Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಉಗಿಸು
ಚೆಲ್ಲಿಸು; ಚಿಮುಕಿಸು; ಹೊರಬೀಳಿಸು
ಉಗು
ಚೆಲ್ಲು; ಹೊರಬೀಳಿಸು; ಸುರಿ
ಉಂಗುಟ
ಕಾಲಿನ ಹೆಬ್ಬೆರಳು
ಉಗುತರ್
ಉಕ್ಕಿಬರು; ಸುರಿ; ಸ್ರವಿಸು
ಉಂಗುರವಿಡು
ಮದುವೆ ನಿಶ್ಚಿತಾರ್ಥದಲ್ಲಿ ಉಂಗುರ ತೊಡಿಸು
ಉಗುರಿಸು
ಉಗುರಿನಿಂದ ಕೆರೆ, ಗೀಚು
ಉಗುರ್ವಿಸಿ
ಉಗುರು ಬಿಸಿ
ಉಗುರ್ವೆಚ್ಚನೆ
ಉಗುರುಬೆಚ್ಚಗೆ
ಉಗುರ್ವೊಯ್ಲು
ಉಗುರಿನ ಹೊಡೆತ
ಉಗುೞಿಸು
ಕಕ್ಕಿಸು
ಉಗುೞ್
ಮುಕ್ಕುಳಿಸು; ಉಗುಳು; ಜೊಲ್ಲು; ಎಂಜಲು ನೀರು
ಉಗುೞ್ತರ್
ಹೊಮ್ಮಿಸು
ಉಗ್ಗಡ
(ಉತ್ಕಟ) ಆಧಿಕ್ಯ
ಉಗ್ಗಡರಾವಿತ
ಶೂರನಾದ ಸವಾರ
ಉಗ್ಗಡಿ(ಳಿ)ಸು
(ಉದ್ಘೋಷಿಸು) ಕೂಗಿ ಹೇಳು; ಕೊಂಡಾಡು
ಉಗ್ಗು
ತೊದಲುವಿಕೆ
ಉಗ್ರ
ಭಯಂಕರವಾದ
ಉಗ್ರಕರ
ತೀಕ್ಷ್ಣ ಕಿರಣಗಳನ್ನುಳ್ಳವನು, ಸೂರ್ಯ
ಉಗ್ರಘೋಷ
ಭಯಂಕರ ಧ್ವನಿ
ಉಗ್ರತಿಮಿ