Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಖಲ್ಯ
ಹೇಡಿ; ಅಪ್ರಯೋಜಕ
ಅಖ್ಖ(ಕ್ಖ)ಡ
ಮುಕ್ಕಾಗದ, ಪೂರ್ಣ
ಅಂಗ
ಅವಯವ; ಪ್ರಕಾರ; ಯೋಗ್ಯ; ಒಂದು ದೇಶದ ಹೆಸರು; (ಜೈನ) ಜೈನಾಗಮದ ಒಂದು ವಿಭಾಗ
ಅಗ
ಬೆಟ್ಟ
ಅಂಗಕಲ್ಪಕುಜ
(ಜೈನ) ಕೇಳಿದ್ದನ್ನು ಕೊಡುವ ಹತ್ತು ಬಗೆಯ ಕಲ್ಪವೃಕ್ಷಗಳು; ಮದ್ಯ, ಭೂಷಣ, ವಸ್ತ್ರ, ತೂರ್ಯ, ಮಾಲ್ಯ, ಗೃಹ, ಭಾಜನ, ಭೋಜನ, ದೀಪ, ಜ್ಯೋತಿ
ಅಂಗಘಟನ
ಮೈಕಟ್ಟು
ಅಂಗಚಿತ್ತ
ಪಾರಿತೋಷಕ
ಅಗಚೂಡ
ಬೆಟ್ಟದ ಶಿಖರ
ಅಂಗಜ
ಮನ್ಮಥ
ಅಂಗಜ ಮಹೀಷ
ಮನ್ಮಥ ರಾಜ
ಅಂಗಜನ್ಮ
ಅಂಗಜ
ಅಂಗಜಾಗಮ
ಕಾಮಶಾಸ್ತ್ರ
ಅಂಗಜಾತ
ಮನ್ಮಥ
ಅಂಗಜಾವ
ಪಹರೆ; ಸರದಿ ಕಾವಲು
ಅಂಗಡಿ
ವ್ಯಾಪಾರದ ಸ್ಥಳ
ಅಂಗಡಿಯಲವಡ
ಅಂಗಡಿಬೀದಿಯಲ್ಲಿ ಅಲೆಯುವವನು
ಅಂಗಡಿಸೂಱೆ
ಅಂಗಡಿಯನ್ನು ಸೂರೆಮಾಡುವುದು
ಅಗಡು
ತುಂಟತನ; ದುಷ್ಟತನ
ಅಂಗಣ
ಅಂಗಳ, ಮನೆಗೆ ಸೇರಿದ ಬಯಲು
ಅಂಗಣವಲಯ