भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yearly

ಕ್ರಿಯಾವಿಶೇಷಣ

  • ವರ್ಷಕ್ಕೊಮ್ಮೆ; ವಾರ್ಷಿಕವಾಗಿ.
  • ವರ್ಷಂಪ್ರತಿ; ವರ್ಷೇ ವರ್ಷೇ.

yearn

ಅಕರ್ಮಕ ಕ್ರಿಯಾಪದ

  • (ಕರುಣೆ, ಪ್ರೀತಿ, ವಿಶ್ವಾಸ, ಮೊದಲಾದವುಗಳಿಗಾಗಿ) ಹಂಬಲಿಸು; ಹಾತೊರೆ; ಆಶಿಸು: yearning for rest ವಿಶ್ರಾಂತಿಗೋಸ್ಕರ ಹಾತೊರೆಯುತ್ತಾ.
  • ಮರುಗು; ಅನುಕಂಪದಿಂದ ಕೂಡಿರು; ಮೃದುಮನಸ್ಕನಾಗು.

yearner

ನಾಮವಾಚಕ

ಹಂಬಲಿಗ; ಹಾತೊರೆಯುವವ.

yearning

ನಾಮವಾಚಕ

ಹಂಬಲ; ಗೀಳು; ಹಾತೊರೆಯುವುದು.

yearning

ಗುಣವಾಚಕ

ಹಂಬಲಿಸುವ; ಹಾತೊರೆಯುವ; ಉತ್ಕಟವಾಗಿ ಆಶಿಸುವ.

yeast

ನಾಮವಾಚಕ

ಪದಗುಚ್ಛ

  • ಮಂಡ; ಕಿಣ್ವ; ಹುದುಗು.
  • ಹುದುಗಿನ ಪುಡಿ.
  • ಕಸಿಮಾಡುವುದರಿಂದ ಯಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣುಜೀವಿ ಬಊಷ್ಟುಗಳಲ್ಲೊಂದು.

yeastily

ಕ್ರಿಯಾವಿಶೇಷಣ

  • ನೊರೆಗೂಡಿ; ನೊರೆನೊರೆಯಾಗಿ; ಹುದುಗುಹುದುಗಾಗಿ.
  • ಬರಿ ನೊರೆಯಿಂದ ಕೂಡಿ; ನಿಸ್ಸಾರವಾಗಿ.

yeastiness

ನಾಮವಾಚಕ

ಬರಿ ನೊರೆ (ಗೂಡಿರುವುದು); ಹುದುಗಿನಂತಿರುವ ಸ್ಥಿತಿ.

yeastless

ಗುಣವಾಚಕ

ಹುದುಗಿಲ್ಲದ; ಹುದುಗು ಸೇರಿಸದ.

yeastlike

ಗುಣವಾಚಕ

ಹುದುಗಿನಂಥ; ಕಿಣ್ವದ ಹಾಗಿರುವ.

yeasty

ಗುಣವಾಚಕ

( ತರರೂಪ yeastier, ತಮರೂಪ yeastiest).

  • (ಹುದುಗಿನಂತೆ) ನೊರೆಗೂಡಿದ; ನೊರೆನೊರೆಯಾದ; ಬಉದ್ಬುದದ.
  • ಹುದುಗು ಬಂದಿರುವ.
  • ಹುದುಗಿನಂಥ.
  • ಹುದುಗಿನ ಪರಿಣಾಮ ಮಾಡುವ.
  • (ಮಾತಿನ ವಿಷಯದಲ್ಲಿ) ಬರಿ ನೊರೆಯ; ನಿಸ್ಸಾರವಾದ.

yegg

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಂಚಾರಿ ಕನ್ನಗಳ್ಳ ಯಾ ಪೆಠಾರಿಗಳ್ಳ.

yell

ಸಕರ್ಮಕ ಕ್ರಿಯಾಪದ

  • (ನೋವು, ಭಯ, ಕೋಪ, ಉತ್ಸಾಹ, ಸಂತೋಷ, ಮೊದಲಾದವುಗಳಿಂದ) ಚೀರು; ಕೀರು; ಅರಚು; ಒರಲು; ಬೊಬ್ಬೆಯಿಡು ( ಅಕರ್ಮಕ ಕ್ರಿಯಾಪದ ಸಹ): yelled with laughter ನಗೆಯ ಅಬ್ಬರವೆಬ್ಬಿಸಿದ. yelled curses ಅರಚಿ ಶಾಪಹಾಕಿದ.
  • ಕೂಗು; ಕಿರಿಚು( ಅಕರ್ಮಕ ಕ್ರಿಯಾಪದ ಸಹ).

yell

ನಾಮವಾಚಕ

  • (ನೋವು, ಕೋಪ, ಭಯ, ಪ್ರೋತ್ಸಾಹ, ಸಂತೋಷ, ಮೊದಲಾದವುಗಳಿಂದ ಮಾಡುವ) ಚೀರಾಟ; ಬೊಬ್ಬೆ; ಹುಯಿಲು.
  • (ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಕ್ರೀಡಾತಂಡವನ್ನು ಹುರಿದುಂಬಿಸಲು ಮಾಡುವ) ವ್ಯವಸ್ಥಿತವಾದ – ಕೂಗಾಟ, ಉತ್ತೇಜನೆ ಘೋಷ.
  • (ಅಶಿಷ್ಟ) ವಿಚಿತ್ರ ವಸ್ತು ಯಾ ವಿಕಟ ವ್ಯಕ್ತಿ.

yellow

ಗುಣವಾಚಕ

  • ಹಳದಿಯ; ಅರಿಸಿನ ಬಣ್ಣದ; ಪೀತ; ಹರಿದ್ರ(ವರ್ಣದ); ಹಳದಿ ಬಣ್ಣದ (ಸಸ್ಯ ಮತ್ತು ಪ್ರಾಣಿಗಳ ಹೆಸರುಗಳಲ್ಲಿ ದೇಹಾಂಗಗಳ ಹಳದಿ ಬಣ್ಣದ ಕಾರಣದಿಂದ ವಿಶೇಷಣವಾಗಿ ಬಳಕೆ).
  • ಹಣ್ಣೆಲೆ, ಬಲಿತ ಗೋಧಿ, ಮೊದಲಾದವುಗಳ ಬಣ್ಣದ.
  • ಹಳದಿ ಚರ್ಮ ಯಾ ಹಳದಿ ಮೈ ಬಣ್ಣ ಉಳ್ಳ.
  • (ರೂಪಕವಾಗಿ) (ದೃಷ್ಟಿ, ಮನೋಭಾವ, ಮೊದಲಾದವುಗಳ ವಿಷಯದಲ್ಲಿ)
    1. ಮತ್ಸರದ; ಅಸೂಯೆಯ; ಈರ್ಷ್ಯೆಯ.
    2. ಸಂಶಯಾತ್ಮಕ.
  • ಹೇಡಿತನದ; ಪುಕ್ಕಲ.
  • (ವೃತ್ತಪತ್ರಿಕೆಗಳು ಮೊದಲಾದವುಗಳ ವಿಷಯದಲ್ಲಿ) ಪೀತ; ಹಳದಿ; ನೀತಿನಿಷ್ಠೆಯಿಲ್ಲದೆ, ನಿರ್ಲಜ್ಜೆಯಿಂದ ಉದ್ರೇಕಕಾರಿ ಸುದ್ದಿಗಳನ್ನು ಹರಡುವ: the yellow press ಪೀತ (ಸುದ್ದಿ)ಪತ್ರಿಕೆಗಳು; ಪೀತ ಪತ್ರಿಕೋದ್ಯಮ.

yellow

ನಾಮವಾಚಕ

  • ಹಳದಿ(ಬಣ್ಣ); ಹರಿದ್ರ; ಅರಿಸಿನ ಬಣ್ಣ ಯಾ ಪೀತವರ್ಣದ್ರವ್ಯ.
  • ಹಳದಿ ಬಣ್ಣದ ಬಟ್ಟೆ, ಉಡುಪು, ಮೊದಲಾದವು: dressed in yellow ಹಳದಿಬಟ್ಟೆಯನ್ನುಟ್ಟು.
  • (ಸ್ನೂಕರ್‍ ಮೊದಲಾದ ಆಟದಲ್ಲಿ)
    1. ಹಳದಿ ಚೆಂಡು, ಕಾಯಿ, ಮೊದಲಾದವು.
    2. ಇಂಥ ಹಳದಿ ಚೆಂಡು, ಕಾಯಿ, ಮೊದಲಾದವುಗಳಿಂದ ಆಡುವ ಆಟಗಾರ.
  • (ಸಾಮಾನ್ಯವಾಗಿ ಸಂಯುಕ್ತಪದಗಳಲ್ಲಿ) ಹಳದಿ ಪತಂಗ ಯಾ ಚಿಟ್ಟೆ.
  • (ಬಹುವಚನದಲ್ಲಿ) ಕುದುರೆ ಮೊದಲಾದವುಗಳ ಕಾಮಾಲೆ ರೋಗ.
  • (ಅಮೆರಿಕನ್‍ ಪ್ರಯೋಗ) (ಪೀಚ್‍ ಗಿಡಗಳಿಗೆ ತಗುಲಿ ಎಲೆಗಳು ಹಳದಿಬಣ್ಣಕ್ಕೆ ತಿರುಗುವ) ಹಳದಿ ರೋಗ.
  • (ಆಡುಮಾತು) ಪುಕ್ಕಲುತನ; ಹೇಡಿತನ; ಹಂದೆತನ.

yellow

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಹಳದಿಯಾಗಿಸು; ಹಳದಿ ಬಣ್ಣಕ್ಕೆ ತಿರುಗಿಸು: paper yellowed with age ಕಾಲವಶದಿಂದ ಹಳದಿಬಣ್ಣಕ್ಕೆ ತಿರುಗಿದ ಕಾಗದ. ಹಳದಿಯಾಗು; ಹಳದಿ ಬಣ್ಣಕ್ಕೆ ತಿರುಗು: the yellowing leaves ಹಳದಿಯಾಗುತ್ತಿರುವ ಎಲೆಗಳು.

yellow arsenic

ನಾಮವಾಚಕ

= orpiment.

yellow card

ನಾಮವಾಚಕ

(ಕಾಲ್ಚೆಂಡಾಟ) ಹಳದಿ – ಕಾರ್ಡು, ಚೀಟಿ; ಆಟಗಾರನಿಗೆ ಎಚ್ಚರಿಕೆ ಕೊಡಲು ಅಂಪೈರ್‍ ತೋರಿಸುವ ಹಳದಿ ಬಣ್ಣದ ಕಾರ್ಡು.

yellow cedar

ನಾಮವಾಚಕ

ಹಳದಿ ಸೀಡರ್‍; ಅಮೆರಿಕದ ವಾಯವ್ಯ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣದ ದೇವದಾರು ಬಳಗದ, ಅಲಂಕಾರದ ಒಂದು ಮರ.

Search Dictionaries

Loading Results

Follow Us :   
  Download Bharatavani App
  Bharatavani Windows App