Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಎ(ಏ)ಣಗೋಣ
ಗರ್ವವಕ್ರತೆ; ಕೊಂಕು; ಬಿಂಕ
ಎಂ(ಚ)ಲ್
ತಿಂದ ಮೇಲು ಉಳಿಯುವುದು; ಇತರರು ತಿಂದು ಮಿಕ್ಕದ್ದು
ಎಕ್ಕಛಾಯ
ಒಂದೇ ಬಣ್ಣ; ಇಂದ್ರನೀಲ
ಎಕ್ಕಟಗಲಿ
ಏಕಾಂಗವೀರ
ಎಕ್ಕಟಿ
ಗುಪ್ತವಾಗಿ, ಗುಟ್ಟಾಗಿ; ಏಕಾಂತ
ಎಕ್ಕಟಿಗಾಳೆಗ
ದ್ವಂದ್ವಯುದ್ಧ
ಎಕ್ಕಡಿ
ಪಗಡೆಯಾಟ
ಎಕ್ಕತಕ್ಕು
ಸಮಾನಯೋಗ್ಯತೆ, ಅರ್ಹತೆ
ಎಕ್ಕತಳ
ನಿಯಮಿತ ಜಾಗ
ಎಕ್ಕತುಳ
(ಏಕತುಲ) ಒಂದೇ ತೂಕ; ಸಮಾನ; ದ್ವಂದ್ವಯುದ್ಧ
ಎಕ್ಕತುಳಂ
ಅತಿಶಯವಾಗಿ
ಎಕ್ಕಬಾಗೆ
ಒಂದೇ ಪಾಲು, ಭಾಗ
ಎಕ್ಕಮ(ವ)ದ್ದಳೆ
ಒಂದು ಬಗೆಯ ಚರ್ಮವಾದ್ಯ
ಎಕ್ಕರ
ಸೂಕರ, ಕಾಡುಹಂದಿ; ಒಂಟಿ ಸಲಗ
ಎಕ್ಕಲಗಾಣ
ಒಂಟಿ ಹಾಡುಗಾರ
ಎಕ್ಕಲದುಂಬಿ
ಒಂಟಿದುಂಬಿ
ಎಕ್ಕಲವಂದಿ
ಒಂಟಿ ಹಂದಿ
ಎಕ್ಕಲವಿರಿ
ಎಲ್ಲಮ್ಮ, ರೇಣುಕಾದೇವಿ
ಎಕ್ಕಲಾವಣ
ಏಕ ನೆಲೆ. ಒಂಟಿ ಅಂಗಡಿ
ಎಕ್ಕವಡ