Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಕೃತಕ
ಸಹಜ
ಅಕೃತ್ಯ
ಕೆಟ್ಟ ಕೆಲಸ
ಅಕೃಷ್ಟಕರ್ಮ
ಕಳಂಕವಿಲ್ಲದ ಕೆಲಸ; ಕೆಟ್ಟ ಕೆಲಸವನ್ನು ಮಾಡದವನು
ಅಕೃಷ್ಟಪಚ್ಯ
ಬೇಸಾಯವಿಲ್ಲದೆ ಬೆಳೆ ಕೊಡುವ ಭೂಮಿ
ಅಂಕೆಗೆಯ್
ಗುರುತುಮಾಡು; ಲೇಪಿಸು
ಅಂಕೆಗೊಳ್
ಕೈವಶವಾಗು, ಹತೋಟಿಗೆ ಬರು
ಅಕ್ಕ
ಹಿರಿಯ ಸಹೋದರಿ; ಒಂದು ಮರ
ಅಕ್ಕಜ
ಬೆರಗು, ವಿಸ್ಮಯ; ಪ್ರೀತಿ
ಅಕ್ಕಜ
ಒಂದು ವಿಧದ ಹಕ್ಕಿ (ಅರ್ಥಸಂದಿಗ್ಧತೆಯ ಶಬ್ದ)
ಅಕ್ಕಜಂಬೊರೆ
ಆಶ್ಚರ್ಯದಿಂದ ಕೂಡು
ಅಕ್ಕಟಿಕೆ
ಉತ್ಕಟವಾದ ಆಸೆ
ಅಕ್ಕರ
ವಿದ್ಯೆ; ಬರವಣಿಗೆ
ಅಕ್ಕರಗೊಟ್ಟಿ
ವಿದ್ವಾಂಸರ ಮೇಳ
ಅಕ್ಕರಜಾಣ
ವಿದ್ವಾಂಸ
ಅಕ್ಕರಿಗ
ವಿದ್ವಾಂಸ; ಸಾಕ್ಷರ
ಅಕ್ಕಱುಗಂಪು
ಹಿತಕರವಾದ ಸುಗಂಧ
ಅಕ್ಕಸಾಲೆ
ಚಿನ್ನ ಬೆಳ್ಳಿ ಕೆಲಸ ಮಾಡುವವನು
ಅಕ್ಕಿಸು
ಜೀರ್ಣಿಸು
ಅಕ್ಕು
ಲಾಭ; ಸಂಪತ್ತು
ಅಕ್ಕು(ಲಿ)ಳಿಸು