಾಗಿರಲಿಕ್ಕಿಲ್ಲ’ ಎಂದು ಸೂಚಿಸುವಲ್ಲಿ).

yean

ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) (ಕುರಿಯ ಯಾ ಆಡಿನ ವಿಷಯದಲ್ಲಿ) ಈನು; ಮರಿ ಹಾಕು (ಅಕರ್ಮಕ ಕ್ರಿಯಾಪದ ಸಹ).

yeanling

ನಾಮವಾಚಕ

(ಪ್ರಾಚೀನ ಪ್ರಯೋಗ) ಕುರಿಮರಿ; ಆಡಿನ ಮರಿ.

year

ನಾಮವಾಚಕ

ಪದಗುಚ್ಛ

  • ವರ್ಷ; (ಸಂ)ವತ್ಸರ; ಅಬ್ದ:
    1. ಸೌರ(ಮಾನ)ವರ್ಷ; ವಿಷುವದ್ವರ್ಷ; ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಘಂಟೆ, 48 ನಿಮಿಷ, 46 ಸೆಕೆಂಡುಗಳ ಅವಧಿ: (astronomical year, equinoctial year, natural year, solar year, tropical year ಎಂದೂ ಪ್ರಯೋಗ)
    2. ವ್ಯಾವಹಾರಿಕ ವರ್ಷ; ಜನವರಿ 1ರಿಂದ ಡಿಸೆಂಬರ್‍ 31ರವರೆಗಿನ 365 ದಿನಗಳ ಅವಧಿ (calendar year, civil year, common year ಎಂದೂ ಪ್ರಯೋಗ) ಯಾ 366 ದಿನಗಳ ಅವಧಿ (leap year ಎಂದೂ ಪ್ರಯೋಗ).
    3. ಯಾವುದೇ ತಾರೀಖಿನಿಂದ ಪ್ರಾರಂಭವಾಗಿ 365 ದಿನಗಳು ಪೂರೈಸುವ ಅವಧಿ: four years ago ನಾಲ್ಕು ವರ್ಷಗಳ ಹಿಂದೆ.
    4. ಒಂದು ನಿರ್ದಿಷ್ಟ ಕ್ರಿಯೆ, ಕಾರ್ಯಕ್ರಮ ಯಾ ಚಟುವಟಿಕೆಗಳಿಗಾಗಿ ನಿಗದಿಪಡಿಸಿರುವ ಅವಧಿ: school year ಶಾಲಾವರ್ಷ; ಶೈಕ್ಷಣಿಕ ವರ್ಷ; ಶಾಲೆಯಲ್ಲಿ ಪಾಠಪ್ರವಚನ ನಡೆಯುವ ಅವಧಿ. tax year ತೆರಿಗೆ ವರ್ಷ. financial year ಆರ್ಥಿಕವರ್ಷ; ವಿತ್ತವರ್ಷ; ಹಣಕಾಸಿನ ವರ್ಷ; ತೆರಿಗೆ, ಲೆಕ್ಕಾಚಾರ, ಮೊದಲಾದವುಗಳಿಗಾಗಿ ಬ್ರಿಟನ್ನಿನಲ್ಲಿ ಏಪ್ರಿಲ್‍ 1ರಿಂದ ಯಾ ಅಮೆರಿಕದಲ್ಲಿ ಜನವರಿ 1ರಿಂದ ಯಾ ಜುಲೈ 1ರಿಂದ ಪ್ರಾರಂಭವಾಗುವ ವರ್ಷ.
  • (ಬಹುವಚನದಲ್ಲಿ) ವಯಸ್ಸು ಯಾ ಜೀವಿತ ಕಾಲ: young for his years ಅವನಿಗೆ ಆಗಿರುವ ವಯಸ್ಸಿಗಿಂತಲೂ ಚಿಕ್ಕವನಾಗಿ ಕಾಣುತ್ತಾನೆ.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಆಡುಮಾತು) ಬಹಳ ವರ್ಷ(ಗಳು); ಅತಿ ದೀರ್ಘ ಕಾಲ: it took years to get served ಇದು ಉಪಯೋಗಕ್ಕೆ ಬರಬೇಕಾದರೆ ದೀರ್ಘಕಾಲ ತೆಗೆದುಕೊಂಡಿತು.
  • ಒಂದೇ ಶೈಕ್ಷಣಿಕ ವರ್ಷದಲ್ಲಿ ಶಾಲಾಕಾಲೇಜುಗಳನ್ನು ಸೇರುವ ವಿದ್ಯಾರ್ಥಿಗಳ ತಂಡ, ವರ್ಗ.

year-long

ಗುಣವಾಚಕ

ವರ್ಷಾದ್ಯಂತದ; ವರ್ಷಗಟ್ಟಳೆಯ; ವರ್ಷವಿಡೀ, ಪೂರ್ತಿ ಒಂದು ವರ್ಷ – ಬಾಳುವ.

year-round

ಗುಣವಾಚಕ

ವರ್ಷವಿಡೀ ಇರುವ; ವರ್ಷವೆಲ್ಲವೂ ಇರುವಂಥ; ವರ್ಷಾದ್ಯಂತದ.

yearbook

ನಾಮವಾಚಕ

ವಾರ್ಷಿಕ ಪುಸ್ತಕ; ಒಂದು ವಿಷಯವಾಗಿ ಇತ್ತೀಚಿನ ಸಂಗತಿಗಳನ್ನೆಲ್ಲ ಒಳಗೊಂಡ, ಪ್ರತಿವರ್ಷ ಯಾ ವರ್ಷಕ್ಕೊಮ್ಮೆ ಪ್ರಕಟವಾಗುವ ಪುಸ್ತಕ.

yearling

ನಾಮವಾಚಕ

  • ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಎರಡು ವರ್ಷಕ್ಕಿಂತ ಕಡಮೆ ವಯಸ್ಸಿನ ಪ್ರಾಣಿ.
  • ಹುಟ್ಟಿದ ವರ್ಷ ಕಳೆದು ತರುವಾಯದ ವ್ಯಾವಹಾರಿಕ ವರ್ಷದಲ್ಲಿರುವ ಜೂಜುಕುದುರೆ ಮರಿ.

yearling

ಗುಣವಾಚಕ

  • ಒಂದು ವರ್ಷದ; ಒಂದು ವರ್ಷ ಪ್ರಾಯದ: yearling heifer (ಹಸುವಿನ) ಒಂದು ವರ್ಷದ ಹೆಣ್ಣು ಕರು. yearling bride (ಮದುವೆ ನಿಶ್ಚಯವಾದ ಅನಂತರ) ಒಂದು ವರ್ಷ ವಧೂದೆಸೆಯಲ್ಲಿರುವವಳು.
  • ಒಂದು ವರ್ಷದ ನಂತರ ಅವಧಿ ಮುಗಿದು ಹೋಗುವ; ಒಂದು ವರ್ಷ ಮಾತ್ರ ಸಿಂಧುವಾಗಿರುವ: yearling bonds ಒಂದು ವರ್ಷ ಅವಧಿಗೆ ಸೀಮಿತವಾದ ಸಾಲಪತ್ರಗಳು.

yearly

ಗುಣವಾಚಕ

  • ವಾರ್ಷಿಕ; ವರ್ಷಕ್ಕೊಮ್ಮೆ – ಮಾಡುವ, ಬರುವ, ಆಗುವ, ಉತ್ಪಾದಿಸುವ.
  • ಒಂದು ವರ್ಷದ; ಒಂದು ವರ್ಷ ಕಾಲದ; ಒಂದು ವರ್ಷ ಬಾಳಿಕೆ ಬರುವ.

Search Dictionaries

Loading Results

Follow Us :   
  Download Bharatavani App
  Bharatavani Windows App