भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

zero

ಗುಣವಾಚಕ

ಶೂನ್ಯಮೌಲ್ಯದ; ಶೂನ್ಯಪ್ರಮಾಣದ; ಅಭಾವದ; ರಹಿತವಾದ: zero population growth ಶೂನ್ಯಪ್ರಮಾಣದ ಜನಸಂಖ್ಯಾವರ್ಧನೆ; ಜನಸಂಖ್ಯೆಯ ಬೆಳವಣಿಗೆಯ, ಹೆಚ್ಚಳದ ಅಭಾವ.

zero

ಸಕರ್ಮಕ ಕ್ರಿಯಾಪದ

ಪದಗುಚ್ಛ

  • (ಯಂತ್ರ ಸಲಕರಣೆ ಮೊದಲಾದವನ್ನು) ಸೊನ್ನೆ ಬಿಂದುವಿಗೆ ತಿರುಗಿಸು, ಅಳವಡಿಸು.
  • ಬಂದೂಕ ಹಾರಿಸಲು ಅದರ ಲಕ್ಷ್ಯಕ್ಕೆ ಸರಿಯಾಗಿ ಗುರಿ ಸಿದ್ಧಪಡಿಸು, ಅಳವಡಿಸು.

zero option

ನಾಮವಾಚಕ

(ಎರಡೂ ಕಡೆ ಕೆಲವು ಬಗೆಯ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ನೀಡುವ) ನಿಶ್ಶಸ್ತ್ರೀಕರಣದ ಸಲಹೆ, ಸೂಚನೆ.

zero-hour

ನಾಮವಾಚಕ

  • (ಸೈನ್ಯ) ಪ್ರಾರಂಭ ಕಾಲ; ಯೋಜಿಸಿದ (ಮುಖ್ಯವಾಗಿ ಸೈನಿಕ) ಕಾರ್ಯಕ್ರಮವೊಂದನ್ನು ಪ್ರಾರಂಭಿಸಲು, ಚಾಲನೆಗೊಳಿಸಲು ನಿಗದಿಪಡಿಸಿದ ಸಮಯ.
  • ನಿರ್ಣಾಯಕ ಬಿಂದು.

zero-rated

ಗುಣವಾಚಕ

ಮೌಲ್ಯವರ್ಧಿತ ತೆರಿಗೆ ವಿಧಿಸದ.

zero-sum

ಗುಣವಾಚಕ

ಸೊನ್ನೆ, ಶೂನ್ಯ – ಫಲದ, ಪರಿಣಾಮದ, ಫಲಿತದ; (ಆಟ, ರಾಜಕೀಯ ಪರಿಸ್ಥಿತಿ, ಮೊದಲಾದವುಗಳ ವಿಷಯದಲ್ಲಿ) ಒಂದು ಪಕ್ಷ ಗೆದ್ದುದನ್ನು, ಪಡೆದುದನ್ನು ಇನ್ನೊಂದು ಪಕ್ಷ ಕಳೆದುಕೊಳ್ಳುವ ಮೂಲಕ ಉಂಟಾದ ಒಟ್ಟಾರೆ, ಒಟ್ಟಿನ ಮೇಲೆ ಯಾವುದೇ ಫಲ, ಪರಿಣಾಮ, ಬದಲಾವಣೆ ಯಾ ವ್ಯತ್ಯಾಸ ಆಗದಿರುವ.

zeroth

ಗುಣವಾಚಕ

ಸೊನ್ನೆಯ; ಸಂಖ್ಯಾಶ್ರೇಣಿಯಲ್ಲಿ ಒಂದನೆಯದಕ್ಕಿಂತ ಹಿಂದಿನ; ಒಂದು ಸಾಲಿನಲ್ಲಿ ಮೊದಲನೆಯದು ಎಂದು ಭಾವಿಸಿರುವುದಕ್ಕಿಂತ ಹಿಂದಿನ.

zest

ನಾಮವಾಚಕ

ಪದಗುಚ್ಛ

add zest to ರುಚಿಗೊಳಿಸು; ಆಸಕ್ತಿ, ರುಚಿ ಹುಟ್ಟಿಸು; ಉತ್ಸಾಹ ತುಂಬು.

  • ರುಚಿಕಾರಕ; ರುಚಿ ಹುಟ್ಟಿಸುವ ಸವಿ ಯಾ ಗುಣ.
  • ಪೂರ್ಣ ಆಸ್ವಾದ ಯಾ ತೀವ್ರಾಸಕ್ತಿ; ಕಟ್ಟೊಲವು.
  • ರುಚಿ; ಆಸಕ್ತಿ; ಅಭಿನಿವೇಶ.
  • ಹುರುಪು; ಹುಮ್ಮಸ್ಸು; ಅತ್ಯುತ್ಸಾಹ: entered into it with zest ಹುರುಪಿನಿಂದ ಅದರಲ್ಲಿ ಭಾಗವಹಿಸಿದ, ಪಾಲುಗೊಂಡ.
  • ವ್ಯಂಜನ; ರುಚಿಗಾಗಿ ಸೇರಿಸುವ, ನಿಂಬೆ ಯಾ ಕಿತ್ತಳೆ ಹಣ್ಣಿನ ಸಿಪ್ಪೆ ಯಾ ಸಿಪ್ಪೆಯ ಚೂರು.

zestful

ಗುಣವಾಚಕ

ತೀವ್ರಾಸಕ್ತಿಯ; ಅತ್ಯುತ್ಸಾಹಭರಿತ; ಹುರುಪಿನಿಂದ ಕೂಡಿದ.

zestfully

ಕ್ರಿಯಾವಿಶೇಷಣ

ತೀವ್ರಾಸಕ್ತಿಯಿಂದ; ಉತ್ಸಾಹಭರಿತವಾಗಿ; ಹುರುಪಿನಿಂದ.

zeta

ನಾಮವಾಚಕ

(ಗ್ರೀಕ್‍ ವರ್ಣಮಾಲೆ) ಆರನೆಯ ಅಕ್ಷರ ${\rm Z}\zeta$).

zetetic

ಗುಣವಾಚಕ

ಅನ್ವೇಷಕ; ಅನ್ವೇಷಣೆಯ, ಸಂಶೋಧನೆಯ ಮೂಲಕ ಮಾಡುವ.

zeugma

ನಾಮವಾಚಕ

ಯುಗ್ಮಾನ್ವಯ (ಅಲಂಕಾರ); ವಾಕ್ಯದ ಒಂದು ಕ್ರಿಯಾಪದ ಯಾ ಗುಣವಾಚಕ ಆ ವಾಕ್ಯದಲ್ಲಿನ ಎರಡು ನಾಮಪದಗಳಲ್ಲಿ ಒಂದಕ್ಕೆ ಮಾತ್ರ ಸರಿಯಾಗಿ ಅನ್ವಯಿಸುವಂತಿದ್ದು ಮತ್ತೊಂದಕ್ಕೆ ಅನ್ವಯವಾಗಬೇಕಾಗಿದ್ದುದನ್ನು ಲೋಪಿಸಿ, ಎರಡು ನಾಮಪದಗಳಿಗೂ ಆ ಒಂದೇ ಕ್ರಿಯಾಪದ ಯಾ ಗುಣವಾಚಕ ಅನ್ವಯಿಸುವಂತೆ ಪ್ರಯೋಗಿಸುವ ಒಂದು ಅಲಂಕಾರ, ಉದಾಹರಣೆಗೆ with weeping eyes and grieving hearts ಎಂಬಲ್ಲಿ grieving ಪದವನ್ನು ಲೋಪಿಸಿ ಹೇಳುವುದು.

zeugmatic

ಗುಣವಾಚಕ

ಯುಗ್ಮಾನ್ವಯಾಲಂಕಾರದ.

Zeus

ನಾಮವಾಚಕ

ಪದಗುಚ್ಛ

(ಗ್ರೀಕ್‍ ಪುರಾಣ) ಗಿಕರ ದೇವರಾಜ; ದೇವೇಂದ್ರ; ಅತ್ಯುನ್ನತ ದೇವತೆ. by Zeus! (= Jove) ದೇವರಾಣೆ! (ಒಪ್ಪಿಗೆಯನ್ನು ಯಾ ಆಶ್ಚರ್ಯವನ್ನು ಸೂಚಿಸುವ ಉದ್ಗಾರ.)

zho

ನಾಮವಾಚಕ

dzho ಎಂಬುದರ ರೂಪಾಂತರ.

zibet

ನಾಮವಾಚಕ

(ಅಮೆರಿಕನ್‍ ಪ್ರಯೋಗ zibeth).

  • (ಏಷ್ಯದ ಯಾ ಇಂಡಿಯಾದ) ಪುನುಗು ಬೆಕ್ಕು.
  • (ಅದರ) ಪುನುಗು; ಜವಾದಿ; ಜವಾಜಿ.

zidovudine

ನಾಮವಾಚಕ

ಏಡ್ಸ್‍ (AIDS) ರೋಗಾಣುಗಳನ್ನು ನಾಶಪಡಿಸಲು ಬಳಸುವ ಒಂದು ಮದ್ದು (azidothymidine).

ziff

ನಾಮವಾಚಕ

(ಆಸ್ಟ್ರೇಲಿಯ) (ಅಶಿಷ್ಟ) ಗಡ್ಡ; ದಾಡಿ.

ziggurat

ನಾಮವಾಚಕ

ಹಂತಗೋಪುರದ ದೇವಾಲಯ; ಒಂದರ ಮೇಲೊಂದರಂತೆ ಪಿರಮಿಡ್ಡಿನಾಕಾರದಲ್ಲಿ ಏರುತ್ತ ಹೋಗುವ ತಾರಸಿಗಳುಳ್ಳ, ಪುರಾತನ ಮೆಸಪೊಟೇಮಿಯದ ದೇವಾಲಯ.

Search Dictionaries

Loading Results

Follow Us :   
  Download Bharatavani App
  Bharatavani Windows App