भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಕಾಂಡತಾಂಡವ

ಪಾಂಡಿತ್ಯದ ಅನವಶ್ಯಕ ಪ್ರದರ್ಶನ

ಅಕಾಮಿಕ

ಇಚ್ಛೆಯಿಲ್ಲದ ವ್ಯಕ್ತಿ

ಅಕಾರಣಂ

ಕಾರಣವಿಲ್ಲದೆ

ಅಕಿಂಚನ

ಬಡವ

ಅಕಿಂಚಿತ್ಕರ

ಏನನ್ನೂ ಮಾಡದ

ಅಂಕಿತ

ಕುದುರೆಯ ಓಟದ ಒಂದು ಬಗೆ; ಗುರುತು

ಅಂಕಿಸು

ಅಧೀನ ಮಾಡಿಕೊ

ಅಕೀರ್ತಿ

ಕೆಟ್ಟ ಹೆಸರು

ಅಂಕು

ಸೊಟ್ಟಗಿರುವುದು; ಸೊಟ್ಟಾಗು

ಅಕುಂಠತರ

ಅತ್ಯಧಿಕವಾದ

ಅಂಕುರ

ಮೊಳಕೆ, ಚಿಗುರು; ರೋಮ; ರಕ್ತ

ಅಂಕುರಿಸು

ಮೊಳಕೆಯೊಡೆ; ಉಂಟಾಗು; ನವಿರೇಳಿಸು

ಅಕುಲ

ಹೀನವಂಶ

ಅಕುಲೀನೆ

ಹೀನಕುಲದಲ್ಲಿ ಜನಿಸಿದವಳು

ಅಂಕುಶ

ಆನೆಯನ್ನು ನಿಯಂತ್ರಿಸುವ ಆಯುಧ, ಸೃಣಿ

ಅಂಕುಶಚಾರಣ

ಅಂಕುಶದಿಂದ ಆನೆಯನ್ನು ನಡೆಸು

ಅಂಕುಸ

ಅಂಕುಶ; ನಿಯಾಮಕ

ಅಂಕುಸವಿಡು

ಅಡ್ಡಿಮಾಡು

ಅಂಕುಸಸಾರಣೆ

ಅಂಕುಶಚಾರಣ

ಅಕೂಪಾ(ಬಾ)ರ

ಸಮುದ್ರ; ದೊಡ್ಡ ಆಮೆ; ಸೂರ್ಯ; ಬಂಡೆ

Search Dictionaries

Loading Results

Follow Us :   
  Download Bharatavani App
  Bharatavani Windows App