Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಕ್ಷರ
ನಾಶವಿಲ್ಲದ
ಅಕ್ಷರಕೇವ(ಲಿ)ಳಿ
ಒಂದು ವಿದ್ಯೆ
ಅಕ್ಷರರೇಖೆ
ಬರಹ
ಅಕ್ಷರವೃತ್ತಿ
ಪದದಲ್ಲಿರುವ ಅಕ್ಷರಗಳ ಸಂಖ್ಯೆ
ಅಕ್ಷರಾತ್ಮಕ
ಅಕ್ಷರಗಳಿಂದ ಕೂಡಿದ
ಅಕ್ಷವಲ(ಳ)ಯ
ಜಪಸರ
ಅಕ್ಷಸೂತ್ರ
ಜಪಸರ
ಅಕ್ಷಾವಲಿ(ಳಿ)
ಜಪಸರ
ಅಕ್ಷಿಕರ್ಣ
ಕಣ್ಣೇ ಕಿವಿಯಾಗಿರುವ ಪ್ರಾಣಿ, ಹಾವು
ಅಕ್ಷಿತಾರಕ
ಕಣ್ಣಿನ ಪಾಪೆ
ಅಕ್ಷಿಪಕ್ಷ್ಮ
ಕಣ್ಣ ರೆಪ್ಪೆ
ಅಕ್ಷಿಶ್ರುತಿ
ಹಾವು
ಅಕ್ಷೀಣ
ಶುಭ
ಅಕ್ಷುಣ
ಕಡಿಮೆಯಿಲ್ಲದ; ಬಲಿಷ್ಠ
ಅಕ್ಷುಣ್ಣ
ತುಳಿಯದ; ಮುರಿಯದ
ಅಕ್ಷೋಹಿಣಿ
ಅಕ್ಷೌಹಿಣಿ; ೨೧೮೭೦ ಆನೆ, ೨೧೮೭೦ ರಥ, ೬೫೬೧೦ ಕುದುರೆ ಮತ್ತು ೧೦೯೩೫೦ ಪದಾತಿಯಿರುವ ಸೈನ್ಯ; ಪಂಪಭಾರತದಲ್ಲಿ ಹೇಳಿರುವ ಸಂಖ್ಯೆ ಹೀಗಿದೆ: ೯೦೦೦ ಆನೆ, ೯೦೦೦೧೦೦ ರಥ, ೯೦೦೦೧೦೦೧೦೦ ಕುದುರೆ ಮತ್ತು ೯೦೦೦೧೦೦೧೦೦೧೦೦ ಕಾಲಾಳುಗಳ ಸೈನ್ಯ
ಅಖಂಡಸುಖ
ನಿರಂತರ ಸುಖ
ಅಖಂಡಳತನಯ
ಇಂದ್ರನ ಮಗ; ಅರ್ಜುನ, ವಾಲಿ
ಅಖಂಡಿತಂ
ಕತ್ತರಿಸದ, ಪೂರ್ಣವಾದ
ಅಖರ್ವ