Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಗಲುರ
ಹರವಾದ ಎದೆ
ಅಗಲೆ
ಅಗಲವಾಗುವಂತೆ; ದೂರಾಗುವಂತೆ
ಅಗಲೆತ್ತು
ಊಟದ ತಟ್ಟೆಯನ್ನು ಎತ್ತಿಕೊ
ಅಗಲೊಗೆ
ಹರಡಿಕೊಳ್ಳುವಂತೆ ಎಸೆ
ಅಗಲೊತ್ತು
ಹರವಾಗಿ ಒತ್ತು
ಅಗಲ್
ಬಿಟ್ಟು ಹೋಗು, ತೊರೆದುಹೋಗು; ಊಟದ ತಟ್ಟೆ; ತಳಿಗೆ
ಅಗಲ್ಕೆ
ಅಗಲಿಕೆ, ಬೇರ್ಪಡುವಿಕೆ, ವಿಯೋಗ
ಅಗಲ್ಕೆಗಿಚ್ಚು
ವಿಯೋಗದ ಬೆಂಕಿ; ವಿರಹಜ್ವಾಲೆ
ಅಗಲ್ಕೆವೆಱು
ವಿಯೋಗ ಹೊಂದು
ಅಗಲ್ಚು
ಅಗಲಿಸು, ನಿವಾರಿಸು; ಅಗಲಗೊಳಿಸು; ಅಗಲಿಕೆ
ಅಗಲ್ತರ್
ದೂರ ಹೋಗು, ಅಗಲು
ಅಗವಡು
(ಅಗಂ+ಪಡು) ಒಳಗೆ ಬೀಳು, ಸೆರೆಸಿಕ್ಕು; ನೋವನ್ನು ಪಡೆ
ಅಗಸೆ
ಒಂದು ಮರ; ಒಂದು ಬಗೆಯ ಗಿಡ
ಅಗಸೆವೂಗೊಂಬು
ಅಗಸೆಯ ಹೂವಿನಂತಹ ಕೊಂಬು
ಅಂಗಹಾರ
ನೃತ್ಯ, ನಟನೆ
ಅಗೞ್
ಕಂದಕ
ಅಗೞ್ತೆ
ತೋಡುವುದು, ಅಗೆತ; ಕಂದಕ
ಅಂಗಾರ
ಕೆಂಡ
ಅಂಗಾಲ್(ಲು)
ಕಾಲ ಅಡಿ, ಪಾದದ ಕೆಳಭಾಗ
ಅಗಾಹಿತರತ್ನ