Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಂಗಣವಾವಿ
ಅಂಗಣದಲ್ಲಿನ ಬಾವಿ
ಅಂಗಣವೆಟ್ಟು
ಅಂಗಳದಲ್ಲಿನ ಆಟದ ಬೆಟ್ಟ
ಅಂಗದ
ಭುಜಕೀರ್ತಿ; ತೋಳುಬಳೆ
ಅಗಧರ
ಬೆಟ್ಟವನ್ನು ಎತ್ತಿದವನು, ಕೃಷ್ಣ, ವಿಷ್ಣು
ಅಗಪಡು
ಒಳಗೆ ಸಿಗು; ಸಿಕ್ಕಿಹಾಕಿಕೊ
ಅಂಗಪತಿ
ಅಂಗರಾಜ್ಯದ ಒಡೆಯ, ಕರ್ಣ
ಅಂಗಂಬಡೆ
ಆಕಾರ ಧರಿಸು
ಅಂಗಯಷ್ಟಿ
ಯಷ್ಟಿ(ಹಾರ)ಯಂತೆ ತೆಳ್ಳಗಿರುವ ದೇಹ
ಅಂಗಯ್ಸು
ಘೋಷಿಸು; ಒಪ್ಪುವಂತೆ ಮಾಡು
ಅಂಗರ
ಕೆಂಡ
ಅಂಗರಕ್ಕೆ
(ಅಂಗರಕ್ಷಾ) ಮೈಗಾವಲ ಭಟ; ಮೈಯ ರಕ್ಷಣೆಯ ವಸ್ತು; ಕವಚ
ಅಂಗರವೋಳಿಗೆ
(ಅಂಗಾರಸ್ಫೋಟಿಕೆ) ಕೆಂಡದ ಮೇಲೆ ಸುಟ್ಟ ರೊಟ್ಟಿ
ಅಂಗರಾಗ
ಮೈಗೆ ಹಚ್ಚಿಕೊಳ್ಳುವ ಪರಿಮಳದ್ರವ್ಯ
ಅಗರು
ಸುಗಂಧದ ಮರ
ಅಗರ್ಹಿತ
ನಿಂದ್ಯವಲ್ಲದ
ಅಗಲ
ಒಂದು ವಸ್ತುವಿನ ಅಡ್ಡಳತೆ
ಅಗಲಂಬೆಱು
ಹರಹನ್ನು ಪಡೆ, ವಿಶಾಲವಾಗು
ಅಗಲಿ(ತು)ತ್ತು
ಅಗಲವಾದ
ಅಗಲಿಸು
ಬೇರೆ ಮಾಡು
ಅಗಲು