Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಉಂಕೆ
ಒಂದು ಜಾತಿಯ ಹಕ್ಕಿ (ಅರ್ಥಸಂದಿಗ್ಧತೆಯ ಶಬ್ದ)
ಉಕ್ಕಡ
ನಗರದ ಗಡಿ; ಪಹರೆಯ ನೆಲೆ
ಉಕ್ಕಂದ
ತುಂಬಿ ತುಳುಕುವ; ಉತ್ಸಾಹ
ಉಕ್ಕೆವ
ಠಕ್ಕು, ಮೋಸ; ಉತ್ಸಾಹ; ಉತ್ಸವ
ಉಕ್ಕೆವ
ಠಕ್ಕು, ಮೋಸ (ಅರ್ಥಸಂದಿಗ್ಧತೆಯ ಶಬ್ದ)
ಉಕ್ಕೆವಗುದುರೆ
ಮೋಸದ ಕುದುರೆ
ಉಕ್ಕೆವಚಾಮರ
ಉತ್ಸವಕಾಲದ ಚಾಮರ
ಉಕ್ಕೆವತನ
ವಂಚಕತನ
ಉಕ್ಕೆವತಪ
ಕಪಟ ತಪಸ್ಸು
ಉಕ್ತಿಪ್ರೌಢ
ಮಾತಿನ ನಿಪುಣ
ಉಕ್ತಿವಕ್ರಿಮ
ಮಾತಿನ ಕೊಂಕು
ಉಕ್ಷ
ಎತ್ತು
ಉಗಿ
ಹೊರಗೆಳೆ; ಸಡಿಲವಾಗು; ಉಗುಳು; ಕುಗ್ಗಿಸು; ಹೆದರು; ಸೀಳಿಹೋಗಿರುವುದು; ಕೀಳು
ಉಗಿಗೊಳ್
ತಿವಿಯಲ್ಪಡು; ಉಗುರಿನಿಂದ ಗಾಯಹೊಂದು
ಉಗಿಪಟಂಗೊಳ್
ಸೆಳೆದುಕೊ; ಹೋಗಲಾಡಿಸು
ಉಗಿಪದ
ಸುಲಿಗೆ
ಉಗಿಬಗಿ
ಸೀಳು; ಚೂರಾಗಿರುವುದು
ಉಗಿಬಗಿಮಾಡು
ಚೂರುಮಾಡು; ಕಲಕು; ಪರವಶಗೊಳಿಸು; ಉಗುರಿನಿಂದ ಪರಚಿ ಗಾಯಮಾಡು
ಉಗಿಬಗಿಯಾಗು
ಹೊಯ್ದಾಡು; ಆತುರಪಡು
ಉಗಿವಡೆ