English-Kannada Nighantu (University of Mysore)
University of Mysore
Y
ಸಂಕೇತ
(ರಸಾಯನವಿಜ್ಞಾನ) yttrium ಧಾತು.
Y, y
ನಾಮವಾಚಕ
ಮೊದಲಾದವು.
- ಇಂಗ್ಲಿಷ್ ವರ್ಣಮಾಲೆಯ 25ನೆಯ ಅಕ್ಷರ.
- (ಬೀಜಗಣಿತ) (ಸಾಮಾನ್ಯವಾಗಿ $y$) ಎರಡನೆಯ ಅಜ್ಞಾತ ಮೊತ್ತದ ಸಂಕೇತ.
- (ಜ್ಯಾಮಿತಿ) ಎರಡನೆಯ ಸ್ಥಾನನಿರ್ದೇಶಕ.
- (ರೇಖೆಗಳು, ನಳಿಕೆಗಳು, ರಸ್ತೆಗಳು, ಮೊದಲಾದವುಗಳ) Y ಆಕಾರದ ರಚನೆ, ಜೋಡಣೆ, ವ್ಯವಸ್ಥೆ.
- ಕವಲು (ಆಕಾರದ)–ಬಂಧನಿ, ಹಿಡಿಕಟ್ಟು, ಆಸರೆ ಕಂಬ,
y-
ಪೂರ್ವಪ್ರತ್ಯಯ(ಪ್ರಾಚೀನ ಪ್ರಯೋಗ) ಭೂತಕೃದಂತಗಳು, ಸಮುದಾಯವಾಚಕ ನಾಮವಾಚಕಗಳು, ಮೊದಲಾದವನ್ನು ರಚಿಸುವ ಪೂರ್ವಪ್ರತ್ಯಯ, ಉದಾಹರಣೆಗೆ yclept.
Y-chromosome
ನಾಮವಾಚಕ
(ಜೀವವಿಜ್ಞಾನ) ವೈಕ್ರೋಮಸೋಮ್; ಹೆಣ್ಣು ಜೀವಕೋಶದಲ್ಲಿಲ್ಲದೆ, ಗಂಡು ಜೀವಕೋಶದಲ್ಲಿ ಮಾತ್ರ ಎಕ್ಸ್ ಕ್ರೋಮಸೋಮ್ ಜೊತೆಗೆ ಇರುವ ಲೈಂಗಿಕ ಕ್ರೋಮೊಸೋಮ್.
Y-cross
ನಾಮವಾಚಕ
Y ಆಕಾರದ ಶಿಲುಬೆ.
Y-fronts
ನಾಮವಾಚಕ
Proprietary name ಮುಂದುಗಡೆ Y ಆಕಾರದ ಕೂಡುಹೊಲಿಗೆಯಿರುವ (ಪುರುಷರ ಯಾ ಹುಡುಗರ) ಚಡ್ಡಿಗಳು.
Y-moth
ನಾಮವಾಚಕ
ರೆಕ್ಕೆಗಳ ಮೇಲೆ Y ಗುರುತುಗಳಿರುವ ಪ್ಲೂಸಿಯ ಕುಲದ ಚಿಟ್ಟೆ.
y.
ಸಂಕ್ಷಿಪ್ತ
year(s).
yabbie
ನಾಮವಾಚಕ
= yabby.
yabby
ನಾಮವಾಚಕ
(ಬಹುವಚನ yabbies). (ಆಸ್ಟ್ರೇಲಿಯ) ಯಾಬಿ:
- ಎರೆನಳ್ಳಿ; ಎರೆಯಾಗಿ ಬಳಸುವ, ಮುಖ್ಯವಾಗಿ ಚೆರಾಕ್ಸ್ ಕುಲದ, ಸಿಹಿನೀರಿನ ಚಿಕ್ಕ ಮುಳ್ಳುನಳ್ಳಿ.
- ಕಡಲ ಪ್ರಾನು; ಅನೇಕವೇಳೆ ಎರೆಯಾಗಿ ಬಳಸುವ, ಕಲಿಯನಸ ಆಸ್ಟ್ರೇಲಿಯಿನ್ಸಿಸ್ ಕುಲದ, ಕಡಲ ವಲ್ಕವಂತ ಜೀವಿ.
yacht
ನಾಮವಾಚಕ
- ಓಡುದೋಣಿ; ಮುಖ್ಯವಾಗಿ ಪಂದ್ಯದ, ವೇಗದ ಹಗುರ ದೋಣಿ.
- (ಮರಳು, ಹಿಮಗಡ್ಡೆ, ಮೊದಲಾದವುಗಳ ಮೇಲೆ ಸಂಚರಿಸಬಲ್ಲ ಅಂಥ) ಓಡುದೋಣಿ.
- (ಹುಟ್ಟುಗಳಿಂದಲ್ಲದೆ ಹಾಯಿ, ಆವಿ, ವಿದ್ಯುಚ್ಫಕ್ತಿ, ಮೊದಲಾದ ಚಾಲಕಶಕ್ತಿಗಳಿಂದ ನಡೆಯುವ) ಕ್ರೀಡಾನೌಕೆ; ವಿಹಾರ ದೋಣಿ.
yacht
ಅಕರ್ಮಕ ಕ್ರಿಯಾಪದ
- ನೌಕಾಪಂದ್ಯವಾಡು.
- ವಿಹಾರದೋಣಿಯಲ್ಲಿ ವಿಹರಿಸು.
yacht-club
ನಾಮವಾಚಕ
(ಮುಖ್ಯವಾಗಿ) ನೌಕಾ ಯಾ ವಿಹಾರ ಪಂದ್ಯ ಸಂಘ.
yachting
ನಾಮವಾಚಕ
- ನೌಕಾಪಂದ್ಯ ಆಡುವುದು.
- ಕ್ರೀಡಾದೋಣಿ ವಿಹಾರ.
yachtsman
ನಾಮವಾಚಕ
(ಬಹುವಚನ yachtsmen; ಸ್ತ್ರೀಲಿಂಗ yachtswoman ಬಹುವಚನ yachtswomen).
- ನೌಕಾವಿಹಾರಿ.
- ನೌಕಾಪಂದ್ಯದವನು.
yack
ನಾಮವಾಚಕ
(ಅಶಿಷ್ಟ, ಹೀನಾರ್ಥಕ ಪ್ರಯೋಗ) ಜಳ್ಳು ಹರಟೆ; ಬೇಡವಾದ ಒಂದೇ ಸಮನಾದ ವಟವಟ ಮಾತುಗಳು.
yack
ಅಕರ್ಮಕ ಕ್ರಿಯಾಪದ
(ಅಶಿಷ್ಟ, ಹೀನಾರ್ಥಕ ಪ್ರಯೋಗ) ಜಳ್ಳು ಹರಟೆ – ಹೊಡೆ, ಕೊಚ್ಚು; ಮನಸ್ವೀ ಗಳಹು.
yacka
ನಾಮವಾಚಕ
yakka ಪದದ ರೂಪಾಂತರ.
yacker
ನಾಮವಾಚಕ
yakka ಪದದ ರೂಪಾಂತರ.