भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

zincograph

ಸಕರ್ಮಕ ಕ್ರಿಯಾಪದ

  • ಸತುಫಲಕದ ಮೇಲೆ ಕೆತ್ತು; ಸತುಪ್ರತಿ ಮಾಡು, ತಯಾರಿಸು ( ಅಕರ್ಮಕ ಕ್ರಿಯಾಪದ ಸಹ).
  • ಒಂದು ಮಾದರಿಯನ್ನು ಈ ರೀತಿಯಲ್ಲಿ ಕೆತ್ತು.

zincography

ನಾಮವಾಚಕ

ಸತುಲೇಖಿ:

  • ಮುದ್ರಣಕಾರ್ಯಕ್ಕಾಗಿ ಅಪೇಕ್ಷಿತ ಚಿತ್ತಾರವನ್ನು ಕೊರೆದಿರುವ ಸತುವಿನ ಫಲಕ.
  • ಅದರಿಂದ ಪಡೆದ ಮುದ್ರಣ(ಪ್ರತಿ).

zincotype

ನಾಮವಾಚಕ

= 1zincograph.

zing

ನಾಮವಾಚಕ

  • (ಆಡುಮಾತು) ಹುರುಪು; ಉತ್ಸಾಹ.
  • ಶಕ್ತಿ; ಬಲ.

zing

ಅಕರ್ಮಕ ಕ್ರಿಯಾಪದ

ವೇಗವಾಗಿ ಯಾ ಕರ್ಕಶವಾಗಿ (ಕೀರಲು) ಶಬ್ದ ಮಾಡುತ್ತ ಚಲಿಸು.

Zingaro

ನಾಮವಾಚಕ

(ಬಹುವಚನ Zingari ಉಚ್ಚಾರಣೆ ಸಿಂಗರೀ) = gypsy(1).

zinger

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಅಸಾಧಾರಣ ವ್ಯಕ್ತಿ ಯಾ ವಸ್ತು.

zingy

ಗುಣವಾಚಕ

( ತರರೂಪ zingier, ತಮರೂಪ zingiest) ಹುರುಪುಳ್ಳ; ಉತ್ಸಾಹದ; ಶಕ್ತಿಯುಕ್ತ.

zinnia

ನಾಮವಾಚಕ

ಕಡುಗೆಂಪು ಮತ್ತು ಇತರ ಉಜ್ಜ್ವಲ ಬಣ್ಣಗಳ (ಚೆಂಡುಹೂವಿನಂಥ) ಹೂಬಿಡುವ ಗಿಡಗಳ ಕುಲ ಯಾ ಕುಲದ ಗಿಡ.

Zion

ನಾಮವಾಚಕ

  • ಪುರಾತನ ಜೆರೂಸಲೆಮ್‍ನ ಪವಿತ್ರ ಪರ್ವತ.
  • ಯೆಹೂದ್ಯ ಜನ ಯಾ ಧರ್ಮ.
  • (ಯೆಹೂದ್ಯರ, ಕ್ರೈಸ್ತರ) ಸ್ವರ್ಗ; ದೇವಲೋಕ.
  • ಕ್ರೈಸ್ತ ಸಮುದಾಯ, ಸಮಾಜ, ಜಗತ್ತು.
  • ಚರ್ಚು; ಇಗರ್ಜಿ.

Zionism

ನಾಮವಾಚಕ

  • ಯೆಹೂದ್ಯ ಸ್ವಾಸ್ಥ್ಯ ಚಳುವಳಿ; ಪ್ಯಾಲೆಸ್ಟೈನಿನಲ್ಲಿ ಯೆಹೂದ್ಯ ರಾಷ್ಟ್ರವೊಂದನ್ನು ಪುನಃ ಸ್ಥಾಪಿಸಬೇಕೆಂದು ಉದ್ದೇಶಿಸಿ, ಅದನ್ನು ಕಾರ್ಯಗತ ಮಾಡಲು, 1897ರಲ್ಲಿ ಪ್ರಾರಂಭವಾದ ಚಳುವಳಿ.
  • (ಈಗ) ಇಸ್ರೇಲಿನಲ್ಲಿ ಯೆಹೂದ್ಯ ರಾಷ್ಟ್ರದ ಅಭಿವೃದ್ಧಿ ಯಾ ಅದರ ಪ್ರಯತ್ನ.

Zionist

ನಾಮವಾಚಕ

  • ಯೆಹೂದ್ಯ ಸ್ವಾಸ್ಥ ವಾದಿ.
  • ಇಸ್ರೇಲಿನ ರಾಷ್ಟ್ರವಾದಿ.

zip

ನಾಮವಾಚಕ

  • ಬಂದೂಕಿನಿಂದ ಗುಂಡು ಹೊಡೆದಂಥ ಯಾ ಒಮ್ಮೆಲೇ ಬಟ್ಟೆ ಹರಿದಂಥ ಹಗುರ, ತೀಕ್ಷ ಶಬ್ದ.
  • (ರೂಪಕವಾಗಿ) ಬಲ; ಶಕ್ತಿ; ಜೋರು; ಸತ್ತ ; ಕಸುವು; ಹುರುಪು.
  • ಸಿಪ್ಪು; ಒಂದರ ಚಾಚುಗಳು ಮತ್ತೊಂದರಲ್ಲಿ ತೊಡರಿಕೊಳ್ಳುವಂಥ ಎರಡು ಮೆತುಪಟ್ಟಿಗಳ ನಡುವೆ ಹಿಂದೆಮುಂದೆ ಚಲಿಸುವ ಕ್ಲಿಪ್ಪಿನಿಂದ ಭದ್ರಪಡಿಸಬಹುದಾದ ಬಂಧನಿ ವ್ಯವಸ್ಥೆ.

zip

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಭೂತರೂಪ & ಭೂತಕೃದಂತ zipped; ವರ್ತಮಾನ ಕೃದಂತ zipping).

  • ಜಿಪ್‍ ಹಾಕು; (ಜಿಪ್‍ ಬಂಧನಿಯಿಂದ) ಭದ್ರಪಡಿಸು; ಮುಚ್ಚಿ ಭದ್ರಮಾಡು.
  • ಜಿಪ್‍ ಮಾಡು; ಜಿಪ್‍ ಮಾಡು; ‘ಫೆ ಲ್‍’ ಅನ್ನು ಕಡಮೆ ಸ್ಥಳ ತೆಗೆದುಕೊಳ್ಳುವಂತೆ ಅಡಕಮಾಡು, ಕುಗ್ಗಿಸು; ಸಂಕುಚಿಸು.

zip

ಗುಣವಾಚಕ

ಜಿಪ್‍ – ಇರುವ, ಹಾಕಿದ: zip bag ಜಿಪ್‍(ಹಾಕಿದ) ಚೀಲ ಮೊದಲಾದವು.

zip-code

ನಾಮವಾಚಕ

(ZIP code ಎಂದೂ ಪ್ರಯೋಗ) (ಅಮೆರಿಕನ್‍ ಪ್ರಯೋಗ) ಅಂಚೆ ಸಂಕೇತ; ಬಟವಾಡೆಗೋಸ್ಕರ ಊರು, ಸ್ಥಳ, ಪ್ರದೇಶಗಳನ್ನು ಗುರುತಿಸುವುದು ಸುಲಭವಾಗಲು ಅಂಚೆ ಇಲಾಖೆ ಮಾಡಿಕೊಂಡಿರುವ, ಐದು ಅಂಕಿಗಳ ಸಂಖ್ಯಾಸಂಕೇತ ವ್ಯವಸ್ಥೆ.

zip-fastener

ನಾಮವಾಚಕ

= 1zip(3).

zipper

ನಾಮವಾಚಕ

= zip-fastener.

zipper

ಸಕರ್ಮಕ ಕ್ರಿಯಾಪದ

(ಅನೇಕ ವೇಳೆ zipper up) ಜಿಪ್‍ ಹಾಕಿ ಬಂಧಿಸು, ಭದ್ರಪಡಿಸು.

zippered

ಗುಣವಾಚಕ

ಜಿಪ್‍ ಹಾಕಿ ಬಂಧಿಸಿದ, ಭದ್ರಪಡಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App