भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

zombie

ನಾಮವಾಚಕ

  • ಮಂತ್ರಮಾಟಗಳಿಂದ ಜೀವಂತಗೊಳಿಸಿತೆನ್ನಲಾದ ಹೆಣ.
  • (ಆಡುಮಾತು) ಹೆಣಮೋರೆಯವನು; ದ್ರಾಬೆಮುಖ(ದವನು); ಜಡಭರತ; ಸೋಮಾರಿ.

zonal

ಗುಣವಾಚಕ

  • ವಲಯಾಕಾರದ; ಮಂಡಲಾಕಾರದ.
  • ವಲಯದ; ಮಂಡಲದ.

zonary

ಗುಣವಾಚಕ

  • ವಲಯದ ಯಾ ವಲಯಸಂಬಂಧವಾದ.
  • ವಲಯದಂಥ.

zonate

ಗುಣವಾಚಕ

(ಸಸ್ಯವಿಜ್ಞಾನ & ಪ್ರಾಣಿವಿಜ್ಞಾನ)

  • ವಲಯಗಳುಳ್ಳ.
  • ಮಂಡಲಾಕಾರದ.
  • ವಲಯಗಳಾಗಿ ರಚಿಸಿದ.

zonation

ನಾಮವಾಚಕ

(ಸಸ್ಯವಿಜ್ಞಾನ) ಸಸ್ಯವಲಯೀಕರಣ; ಪ್ರಧಾನ ಸಸ್ಯಜಾತಿಗಳಿಂದ ಗುರುತಿಸಬಹುದಾದ ವಲಯಗಳಾಗಿ ಯಾವುದೇ ಭೂಪ್ರದೇಶವನ್ನು ವಿಂಗಡಿಸುವುದು.

zonda

ನಾಮವಾಚಕ

(ಅರ್ಜೆಂಟೈನಾದ) ಧೂಳು ತುಂಬಿದ, ಉತ್ತರದ ಬಿಸಿಗಾಳಿ.

zone

ನಾಮವಾಚಕ

ಪದಗುಚ್ಛ

  • ವಲಯ:
    1. ಪಟ್ಟೆ; ಹೆಚ್ಚುಕಡಮೆ ಪಟ್ಟಿಯಂತಿರುವ ಯಾವುದೇ ನಿರ್ದಿಷ್ಟ ಪ್ರದೇಶ.
    2. ಎರಡು ಹೆಚ್ಚುಕಡಮೆ ಏಕಕೇಂದ್ರೀಯ ವೃತ್ತಗಳ ನಡುವಣ ಪ್ರದೇಶ.
    3. ಗೋಲದ ಮೈಮೇಲೆ ಎರಡು ಸಮಾಂತರ ರೇಖೆಗಳಿಂದ ಆವೃತವಾದ ಪ್ರದೇಶ.
    4. ಶಂಕು ಯಾ ಸಿಲಿಂಡರಿನ ಅಕ್ಷಕ್ಕೆ ಲಂಬವಾಗಿರುವ ಎರಡು ವೃತ್ತಗಳ ನಡುವಣ ಪ್ರದೇಶ.
    5. ಏಕಕಾಲಮಾನ ವಲಯ; (ಭೂಮಿಯ ಮೇಲೆ) ಪ್ರಮಾಣದ ಯಾ ಒಂದೇ ಕಾಲಮಾನವನ್ನು ನಿಗದಿಮಾಡಲು ಆಯ್ದುಕೊಂಡ ಎರಡು ರೇಖಾಂಶಗಳ ನಡುವಣ ಪ್ರದೇಶ, ವ್ಯಾಪ್ತಿ.
    6. (ಭೂವಿಜ್ಞಾನ) ವಿಶಿಷ್ಟ ಹಾಸಿಲ್‍ಗಳ ಆಧಾರದ ಮೇಲೆ ಭೂಮಿಯ ಆಳದಲ್ಲಿ ಯಾ ಪರ್ವತಗಳ ಮೇಲೆ ವಿಂಗಡಿಸಲಾದ ಸ್ತರ ಪ್ರದೇಶ.
    7. (ಭೂಗೋಳಶಾಸ್ತ್ರ) ಭೂಗೋಳದ ಮೈಮೇಲೆ ವಿಷುವದ್‍ ವೃತ್ತಕ್ಕೆ ಸಮಾಂತರವಾಗಿ ಎಳೆದ ವೃತ್ತಗಳ ನೆರವಿನಿಂದ ವಿಂಗಡಿಸಲಾಗಿರುವ ಒಂದು ಉಷ್ಣವಲಯ, ಎರಡು ಸಮಶೀತೋಷ್ಣ ವಲಯಗಳು ಮತ್ತು ಎರಡು ಶೀತವಲಯಗಳು ಎಂಬ ಐದು ವಲಯಗಳಲ್ಲಿ ಒಂದು.
    8. ಕಾಯ ಒಂದನ್ನು ಸುತ್ತುವರಿದಿರುವ ಒಂದೇ ಬಣ್ಣದ ಯಾ ಬೇರಾವುದೇ ಗುಣದ ನೆರವಿನಿಂದ ಗುರುತಿಸಬಹುದಾದ ಸುತ್ತುಪಟ್ಟಿ.
    9. ವಿಶಿಷ್ಟ ಗುಣಲಕ್ಷಣಗಳುಳ್ಳ, ವಿಶಿಷ್ಟ ಉದ್ದೇಶ, ಪ್ರಯೋಜನಗಳಿರುವ – ಪ್ರದೇಶ, ಪರಿಧಿ: danger zone ಅಪಾಯ ವಲಯ, ಕ್ಷೇತ್ರ.
  • (ಪ್ರಾಚೀನ ಪ್ರಯೋಗ) ನಡುಪಟ್ಟಿ; ‘ಬೆಲ್ಟು’; ಡಾಬು.

zone

ಸಕರ್ಮಕ ಕ್ರಿಯಾಪದ

  • (ಮಂಡಲ ಯಾ ವಲಯದಂತೆ) ಸುತ್ತುವರಿ; ಸುತ್ತುಕಟ್ಟು.
  • ವಲಯಗಳಾಗಿಸು; ವಲಯಗಳಾಗಿ ವಿಭಾಗಿಸು; ವಲಯಗಳ ಪ್ರಕಾರ ವ್ಯವಸ್ಥೆಗೊಳಿಸು.
  • ವಲಯಕ್ಕಿಷ್ಟೆಂದು ನಿಗದಿಮಾಡು, ಹಂಚು.
  • ವಲಯದ ವ್ಯಾಪ್ತಿ ಗೊತ್ತುಮಾಡು, ನಿರ್ಧರಿಸು.

zoning

ನಾಮವಾಚಕ

ವಲಯರಚನೆ; ವಲಯಗಳಾಗಿ ವಿಭಾಗಿಸುವುದು.

zonk

ನಾಮವಾಚಕ

(ಅನೇಕವೇಳೆ ಭಾವಸೂಚಕಅವ್ಯಯವಾಗಿ ಪ್ರಯೋಗ) ಏಟಿನ ಯಾ ಬಲವಾದ ಸಂಘಟ್ಟನದ ಶಬ್ದ.

zonk

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಚೆನ್ನಾಗಿ ನಿದ್ದೆ ಮಾಡು.

  • ಹೊಡೆ; ಬಡಿ; ಚಚ್ಚು.
  • ಮತ್ತು ಬರಿಸು; ನಿದ್ದೆ ಬರಿಸು.

zoo

ನಾಮವಾಚಕ

= zoological garden (ಸಂಕ್ಷಿಪ್ತ).

zoo-

ಸಮಾಸ ಪೂರ್ವಪದ

ಮೃಗಗಳ, ಮೃಗ ಜೀವನಕ್ಕೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.

zoogeographic

ಗುಣವಾಚಕ

ಪ್ರಾಣಿಭೌಗೋಳಿಕ; ಪ್ರಾಣಿಭೂಗೋಳದ ಯಾ ಅದಕ್ಕೆ ಸಂಬಂಧಿಸಿದ.

zoogeographical

ಗುಣವಾಚಕ

= zoogeographic.

zoogeographically

ಕ್ರಿಯಾವಿಶೇಷಣ

ಪ್ರಾಣಿಭೌಗೋಳಿಕವಾಗಿ.

zoogeography

ನಾಮವಾಚಕ

ಪ್ರಾಣಿಭೂಗೋಳ; ಪ್ರಾಣಿ ಭೂವಿವರಣೆ; ಭೂ ಪ್ರದೇಶಗಳಲ್ಲಿ ಪ್ರಾಣಿಗಳ ಹರಡಿಕೆ ಕುರಿತ ಪ್ರಾಣಿವಿಜ್ಞಾನದ ಶಾಖೆ.

zoography

ನಾಮವಾಚಕ

ಪ್ರಾಣಿ ವಿವರಣೆ; ವಿವರಣಾತ್ಮಕ ಪ್ರಾಣಿವಿಜ್ಞಾನ.

zooid

ನಾಮವಾಚಕ

ಜೀವಕ:

  • ಅಂಕುರಣ ವಿಧಾನದಿಂದ ಯಾ ವಿದಲನದಿಂದ ಸಂತಾನವೃದ್ಧಿ ಮಾಡುವ, ಹೆಚ್ಚುಕಡಮೆ ಸ್ವತಂತ್ರವಾದ ಯಾವುದೇ ಅಕಶೇರುಕ ಜೀವಿ.
  • ಅಕಶೇರುಕ ಪ್ರಾಣಿಕಾಲೋನಿಯೊಂದರ ಸದಸ್ಯ.
  • ಜೀವಿಕಣ; ಸಂಯುಕ್ತ ಜೀವಿಯಲ್ಲಿಯ ಒಂದುಜೀವಿ.

zooidal

ಗುಣವಾಚಕ

  • ಪ್ರಾಣಿಗೆ ಸಂಬಂಧಿಸಿದ.
  • ಪ್ರಾಣಿಯಂಥ; ಪ್ರಾಣಿಯನ್ನು ಹೋಲುವ.
  • ಪ್ರಾಣಿ ಸ್ವಭಾವದ; ಪ್ರಾಣಿಯ ಗುಣಲಕ್ಷಣಗಳಿರುವ.

Search Dictionaries

Loading Results

Follow Us :   
  Download Bharatavani App
  Bharatavani Windows App