Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಋಕ್ಕು
ಋಗ್ವೇದಮಂತ್ರ, ವೇದಮಂತ್ರ
ಋಕ್ಷ
ಕರಡಿ; ನಕ್ಷತ್ರ
ಋಕ್ಷಾಕೀರ್ಣ
ನಕ್ಷತ್ರಗಳಿಂ ಕೂಡಿದ; ಕರಡಿಗಳಿಂದ ಕೂಡಿದ
ಋಕ್ಷೇಶ
ನಕ್ಷತ್ರಗಳ ಒಡೆಯ, ಚಂದ್ರ
ಋಜು
ಸರಳವಾದ; ಒಂದು ವಸ್ತುವನ್ನು ನೋಡಿವ ವಿವಿಧ ಕೋನಗಳು
ಋಜುತ್ವ
ನೇರ ನಡವಳಿಕೆ
ಋಜುಮತಿ
(ಜೈನ) ಋಜು ಬುದ್ಧಿ
ಋಜುಮಾರ್ಗ
ನೇರ ಮಾರ್ಗ, ನಡವಳೀಕೆ
ಋಜುರೋಹಿತ
ಕಾಮನಬಿಲ್ಲು
ಋಜುವೃತ್ತಿ
ನೇರ ನಡವಳಿಕೆ
ಋಜ್ವಾಗತ
ನೇರವಾಗಿ ಬಂದ; ನೇರ ಮಾರ್ಗ
ಋಣಂಗುಡು
ಸಾಲ ಕೊಡು
ಋಣಿ
ಹಂಗಿಗೊಳಗಾದವನು
ಋತ
ಸತ್ಯ; ತೇಜಸ್ವಿ; ಸೂರ್ಯ; ನೀರು; ಚಂದ್ರ; ಹಂಸ; ಮುನಿ
ಋತವಚನ
ಸತ್ಯದ ಮಾತು
ಋತವಾಕ್ಯ
ಋತವಚನ
ಋತು
ಎರಡ ತಿಂಗಳ ಕಾಲ; ಸ್ತ್ರೀರಜಸ್ಸು
ಋತುಪ್ರತಾನ
ಋತುಸಮೂಹ
ಋತುವಿಮಾನ
(ಜೈನ) ಅರವತ್ತಮೂರು ಇಂದ್ರಕಗಳಲ್ಲಿ ಮೊದಲನೆಯದು
ಋತುಸಾರ್ವಭೌಮ