Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಳೀಕಭಕ್ತ
ಕಪಟಭಕ್ತಿಯುಳ್ಳವನು
ಅಳೀಕಭ್ರುಕುಟಿ
ಹುಸಿ ಹುಬ್ಬುಗಂಟು; ತೋರಿಕೆ ಕೋಪ
ಅಳೀಕಮಿತ್ರ
ಕಪಟ ಸ್ನೇಹಿತ
ಅಳೀಕಸೊಬಗು
ಹುಸಿ ಸೊಬಗು
ಅಳುಂಕು
ಅಲುಗಡು; ಹಿಂಜರಿ
ಅಳುಪು
ಪ್ರೀತಿ
ಅಳುಂಬಂ
ಅತಿಶಯವಾಗಿ
ಅಳುಂಬ(ಬು)
ಅತಿಶಯ, ವೆಗ್ಗಳ; ಮನೋಹರವಾದ; ಆಶ್ರಯ
ಅಳುರ್
ಆವರಿಸು; ಸುಡು; ಚದುರಿಹೋಗು
ಅಳುರ್ಕೆ
ವ್ಯಾಪಿಸುವುದು; ಆಧಿಕ್ಯ; ಸಾಮರ್ಥ್ಯ
ಅಳುರ್ಕೆಗೞ್ತಲೆ
ಹೆಚ್ಚಾದ ಕತ್ತಲೆ
ಅಳುರ್ಕೆಗಿಡಿಸು
ಸಾಮರ್ಥ್ಯಗುಂದುವಂತೆ ಮಾಡು
ಅಳುರ್ಕೆಗುಂದು
ಸಾಮರ್ಥ್ಯಗುಂದು
ಅಳುರ್ಕೆಗೊಳ್
ಆವರಿಸು; ಅಧಿಕವಾಗು
ಅಳುರ್ಕೆವೆಱು
ಹೆಚ್ಚಾಗು
ಅಳುರ್ಚು
ಹರಡು
ಅಳೆ
ಮಜ್ಜಿಗೆ; ಅಳತೆ ಮಾಡು
ಅಳೆಮಾಱು
ಮಜ್ಜಿಗೆಯನ್ನು ವಿಕ್ರಯಿಸು
ಅಳ್ಕಜಕಾಱ
ಹೊಟ್ಟೆಕಿಚ್ಚು ಪಡುವವನು
ಅಳ್ಕಾಟ